ನೀವು ನಾನ್‌ವೆಜ್‌ ಪ್ರಿಯರಾಗಿದ್ರೆ ನಿಮಗಾಗಿ ಇಲ್ಲಿದೆ ಮೂರು ರೆಸಿಪಿ; ಹೊಸ ವರ್ಷಕ್ಕೆ ಹೊಸ ರೆಸಿಪಿ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ನಾನ್‌ವೆಜ್‌ ಪ್ರಿಯರಾಗಿದ್ರೆ ನಿಮಗಾಗಿ ಇಲ್ಲಿದೆ ಮೂರು ರೆಸಿಪಿ; ಹೊಸ ವರ್ಷಕ್ಕೆ ಹೊಸ ರೆಸಿಪಿ ಟ್ರೈ ಮಾಡಿ

ನೀವು ನಾನ್‌ವೆಜ್‌ ಪ್ರಿಯರಾಗಿದ್ರೆ ನಿಮಗಾಗಿ ಇಲ್ಲಿದೆ ಮೂರು ರೆಸಿಪಿ; ಹೊಸ ವರ್ಷಕ್ಕೆ ಹೊಸ ರೆಸಿಪಿ ಟ್ರೈ ಮಾಡಿ

ನ್ಯೂ ಇಯರ್‌ ಈವ್‌ ದಿನ ಮನೆಯಲ್ಲೇ ಏನಾದ್ರೂ ಸ್ಪೆಷಲ್‌ ಮಾಡಬೇಕು ಅಂದ್ಕೋತಾ ಇದ್ರೆ ಈ ರೆಸಿಪಿಗಳು ನಿಮಗೆ ಇಷ್ಟ ಆಗೋದ್ರಲ್ಲಿ ಎರಡು ಮಾತಿಲ್ಲ. ಚಿಕನ್‌ ಪಾಪ್ಸ್‌, ಮಟನ್‌ ಶೀಕ್‌ ಕಬಾಬ್‌ ಹಾಗೂ ಗಾರ್ಲಿಕ್‌ ಪ್ರಾನ್ಸ್‌ನ ರುಚಿಕರವಾಗಿ ಮಾಡೋದು ಹೇಗೆ? ರೆಸಿಪಿ ಇಲ್ಲಿದೆ.

ರೆಸಿಪಿ
ರೆಸಿಪಿ

2023ನೇ ವರ್ಷ ಮುಗಿಯಲು ಕ್ಷಣಗಣನೆ ಆರಂಭವಾಗಿದೆ. ಪ್ರಪಂಚದಾದ್ಯಂತ ಜನರು ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಹೊಸ ವರ್ಷದ ಹಿಂದಿನ ದಿನ ನ್ಯೂ ಇಯರ್‌ ಈವ್‌ ಆಚರಿಸುವುದು ಸಹಜ. ಅಂದು ಬಗೆ ಬಗೆಯ ತಿನಿಸುಗಳನ್ನು ತಯಾರಿಸುವ ಮೂಲಕ ಪಾರ್ಟಿ ಮಾಡುವುದು ಹಲವರ ಅಭ್ಯಾಸ. ಹೊರಗಡೆ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವುದರ ಬದಲು ಮನೆಯಲ್ಲೇ ರುಚಿಯಾಗಿ ಈ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ಇದು ನಿಮ್ಮ ಆರೋಗ್ಯಕ್ಕೂ ನಾಲಿಗೆಗೂ ರುಚಿಸುವುದರಲ್ಲಿ ಅನುಮಾನವಿಲ್ಲ.

ಹಾಗಾದ್ರೆ ಬನ್ನಿ ನ್ಯೂ ಇಯರ್‌ ಈವ್‌ನಲ್ಲಿ ಅಡುಗೆ ಮನೆಯಲ್ಲಿ ಘಮ ಹರಡಿ, ಹೊಟ್ಟೆ ತಾಳ ಹಾಕುವಂತೆ ಮಾಡುವ ಈ ರೆಸಿಪಿಗಳನ್ನು ಮಾಡೋದು ಹೇಗೆ ನೋಡಿ.

