logo
ಕನ್ನಡ ಸುದ್ದಿ  /  ಜೀವನಶೈಲಿ  /  ನೀರು ದೋಸೆ, ಉದ್ದಿನ ದೋಸೆ, ರಾಗಿ-ರವೆ ದೋಸೆ ತಿಂದಿರಬಹುದು: ಸಬ್ಬಕ್ಕಿ ದೋಸೆ ಸವಿದಿದ್ದೀರಾ, ಇಲ್ಲವಾದಲ್ಲಿ ಇಂದೇ ತಯಾರಿಸಿ

ನೀರು ದೋಸೆ, ಉದ್ದಿನ ದೋಸೆ, ರಾಗಿ-ರವೆ ದೋಸೆ ತಿಂದಿರಬಹುದು: ಸಬ್ಬಕ್ಕಿ ದೋಸೆ ಸವಿದಿದ್ದೀರಾ, ಇಲ್ಲವಾದಲ್ಲಿ ಇಂದೇ ತಯಾರಿಸಿ

Priyanka Gowda HT Kannada

Nov 26, 2024 01:28 PM IST

google News

ನೀರು ದೋಸೆ, ಉದ್ದಿನ ದೋಸೆ, ರಾಗಿ-ರವೆ ದೋಸೆ ತಿಂದಿರಬಹುದು: ಸಬ್ಬಕ್ಕಿ ದೋಸೆ ಸವಿದಿದ್ದೀರಾ, ಇಲ್ಲವಾದಲ್ಲಿ ಇಂದೇ ತಯಾರಿಸಿ

  • ಬಾಯಲ್ಲಿಟ್ಟರೆ ಸಾಕು ಕರಗುವ ಮೃದುವಾದ ಸಬ್ಬಕ್ಕಿ ದೋಸೆ ತಯಾರಿಸುವುದು ತುಂಬಾನೇ ಸಿಂಪಲ್. ತ್ವರಿತವಾಗಿ ತಯಾರಿಸಬಹುದಾದ ಈ ದೋಸೆಯನ್ನು ತಯಾರಿಸುವುದು ಎಷ್ಟು ಸರಳವೋ, ಅಷ್ಟೇ ರುಚಿಕರವಾಗಿರುತ್ತದೆ. ಹುಳಿ ಮಾಡದೆ ಇನ್ಸ್ಟಾಂಟ್ ಆಗಿ ತಯಾರಿಸಬಹುದಾದ ಸಬ್ಬಕ್ಕಿ ದೋಸೆ ರೆಸಿಪಿ ಇಲ್ಲಿದೆ.

ನೀರು ದೋಸೆ, ಉದ್ದಿನ ದೋಸೆ, ರಾಗಿ-ರವೆ ದೋಸೆ ತಿಂದಿರಬಹುದು: ಸಬ್ಬಕ್ಕಿ ದೋಸೆ ಸವಿದಿದ್ದೀರಾ, ಇಲ್ಲವಾದಲ್ಲಿ ಇಂದೇ ತಯಾರಿಸಿ
ನೀರು ದೋಸೆ, ಉದ್ದಿನ ದೋಸೆ, ರಾಗಿ-ರವೆ ದೋಸೆ ತಿಂದಿರಬಹುದು: ಸಬ್ಬಕ್ಕಿ ದೋಸೆ ಸವಿದಿದ್ದೀರಾ, ಇಲ್ಲವಾದಲ್ಲಿ ಇಂದೇ ತಯಾರಿಸಿ

ನೀರು ದೋಸೆ, ಉದ್ದಿನ ದೋಸೆ, ರವೆ ದೋಸೆ, ರಾಗಿ ದೋಸೆ, ಹೆಸರುಬೇಳೆ ದೋಸೆ, ಹೆಸರು ಕಾಳು ದೋಸೆ ಹೀಗೆ ವೈವಿಧ್ಯಮಯ ದೋಸೆಗಳನ್ನು ನೀವು ಸವಿದಿರಬಹುದು. ಕೆಲವು ದೋಸೆಗಳನ್ನು ಇನ್ಸ್ಟಾಂಟ್ ಆಗಿ ಅಥವಾ ತಟ್ಟಂತ ತಯಾರಿಸಬಹುದಾದರೂ ಕೆಲವನ್ನು ಹುದುಗುವಿಕೆ ಮೂಲಕ ತಯಾರಿಸಲಾಗುತ್ತದೆ. ಹೆಚ್ಚಿನ ಸಮಯ ತೆಗೆದುಕೊಳ್ಳದೆ ತ್ವರಿತವಾಗಿ ದೋಸೆಗಳನ್ನು ತಯಾರಿಸುವುದು ತುಂಬಾ ಸಹಾಯವಾಗಬಹುದು. ವಿಭಿನ್ನವಾಗಿ ಸಬ್ಬಕ್ಕಿ ದೋಸೆಯನ್ನು ಇನ್ಸ್ಟಾಂಟ್ ಆಗಿ ತಯಾರಿಸಬಹುದು. ಹಿಟ್ಟನ್ನು ಹುಳಿ ಮಾಡದೆಯೇ ಈ ದೋಸೆಯನ್ನು ಮಾಡಬಹುದು. ಈ ದೋಸೆಯು ತುಂಬಾ ಮೃದು ಮತ್ತು ರುಚಿಯಾಗಿರುವುದು ಮಾತ್ರವಲ್ಲದೆ, ಬಾಯಲ್ಲಿಟ್ಟ ತಕ್ಷಣವೇ ಕರಗುತ್ತದೆ. ತ್ವರಿತವಾಗಿ ಸಬ್ಬಕ್ಕಿ ಅಥವಾ ಸಾಬೂದಾನ ದೋಸೆ ರೆಸಿಪಿ ಮಾಡುವ ವಿಧಾನ ಇಲ್ಲಿದೆ.

