logo
ಕನ್ನಡ ಸುದ್ದಿ  /  ಜೀವನಶೈಲಿ  /  ಊಟದೊಂದಿಗೆ ಸೈಡ್ಸ್‌ ಬೇಕು ಅನ್ನಿಸ್ತಿದ್ಯಾ, ಹಾಗಿದ್ರೆ ಪ್ರೋಟೀನ್‌ ಭರಿತ ಸೋಯಾ ಚಂಕ್ಸ್‌ ಫ್ರೈ ಮಾಡ್ಕೊಳ್ಳಿ; ರೆಸಿಪಿ ಇಲ್ಲಿದೆ

ಊಟದೊಂದಿಗೆ ಸೈಡ್ಸ್‌ ಬೇಕು ಅನ್ನಿಸ್ತಿದ್ಯಾ, ಹಾಗಿದ್ರೆ ಪ್ರೋಟೀನ್‌ ಭರಿತ ಸೋಯಾ ಚಂಕ್ಸ್‌ ಫ್ರೈ ಮಾಡ್ಕೊಳ್ಳಿ; ರೆಸಿಪಿ ಇಲ್ಲಿದೆ

Rakshitha Sowmya HT Kannada

Sep 12, 2024 12:42 PM IST

google News

ಊಟದೊಂದಿಗೆ ಸೈಡ್ಸ್‌ ಬೇಕು ಅನ್ನಿಸ್ತಿದ್ಯಾ, ಹಾಗಿದ್ರೆ ಪ್ರೋಟೀನ್‌ ಭರಿತ ಸೋಯಾ ಚಂಕ್ಸ್‌ ಫ್ರೈ ಮಾಡ್ಕೊಳ್ಳಿ; ರೆಸಿಪಿ ಇಲ್ಲಿದೆ

  • ನಾಲಿಗೆಗೆ ರುಚಿ ಎನಿಸುವ, ಅರೋಗ್ಯಕರ ಆಹಾರ ಅಂದ್ರೆ ಯಾರು ತಾನೇ ಬೇಡ ಅಂತಾರೆ. ದೇಹಕ್ಕೆ ಬೇಕಾದ ಪ್ರೋಟೀನ್‌ ಹೊಂದಿರುವ ಆಹಾರಗಳಲ್ಲಿ ಸೋಯಾ ಚಂಕ್ಸ್‌ ಕೂಡಾ ಒಂದು. ಇದನ್ನು ಮೀಲ್‌ ಮೇಕರ್‌ ಎಂದೂ ಕರೆಯಲಾಗುತ್ತದೆ. ಸೋಯಾ ಚಂಕ್ಸ್‌ನಿಂದ ತಯಾರಿಸಲಾದ ರುಚಿಕರ ರೆಸಿಪಿ ಇಲ್ಲಿದೆ. 

ಊಟದೊಂದಿಗೆ ಸೈಡ್ಸ್‌ ಬೇಕು ಅನ್ನಿಸ್ತಿದ್ಯಾ, ಹಾಗಿದ್ರೆ ಪ್ರೋಟೀನ್‌ ಭರಿತ ಸೋಯಾ ಚಂಕ್ಸ್‌ ಫ್ರೈ ಮಾಡ್ಕೊಳ್ಳಿ; ರೆಸಿಪಿ ಇಲ್ಲಿದೆ
ಊಟದೊಂದಿಗೆ ಸೈಡ್ಸ್‌ ಬೇಕು ಅನ್ನಿಸ್ತಿದ್ಯಾ, ಹಾಗಿದ್ರೆ ಪ್ರೋಟೀನ್‌ ಭರಿತ ಸೋಯಾ ಚಂಕ್ಸ್‌ ಫ್ರೈ ಮಾಡ್ಕೊಳ್ಳಿ; ರೆಸಿಪಿ ಇಲ್ಲಿದೆ (PC: @QueensWardrobe3)

