ಮೋದಿ ಫೇವರಿಟ್ ನುಗ್ಗೆಸೊಪ್ಪು ಪರೋಟ ಮಾಡೋದು ಕಲಿಬೇಕಾ; ಅಯ್ಯೋ ರಾಮ, ಈ ರೆಸಿಪಿ ತುಂಬಾ ಸಿಂಪಲ್ ಕಣ್ರೀ!
Moringa Paratha: ಪ್ರಧಾನಿ ಮೋದಿ ಅವರ ನೆಚ್ಚಿನ ಆಹಾರಗಳಲ್ಲಿ ಒಂದಾದ ನುಗ್ಗೆ ಸೊಪ್ಪಿನ ಪರೋಟ ಆರೋಗ್ಯಕ್ಕೆ ತುಂಬಾ ಉಪಯೋಗಕರ. ಪ್ರಧಾನಿ ಮೋದಿಗೆ ಇಷ್ಟವಾಗುವ ಮೋರಿಂಗ ಪರೋಟ ಮಾಡುವುದು ಹೇಗೆ? ಇಲ್ಲಿದೆ ವಿವರ.
Nugge Soppu: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ತಮ್ಮ ಆಹಾರದಲ್ಲಿ ಆರೋಗ್ಯಕರ ಪದಾರ್ಥಗಳೇ ಇರುತ್ತವೆ ಎಂದು ವಿಶೇಷವಾಗಿ ವಿವರಿಸಿ ಹೇಳಬೇಕಿಲ್ಲ. ತನ್ನ ನೆಚ್ಚಿನ ಆಹಾರಗಳಲ್ಲಿ ಮೋರಿಂಗ ಪರೋಟವೂ ಒಂದು. 74ರ ಹರೆಯದಲ್ಲೂ ಮೋದಿ ಚುರುಕಾಗಿರುವುದಕ್ಕೆ ಅವರ ಆರೋಗ್ಯಕರ ಜೀವನಶೈಲಿ ಮತ್ತು ಉತ್ತಮ ಆಹಾರ ಪದ್ಧತಿಯೇ ಕಾರಣ. ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೋದಿ, ಆರೋಗ್ಯಕರ ಆಹಾರವನ್ನು ಸೇವಿಸುತ್ತಾರೆ. ಅವರ ನೆಚ್ಚಿನ ಆಹಾರವೆಂದರೆ ಮೋರಿಂಗ ಪರೋಟ. ಮೊರಿಂಗ ಎಂದರೆ ಬೇರೆ ಯಾವುದೋ ತರಕಾರಿ ಅಲ್ಲ, ನಮ್ಮ ನಿಮ್ಮ ಮನೆಯಲ್ಲೇ ಸಿಗುವ ನುಗ್ಗೆ ಸೊಪ್ಪು. ಅನೇಕ ಪೋಷಕಾಂಶ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಆರೋಗ್ಯಕ್ಕೆ ಮುಖ್ಯವಾಗಿ ಬೇಕಿರುವ ನುಗ್ಗೆ ಸೊಪ್ಪಿನ ಪರೋಟ ಮಾಡುವುದೇಗೆ? ಇಲ್ಲಿದೆ ವಿವರ.
ನುಗ್ಗೆ ಸೊಪ್ಪು ಪರೋಟ ರೆಸಿಪಿಗೆ ಬೇಕಿರುವ ಸಾಮಾಗ್ರಿಗಳು
- ನುಗ್ಗೆ ಸೊಪ್ಪು - ಒಂದು ಕಪ್
- ಗೋಧಿ ಹಿಟ್ಟು - ಒಂದು ಕಪ್
- ಅರಿಶಿನ - ಕಾಲು ಚಮಚ
- ಮೆಣಸಿನಕಾಯಿ - ಅರ್ಧ ಚಮಚ
- ಕೊತ್ತಂಬರಿ ಪುಡಿ - ಅರ್ಧ ಚಮಚ
- ಜೀರಿಗೆ ಪುಡಿ - ಅರ್ಧ ಚಮಚ
- ಇಂಗು - ಒಂದು ಚಿಟಿಕೆ
- ಉಪ್ಪು - ರುಚಿಗೆ
- ತುಪ್ಪ - ನಿಮಗೆ ಬೇಕಾದಷ್ಟು
ಇದನ್ನೂ ಓದಿ: ವೈಟ್ ಪಲಾವ್: ಹೆಚ್ಚಿಗೆ ಮಸಾಲೆ ಬೇಡ, ಆದ್ರೂ ರುಚಿ ಇರ್ಬೇಕು ಅಂತದ್ದೇನಾದ್ರೂ ಬೇಕು ಅನಿಸಿದ್ರೆ ಈ ರೀತಿ ಮಾಡಿ ತಿನ್ನಿ
ನುಗ್ಗೆ ಸೊಪ್ಪು ಪರೋಟ ರೆಸಿಪಿ
- ಮೊದಲಿಗೆ ನುಗ್ಗೆ ಸೊಪ್ಪನ್ನು ತೊಳೆದು ಕುಕ್ಕರ್ನಲ್ಲಿ ಕುದಿಸಬೇಕು. ಪಾತ್ರೆಯಲ್ಲಿ ಕುದಿಸಿದರೂ ಸಮಸ್ಯೆ ಇಲ್ಲ.