ಚಿಕನ್‌ ಪಾಪ್ಸ್‌

ಬೇಕಾಗುವ ಸಾಮಗ್ರಿಗಳು: ಚಿಕನ್‌ ಮಾಂಸ - 200 ಗ್ರಾಂ, ಈರುಳ್ಳಿ - 1 ಚಿಕ್ಕದಾಗಿ ಹೆಚ್ಚಿದ್ದು, ಬೆಳ್ಳುಳ್ಳಿ - 1 ಚಮಚ, ಸೆಲರಿ - 1 ಚಮಚ (ಚಿಕ್ಕದಾಗಿ ಹೆಚ್ಚಿದ್ದು), ಪಾರ್ಸ್‌ಲೆ - 1 ಚಮಚ, ಬೆಣ್ಣೆ - 30 ಗ್ರಾಂ, ಉಪ್ಪು - ರುಚಿಗೆ, ಬಿಳಿಕಾಳುಮೆಣಸಿನ ಪುಡಿ - 1 ಚಮಚ, ಆಲೂಗೆಡ್ಡೆ ಸ್ಮ್ಯಾಶ್‌ ಮಾಡಿದ್ದು - 50 ಗ್ರಾಂ, ಚೀನ್‌ - 25 ಗ್ರಾಂ, ಮೊಟ್ಟೆ - 2, ಹಿಟ್ಟು - 50 ಗ್ರಾಂ, ಬ್ರೆಡ್‌ ಕ್ರಂಬ್ಸ್‌ - 100 ಗ್ರಾಂ.

ತಯಾರಿಸುವ ವಿಧಾನ: ಚಿಕನ್‌ ಬೇಯಿಸುವುದು: ನಾನ್‌ಸ್ಟಿಕ್‌ ಪಾತ್ರೆಯನ್ನು ಬಿಸಿ ಮಾಡಿ, ಅದರಲ್ಲಿ ಬೆಣ್ಣೆ ಹಾಕಿ ಕರಗಿಸಿ. ಅದಕ್ಕೆ ಕತ್ತರಿಸಿಕೊಂಡ ಈರುಳ್ಳಿ, ಬೆಳ್ಳುಳ್ಳಿ, ಸೆಲರಿ ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಗಿಡಮೂಲಿಕೆ ಮಿಶ್ರಣ ಹಾಗೂ ಬಿಳಿ ಕಾಳುಮೆಣಸಿನ ಪುಡಿ ಸೇರಿಸಿ. ಅದಕ್ಕೆ ಚಿಕ್ಕದಾಗಿ ಹೆಚ್ಚಿಕೊಂಡ ಚಿಕನ್‌ ಮಾಂಸದ ತುಂಡುಗಳನ್ನು ಸೇರಿಸಿ. ಇದನ್ನು ಡ್ರೈ ಆಗುವವರೆಗೂ ಮಿಶ್ರಣ ಮಾಡಿ. ಯಾವುದೇ ಗಂಟಿಲ್ಲದಂತೆ ಮಿಶ್ರಣವನ್ನು ರೆಡಿ ಮಾಡಿಟ್ಟುಕೊಳ್ಳಿ. ಇದು ತಣ್ಣದಾಗ ಮೇಲೆ ಅದಕ್ಕೆ ಆಲೂಗೆಡ್ಡೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ತುರಿದುಕೊಂಡ ಚೀಸ್‌, ಪಾರ್ಸ್‌ಲೆ ಜೊತೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಇದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಪಾತ್ರೆಯಲ್ಲಿ 2 ಮೊಟ್ಟೆ ಒಡೆದು ಹಾಕಿ ಅದಕ್ಕೆ ಹಿಟ್ಟು ಹಾಗೂ ಬ್ರೆಡ್‌ ಪುಡಿ ಸೇರಿಸಿ. ಈ ಮಿಶ್ರಣ ಉಂಡೆಗಳನ್ನು ಹೊರಳಿಸಿ. ಇದನ್ನು ಕೆಲ ಹೊತ್ತು ಫ್ರಿಜ್‌ನಲ್ಲಿ ಇಡಿ. ಈಗ ಎಣ್ಣೆ ಕಾಯಲು ಇಟ್ಟು, ಅದರಲ್ಲಿ ಚಿಕನ್‌ ಉಂಡೆಗಳನ್ನು ಕರಿಯಿರಿ. ಇದನ್ನು ಟಿಶ್ಯೂ ಪೇಪರ್‌ ಮೇಲೆ ಹರಡಿ, ನಂತರ ನಿಮ್ಮಿಷ್ಟದ ಸಾಸ್‌ ಜೊತೆ ತಿನ್ನಿ. ಗ್ರೀನ್‌ ಚಟ್ನಿ ಜೊತೆಗೂ ಇದು ಸಖತ್‌ ಆಗಿರುತ್ತೆ.

ಇದನ್ನೂ ಓದಿ: ನ್ಯೂ ಇಯರ್‌ ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರೋಕೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

ಮಟನ್‌ ಶೀಖ್‌ ಕಬಾಬ್‌

ಮಟನ್‌ ಶೀಖ್‌ ಕಬಾಬ್‌ ಚಳಿಗಾಲ ಹಾಗೂ ನ್ಯೂ ಇಯರ್‌ ಈವ್‌ಗೆ ಹೇಳಿ ಮಾಡಿಸಿದ್ದು.

ಬೇಕಾಗುವ ಸಾಮಗ್ರಿಗಳು: ಮೂಳೆ ರಹಿತ ಮಟನ್‌: 500 ಗ್ರಾಂ, ಮಟನ್‌ ಫ್ಯಾಟ್‌ - 25ಗ್ರಾಂ, ಮೊಟ್ಟೆ - 1, ಕಡಲೆಹಿಟ್ಟು - 50ಗ್ರಾಂ, ಈರುಳ್ಳಿ ಹೆಚ್ಚಿದ್ದು - 100 ಗ್ರಾಂ, ಗೋಡಂಬಿ - 50 ಗ್ರಾಂ (ನೀರಿನಲ್ಲಿ ನೆನೆಸಿದ್ದು), ಹೆಚ್ಚಿದ ಬೆಳ್ಳುಳ್ಳಿ - 2 ಚಮಚ, ಹಸಿಮೆಣಸು - 2 ಚಮಚ, ಕಾಶ್ಮೀರಿ ರೆಡ್‌ ಚಿಲ್ಲಿ ಪೌಡರ್‌ - 2 ಚಮಚ, ಗರಂಮಸಾಲ ಪುಡಿ - 2 ಚಮಚ, ಡ್ರೈ ಮ್ಯಾಂಗೋ ಪೌಡರ್‌ - ಚಿಟಿಕೆ, ಜೀರಿಗೆ ಪುಡಿ - 1 ಚಮಚ, ಏಲಕ್ಕಿ ಪುಡಿ - 1 ಚಮಚ, ದಾಲ್ಚಿನ್ನಿ ಪುಡಿ - 1 ಚಮಚ, ಕಾಳುಮೆಣಸಿನ ಪುಡಿ - 1 ಚಮಚ, ಕೊತ್ತಂಬರಿ ಸೊಪ್ಪು - 3 ಚಮಚ, ಉಪ್ಪು - 2 ಚಮಚ.

ತಯಾರಿಸುವ ವಿಧಾನ: ಕಡಲೆಹಿಟ್ಟು ಹಾಗೂ ಮೊಟ್ಟೆ ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಹೆಚ್ಚಿಕೊಂಡ ಮಿಶ್ರಣಕ್ಕೆ ಮೊಟ್ಟೆ ಒಡೆದು ಹಾಕಿ, ನಂತರ ಕಡಲೆಹಿಟ್ಟು ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಲೋಹ ಕಡ್ಡಿ ತೆಗೆದುಕೊಂಡು ಅದಕ್ಕೆ ಮಿಶ್ರಣ ಮಾಡಿಕೊಂಡ ಮಟನ್‌ ಅನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಇರಿಸಿಕೊಂಡು ಅದನ್ನು ಚೆನ್ನಾಗಿ ಕಡ್ಡಿಗೆ ಮೆತ್ತಿ. ನಂತರ ಚಾರ್‌ಕೋಲ್‌ ಗ್ರಿಲ್‌ ಬಿಸಿ ಮಾಡಿ. ಮಟನ್‌ ಮೆತ್ತಿದ ಲೋಹ ಕಡ್ಡಿಯನ್ನು ಅದರ ಮೇಲೆ ಇರಿಸಿ. ಎರಡೂ ಕಡೆ ಬೇಯಿಸಿ. ಇದರ ಮೇಲೆ ತುಪ್ಪ ಸವರಿ. ಚೆನ್ನಾಗಿ ಬೆಂದ ಮೇಲೆ ಲೋಹ ಕಡ್ಡಿಯನ್ನು ತೆಗೆಯಿರಿ. ಇದನ್ನು ನಿಮ್ಮಷ್ಟಿದ ಗಾತ್ರಕ್ಕೆ ಕತ್ತರಿಸಿಕೊಂಡು ತಿನ್ನಬಹುದು. ಇದನ್ನು ಪುದಿನಾ ಚಟ್ನಿ, ಈರುಳ್ಳಿ ಸಲಾಡ್‌ ಜೊತೆ ತಿನ್ನಲು ಕೊಡಿ.

ಇದನ್ನೂ ಓದಿ: New Year 2024: ಹೊಸ ವರ್ಷಕ್ಕೆ ಜನರು ತೆಗೆದುಕೊಳ್ಳುವ ಟಾಪ್‌ 10 ರೆಸಲ್ಯೂಷನ್‌ಗಳಿವು, ಈ ಲಿಸ್ಟಲ್ಲಿ ನಿಮ್ಮ ಪ್ಲಾನ್‌ ಇದ್ಯಾ ನೋಡಿ

