ಚಿಕ್ಕವಯಸ್ಸಿನ ಮಕ್ಕಳನ್ನೂ ಕಾಡುತ್ತಿದೆ ಸಮೀಪ ದೃಷ್ಟಿದೋಷ ಸಮಸ್ಯೆ, ಕಣ್ಣಿನ ಆರೋಗ್ಯ ರಕ್ಷಣೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಕನ್ನಡಕ ಬರುತ್ತಿದೆ. ಹಲವರು ಸಮೀಪದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಸಮೀಪದೃಷ್ಟಿ ದೋಷ ಇರುವವರಿಗೆ ದೂರದ ವಸ್ತುಗಳು ಅಸ್ಪಷ್ಟವಾಗಿ ಕಾಣುತ್ತವೆ. ಈ ಸಮಸ್ಯೆಯನ್ನು ನೈಸರ್ಗಿಕ ವಿಧಾನದ ಮೂಲಕ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ನೋಡಿ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿ ಪರದೆಯ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಹಲವು ರೀತಿಯ ಪರಿಣಾಮಗಳು ಉಂಟಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಮೀಪದೃಷ್ಟಿಯ ಅಪಾಯವು ನಿರಂತರವಾಗಿ ಹೆಚ್ಚುತ್ತಿದೆ. ಅತಿಯಾದ ಸ್ಕ್ರೀನ್ ಟೈಮ್ ಕಾರಣದಿಂದ ಮಕ್ಕಳಿಗೆ ಬಾಲ್ಯದಲ್ಲೇ ದೃಷ್ಟಿದೋಷದ ಸಮಸ್ಯೆ ಎದುರಾಗುತ್ತಿದೆ. ಸಮೀಪ ದೃಷ್ಟಿದೋಷದ ಸಮಸ್ಯೆ ಇದ್ದರೆ ದೂರದ ವಸ್ತುಗಳು ಅಸ್ಪಷ್ಟವಾಗಿ ಕಾಣುತ್ತದೆ. ಇದು ಮಕ್ಕಳು ಮತ್ತು ವಯಸ್ಕರಲ್ಲಿ ಸಾಕಷ್ಟು ಸಾಮಾನ್ಯವಾಗಿದೆ. ಆದರೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುರಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಂತಹ ಪರಿಹಾರಗಳು ಯಾವುವು ನೋಡಿ.
ಸಾಕಷ್ಟು ನೀರು ಕುಡಿಯಿರಿ ಮತ್ತು ನಿದ್ದೆ ಮಾಡಿ
ಕಣ್ಣುಗಳು ಆರೋಗ್ಯವಾಗಿರಲು, ದೇಹವನ್ನು ಹೈಡ್ರೇಟ್ ಆಗಿರಿಸುವುದು ಬಹಳ ಮುಖ್ಯ. ಸಾಕಷ್ಟು ನಿದ್ರೆ ಮಾಡುವುದು ಆರೋಗ್ಯಕ್ಕೆ ಬಹಳ ಅವಶ್ಯ. ಇದು ಕಣ್ಣಿನ ಆರೋಗ್ಯಕ್ಕೂ ಬಹಳ ಮುಖ್ಯ, ಕಣ್ಣಿನ ಕಿರಿಕಿರಿ ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ.
ಸೂರ್ಯನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿ
ಸನ್‌ಗ್ಲಾಸ್ ಧರಿಸುವುದರಿಂದ ನಿಮ್ಮ ಕಣ್ಣುಗಳನ್ನು ಹಾನಿಕಾರಕ ನೇರಳಾತೀತ ಕಿರಣಗಳಿಂದ ರಕ್ಷಿಸಿಕೊಳ್ಳಬಹುದು. ನೀವು ಹೊರಗೆ ಸಾಕಷ್ಟು ಸಮಯವನ್ನು ಕಳೆಯುವವರಾದರೆ ತಪ್ಪದೇ ಸನ್‌ಗ್ಲಾಸ್ ಧರಿಸಿ, ಇದರಿಂದ ಸಮೀಪದೃಷ್ಟಿ ದೋಷವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ಆರೋಗ್ಯಕರ ಆಹಾರವನ್ನು ಸೇವಿಸಿ
ಸಾಕಷ್ಟು ಸೊಪ್ಪು, ತರಕಾರಿಗಳು ಮತ್ತು ತಾಜಾ ಹಣ್ಣುಗಳನ್ನು ತಿನ್ನಲು ಪ್ರಯತ್ನಿಸಿ. ನಿಮ್ಮ ಆಹಾರದಲ್ಲಿ ಟ್ಯೂನ ಮತ್ತು ಸಾಲ್ಮನ್‌ನಂತಹ ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಮೀನುಗಳನ್ನು ನೀವು ಸೇರಿಸಿದರೆ, ನಿಮ್ಮ ಕಣ್ಣುಗಳಿಗೆ ಪ್ರಯೋಜನವಾಗುತ್ತದೆ.