ಸಬ್ಬಕ್ಕಿ ದೋಸೆ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ- ಒಂದು ಕಪ್, ಅಕ್ಕಿ- ಒಂದು ಕಪ್, ಮೊಸರು- ಒಂದು ಕಪ್, ದೋಸೆ ಮಾಡಲು ಅಡುಗೆ ಎಣ್ಣೆ, ಹಸಿರು ಮೆಣಸಿನಕಾಯಿಗಳು (ಸಣ್ಣದಾಗಿ ಕೊಚ್ಚಿದ)- ಮೂರು, ಶುಂಠಿ ತುಂಡು- ಒಂದು ಇಂಚು, ಈರುಳ್ಳಿ- 1, ಸ್ವಲ್ಪ ಕೊತ್ತಂಬರಿ ಸೊಪ್ಪು- ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು ಸೊಪ್ಪು- 6 ರಿಂದ 7.

ಮಾಡುವ ವಿಧಾನ: ಮೊದಲಿಗೆ ಸಬ್ಬಕ್ಕಿ ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಎರಡು ಗಂಟೆಗಳ ಕಾಲ ನೆನೆಸಿದ ಸಬ್ಬಕ್ಕಿ ಮತ್ತು ಅಕ್ಕಿಯನ್ನು ಮಿಕ್ಸಿಂಗ್ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇನ್ನೊಂದು ಮಿಕ್ಸಿಂಗ್ ಜಾರ್‌ನಲ್ಲಿ ಶುಂಠಿ ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿಯನ್ನು ಸೇರಿಸಿ, ಮೃದುವಾದ ಪೇಸ್ಟ್ ಮಾಡಿ. ನಂತರ ಸಬ್ಬಕ್ಕಿ-ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಶುಂಠಿ ಮತ್ತು ಮೆಣಸಿನಕಾಯಿ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಮೊಸರು, ಈರುಳ್ಳಿ, ಕೊತ್ತಂಬರಿ ಸ್ವಲ್ಪ ಮತ್ತು ಕರಿಬೇವಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಹಿಟ್ಟು ಗಟ್ಟಿಯಾಗಿದ್ದರೆ, ಸ್ವಲ್ಪ ನೀರು ಸೇರಿಸಿದರೆ ದೋಸೆ ಹಿಟ್ಟು ಸಿದ್ಧವಾಗುತ್ತದೆ.

ಇನ್ನು ಸ್ಟೌವ್ ಮೇಲೆ ಪ್ಯಾನ್ ಇಟ್ಟು ಬಿಸಿ ಮಾಡಿ, ತವಾ ಬಿಸಿಯಾದಾಗ ಹಿಟ್ಟನ್ನು ಸುರಿಯಿರಿ. ಇದಕ್ಕೆ ಎಣ್ಣೆ ಅಥವಾ ತುಪ್ಪ ಸೇರಿಸಬಹುದು. ಉದ್ದಿನ ದೋಸೆ ಹುಯ್ಯುವಂತೆ ಹುಯ್ಯಿರಿ. ಆದರೆ, ತೆಳುವಾಗಿ ದೋಸೆ ಹುಯ್ಯಬೇಡಿ. ಸ್ವಲ್ಪ ದಪ್ಪವಾಗಿರಲಿ. ಮಧ್ಯಮ ಉರಿಯಲ್ಲಿ ದೋಸೆಯನ್ನು ಚೆನ್ನಾಗಿ ಬೇಯಿಸಿ. ನಂತರ ಅದನ್ನು ಇನ್ನೊಂದು ಬದಿಗೆ ತಿರುಗಿಸಿ, ಫ್ರೈ ಮಾಡಿ. ಎರಡೂ ಬದಿಗಳನ್ನು ಬೇಯಿಸಿದ ನಂತರ ತವಾದಿಂದ ದೋಸೆ ತೆಗೆದು ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿದರೆ ರುಚಿಕರವಾದ ಸಬ್ಬಕ್ಕಿ ದೋಸೆ ಸವಿಯಲು ಸಿದ್ಧ.

ಸಬ್ಬಕ್ಕಿ ದೋಸೆ ತುಂಬಾ ಮೃದುವಾಗಿರುತ್ತವೆ. ಇದು ಬಾಯಿಯಲ್ಲಿ ಇಟ್ಟರೆ ಸಾಕು ಕರಗುತ್ತದೆ. ಈ ದೋಸೆಯನ್ನು ತೆಂಗಿನಕಾಯಿ ಚಟ್ನಿ, ಶುಂಠಿ ಚಟ್ನಿ, ಕಡಲೆಕಾಯಿ ಚಟ್ನಿಯೊಂದಿಗೆ ತಿನ್ನಬಹುದು. ಈ ದೋಸೆ ತುಂಬಾ ಮೃದುವಾಗಿರುವುದರಿಂದ ಮಕ್ಕಳು ಕೂಡ ಇದನ್ನು ತಿನ್ನಲು ಇಷ್ಟಪಡುತ್ತಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