- ನುಗ್ಗೆ ಸೊಪ್ಪು ಬೇಯಿಸಿದ ನಂತರ ಕೈಯಲ್ಲಿ ಹಿಂಡಿ ಪಕ್ಕಕ್ಕೆ ಇಟ್ಟುಕೊಳ್ಳಿ. ಹಿಂಡಿದ ನೀರನ್ನು ಪಕ್ಕದಲ್ಲಿಟ್ಟುಕೊಳ್ಳಿ.
- ಒಲೆಯ ಮೇಲೆ ಬಾಣಲೆ ಇಟ್ಟು ಒಂದು ಚಮಚ ತುಪ್ಪ ಹಾಕಿ. ಬೇಯಿಸಿದ ನುಗ್ಗೆ ಸೊಪ್ಪು, ಇಂಗು, ಉಪ್ಪು, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. (3 ರಿಂದ ನಾಲ್ಕು ನಿಮಿಷಗಳ ಕಾಲ)
- ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟನ್ನು ಹಾಕಿ ಅದಕ್ಕೆ ಹುರಿದ ನುಗ್ಗೆ ಸೊಪ್ಪಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಎರಡು ಚಮಚ ತುಪ್ಪವನ್ನು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
- ಆಗಲೇ ಪಕ್ಕಕ್ಕಟ್ಟಿದ್ದ ನುಗ್ಗೆ ಸೊಪ್ಪು ಬೇಯಿಸಿದ ನೀರನ್ನು ಸೇರಿಸಿ. ಆ ನೀರಿನೊಂದಿಗೆ ಚಪಾತಿ ಹಿಟ್ಟನ್ನು ಕಲಸಿಡಬೇಕು. ಹತ್ತು ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿಬಿಡಿ.
- ಇದಾದ ಬಳಿಕ ಸ್ಟವ್ ಮೇಲೆ ಹೆಂಚನ್ನಿಟ್ಟು ತುಪ್ಪ ಸುರಿಯಬೇಕು. ಅಷ್ಟರೊಳಗೆ ಕಲಸಿಟ್ಟ ಹಿಟ್ಟಿನಿಂದ ಸ್ವಲ್ಪ ಹಿಟ್ಟನ್ನು ಪರೋಟದಂತೆ ಒತ್ತಿ ಹೆಂಚಿಗೆ ಹಾಕಿ ಸುಡಬೇಕು.
- ಎರಡೂ ಕಡೆ ಚೆನ್ನಾಗಿ ಸುಟ್ಟ ನಂತರ ಒಂದು ಪ್ಲೇಟ್ಗೆ ಹಾಕಿಕೊಳ್ಳಬೇಕು. ಒಮ್ಮೆ ತಿಂದುನೋಡಿ ಎಷ್ಟು ರುಚಿಯಾಗಿರುತ್ತದೆ ಎಂಬುದು ನಿಮಗೆ ತಿಳಿಯುತ್ತದೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ.
ನುಗ್ಗೆ ಸೊಪ್ಪಿನ ಉಪಯೋಗಗಳು
ನುಗ್ಗೆ ಸೊಪ್ಪು ಆರೋಗ್ಯಕ್ಕೆ ತುಂಬಾ ಉಪಯೋಗಕರ. ಇದರಲ್ಲಿ ಎಲ್ಲಾ ವಿಧಗಳ ಪೌಷ್ಠಿಕಾಂಶಗಳಿವೆ. ಅದರಲ್ಲೂ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಇವು ರಕ್ತದಲ್ಲಿ ಗ್ಲುಕೋಜ್ ಮಟ್ಟವನ್ನು ಹೊಂದಲು ಸಹಾಯ ಮಾಡುತ್ತದೆ. ಮಧುಮೇಹ ಇರುವವರು ಇದನ್ನು ಹೆಚ್ಚು ತಿಂದಷ್ಟೂ ಉತ್ತಮ. ಪ್ರತಿರೋಧದ ಶಕ್ತಿ ಹೆಚ್ಚಿರುವ ಕಾರಣ ರೋಗಗಳು ಬಹುತೇಕ ದೂರವಾಗುತ್ತವೆ.