ರುಚಿಕರವಾದ ಕಡ ಪ್ರಸಾದವನ್ನು ಸವಿದಿದ್ದೀರಾ: ಇದನ್ನು ತಯಾರಿಸುವುದು ತುಂಬಾ ಸುಲಭ, ಇಲ್ಲಿದೆ ಪಾಕವಿಧಾನ
Nov 14, 2024 10:16 AM IST
ರುಚಿಕರವಾದ ಕಡ ಪ್ರಸಾದವನ್ನು ಸವಿದಿದ್ದೀರಾ: ಇದನ್ನು ತಯಾರಿಸುವುದು ತುಂಬಾ ಸುಲಭ, ಇಲ್ಲಿದೆ ಪಾಕವಿಧಾನ
ಈ ವರ್ಷ, ಗುರುನಾನಕ್ ಜಯಂತಿ ಹಬ್ಬವನ್ನು ನವೆಂಬರ್ 15 ರಂದು ದೇಶಾದ್ಯಂತ ಆಚರಿಸಲಾಗುವುದು. ಈ ಪವಿತ್ರ ಹಬ್ಬದಂದು ವಿಶೇಷವಾಗಿ ಕಡ ಪ್ರಸಾದವನ್ನು ಮಾಡಲಾಗುತ್ತದೆ. ಇದು ಬಹಳ ರುಚಿಕರವಾಗಿರುತ್ತದೆ. ನೀವು ಕೂಡ ಈ ಪಾಕವಿಧಾನ ಮಾಡಲು ಬಯಸಿದರೆ, ಇಲ್ಲಿದೆ ಮಾಡುವ ವಿಧಾನ.
ಸಿಖ್ ಧರ್ಮೀಯರು ಕಾರ್ತಿಕ ಪೂರ್ಣಿಮಾ ಹಬ್ಬಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಈ ದಿನವನ್ನು ಸಿಖ್ ಧರ್ಮದ ಜನರು ಗುರುನಾನಕ್ ಜಯಂತಿ ಎಂದು ಆಚರಿಸುತ್ತಾರೆ. ಇದನ್ನು ಗುರು ಪುರಬ್ ಅಥವಾ ಪ್ರಕಾಶ್ ಪರ್ವ್ ಎಂದೂ ಕರೆಯಲಾಗುತ್ತದೆ. ಈ ವರ್ಷ, ಗುರುನಾನಕ್ ಜಯಂತಿಯನ್ನು ನವೆಂಬರ್ 15 ರಂದು ಆಚರಿಸಲಾಗುತ್ತದೆ. ಈ ಪವಿತ್ರ ಹಬ್ಬದಂದು, ಕಡ ಪ್ರಸಾದವನ್ನು ತಯಾರಿಸಲಾಗುತ್ತದೆ. ಇದು ಬಹಳ ರುಚಿಕರವಾಗಿರುತ್ತದೆ. ಈ ಕಡ ಪ್ರಸಾದದ ಈ ಪಾಕವಿಧಾನವನ್ನು ತಯಾರಿಸುವುದು ತುಂಬಾ ಸುಲಭ. ತಿನ್ನಲು ಕೂಡ ಅಷ್ಟೇ ರುಚಿಕರವಾಗಿರುತ್ತದೆ. ಕಡ ಪ್ರಸಾದವನ್ನು ತುಪ್ಪದಲ್ಲಿ ತಯಾರಿಸುವುದರಿಂದ, ಅದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ. ಕಡ ಪ್ರಸಾದವನ್ನು ರವೆಯಿಂದ ತಯಾರಿಸಲಾಗುವುದಿಲ್ಲ.
ಕಡ ಪ್ರಸಾದವು ಸಾಂಪ್ರದಾಯಿಕ ಸಿಹಿ ನೈವೇದ್ಯ. ಇದನ್ನು ಸಾಮಾನ್ಯವಾಗಿ ಗುರುದ್ವಾರಗಳಲ್ಲಿ (ಸಿಖ್ ದೇವಾಲಯಗಳಲ್ಲಿ) ತಯಾರಿಸಲಾಗುತ್ತದೆ. ಇದನ್ನು ತಯಾರಿಸುವುದು ಎಷ್ಟು ಸಿಂಪಲ್. ತಿನ್ನಲು ಬಹಳ ರುಚಿಕರವಾಗಿರುವ ಈ ಪ್ರಸಾದವನ್ನು ಕೆಲವೇ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಸಂಪೂರ್ಣ ಗೋಧಿ ಹಿಟ್ಟು, ದೇಸಿ ತುಪ್ಪ, ಸಕ್ಕರೆ ಮತ್ತು ನೀರು ಇದ್ದರೆ ಸಾಕು. ಬಹಳ ರುಚಿಕರವಾಗಿರುತ್ತದೆ. ಸಿಖ್ ಸಂಸ್ಕೃತಿಯಲ್ಲಿ ಈ ಸಿಹಿಖಾದ್ಯ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ.
