logo
ಕನ್ನಡ ಸುದ್ದಿ  /  ಜೀವನಶೈಲಿ  /  Realme Narzo 70 Pro: ಅದ್ಭುತ ವೈಶಿಷ್ಟ್ಯ, ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರಲು ರಿಯಲ್‌ಮಿ ನಾರ್ಜೊ 70 ಪ್ರೊ ಸಿದ್ಧತೆ

Realme Narzo 70 Pro: ಅದ್ಭುತ ವೈಶಿಷ್ಟ್ಯ, ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರಲು ರಿಯಲ್‌ಮಿ ನಾರ್ಜೊ 70 ಪ್ರೊ ಸಿದ್ಧತೆ

Raghavendra M Y HT Kannada

Mar 09, 2024 08:17 AM IST

ರಿಯಲ್‌ಮಿ ನಾರ್ಜೊ 70 ಪ್ರೊ 5ಜಿ ಅತಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.

    • Realme Narzo 70 Pro 5G: ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ರಿಯಲ್‌ಮಿ ನಾರ್ಜೊ 70 ಪ್ರೊ 5ಜಿ ಅತಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಹೊಸ ಫೋನ್ ವೈಶಿಷ್ಟ್ಯಗಳು, ಬೆಲೆಯ ವಿವರ ಇಲ್ಲಿ ತಿಳಿಯಿರಿ.
 ರಿಯಲ್‌ಮಿ ನಾರ್ಜೊ 70 ಪ್ರೊ 5ಜಿ ಅತಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.
ರಿಯಲ್‌ಮಿ ನಾರ್ಜೊ 70 ಪ್ರೊ 5ಜಿ ಅತಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.

ರಿಯಲ್‌ಮಿ ನಾರ್ಜೊ 70 (Realme Narzo 70 Pro 5G) ಸ್ಮಾರ್ಟ್‌ಫೋನ್ ಇದೇ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ವಿಚಾರವನ್ನು ದೈತ್ಯ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಸ್ಪಷ್ಟಪಡಿಸಿದೆ. ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳ ಬಗ್ಗೆ ಸ್ವಲ್ಪ ಸ್ಪಷ್ಟತೆ ಸಿಕ್ಕಿದೆ. ಈ ರಿಯಲ್‌ಮಿ ನಾರ್ಜೊ 70 ಪ್ರೊ ವೈಶಿಷ್ಟ್ಯಗಳು ಮತ್ತು ಬೆಲೆಯ ಮಾಹಿತಿಯ ವಿವರ ಇಲ್ಲಿ ತಿಳಿಯೋಣ. ರಿಯಲ್‌ಮಿ ನಾರ್ಜೊ 70 ಪ್ರೊ 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಅಸಾಮಾನ್ಯ ವೈಶಿಷ್ಟ್ಯವೆಂದರೆ ಕ್ಯಾಮೆರಾ! ಇದು ಸೋನಿ IMX890 ಸಂವೇದಕ ಒಐಎಸ್ ಅನ್ನು ಹೊಂದಿದೆ. 1/1.56 ಇಂಚಿನಲ್ಲಿ ಬರುತ್ತಿದೆ. ಈ ಪ್ರಭಾವಶಾಲಿ 50 ಮೆಗಾಪಿಕ್ಸೆಲ್ ಸಂವೇದಕವು ಸಾಮಾನ್ಯವಾಗಿ ಉನ್ನತ-ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಮತ್ತು ಕೆಲವು ಹಳೆಯ ಪ್ರಮುಖ ಮಾದರಿಗಳಲ್ಲಿ ಕಂಡುಬರುತ್ತದೆ. ಸುಧಾರಿತ ಕ್ಯಾಮೆರಾ ಜೊತೆಗೆ ನಾರ್ಜೊ 70 ಪ್ರೊನಲ್ಲಿ ರಿಯಲ್‌ಮಿ ಏರ್ ಗೆಸ್ಚರ್ ಬೆಂಬಲವನ್ನು ಸಂಯೋಜಿಸಿದೆ.

