ದಿನಾ ಏನು ತಿಂಡಿ ಮಾಡುವುದು ಎಂಬ ಚಿಂತೆಯಾ: ಹಾಗಿದ್ದರೆ ರುಚಿಕರವಾದ ಹೆಸರುಬೇಳೆ-ಪಾಲಕ್ ದೋಸೆ ರೆಸಿಪಿ ಮಾಡಿ ನೋಡಿ
ದಿನಾ ಏನು ತಿಂಡಿ ಮಾಡುವುದು ಎಂಬ ಚಿಂತೆಯಿದ್ದರೆ ರುಚಿಕರವಾದ ಹೆಸರುಬೇಳೆ-ಪಾಲಕ್ ದೋಸೆ ರೆಸಿಪಿ ಮಾಡಬಹುದು. ಆರೋಗ್ಯಕ್ಕೆ ಉತ್ತಮವಾಗಿರುವ ಈ ದೋಸೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಹೆಸರು ಬೇಳೆ ಮತ್ತು ಪಾಲಕ್ ಸೊಪ್ಪು ಎರಡೂ ಆರೋಗ್ಯಕ್ಕೆ ಒಳ್ಳೆಯದು. ಇಲ್ಲಿದೆ ಹೆಸರು ಬೇಳೆ-ಪಾಲಕ್ ಸೊಪ್ಪು ದೋಸೆ ಪಾಕವಿಧಾನ.
ಚಳಿಗಾಲದಲ್ಲಿ ನಾವು ಸೇವಿಸುವ ಪ್ರತಿಯೊಂದು ಆಹಾರವೂ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಏಕೆಂದರೆ ಶೀತ ವಾತಾವರಣದಲ್ಲಿ ನಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಹೀಗಾಗಿ ಹೆಸರುಬೇಳೆ-ಪಾಲಕ್ ದೋಸೆ ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ, ದಿನಾ ಏನು ತಿಂಡಿ ಮಾಡುವುದು ಎಂಬ ಚಿಂತೆಯಿದ್ದರೆ ಈ ರೆಸಿಪಿಯನ್ನು ಟ್ರೈ ಮಾಡಬಹುದು. ಇದು ತುಂಬಾ ರುಚಿಯಾಗಿರುತ್ತದೆ. ತೆಂಗಿನಕಾಯಿ ಚಟ್ನಿಯೊಂದಿಗೆ ಇದನ್ನು ತಿನ್ನುವುದರಿಂದ ರುಚಿ ಮತ್ತಷ್ಟು ಹೆಚ್ಚಾಗುತ್ತದೆ. ಹೆಸರು ಬೇಳೆ ಮತ್ತು ಪಾಲಕ್ ಸೊಪ್ಪು ಎರಡೂ ಆರೋಗ್ಯಕ್ಕೆ ಒಳ್ಳೆಯದು. ಇಲ್ಲಿದೆ ಹೆಸರು ಬೇಳೆ-ಪಾಲಕ್ ಸೊಪ್ಪು ದೋಸೆ ಪಾಕವಿಧಾನ.
ಹೆಸರುಬೇಳೆ-ಪಾಲಕ್ ಸೊಪ್ಪು ದೋಸೆ ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು: ಹೆಸರು ಬೇಳೆ- 3/4 ಕಪ್, ಪಾಲಕ್ ಸೊಪ್ಪು ಪ್ಯೂರಿ- ಅರ್ಧ ಕಪ್, ಚಿಲ್ಲಿ ಪೇಸ್ಟ್- ಒಂದು ಟೀ ಚಮಚ, ಶುಂಠಿ ಪೇಸ್ಟ್- ಅರ್ಧ ಟೀ ಚಮಚ, ಇಂಗು- ಒಂದು ಚಿಟಿಕೆ, ಮೆಣಸಿನಕಾಯಿ- ಕಾಲು ಟೀ ಚಮಚ, ಅರಿಶಿನ- ಕಾಲು ಟೀ ಚಮಚ, ಜೀರಿಗೆ- ಅರ್ಧ ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಹುರಿಯಲು.
