Gongura Chicken Pulao: ಬಾಯಲ್ಲಿ ನೀರೂರಿಸುವ ಆಂಧ್ರ ಸ್ಟೈಲ್‌ ಗೊಂಗುರ ಚಿಕನ್‌ ಪಲಾವ್‌ ರೆಸಿಪಿ ಇಲ್ಲಿದೆ, ನೀವೂ ಟ್ರೈ ಮಾಡಿ-food gongura chicken pulao recipe how to make gongura chicken pulao ingredients for gongura chicken pulao rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Gongura Chicken Pulao: ಬಾಯಲ್ಲಿ ನೀರೂರಿಸುವ ಆಂಧ್ರ ಸ್ಟೈಲ್‌ ಗೊಂಗುರ ಚಿಕನ್‌ ಪಲಾವ್‌ ರೆಸಿಪಿ ಇಲ್ಲಿದೆ, ನೀವೂ ಟ್ರೈ ಮಾಡಿ

Gongura Chicken Pulao: ಬಾಯಲ್ಲಿ ನೀರೂರಿಸುವ ಆಂಧ್ರ ಸ್ಟೈಲ್‌ ಗೊಂಗುರ ಚಿಕನ್‌ ಪಲಾವ್‌ ರೆಸಿಪಿ ಇಲ್ಲಿದೆ, ನೀವೂ ಟ್ರೈ ಮಾಡಿ

ಚಿಕನ್‌ ಬಿರಿಯಾನಿ ಅಂದ್ರೆ ನಿಮಗೆ ತುಂಬಾ ಇಷ್ಟನಾ, ಯಾವಾಗ್ಲೂ ಚಿಕನ್‌ ಬಿರಿಯಾನಿ ತಿಂದ್ರೆ ಏನ್‌ ಚೆಂದ ಹೇಳಿ. ಸ್ಪೆಷಲ್‌ ಆಗಿ ಆಂಧ್ರ ಸ್ಟೈಲ್‌ ಅಲ್ಲಿ ಗೊಂಗುರ ಚಿಕನ್‌ ಪಲಾವ್‌ ಮಾಡ್ಕೊಳಿ. ಬಾಯಲ್ಲಿ ನೀರೂರಿಸುವ ಈ ರೆಸಿಪಿಯನ್ನು ಮನೆಯಲ್ಲಿ ಸುಲಭವಾಗಿ ಹಾಗೂ ಬಹಳ ಬೇಗ ತಯಾರಿಸಬಹುದು. ರೆಸಿಪಿ ಇಲ್ಲಿದೆ ನೋಡಿ.

ಆಂಧ್ರ ಸ್ಟೈಲ್‌ ಗೊಂಗುರ ಚಿಕನ್‌ ಪಲಾವ್‌ ರೆಸಿಪಿ
ಆಂಧ್ರ ಸ್ಟೈಲ್‌ ಗೊಂಗುರ ಚಿಕನ್‌ ಪಲಾವ್‌ ರೆಸಿಪಿ

ಗೊಂಗುರ ಚಟ್ನಿ ಯಾರಿಗೊತ್ತಿಲ್ಲ ಹೇಳಿ, ರುಚಿಯಲ್ಲಿ ಸಖತ್‌ ಡಿಫ್ರೆಂಟ್‌ ಆಗಿರೋ ಗೊಂಗುರ ಚಟ್ನಿ ಆಂಧ್ರದಲ್ಲಿ ಫೇಮಸ್‌, ಆದರೆ ನಾವಿಲ್ಲಿ ಹೇಳ್ತಾ ಇರೋದು ಸ್ಪೆಷಲ್‌ ಗೊಂಗುರ ಚಿಕನ್‌ ಪಲಾವ್‌ ರೆಸಿಪಿ ಬಗ್ಗೆ. ಈ ಹೆಸರು ಹೆಸರು ಕೇಳಿದ್ರೆ ಬಾಯಲ್ಲಿ ನೀರೂರೋದು ಪಕ್ಕಾ. ಇದನ್ನು ಮನೆಯಲ್ಲಿ ಸುಲಭವಾಗಿ ಹಾಗೂ ಬಹಳ ಬೇಗ ತಯಾರಿಸಬಹುದು. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಗೊಂಗುರ ಚಿಕನ್‌ ಪಲಾವ್‌ ಅನ್ನು ಇಷ್ಟಪಟ್ಟು ತಿನ್ನುತ್ತಾರೆ. ಚಿಕನ್‌ ಹಾಗೂ ಗೊಂಗುರ ಜೊತೆ ಆಹಾ ಅದರ ರುಚಿ ಕೇಳ್ಬೇಕಾ?

ನಿಮಗೆ ಯಾವಾಗ್ಲೂ ಚಿಕನ್‌ ಬಿರಿಯಾನಿ ತಿಂದು ಬೇಸರ ಆಗಿದ್ರೆ ಗೊಂಗುರ ಚಿಕನ್‌ ಪಲಾವ್‌ ಟ್ರೈ ಮಾಡಬಹುದು. ಇದು ಪೋಷಕಾಂಶಗಳ ಆಗರವೂ ಹೌದು. ಹಾಗಾದರೆ ಈ ಖಾದ್ಯವನ್ನು ಮಾಡೋದು ಹೇಗೆ ನೋಡಿ.