ಊಟ ತಿನ್ನುವಾಗ ಏನಾದರೂ ಸೈಡ್ಸ್‌ ಇದ್ದರೆ ಚೆಂದ. ಪಲ್ಯ, ಪಕೋಡಾ, ಬಜ್ಜಿ, ಮಿಕ್ಸ್ಚರ್‌, ಮಜ್ಜಿಗೆ ಮೆಣಸಿನಕಾಯಿ ಕೊನೆ ಪಕ್ಷ ಏನೂ ಇಲ್ಲದಿದ್ದರೆ ಈರುಳ್ಳಿಯನ್ನಾದರೂ ತಿನ್ನುವ ಅಭ್ಯಾಸ ಕೆಲವರಿಗೆ ಇರುತ್ತದೆ. ತರಕಾರಿ ಪಲ್ಯವಾದರೂ ಸರಿ ಆದರೆ ಪ್ರತಿದಿನ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಸೇವಿಸುವುದು ಅರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿ ನೀವು ಏನಾದರೂ ಆರೋಗ್ಯಕರ ತಿಂಡಿಯನ್ನು ಹುಡುಕುತ್ತಿದ್ದರೆ ಮೀಲ್‌ ಮೀಕರ್‌ ಒಳ್ಳೆ ಆಯ್ಕೆ.

ಮೀಲ್‌ ಮೇಕರನ್ನು ಸೋಯಾ ಚಂಕ್ಸ್‌ ಎಂದೂ ಕರೆಯಲಾಗುತ್ತದೆ. ಇದು ಪ್ರೋಟೀನ್‌ಭರಿತವಾಗಿದೆ. ಸೋಯಾ ಚಂಕ್ಸ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳ ಜೊತೆಗೆ ಬಹು ಅಪರ್ಯಾಪ್ತ ಕೊಬ್ಬುಗಳಿಂದ ತುಂಬಿದೆ. ಹೃದಯದ ಆರೋಗ್ಯ, ಚರ್ಮ, ಕೂದಲು ಮತ್ತು ಮೂಳೆಗಳಿಗೂ ಒಳ್ಳೆಯದು. ಆದ್ದರಿಂದ ಪ್ರತಿ ದಿನ ಅಲ್ಲದಿದ್ದರೂ ವಾರಕ್ಕೆ ಒಂದೆರಡು ಬಾರಿಯಾದರೂ ನಿಮ್ಮ ಆಹಾರದಲ್ಲಿ ಸೋಯಾ ಚಂಕ್ಸ್ ಬಳಸಿ. ಸುಲಭವಾಗಿ ತಯಾರಿಸಬಹುದಾದ ಸೋಯಾ ಫ್ರೈ ರೆಸಿಪಿ ಇಲ್ಲಿದೆ.

ಸೋಯಾ ಫ್ರೈ ತಯಾರಿಸಲು ಬೇಕಾದ ಸಾಮಗ್ರಿಗಳು

  • ಸೋಯಾ ಚಂಕ್ಸ್‌ - 100 ಗ್ರಾಂ
  • ಚೆಕ್ಕೆ ತುಂಡು - 2
  • ಏಲಕ್ಕಿ - 3
  • ಲವಂಗ - 4
  • ಜೀರ್ಗೆ - 1 ಟೀ ಸ್ಪೂನ್‌
  • ಸೋಂಪು - 1/2 ಟೀ ಸ್ಪೂನ್
  • ಕರಿಮೆಣಸು - 1 ಟೇಬಲ್‌ ಸ್ಪೂನ್‌
  • ಒಣ ಮೆಣಸಿನಕಾಯಿ - 5
  • ತೆಂಗಿನಕಾಯಿ ಚೂರು - 1/2 ಕಪ್
  • ಈರುಳ್ಳಿ - 2
  • ಟೊಮೆಟೊ - 1
  • ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 1 ಟೀ ಸ್ಪೂನ್‌
  • ಕೊತ್ತಂಬರಿ ಸೊಪ್ಪು - 1/2 ಕಟ್ಟು
  • ಉಪ್ಪು - ರುಚಿಗೆ ತಕ್ಕಷ್ಟು
  • ಎಣ್ಣೆ - 1 ಟೇಬಲ್‌ ಸ್ಪೂನ್‌