ಕಣ್ಣಿಗೆ ಒತ್ತಡ ಹಾಕದಿರಿ
ಪರದೆಗಳನ್ನು ನೋಡುವುದರಿಂದ ವಿರಾಮ ತೆಗೆದುಕೊಳ್ಳುವುದು ಮತ್ತು ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡುವುದು ಸಮೀಪದೃಷ್ಟಿ ನಿಧಾನಗೊಳಿಸಲು ಸಹಾಯ ಮಾಡುತ್ತದೆ.
ಧೂಮಪಾನ ಮಾಡಬೇಡಿ
ಮಕ್ಕಳು ಮಾತ್ರವಲ್ಲ ಯುವಕರು ಕೂಡ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಧೂಮಪಾನಿಗಳು ಈ ಅಭ್ಯಾಸವನ್ನು ತ್ಯಜಿಸಬೇಕು. ಹೆಚ್ಚಿನ ಯುವಕರು ಧೂಮಪಾನ ಮಾಡಲು ಇಷ್ಟಪಡುತ್ತಾರೆ. ಕೆಲವು ಒತ್ತಡದಿಂದಾಗಿ ಮತ್ತು ಕೆಲವು ಸಂಸ್ಕೃತಿಗೆ ಹೊಂದಿಕೊಳ್ಳುತ್ತವೆ. ಅದೇನೇ ಇದ್ದರೂ ಧೂಪಮಾನ ಮಾಡುವುದನ್ನು ತಪ್ಪಿಸಬೇಕು.
ಈ ಎಲ್ಲದರ ಜೊತೆಗೆ ದೃಷ್ಟಿದೋಷದ ಸಮಸ್ಯೆ ನಿವಾರಣೆಗೆ ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು ಬಹಳ ಮುಖ್ಯ. ಜೊತೆಗೆ ಮೊಬೈಲ್, ಲ್ಯಾಪ್‌ಟಾಪ್ ಬಳಸುವಾಗ ಆಂಟಿಗ್ಲೇರ್ ಗ್ಲಾಸ್‌ಗಳನ್ನು ಬಳಸಿ. ಅತಿಯಾದ ಬಿಸಿಲಿಗೆ ಕಣ್ಣುಗಳನ್ನು ಒಡ್ಡದಿರಿ.
(ಗಮನಿಸಿ: ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನಗಳು ಹಾಗೂ ಕ್ರಮಗಳನ್ನು ಸಲಹೆಗಳಾಗಿ ಮಾತ್ರ ತೆಗೆದುಕೊಳ್ಳಿ. ಅಂತಹ ಯಾವುದೇ ಚಿಕಿತ್ಸೆ, ಔಷಧಿ, ಆಹಾರ ಮತ್ತು ಸಲಹೆಗಳನ್ನು ಅಳವಡಿಸುವ ಮೊದಲು ವೈದ್ಯರನ್ನು ಅಥವಾ ತಜ್ಞರನ್ನು ಸಂಪರ್ಕಿಸಲು ಮರೆಯದಿರಿ.)
ಈ ಲೇಖನವನ್ನೂ ಓದಿ
ಬಿರುಬಿಸಿಲಿನ ಕಾರಣ ಕಣ್ಣು ಒಣಗಿದಂತಾಗಿ ತುರಿಕೆ, ಮಂಜಾಗೋದು ಇಂತಹ ಸಮಸ್ಯೆ ಕಾಡ್ತಿದ್ಯಾ; ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ
ಬೇಸಿಗೆಯಲ್ಲಿ ಅತಿಯಾದ ಬಿಸಿಲು, ಧೂಳು, ಮಾಲಿನ್ಯದ ಕಾರಣದಿಂದ ಕಣ್ಣುಗಳು ಒಣಗುವುದು ಸಹಜ. ಇದರಿಂದ ಕಣ್ಣಿನ ಕಿರಿಕಿರಿ, ಕಣ್ಣು ಮಂಜಾದಂತಾಗುವುದು ಇಂತಹ ಸಮಸ್ಯೆಗಳು ಎದುರಾಗಬಹುದು. ಇದಕ್ಕೆ ಸೂಕ್ತ ಕಾಳಜಿ ಅಗತ್ಯ. ಬೇಸಿಗೆಯಲ್ಲಿ ನೀವು ಡ್ರೈ ಐ ಸಮಸ್ಯೆ ಎದುರಿಸುತ್ತಿದ್ದರೆ ಅದರ ನಿವಾರಣೆಗೆ ಈ ಸುಲಭ ಪರಿಹಾರಗಳನ್ನು ಟ್ರೈ ಮಾಡಿ.
ವಿಭಾಗ