logo
ಕನ್ನಡ ಸುದ್ದಿ  /  ಜೀವನಶೈಲಿ  /  Palak Pulao: ಒಂದೇ ರುಚಿಯ ಪಲಾವ್ ತಿಂದು ನಾಲಿಗೆಗೆ ಬೇಸರ ಬಂದಿದ್ರೆ, ಪಾಲಕ್ ಪಲಾವ್ ಟ್ರೈ ಮಾಡಿ, ಟೇಸ್ಟ್ ಸಖತ್ ಇರುತ್ತೆ

Palak Pulao: ಒಂದೇ ರುಚಿಯ ಪಲಾವ್ ತಿಂದು ನಾಲಿಗೆಗೆ ಬೇಸರ ಬಂದಿದ್ರೆ, ಪಾಲಕ್ ಪಲಾವ್ ಟ್ರೈ ಮಾಡಿ, ಟೇಸ್ಟ್ ಸಖತ್ ಇರುತ್ತೆ

Reshma HT Kannada

Aug 28, 2024 02:17 PM IST

google News

ಪಲಾಕ್ ಪಲಾವ್

    • ಪಾಲಾಕ್ ಸೊಪ್ಪು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆದರೆ ಕೆಲವರಿಗೆ ಪಾಲಕ್ ಇಷ್ಟವಾಗುವುದಿಲ್ಲ. ಆದ್ರೆ ಈ ರೀತಿ ಪಾಲಕ್ ಪಾಲಾವ್ ಮಾಡಿದ್ರೆ ಸಖತ್ ಟೇಸ್ಟಿ ಆಗಿರುತ್ತೆ, ನಿಮ್ಮನೇಲಿ ಎಲ್ರೂ ಇಷ್ಟಪಟ್ಟು ತಿಂತಾರೆ, ಟ್ರೈ ಮಾಡಿ.
ಪಲಾಕ್ ಪಲಾವ್
ಪಲಾಕ್ ಪಲಾವ್

ಪಾಲಾಕ್ ಸೊಪ್ಪು ಪೋಷಕಾಂಶಗಳ ಗಣಿ. ಇದರ ನಿರಂತರ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದರೆ ಇದರ ವಾಸನೆ, ರುಚಿ ಕೆಲವರಿಗೆ ಇಷ್ಟವಾಗುವುದಿಲ್ಲ. ಇದರಿಂದ ಸಾಂಬಾರ್‌ ಮಾಡಿದ್ರೆ ತಿನ್ನುವುದು ಕಷ್ಟ. ಇದರಿಂದ ಹಸಿ ವಾಸನೆ ಬಂದರೆ ತಿನ್ನಲು ಸಹ್ಯವಾಗುವುದಿಲ್ಲ. ಆದ್ರೆ ನೀವು ಇದ್ರಿಂದ ಪಲಾವ್ ಮಾಡಿದ್ರೆ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪಾಲಾಕ್ ಪಲಾವ್ ರುಚಿಗೆ ಮನಸೋಲುತ್ತಾರೆ. ಇದನ್ನು ಕಡಿಮೆ ಸಾಮಗ್ರಿಯಲ್ಲಿ ಬಹಳ ಬೇಗ ಮಾಡಬಹುದು.

ಪಾಲಕ್ ಪಲಾವ್ ರೆಸಿಪಿಗೆ ಬೇಕಾಗುವ ಸಾಮಗ್ರಿಗಳು

ಅಕ್ಕಿ - ಎರಡು ಕಪ್, ಪಾಲಕ್‌- ಎರಡು ಕಟ್ಟುಗಳು, ಕೊತ್ತಂಬರಿ - ಒಂದು ಗೊಂಚಲು, ಶುಂಠಿ - ಸಣ್ಣ ತುಂಡು, ಮೆಣಸಿನಕಾಯಿ - ನಾಲ್ಕು, ಎಣ್ಣೆ - ಮೂರು ಚಮಚ, ಕ್ಯಾರೆಟ್ - ಒಂದು, ಫ್ರೆಂಚ್ ಬೀನ್ಸ್ - ನಾಲ್ಕು, ಹೂಕೋಸು ತುಂಡುಗಳು - ಕಾಲು ಕಪ್, ಅವರೆಕಾಳು - ಒಂದು ಮುಷ್ಟಿ, ಅರಿಶಿನ - ಅರ್ಧ ಟೀ ಚಮಚ, ಉಪ್ಪು - ರುಚಿಗೆ, ಗರಂ ಮಸಾಲಾ - ಅರ್ಧ ಚಮಚ,