ಟ್ರೆಂಡಿಂಗ್​ ಸುದ್ದಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

ಸ್ಮಾರ್ಟ್‌ಫೋನ್ ಇಂಟರ್ಫೇಸ್ ಅನ್ನು ದೂರದಿಂದಲೇ ನ್ಯಾವಿಗೇಟ್ ಮಾಡಲು ಅನುಮತಿಸುತ್ತದೆ. 10 ಕ್ಕೂ ಹೆಚ್ಚು ವಿಭಿನ್ನ ಹಾವಭಾವಗಳನ್ನ ಒಳಗೊಂಡಿರುತ್ತವೆ ಎಂದು ವರದಿಗಳು ಹೇಳುತ್ತಿವೆ. ಸಾಂಪ್ರದಾಯಿಕ ಟಚ್ ಇನ್‌ಪುಟ್‌ಗಿಂತಲೂ ನೈಸರ್ಗಿಕ ನಿಯಂತ್ರಣಗಳನ್ನು ಒದಗಿಸುತ್ತದೆ. ಗಮನಾರ್ಹವಾಗಿ ಫೋನಿನಲ್ಲಿ ಇಂಟರ್ಫೇಸ್‌ಗೆ ಮಾತ್ರವಲ್ಲದೆ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಿಗೂ ವಿಸ್ತರಿಸುತ್ತದೆ ಎಂದು 91ಮೊಬೈಲ್ಸ್ ವರದಿ ಮಾಡಿದೆ, ವಿವಿಧ ಅಪ್ಲಿಕೇಶನ್‌ಗಳಲ್ಲಿ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ.

ರಿಯಲ್‌ಮಿ ನಾರ್ಜೊ 70 ಪ್ರೊ ವಿನ್ಯಾಸವು ಹೋಲ್ ಪಂಚ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸಮತಟ್ಟಾದ ಪರದೆಯನ್ನು ಹೊಂದಿದೆ, ಆಧುನಿಕ ಸೌಂದರ್ಯಕ್ಕಾಗಿ ಸ್ಲಿಮ್ ಬೆಜೆಲ್‌ಗಳನ್ನು ಹೊಂದಿದೆ. ಬಲ ಅಂಚಿನಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಇದೆ. ಹಿಂಭಾಗದಲ್ಲಿ, ರಿಯಲ್‌ಮಿ ನಾರ್ಜೊ 60 ಪ್ರೊ ಅನ್ನು ನೆನಪಿಸುವ ವೃತ್ತಾಕಾರದ ಕ್ಯಾಮೆರಾ ವಿನ್ಯಾಸವಿದೆ.

5G ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಗಲಿರುವ ನಾರ್ಜೊ 70 ಪ್ರೊ, ಟ್ರಿಪಲ್ ಕ್ಯಾಮೆರಾ ಕಾನ್ಫಿಗರೇಶನ್ ಮತ್ತು ಹಿಂಭಾಗದಲ್ಲಿ LED ಫ್ಲ್ಯಾಷ್ ಅನ್ನು ಹೊಂದಿರುತ್ತದೆ ಎಂದು ಮಾರುಕಟ್ಟೆ ಮೂಲಗಳು ಹೇಳುತ್ತಿವೆ. ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಫೋನ್ ಭಾರತದಲ್ಲಿ ಬಿಡುಗಡೆಯಾದ ಕೂಡಲೇ ಇ-ಕಾಮರ್ಸ್ ಅಮೆಜಾನ್‌ನಲ್ಲಿ ಲಭ್ಯವಾಗಲಿದೆ.

ಈ ನಾರ್ಜೊ 70 ರಿಯಲ್‌ಮಿ 12 ಪ್ಲಸ್ 5G ಯ ​​ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ಚರ್ಚೆ ನಡೆಯುತ್ತಿದೆ. ಈ ವಿಷಯದ ಬಗ್ಗೆ ಊಹಾಪೋಹಗಳು ಇದ್ದರೂ, ಭಾರತದಲ್ಲಿ ಅಧಿಕೃತ ಬಿಡುಗಡೆಯ ನಂತರವೇ ನಿಖರವಾದ ವಿವರಗಳು ತಿಳಿಯಲಿವೆ.

ಕಂಪನಿಯು ರಿಯಲ್‌ಮಿ ನಾರ್ಜೊ 70 ಪ್ರೊ ಅನ್ನು ಈ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರೂ, ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಫೀಚರ್ಸ್ ಮತ್ತು ಬೆಲೆ ವಿವರಗಳ ಮಾಹಿತಿ ಸ್ಪಷ್ಟವಾಗಿಲ್ಲ. ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಮಾರುಕಟ್ಟೆಯ ಮೂಲಗಳು ನಂಬಿವೆ. ರಿಯಲ್‌ಮಿ ನಾರ್ಜೊ 70 ಪ್ರೊ ಭಾರತದಲ್ಲಿ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಅಂತಿಮವಾಗಿ ಈ ಸ್ಮಾರ್ಟ್‌ಫೋನ್‌ ಬೆಲೆಯ ಆಧಾರದಲ್ಲಿ ಎಲ್ಲವೂ ನಿರ್ಧಾರವಾಗುತ್ತವೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು