logo
ಕನ್ನಡ ಸುದ್ದಿ  /  ಜೀವನಶೈಲಿ  /  Gandhi Jayanti Speech: 1ರಿಂದ 7ನೇ ತರಗತಿ ಮಕ್ಕಳಿಗೆಂದೇ ಇಲ್ಲಿದೆ ಗಾಂಧಿ ಜಯಂತಿಗೆ ಸರಳ ಭಾಷಣ; ವೇದಿಕೆಯಲ್ಲಿ ಮಾತನಾಡಿ ಭೇಷ್ ಎನಿಸಿಕೊಳ್ಳಿ

Gandhi Jayanti Speech: 1ರಿಂದ 7ನೇ ತರಗತಿ ಮಕ್ಕಳಿಗೆಂದೇ ಇಲ್ಲಿದೆ ಗಾಂಧಿ ಜಯಂತಿಗೆ ಸರಳ ಭಾಷಣ; ವೇದಿಕೆಯಲ್ಲಿ ಮಾತನಾಡಿ ಭೇಷ್ ಎನಿಸಿಕೊಳ್ಳಿ

Suma Gaonkar HT Kannada

Sep 27, 2024 12:46 PM IST

google News

1ರಿಂದ 7ನೇ ತರಗತಿ ಮಕ್ಕಳಿಗೆಂದೇ ಇಲ್ಲಿದೆ ಸರಳ ಭಾಷಣ

    • ನಿಮ್ಮ ಮಕ್ಕಳೂ ವೇದಿಕೆಯ ಮೇಲೆ ನಿಂತು ಮಾತನಾಡಲಿ ಎಂಬ ಆಸೆ ನಿಮಗಿದ್ಯಾ? ಹಾಗಾದರೆ ಇಂದಿನಿಂದಲೇ ನಿಮ್ಮ ಮಕ್ಕಳಿಗೆ ಭಾಷಣ ಕಲಿಸಿಕೊಡಿ. ಇಂದಿನಿಂದಲೇ ತಯಾರಿ ನಡೆಸಿದರೆ ನಿಮ್ಮ ಮಕ್ಕಳು ತಪ್ಪಿಲ್ಲದಂತೆ ಭಾಷಣ ಮಾಡುತ್ತಾರೆ. 
1ರಿಂದ 7ನೇ ತರಗತಿ ಮಕ್ಕಳಿಗೆಂದೇ ಇಲ್ಲಿದೆ ಸರಳ ಭಾಷಣ
1ರಿಂದ 7ನೇ ತರಗತಿ ಮಕ್ಕಳಿಗೆಂದೇ ಇಲ್ಲಿದೆ ಸರಳ ಭಾಷಣ

ಗೌರವಾನ್ವಿತ ಪ್ರಾಂಶುಪಾಲರಿಗೂ, ಶಿಕ್ಷಕರಿಗೂ ಮತ್ತು ನನ್ನೆಲ್ಲಾ ಸ್ನೇಹಿತರಿಗೂ ನಮಸ್ಕಾರಗಳು
ಇಂದು ನಾವು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ನಾಯಕ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಗಾಂಧಿಯವರ ತತ್ವಗಳ ಬಗ್ಗೆ ನಾವೆಲ್ಲ ಕಲಿತಿದ್ದೇವೆ. ಅವರ ಬಗ್ಗೆ ನಮ್ಮ ಶಿಕ್ಷಕರು ಸಾಕಷ್ಟು ಮಾಹಿತಿ ನೀಡಿದ್ದಾರೆ. ಆದರೂ ನಾವು ಅವರಿಂದ ಕಲಿಯಬೇಕಾದ ಹಲವು ಅಂಶಗಳು ಇರುತ್ತವೆ. ನಾನು ಇಂದು ಅಂತಹ ಕೆಲವು ಅಂಶಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.

ಗಾಂಧೀಜಿಯವರ ಅಹಿಂಸೆ, ಸತ್ಯ ಮತ್ತು ಸ್ವಯಂ-ಶಿಸ್ತಿನ ಬಗ್ಗೆ ನಾವು ಎಷ್ಟು ತಿಳಿದುಕೊಂಡರೂ ಕಡಿಮೆ. ಅವರನ್ನು ನಾವು ಅನುಸರಿಸುವುದು ಮುಖ್ಯ. ಅಷ್ಟೊಂದು ಒಳ್ಳೆಯ ಮೌಲ್ಯಗಳನ್ನು ಅವರು ಅನುಸರಿಸುತ್ತಾ ತಮ್ಮ ಜೀವನವನ್ನು ಸಾಗಿಸಿದ್ದರು. ನಾವು ಅವರ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರು ಸ್ವಚ್ಛತೆ ಮತ್ತು ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ನಾವೂ ಇಂದು ಅದನ್ನೇ ಮಾಡಬೇಕಿದೆ.

ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು. ಅಸಹಕಾರ ಚಳುವಳಿ ಮಾಡಿದವರು. ಬ್ರಿಟೀಷರನ್ನು ಭಾರತದಿಂದ ಹೊರಹಾಕಲು ಭಾರತ ಬಿಟ್ಟು ತೊಲಗಿ ಎಂಬ ಚಳುವಳಿ ಮಾಡಿದವರು. ಗಾಂಧಿಯವರ ಆದರ್ಶಗಳನ್ನು ನಾವು ನಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಅವರ ಮಾದರಿ ಬದುಕನ್ನು ನಾವು ಅನುಸರಿಸಬೇಕು.

ಗಾಂಧೀಜಿಯವರನ್ನು ಸ್ಮರಿಸಲು ಈ ಅವಕಾಶವನ್ನು ಒದಗಿಸಿದ್ದಕ್ಕಾಗಿ ಧನ್ಯವಾದ ಹೇಳುತ್ತೇನೆ. ಅವರ ಆದರ್ಶಗಳನ್ನು ಅನುಸರಿಸಲು ಮತ್ತು ನಮ್ಮ ಸುತ್ತಲೂ ಉತ್ತಮ ಜಗತ್ತನ್ನು ಸೃಷ್ಟಿಸಲು ನಾವು ಶ್ರಮಿಸೋಣ. ಜೈ ಹಿಂದ್!

ಎಲ್ಲರಿಗೂ ನಮಸ್ಕಾರ

ಇಂದು ನಾವೆಲ್ಲ ಇಲ್ಲಿ ಸೇರಿರುವ ಸಂಗತಿ ಎಂದರೆ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಗಾಂಧೀಜಿಯವರ ಜನ್ಮದಿನ.

ಇಂದು ನಾವು ಹಿಂದೆ ಗಾಂಧೀಜಿ ಅವರು ಏನನ್ನು ಹೇಳಿದ್ದರೋ ಅದನ್ನು ಮರೆತಿದ್ದೇವೆ. ಆದರೆ ಅವರ ಆದರ್ಶಗಳನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದಲೇ ಈ ದಿನವನ್ನು ಆಚರಿಸಿಕೊಳ್ಳಲಾಗುತ್ತದೆ. ಹಾಗಾಗಿ ಅದನ್ನು ನಾವು ಮತ್ತೆ ನೆನಪಿಸಿಕೊಳ್ಳಬೇಕಿದೆ.

ಸ್ವಚ್ಛ ಭಾರತದ ಪರಿಕಲ್ಪನೆಯನ್ನು ನಮಗೆ ನೀಡಿದವರೇ ಗಾಂಧೀಜಿ. ನಾವು ಕಂಡ ಕಂಡಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ಅಷ್ಟೇ ಅಲ್ಲ ಹೆಚ್ಚಿದ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಭೂಮಿಗೆ ತೊಂದರೆ ಆಗುತ್ತಿದೆ ಅದನ್ನು ಅರಿತು ನಾವು ಹೆಚ್ಚು ನೈಸರ್ಗಿಕ ವಸ್ತುಗಳನ್ನೇ ಬಳಕೆ ಮಾಡಬೇಕು. ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು. ಯಾರಿಗೂ ಹಿಂಸೆ ನೀಡಬಾರದು. ಈ ಎಲ್ಲ ಆದರ್ಶಗಳನ್ನು ನಾವು ಪಾಲಿಸಬೇಕು.

ಈ ವರ್ಷ ನಾವು ಗಾಂಧೀಜಿಯವರ 155ನೇ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಇಷ್ಟು ವರ್ಷ ಕಳೆದರೂ ಅವರ ಆದರ್ಶಗಳು ಹಾಗೇ ಇವೆ ಎಂದಾದರೆ ಅದೆಷ್ಟು ಮೌಲ್ಯಯುತವಾದದ್ದು ಎಂಬುದನ್ನು ನಾವು ಅರಿತು ಮುನ್ನಡೆಯಬೇಕು.

ಗಾಂಧೀಜಿಯವರನ್ನು ಸ್ಮರಿಸಲು ಈ ಅವಕಾಶವನ್ನು ಒದಗಿಸಿದ್ದಕ್ಕಾಗಿ ಧನ್ಯವಾದ ಹೇಳುತ್ತೇನೆ. ಅವರ ಆದರ್ಶಗಳನ್ನು ಅನುಸರಿಸಲು ಮತ್ತು ನಮ್ಮ ಸುತ್ತಲೂ ಉತ್ತಮ ಜಗತ್ತನ್ನು ಸೃಷ್ಟಿಸಲು ನಾವು ಶ್ರಮಿಸೋಣ. ಜೈ ಹಿಂದ್!

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