ಪಾಲಕ್ ಪಲಾವ್ ಮಾಡುವ ವಿಧಾನ

ಪಾಲಕ್‌ ಸೊಪ್ಪು ಚಿಕ್ಕದಾಗಿ ಕತ್ತರಿಸಿ, ತೊಳೆದು ಪಕ್ಕಕ್ಕೆ ಇರಿಸಿ. ಒಲೆಯ ಮೇಲೆ ಒಂದು ಕಡಾಯಿ ಇಟ್ಟು ಎಣ್ಣೆ ಹಾಕಿ. ಎಣ್ಣೆಗೆ ಹೆಚ್ಚಿಟ್ಟುಕೊಂಡ ಪಾಲಕ್‌ ಸೊಪ್ಪ ಸೇರಿಸಿ ಫ್ರೈ ಮಾಡಿ. ಅರಿಶಿನ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಸಂಪೂರ್ಣ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಮಿಕ್ಸಿ ಜಾರ್‌ನಲ್ಲಿ ಹುರಿದಿಟ್ಟುಕೊಂಡ ಸೊಪ್ಪಿನ ಜೊತೆ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಒಂದು ತುಂಡು ಶುಂಠಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆಗೆ ಸಣ್ಣಗೆ ಕತ್ತರಿಸಿದ ಕ್ಯಾರೆಟ್, ಫ್ರೆಂಚ್ ಬೀನ್ಸ್, ಹೂಕೋಸು ತುಂಡುಗಳು ಮತ್ತು ಬಟಾಣಿ ಸೇರಿಸಿ ಫ್ರೈ ಮಾಡಿ. ಇದಕ್ಕೆ ರುಬ್ಬಿಕೊಂಡ ಮಿಶ್ರಣ ಸೇರಿಸಿ. ಅರ್ಧ ಚಮಚ ಗರಂ ಮಸಾಲ ಪುಡಿ ಹಾಕಿ. ಈ ಮಿಶ್ರಣವನ್ನು ಸ್ವಲ್ಪ ಹೊತ್ತು ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅಕ್ಕಿಯನ್ನು ಸ್ವಚ್ಛವಾಗಿ ತೊಳೆದು ಕುಕ್ಕರ್‌ನಲ್ಲಿ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿರುವಷ್ಟು ನೀರು ಸೇರಿಸಿ. ಕುಕ್ಕರ್ ಮುಚ್ಚಿ ಮೂರು ಸೀಟಿ ಹೊಡೆಸಿ. ಆರಿದ ನಂತರ ಕುಕ್ಕರ್ ಓಪನ್ ಮಾಡಿ. ಈಗ ನಿಮ್ಮ ಮುಂದೆ ರುಚಿಯಾದ ಪಾಲಾಕ್ ಪಲಾವ್ ತಿನ್ನಲು ಸಿದ್ಧ.

ಪಲಾಕ್ ಸೊಪ್ಪಿನ ಆರೋಗ್ಯ ಪ್ರಯೋಜನಗಳು

ಪಾಲಕ್ ಸೊಪ್ಪನ್ನು ಹೆಚ್ಚಾಗಿ ಮಕ್ಕಳು ಮತ್ತು ವಯಸ್ಕರು ತಿನ್ನಬೇಕು. ಈ ಸೊಪ್ಪನ್ನು ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಆಯುರ್ವೇದದಲ್ಲಿಯೂ ಸಹ ಪಾಲಕ್ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ರಕ್ತವನ್ನು ಶುದ್ಧೀಕರಿಸುವ ಗುಣವನ್ನು ಹೊಂದಿದೆ. ಲೆಟಿಸ್ ಚರ್ಮ ಮತ್ತು ಕೂದಲಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ವಾರಕ್ಕೆ ಕನಿಷ್ಠ ಎರಡರಿಂದ ಮೂರು ಬಾರಿ ನಿಮ್ಮ ಆಹಾರದಲ್ಲಿ ಪಾಲಕ್‌ ಅನ್ ಸೇರಿಸಿ. ಈ ಪಾಲಕ್ ಪುಲಾವ್ ಮಾಡಿ ತಿಂದರೆ ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