logo
ಕನ್ನಡ ಸುದ್ದಿ  /  ಜೀವನಶೈಲಿ  /  Lava Blaze Curve 5g: ಅತಿ ಶೀಘ್ರದಲ್ಲೇ ಬಜೆಟ್ ಸ್ನೇಹಿ ಲಾವಾ ಬ್ಲೇಜ್ ಕರ್ವ್ ಸ್ಮಾರ್ಟ್‌ಪೋನ್ ಬಿಡುಗಡೆ; ಏನೆಲ್ಲಾ ವೈಶಿಷ್ಟ್ಯ ಇರಲಿದೆ

Lava Blaze Curve 5G: ಅತಿ ಶೀಘ್ರದಲ್ಲೇ ಬಜೆಟ್ ಸ್ನೇಹಿ ಲಾವಾ ಬ್ಲೇಜ್ ಕರ್ವ್ ಸ್ಮಾರ್ಟ್‌ಪೋನ್ ಬಿಡುಗಡೆ; ಏನೆಲ್ಲಾ ವೈಶಿಷ್ಟ್ಯ ಇರಲಿದೆ

Raghavendra M Y HT Kannada

Feb 27, 2024 05:33 PM IST

ಲಾವಾ ಬ್ಲೇಜ್ ಕರ್ವ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ. ಈ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳು ಇರಲಿವೆ, ಬೆಲೆ ಎಷ್ಟು ಅನ್ನೋದರ ವಿವರ ಇಲ್ಲಿದೆ.

    • Lava Blaze Curve 5G: ಭಾರತ ಮಾರುಕಟ್ಟೆಗೆ ಬರಲು ಲಾವಾ ಬ್ಲೇಜ್ ಕರ್ವ್ ಸಿದ್ಧವಾಗಿದೆ. ಈ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳು ಇರಲಿವೆ, ಬೆಲೆ ಎಷ್ಟು ಅನ್ನೋದರ ಮಾಹಿತಿ ಇಲ್ಲಿದೆ.
ಲಾವಾ ಬ್ಲೇಜ್ ಕರ್ವ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ. ಈ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳು ಇರಲಿವೆ, ಬೆಲೆ ಎಷ್ಟು ಅನ್ನೋದರ ವಿವರ ಇಲ್ಲಿದೆ.
ಲಾವಾ ಬ್ಲೇಜ್ ಕರ್ವ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ. ಈ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳು ಇರಲಿವೆ, ಬೆಲೆ ಎಷ್ಟು ಅನ್ನೋದರ ವಿವರ ಇಲ್ಲಿದೆ.

ಲಾವಾ ಬ್ಲೇಜ್ ಕರ್ವ್ 5ಜಿ (Lava Blaze Curve 5G) ಸ್ಮಾರ್ಟ್ ಫೋನ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ ಎಂದು ವರದಿಯಾಗಿದೆ. ಆದರೆ ಯಾವಾಗ ಲಾಂಚ್ ಆಗುತ್ತೆ ಅನ್ನೋದರ ಬಗ್ಗೆ ಸದ್ಯಕ್ಕೆ ಸ್ಪಷ್ಟನೆ ಇಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಕೆಲವು ವೈಶಿಷ್ಟ್ಯಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಫೋನ್ ಬಗ್ಗೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಇದರಲ್ಲಿ ಏನೆಲ್ಲಾ ತಂತ್ರಜ್ಞಾನ, ಹೊಸತನ ಇದೆ ಅನ್ನೋದನ್ನ ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ಮಾಹಿತಿ ಪ್ರಕಾರ, ಲಾವಾ ಬ್ಲೇಜ್ ಕರ್ವ್‌ನಲ್ಲಿ ಮೀಡಿಯಾಕೆಟ್ ಡೈಮೆನ್ಸಿಟಿ 7050 ಎಸ್‌ಒಸಿ ಪ್ರೊಸೆಸರ್ ಇರುತ್ತದೆ. 8ಜಿಬಿ RAM, 128 ಜಿಬಿ ಸ್ಟೋರೇಜ್, ಮತ್ತೊಂದು ವೇರಿಯಂಟ್‌ನಲ್ಲಿ 8ಜಿಬಿ RAM, 256 ಜಿಬಿ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳಿವೆ.