ಗಾರ್ಲಿಕ್‌ ಪ್ರಾನ್ಸ್‌

ಇದು ಬಹಳ ಸುಲಭವಾಗಿ ತಯಾರಿಸಬಹುದಾದ ರೆಸಿಪಿ. ಪ್ರಾನ್ಸ್‌ ಹಲವರಿಗೆ ಇಷ್ಟವಾಗುವ ರೆಸಿಪಿ ಕೂಡ. ಇದನ್ನು ಥಟ್ಟಂತ ಅಂತ ಮಾಡಬಹುದಾದರೂ ರುಚಿ ಮಾತ್ರ, ಬಾಯಲ್ಲಿ ಹಾಗೇ ಉಳಿದಿರುತ್ತದೆ. ಬೇಕಾಗುವ ಸಾಮಗ್ರಿಗಳು: ಸಿಗಡಿ - 250 ಗ್ರಾಂ (ಸಿಪ್ಪೆ ಸಮೇತ ಇರುವುದು), ಆಲಿವ್‌ ಎಣ್ಣೆ - 30 ಮಿಲಿ ಲೀಟರ್‌, ಸಿಗಡಿ - ತಲೆ ಹಾಗೂ ಸಿಪ್ಪೆ ತೆಗೆದಿರುವುದು), ಬೆಳುಳ್ಳಿ - 10 ಎಸಳು, ಚಿಲ್ಲಿ ಫ್ಲೇಕ್ಸ್‌ - 1 ಚಮಚ, ಆಲಿವ್‌ ಎಸಳು- ಹಸಿರು 5, ಕಪ್ಪು 5, ಬಿಳಿ ವೈನ್‌ - 50 ಮಿಲಿ ಲೀಟರ್‌, ಪಾರ್ಸಲೆ - 2 ಚಮಚ, ಉಪ್ಪು - ರುಚಿಗೆ, ಬೆಣ್ಣೆ - ಸ್ವಲ್ಪ, ನಿಂಬೆ ಹಣ್ಣಿನ ಸಿಪ್ಪೆ - 4

ಬಟರ್‌ ಸಾಸ್‌ಗೆ ಸಾಮಗ್ರಿಗಳು: ಬೆಣ್ಣೆ - 50 ಗ್ರಾಂ, ನಿಂಬೆರಸ - ಅರ್ಧ ನಿಂಬೆ ಹಣ್ಣಿನದ್ದು, ಹೆಚ್ಚಿದ ಪಾರ್ಸ್‌ಲೆ - 2 ಚಿಟಿಕೆ, ಬೆಣ್ಣೆಯನ್ನು ಕರಗಿಸಿ ಅದಕ್ಕೆ ನಿಂಬೆ ರಸ ಹಾಗೂ ಪಾರ್ಸ್‌ಲೆ ಸೇರಿಸಿ.

ತಯಾರಿಸುವ ವಿಧಾನ: ಸಿಗಡಿ ತಲೆ ಬೇರ್ಪಡಿಸಿ ಅದನ್ನು ಎಸೆಯಿರಿ. ಚೂಪಾದ ಚಾಕುವಿನಿಂದ ಸಿಗಡಿಯ ಮೇಲ್ಭಾಗ ಹಾಗೂ ಬೆನ್ನಿನ ಭಾಗ ಚಿಪ್ಪು ತೆರೆಯುವಂತೆ ಮಾಡಿ. ಪಾತ್ರೆಯನ್ನು ಬಿಸಿ ಮಾಡಿ. ಅದಕ್ಕೆ ಆಲಿವ್‌ ಎಣ್ಣೆ, ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೂ ಹುರಿಯಿರಿ. ಇದಕ್ಕೆ ಚಿಲ್ಲಿ ಫ್ಲೇಕ್ಸ್‌ ಸೇರಿಸಿ. ನಂತರ ಸ್ವಚ್ಛ ಮಾಡಿಟ್ಟುಕೊಂಡು ಸಿಗಡಿಗಳನ್ನು ಸೇರಿಸಿ, ಪ್ಯಾನ್‌ಗೆ ಹಾಕಿ. ಬಿಳಿ ವೈನ್‌, ಆಲಿವ್‌ ಚೂರು, ಉಪ್ಪು ಸೇರಿಸಿ. ವೈನ್‌ ಆವಿ ಆಗುವವರೆಗೂ ಕೈಯಾಡಿಸಿ. ಹೆಚ್ಚಿಕೊಂಡ ಪಾರ್ಸ್‌ಲೆ, ನಿಂಬೆ ತುಂಡು ಹಾಗೂ ಬೆಣ್ಣೆಯಿಂದ ತಯಾರಿಸಿಕೊಂಡ ಮಿಶ್ರಣವನ್ನು ಸೇರಿಸಿ ಮತ್ತೆ ಕೈಯಾಡಿಸಿ. ಈಗ ನಿಮ್ಮ ಮುಂದೆ ಗಾರ್ಲಿಕ್‌ ಪ್ರಾನ್ಸ್‌ ತಿನ್ನಲು ರೆಡಿ.

Whats_app_banner