logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಿಕನ್ ಆಗ್ಲಿ ಮಟನ್ ಆಗ್ಲಿ ನಾನ್‌ವೆಜ್‌ ಅಡುಗೆ ಮಾಡುವಾಗ ಈ ರೀತಿ ಮಸಾಲಾ ಪೇಸ್ಟ್ ಮಾಡಿಟ್ಟುಕೊಂಡು ಬಳಸಿದ್ರೆ ರುಚಿಯೇ ಬೇರೆ, ಟ್ರೈ ಮಾಡಿ

ಚಿಕನ್ ಆಗ್ಲಿ ಮಟನ್ ಆಗ್ಲಿ ನಾನ್‌ವೆಜ್‌ ಅಡುಗೆ ಮಾಡುವಾಗ ಈ ರೀತಿ ಮಸಾಲಾ ಪೇಸ್ಟ್ ಮಾಡಿಟ್ಟುಕೊಂಡು ಬಳಸಿದ್ರೆ ರುಚಿಯೇ ಬೇರೆ, ಟ್ರೈ ಮಾಡಿ

Reshma HT Kannada

Sep 21, 2024 05:07 PM IST

google News

ಮಸಾಲಾ ಪೇಸ್ಟ್

    • ಮಾಂಸಾಹಾರ ಅಡುಗೆಗೆ ಹೆಚ್ಚು ರುಚಿ ಕೊಡುವುದು ಅದಕ್ಕೆ ತಯಾರಿಸುವ ಮಸಾಲೆ. ಮಟನ್ ಆಗಲಿ ಚಿಕನ್‌ ಆಗಲಿ ಫಿಶ್ ಆಗಲಿ, ಅದಕ್ಕೆ ಬಳಸುವ ಮಸಾಲೆಯ ರುಚಿಯ ಜೊತೆ ಮಾಂಸದ ರುಚಿಯೂ ಹೊಂದಿಕೊಂಡು ಈ ಖಾದ್ಯಕ್ಕೆ ವಿಶೇಷ ರುಚಿ ನೀಡುತ್ತೆ. ನಾನ್‌ವೆಜ್ ಅಡುಗೆಗೆ ಭಿನ್ನ ಟೇಸ್ಟ್ ಸಿಗಬೇಕು ಅಂತಿದ್ರೆ ನೀವು ಈ ಮಸಾಲಾ ಪೇಸ್ಟ್ ತಯಾರಿಸಿ. ಇದನ್ನು ಒಮ್ಮೆ ಮಾಡಿಟ್ಟುಕೊಂಡು ಆಗಾಗ ಬಳಸಬಹುದು.
 ಮಸಾಲಾ ಪೇಸ್ಟ್
ಮಸಾಲಾ ಪೇಸ್ಟ್

ಸಾಂಬಾರ್‌ ಪುಡಿ, ರಸಂ ಪುಡಿಯನ್ನು ಮೊದಲೇ ತಯಾರಿಸಿಟ್ಟುಕೊಂಡು ಅಡುಗೆಯನ್ನು ಸುಲಭ ಮಾಡಿಕೊಳ್ಳುವಂತೆ ನಾನ್‌ವೆಜ್ ಅಡುಗೆ ಮಾಡಲು ಮಸಾಲೆ ಪೇಸ್ಟ್ ಅನ್ನು ತಯಾರಿಸಿಟ್ಟುಕೊಳ್ಳಬಹುದು. ಈ ಮಸಾಲೆ ಪೇಸ್ಟ್ ಅಡುಗೆಗೆ ವಿಶೇಷ ರುಚಿ ನೀಡುವುದು ಸುಳ್ಳಲ್ಲ. ಮೀನು, ಸಿಗಡಿ, ಚಿಕನ್‌, ಮಟನ್ ಯಾವುದೇ ಮಾಂಸವಾದ್ರೂ ಸರಿ ಈ ಮಸಾಲೆ ಪೇಸ್ಟ್ ಬಳಸಿದ್ರೆ ಈ ಖಾದ್ಯದ ರುಚಿಯೇ ಬದಲಾಗುತ್ತದೆ.

ಹಾಗಾದರೆ ಏನಿದು ಮಸಾಲೆ ಪೇಸ್ಟ್‌, ಇದನ್ನು ತಯಾರಿಸುವುದು ಹೇಗೆ, ಇದಕ್ಕೆಲ್ಲಾ ಏನೆಲ್ಲಾ ಬೇಕು ಎಂಬ ವಿವರವನ್ನು ನೋಡಿ. ನೀವು ಮನೆಯಲ್ಲಿ ತಯಾರಿಸಿ ಇಟ್ಟುಕೊಳ್ಳಿ.