ಗೊಂಗುರ ಚಿಕನ್ ಪಲಾವ್

ಬೇಕಾಗುವ ಸಾಮಗ್ರಿಗಳು: ಬಾಸುಮತಿ ಅಕ್ಕಿ - ಎರಡು ಕಪ್, ಚಿಕನ್ ತುಂಡುಗಳು - ಒಂದು ಕಪ್, ಹೆಚ್ಚಿದ ಗೊಂಗುರ - ಒಂದು ಕಪ್, ಈರುಳ್ಳಿ - ಎರಡು, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಲವಂಗ - ಮೂರು, ದಾಲ್ಚಿನ್ನಿ - ಸಣ್ಣ ತುಂಡು, ಅನಾನಸ್‌ ಮೊಗ್ಗು - 1, ಹಸಿಮೆಣಸು- ಎರಡು, ಜೀರಿಗೆ ಪುಡಿ - ಒಂದು ಚಮಚ, ಕೊತ್ತಂಬರಿ ಪುಡಿ - ಒಂದು ಚಮಚ, ಉಪ್ಪು - ರುಚಿಗೆ, ಎಣ್ಣೆ - ಮೂರು ಚಮಚ, ನೀರು - ಸಾಕಷ್ಟು, ಏಲಕ್ಕಿ - ಎರಡು

ತಯಾರಿಸುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷಗಳ ಕಾಲ ನೆನೆಸಿಡಿ. ಈಗ ಕಡಾಯಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಲವಂಗ, ದಾಲ್ಚಿನ್ನಿ, ಸೋಂಪು, ಏಲಕ್ಕಿ ಹಾಕಿ, ಫ್ರೈ ಮಾಡಿ. ನಂತರ ಉದ್ದಕ್ಕೆ ಕತ್ತರಿಸಿಕೊಂಡ ಹಸಿಮೆಣಸು ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಕೈಯಾಡಿಸಿ. ನಂತರ ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಈಗ ಚಿಕನ್ ತುಂಡುಗಳನ್ನು ಸೇರಿಸಿ, ಶೇ 90 ರಷ್ಟು ಬೇಯಿಸಿಕೊಳ್ಳಿ. ಅದಕ್ಕೆ ಗೊಂಗುರ ಎಲೆಗಳನ್ನು ಸೇರಿಸಿ, ಮಚ್ಚಳ ಮುಚ್ಚಿಡಿ. ಗೊಂಗುರ ಎಲೆಗಳು ಚೆನ್ನಾಗಿ ಬೆಂದ ನಂತರ ಅದಕ್ಕೆ ನೆನೆಸಿಟ್ಟುಕೊಂಡಿದ್ದ ಅಕ್ಕಿ ಸೇರಿಸಿ. ಈ ಎಲ್ಲವನ್ನೂ ಮಿಶ್ರಣ ಮಾಡಿ. ನಂತರ ಅವಶ್ಯವಿದಷ್ಟು ನೀರು ಸೇರಿಸಿ. ಮುಚ್ಚಳ ಮುಚ್ಚಿಯನ್ನ ಅಕ್ಕಿ ಬೇಯುವವರೆಗೆ ಚೆನ್ನಾಗಿ ಬೇಯಿಸಿ. ಇದನ್ನು ಕುಕ್ಕರ್‌ನಲ್ಲೂ ಸುಲಭವಾಗಿ ಬೇಯಿಸಿಕೊಳ್ಳಬಹುದು. ಈಗ ನಿಮ್ಮ ಮುಂದೆ ಚಿಕನ್‌ ಗೊಂಗುರ ಪಲಾವ್‌ ತಿನ್ನಲು ಸಿದ್ಧ.

ಗೊಂಗುರದ ಆರೋಗ್ಯ ಪ್ರಯೋಜನಗಳಿವು

ಗೊಂಗುರ ಎಲೆಯು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆ ಕಾರಣಕ್ಕೆ ಹಿಂದೆ ಇದನ್ನು ಯಥೇಚ್ಛವಾಗಿ ಬಳಸುತ್ತಿದ್ದರು. ಗೊಂಗುರ ಚಟ್ನಿ ಈಗಲೂ ಫೇಮಸ್‌. ಈ ಎಲೆಗಳಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, ರಂಜಕ, ವಿಟಮಿನ್ ಎ, ಬೀಟಾ ಕೆರಾಟಿನ್... ಇವೆಲ್ಲವೂ ತುಂಬಿವೆ. ಇವು ದೇಹಕ್ಕೆ ಅಗತ್ಯವಾಗಿರುವುದರಿಂದ ವಾರಕ್ಕೊಮ್ಮೆಯಾದರೂ ಗೊಂಗುರ ತಿನ್ನಬೇಕು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಕ್ಕರೆ ಕಾಯಿಲೆ ಇರುವವರು ಗೊಂಗುರವನ್ನು ತಮ್ಮ ಆಹಾರದ ಭಾಗವನ್ನಾಗಿ ಮಾಡಿಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗುವುದನ್ನು ತಡೆಯಬಹುದು. ತೂಕ ಇಳಿಸಿಕೊಳ್ಳಲು ಬಯಸುವವರು ಗೊಂಗುರ ತಿಂದರೆ ಕ್ಯಾಲೊರಿ ಬೇಗ ಕರಗುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point