ಇದನ್ನೂ ಓದಿ: ಬೆಳ್ಳುಳ್ಳಿ ಕಬಾಬ್‌ ಅಲ್ಲ ಇದು ಬೆಳ್ಳುಳ್ಳಿ ಚಿಕನ್‌; ಗಾರ್ಲಿಕ್‌ ಚಿಕನ್‌ ತಯಾರಿಸುವ ವಿಧಾನ ಹೀಗಿದೆ

ಸೋಯಾ ಚಂಕ್ಸ್‌ ಫ್ರೈ ತಯಾರಿಸುವ ವಿಧಾನ

  1. ಒಂದು ಪಾತ್ರೆಯಲ್ಲಿ ನೀರು ಬಿಸಿಯಾಗಲು ಬಿಡಿ, ಕುದಿಯಲು ಆರಂಭವಾದಾಗ ಸೋಯಾ ಚಂಕ್ಸ್‌ ಸೇರಿಸಿ\
  2. ಸ್ವಲ್ಪ ಉಪ್ಪು ಸೇರಿಸಿ ತಿರುವಿ 5-10 ನಿಮಿಷದ ನಂತರ ಸ್ಟೌವ್‌ ಆಫ್‌ ಮಾಡಿ, ನೀರಿನಿಂದ ಹೊರ ತೆಗೆಯಿರಿ
  3. ಒಂದು ಬಾಣಲೆಯಲ್ಲಿ ಚೆಕ್ಕೆ, ಲವಂಗ, ಏಲಕ್ಕಿ, ಜೀರ್ಗೆ‌, ಸೋಂಪು ಸೇರಿಸಿ
  4. ಇದರೊಂದಿಗೆ ಕರಿಮೆಣಸು, ಒಣಮೆಣಸಿನಕಾಯಿ, ಕಾಯಿಚೂರುಗಳನ್ನು ಸೇರಿಸಿ ಸುವಾಸನೆ ಬರುವರೆಗೂ ಡ್ರೈ ರೋಸ್ಟ್‌ ಮಾಡಿ ಮಾಡಿ
  5. ಹುರಿದ ಮಿಶ್ರಣ ತಣ್ಣಗಾದಾಗ ಮಿಕ್ಸಿಯಲ್ಲಿ ಸೇರಿಸಿ ಪುಡಿ ಮಾಡಿಕೊಳ್ಳಿ ( ನೀರು ಸೇರಿಸಬೇಡಿ)
  6. ಮತ್ತೊಂದು ಪಾತ್ರೆಗೆ ಸ್ವಲ್ಪ ಎಣ್ಣೆ ಸೇರಿಸಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ
  7. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ ಹಸಿವಾಸನೆ ಹೋಗುವರೆಗೂ ಹುರಿದು ಟೊಮೆಟೊ ಸೇರಿಸಿ ಮೆತ್ತಗಾಗುವರೆಗೂ ಫ್ರೈ ಮಾಡಿ
  8. ಇದಕ್ಕೆ ಸ್ವಲ್ಪ ನೀರು ಸೇರಿಸಿ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ
  9. ಎರಡು ನಿಮಿಷದ ನಂತರ ಸೋಯಾ ಚಂಕ್ಸ್‌ , ಮೊದಲೇ ಗ್ರೈಂಡ್‌ ಮಾಡಿಟ್ಟುಕೊಂಡ ಮಸಾಲೆ, ಉಪ್ಪು ಸೇರಿಸಿ ಮಿಕ್ಸ್‌ ಮಾಡಿ
  10. ಮುಚ್ಚಳ ಮುಚ್ಚಿ 5 ನಿಮಿಷ ಹೈ ಫ್ಲೇಮ್‌ನಲ್ಲಿ ಕುಕ್‌ ಮಾಡಿ ಸ್ಟೌವ್‌ ಆಫ್‌ ಮಾಡಿ
  11. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ಸೋಯಾ ಫ್ರೈ ರೆಡಿ

ಅನ್ನ, ರೊಟ್ಟಿ, ಚಪಾತಿಯೊಂದಿಗೆ ನೀವು ಈ ಸೋಯಾ ಫ್ರೈ ಸೇವಿಸಬಹುದು, ಊಟದೊಂದಿಗೆ ಸೈಡ್ಸ್‌ ಆಗಿಯೂ ತಿನ್ನಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