ಮಸಾಲ ಪೇಸ್ಟ್ ರೆಸಿಪಿಗೆ ಬೇಕಾಗುವ ಪದಾರ್ಥಗಳು

ಕೊತ್ತಂಬರಿ - ಒಂದು ಚಮಚ, ಅರಿಸಿನ - ಅರ್ಧ ಚಮಚಗಳು, ಜೀರಿಗೆ - ಒಂದು ಚಮಚ, ದಾಲ್ಚಿನ್ನಿ - ಸಣ್ಣ ತುಂಡು, ಲವಂಗ - ನಾಲ್ಕು, ಮೆಣಸಿನಕಾಯಿ - ನಾಲ್ಕು, ಶುಂಠಿ - ಸಣ್ಣ ತುಂಡು, ಬೆಳ್ಳುಳ್ಳಿ ಎಸಳು - ಹತ್ತು, ನೀರು - ಅಗತ್ಯ ಇರುವಷ್ಟು

ಮಸಾಲಾ ಪೇಸ್ಟ್ ಮಾಡುವ ವಿಧಾನ

ಮಾಂಸಾಹಾರ ಖಾದ್ಯಗಳನ್ನು ತಯಾರಿಸಲು ಸಾಕಷ್ಟು ಸಮಯ ಬೇಕು ಹಾಗೂ ಇದನ್ನು ಮಾಡುವುದು ಕಷ್ಟ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಈ ರೀತಿ ಮಸಾಲ ಪೇಸ್ಟ್ ಮುಂಚಿತವಾಗಿ ತಯಾರಿಸಿಟ್ಟುಕೊಂಡರೆ ಸುಲಭವಾಗಿ ಚಿಕನ್‌, ಮಟನ್‌, ಮೀನು, ಸಿಗಡಿ ಖಾದ್ಯಗಳನ್ನು ತಯಾರಿಸಬಹುದು. ಮೊದಲು ಮಿಕ್ಸರ್ ಜಾರ್‌ನಲ್ಲಿ ಕೊತ್ತಂಬರಿ, ಅರಿಸಿನ,ಜೀರಿಗೆ ಶುಂಠಿ, ಬೆಳ್ಳುಳ್ಳಿ, ದಾಲ್ಚಿನ್ನಿ ಮತ್ತು ಲವಂಗ ಈ ಎಲ್ಲವನ್ನೂ ಸೇರಿಸಿ ಒಂದು ಸುತ್ತ ತಿರುಗಿಸಿ. ನಂತರ ಮೆಣಸು ಹಾಗೂ ಅಗತ್ಯ ಇರುವಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ. ಈ ಪೇಸ್ಟ್ ನಯವಾಗಿರಬೇಕು.

ಈ ಮಸಾಲಾ ಪೇಸ್ಟ್ ಅನ್ನು ಯಾವಾಗ ಸೇರಿಸಬೇಕು ಎಂಬ ಪ್ರಶ್ನೆ ಕೆಲವರ ಮನಸ್ಸಿನಲ್ಲಿ ಮೂಡಬಹುದು. ಒಲೆಯ ಮೇಲೆ ಕಡಾಯಿ ಇಟ್ಟು ಎಣ್ಣೆ ಮತ್ತು ಈರುಳ್ಳಿ ಹಾಕಿ ನಂತರ ಈ ಮಸಾಲಾ ಪೇಸ್ಟ್ ಹಾಕಿ ಸ್ವಲ್ಪ ಫ್ರೈ ಮಾಡಿ. ಅದರ ನಂತರ ನೀವು ಮಟನ್ ತುಂಡುಗಳು ಅಥವಾ ಚಿಕನ್ ತುಂಡುಗಳನ್ನು ಸೇರಿಸಿ ಬೇಯಿಸಬಹುದು. ನಾಟುಕಾಳಿ ಮಾಡುವಾಗ ಒಲೆಯ ಮೇಲೆ ಬಾಣಲೆ ಇಟ್ಟು ಒಮ್ಮೆ ಈರುಳ್ಳಿ ಪೇಸ್ಟ್, ಮಸಾಲೆ ಪೇಸ್ಟ್, ನಾಟಿಕೋಳಿ ಮಾಂಸವನ್ನು ಹಾಕಿ ಬೇಯಿಸಬಹುದು. ನಾಟಿಕೋಳಿ ಬೇಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಈ ಈರುಳ್ಳಿ ಪೇಸ್ಟ್ ಮತ್ತು ಮಸಾಲೆ ಪೇಸ್ಟ್ ಕೂಡ ಚೆನ್ನಾಗಿ ಬೇಯುತ್ತದೆ. ಈ ಮಸಾಲೆ ಪೇಸ್ಟ್‌ ಚಿಕನ್ ತುಂಡುಗಳಿಗೆ ಒಳ್ಳೆಯ ಪರಿಮಳವನ್ನು ನೀಡುತ್ತದೆ. ಸೀಗಡಿಗಳನ್ನು ಬೇಯಿಸುವಾಗ, ಈರುಳ್ಳಿ ಪೇಸ್ಟ್ ಅನ್ನು ಹುರಿದ ನಂತರ ಈ ಮಸಾಲಾ ಪೇಸ್ಟ್ ಅನ್ನು ಸೇರಿಸಿ. ನಂತರ ಸಿಗಡಿಗಳನ್ನು ಸೇರಿಸಿ ಮತ್ತು ಅದನ್ನು ಕರಿ ರೂಪದಲ್ಲಿ ಬೇಯಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