ಮಾಡುವ ವಿಧಾನ: ಎರಡು ಗಂಟೆಗಳ ಮೊದಲು ಹೆಸರು ಬೇಳೆಯನ್ನು ನೆನೆಸಿಡಿ. ನಂತರ ಅದನ್ನು ಸ್ವಚ್ಛವಾಗಿ ತೊಳೆದು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ ಪಕ್ಕಕ್ಕೆ ಇಡಿ. ಈಗ ಬಾಣಲೆಯನ್ನು ಸ್ಟೌವ್ ಮೇಲೆ ಇಟ್ಟು ಒಂದು ಚಮಚ ಎಣ್ಣೆಯನ್ನು ಹಾಕಿ. ಪಾಲಕ್ ಪ್ಯೂರಿ ಸೇರಿಸಿ, ಫ್ರೈ ಮಾಡಿ. ಪಾಲಕ್ ಸೊಪ್ಪಿನ ಹಸಿ ವಾಸನೆ ಬರುವವರೆಗೆ ಫ್ರೈ ಮಾಡಿ, ಸ್ಟೌವ್ ಆಫ್ ಮಾಡಿ. ಈಗ ಈ ಪಾಲಕ್ ಮಿಶ್ರಣವನ್ನು ಹೆಸರುಬೇಳೆ ಪುಡಿಗೆ ಸೇರಿಸಿ. ಜತೆಗೆ ಹಸಿರು ಮೆಣಸಿನಕಾಯಿ ಪೇಸ್ಟ್, ಶುಂಠಿ ಪೇಸ್ಟ್, ಇಂಗು, ಮೆಣಸಿನಕಾಯಿ, ಅರಿಶಿನ ಮತ್ತು ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಸಂಪೂರ್ಣ ಮಿಶ್ರಣವನ್ನು ಪಕ್ಕಕ್ಕೆ ಇರಿಸಿ. ಕಾಲು ಗಂಟೆ ಬಿಟ್ಟು ಮತ್ತೆ ಮಿಶ್ರಣ ಮಾಡಿ. ದೋಸೆಗೆ ಬೇಕಾದಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ಟೌವ್ ಮೇಲೆ ಪ್ಯಾನ್ ಇಟ್ಟು ಎಣ್ಣೆ ಸವರಿ. ನಂತರ ದೋಸೆ ಹರಡಿ. ಎರಡೂ ಬದಿಗಳಲ್ಲಿ ಚೆನ್ನಾಗಿ ಬೇಯಿಸಿ, ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿ. ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿದರೆ ತುಂಬಾ ರುಚಿಯಾಗಿರುತ್ತದೆ. ಮಕ್ಕಳು ಕೂಡ ಇದನ್ನು ತಿನ್ನಲು ಇಷ್ಟಪಡುತ್ತಾರೆ.
ಪಾಲಕ್ ಸೊಪ್ಪು ಚಳಿಗಾಲದಲ್ಲಿ ಹೆಚ್ಚಾಗಿ ಲಭ್ಯವಿರುತ್ತದೆ. ಪಾಲಕ್ ಸೊಪ್ಪು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಪೋಷಕಾಂಶಗಳು ದೊರೆಯುತ್ತವೆ. ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ. ಹೆಸರು ಬೇಳೆ ನಮ್ಮ ಆರೋಗ್ಯಕ್ಕೆ ಬೇಕಾದ ಹಲವಾರು ಪೋಷಕಾಂಶಗಳನ್ನು ಸಹ ಒದಗಿಸುತ್ತದೆ. ವಿಶೇಷವಾಗಿ ಮಕ್ಕಳಿಗೆ, ಈ ಎರಡೂ ತುಂಬಾ ಉತ್ತಮ. ಹೀಗಾಗಿ ವಾರಕ್ಕೊಮ್ಮೆಯಾದರೂ ಈ ದೋಸೆಯನ್ನು ಪ್ರಯತ್ನಿಸಿ. ನಿಮಗೆ ಉತ್ತಮ ರುಚಿಯನ್ನು ನೀಡುತ್ತದೆ. ಟೊಮೆಟೊ ಚಟ್ನಿ ಜತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಆದರೆ, ಕೆಲವರಿಗೆ ದೋಸೆ ಜತೆ ಟೊಮೆಟೊ ಚಟ್ನಿ ತಿನ್ನಲು ಇಷ್ಟಪಡುವುದಿಲ್ಲ. ಅಂತಹವರು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಬಹುದು.
ವಿಭಾಗ