ಗೋಧಿ ಹಿಟ್ಟನ್ನು ತುಪ್ಪ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ನೀರು ಹಾಗೂ ಸಕ್ಕರೆ ಕುದಿಸಿ ಪರಿಮಳಯುಕ್ತ ಸಿಹಿ ಭಕ್ಷ್ಯವನ್ನು ತಯಾರಿಸಲಾಗುತ್ತದೆ. ಕಡ ಪ್ರಸಾದವು ತುಂಬಾ ರುಚಿಕರವಾಗಿರುತ್ತದೆ. ಬಹಳ ಮೃದುವಾಗಿರುವ ಈ ಸಿಹಿ ಖಾದ್ಯವನ್ನು ತಿನ್ನಲು ಚೆನ್ನಾಗಿರುತ್ತದೆ. ತುಪ್ಪ, ಸಕ್ಕರೆಯ ಮಿಶ್ರಣವಿರುವ ಈ ಖಾದ್ಯ ಒಂದೊಳ್ಳೆ ಪರಿಮಳವನ್ನು ಹೊಂದಿರುತ್ತದೆ.
ಕಡ ಪ್ರಸಾದವನ್ನು ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ತುಪ್ಪ- 1 ಕಪ್, ಸಕ್ಕರೆ- ಒಂದು ಕಪ್, ಗೋಧಿ (ಒರಟಾಗಿ ರುಬ್ಬಿದ)- 1 ಕಪ್, ನೀರು- ನಾಲ್ಕು ಕಪ್.
ಮಾಡುವ ವಿಧಾನ: ಪ್ರಸಾದವನ್ನು ತಯಾರಿಸಲು, ಮೊದಲನೆಯದಾಗಿ, ಗ್ಯಾಸ್ ಮೇಲೆ ದಪ್ಪ ತಳದ ಪಾತ್ರೆಯನ್ನು ಹಾಕಿ ಅದಕ್ಕೆ ತುಪ್ಪವನ್ನು ಸೇರಿಸಿ ಬಿಸಿ ಮಾಡಿ. ನಂತರ, ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಮಧ್ಯಮ ಉರಿಯಲ್ಲಿ ಕುದಿಯಲು ನಾಲ್ಕು ಕಪ್ ನೀರನ್ನು ಅದಕ್ಕೆ ಸೇರಿಸಿ. ಹಿಂದಿನ ಬಾಣಲೆಯಲ್ಲಿ ಸೇರಿಸಲಾದ ತುಪ್ಪವು ಬಿಸಿಯಾದಾಗ, ಅದಕ್ಕೆ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಿರಿ. ಸಕ್ಕರೆ ಮತ್ತು ಕುದಿಸಿದ ನೀರನ್ನು ಸೇರಿಸಿ ಚೆನ್ನಾಗಿ ಕಲಕಿ ಬೇಯಿಸಿ. ಹಲ್ವಾವನ್ನು ನಿರಂತರವಾಗಿ ಕಲಕಿ, ಇದರಿಂದ ಅದಕ್ಕೆ ನೀರನ್ನು ಸೇರಿಸುವಾಗ ಯಾವುದೇ ಉಂಡೆಗಳು ಉಂಟಾಗುವುದಿಲ್ಲ. ನಿರಂತರವಾಗಿ ಬೆರೆಸುತ್ತಿರಿ. ನೀರು ಆವಿಯಾಗುವವರೆಗೆ ಬೆರೆಸುತ್ತಿರಬೇಕು. ಇಷ್ಟು ಮಾಡಿದರೆ ರುಚಿಕರವಾದ ಕಡ ಪ್ರಸಾದ ಸಿದ್ಧವಾಗುತ್ತದೆ.