ಇನ್ನ ಈ ಹೊಸ ಸ್ಮಾರ್ಟ್‌ಫೋನ್ ಬೆಲೆ 16 ರಿಂದ 19 ಸಾವಿರ ರೂಪಾಯಿಯೊಳಗೆ ಇರುತ್ತದ್ದು, ಎರಡು ಬಣ್ಣಗಳಲ್ಲಿ ಬರಲಿದೆ. ಬಲ್ಲ ಮೂಲಗಳ ಪ್ರಕಾರ, ಲಾವಾ ಬ್ಲೇಜ್ ಕರ್ವ್ ಸ್ಮಾರ್ಟ್‌ಫೋನ್ 2024ರ ಮಾರ್ಚ್‌ ತಿಂಗಳ ಮೊದಲ ವಾರದಲ್ಲಿ ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಈ ಫೋನಿನಲ್ಲಿ 120 ಹೆಚ್‌ಝಡ್‌ ರಿಫ್ರೆಸ್ ರೇಟ್‌ ಜೊತೆಗೆ, ಅಮೋಲೆಡ್ ಡಿಸ್‌ಪ್ಲೇ ಇದೆ.

64 ಎಂಪಿ ಪ್ರೈಮರಿ ಕ್ಯಾಮೆರಾ ಮತ್ತು ರಿಯರ್ ಕ್ಯಾಮೆರಾ ಬರುತ್ತದೆ. ಫ್ರಂಟ್ ಕ್ಯಾಮೆರಾಗೆ ಸಂಬಂಧಿಸಿದ ವಿವರಗಳು ಲಭ್ಯವಾಗಿಲ್ಲ. ಈ ಫೋನಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಯನ್ನು ಲಾವಾ ಸಂಸ್ಥೆಯೇ ಶೀಘ್ರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮಾರುಕಟ್ಟೆ ಮೂಲಗಳು ಕೂಡ ಬಯಸುತ್ತವೆ. ಕಂಪನಿ ಅಧಿಕೃತ ಮಾಹಿತಿ ನೀಡುವವರೆಗೆ ಲಾವಾ ಸ್ಮಾರ್ಟ್‌ಫೋನ್ ಪ್ರಿಯಕರು ಕಾಯಬೇಕಷ್ಟೆ.

ಲಾವಾ ಬ್ಲೇಜ್ 2 ವೈಶಿಷ್ಟ್ಯ ಹಾಗೂ ಬೆಲೆ ಪರಿಶೀಲಿಸಿದ್ದೀರಾ

ಲಾವಾ ಬ್ಲೇಜ್ 2 5ಜಿ ಸ್ಮಾರ್ಟ್‌ಫೋನ್ ನವೆಂಬರ್‌ನಲ್ಲಿ ಭಾರತಕ್ಕೆ ಪ್ರವೇಶಿಸಿದೆ. ಇದು ಕೂಡ ಬಜೆಟ್ ಸ್ನೇಹಿ ಸ್ಮಾರ್ಟ್‌್ಫೋನ್ ಆಗಿದೆ. ಇದರ ಬೇಸ್ ವೇರಿಯಂಟ್ ಬೆಲೆ 9999 ರೂಪಾಯಿ. ಇದಕ್ಕೂ ಉತ್ತಮ ಬೇಡಿಕೆ ಬಂದಿದೆ. ಈ ಫೋನ್‌ನಲ್ಲಿ 6.56 ಇಂಚಿನ ಕರ್ವ್ಡ್‌ ಡಿಸ್‌ಪ್ಲೇ ಇದೆ.

50 ಎಂಬಿ ಪ್ರೈಮರಿ ಕ್ಯಾಮೆರಾ ಜೊತೆಗೆ ಡ್ಯೂಯೆಲ್ ರಿಯರ್ ಕ್ಯಾಮೆರಾ ಕೂಡ ಇರಲಿದೆ. ಮೀಡಿಯಾಟೆಕ್ ಡೈಮನ್ಸಿಟಿ 6020 ಎಸ್‌ಒಸಿ ಪ್ರೊಸೆಸರ್ ಹೊಂದಿದೆ. 6ಜಿಬಿ RAM, 128 ಜಿಬಿ ಸ್ಟೋರೇಜ್ ಹಾಗೂ 5000 ಎಂಎಹೆಚ್‌ ಬ್ಯಾಟರಿ, 18 ವಾಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಈ ಗ್ಯಾಡ್ಜೆಟ್‌ಗೆ ಇದೆ.

ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಈ ಮೊಬೈಲ್‌ಗೆ ಉತ್ತಮ ಬೇಡಿಕೆ ಸಿಗುತ್ತಿದೆ. ಮತ್ತೊಂದೆಡೆ ಶೀಘ್ರದಲ್ಲೇ ಲಾಂಚ್ ಆಗುತ್ತಿರುವ ಲಾವಾ ಬ್ಲೇಜ್ ಕರ್ವ್ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿ ಹೇಗೆ ಗ್ರಾಹಕರನ್ನು ಸೆಳೆಯಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು