logo
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಳಿ ಕೂದಲಿನ ಸಮಸ್ಯೆಯಿಂದ ಚಿಂತಿತರಾಗಿದ್ದೀರಾ: ತಲೆಗೂದಲಿಗೆ ಹಚ್ಚಿರಿ ಗೋರಂಟಿ ಪೇಸ್ಟ್, ಪರಿಹಾರ ಪಡೆಯಿರಿ

ಬಿಳಿ ಕೂದಲಿನ ಸಮಸ್ಯೆಯಿಂದ ಚಿಂತಿತರಾಗಿದ್ದೀರಾ: ತಲೆಗೂದಲಿಗೆ ಹಚ್ಚಿರಿ ಗೋರಂಟಿ ಪೇಸ್ಟ್, ಪರಿಹಾರ ಪಡೆಯಿರಿ

Priyanka Gowda HT Kannada

Oct 08, 2024 01:31 PM IST

google News

ಗೋರಂಟಿ ಎಲೆಗಳನ್ನು ಕೂದಲಿಗೆ ಹೇಗೆ ಹಚ್ಚಬೇಕು, ಗೋರಂಟಿಯಲ್ಲಿ ಏನು ಮಿಶ್ರಣ ಮಾಡಬೇಕು ಎಂಬುದು ಇಲ್ಲಿದೆ.

    • ತಲೆಗೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೆಹಂದಿಯನ್ನು ಬಳಸಲಾಗುತ್ತದೆ. ಗೋರಂಟಿ ಹಚ್ಚುವುದರಿಂದ ಕೂದಲಿಗೆ ತುಂಬಾ ಸುಂದರವಾದ ಬಣ್ಣ ಬರುತ್ತದೆ. ಇದಕ್ಕಾಗಿ ಒಣ ಗೋರಂಟಿ ಬದಲಿಗೆ ಹಸಿರು ಎಲೆ ಗೋರಂಟಿ ಬಳಸುವುದರಿಂದ ಪ್ರಯೋಜನ ಪಡೆಯಬಹುದು. ಇದನ್ನು ತಯಾರಿಸುವುದು ತುಂಬಾನೇ ಸಿಂಪಲ್, ಇಲ್ಲಿದೆ ಮಾಹಿತಿ.
ಗೋರಂಟಿ ಎಲೆಗಳನ್ನು ಕೂದಲಿಗೆ ಹೇಗೆ ಹಚ್ಚಬೇಕು, ಗೋರಂಟಿಯಲ್ಲಿ ಏನು ಮಿಶ್ರಣ ಮಾಡಬೇಕು ಎಂಬುದು ಇಲ್ಲಿದೆ.
ಗೋರಂಟಿ ಎಲೆಗಳನ್ನು ಕೂದಲಿಗೆ ಹೇಗೆ ಹಚ್ಚಬೇಕು, ಗೋರಂಟಿಯಲ್ಲಿ ಏನು ಮಿಶ್ರಣ ಮಾಡಬೇಕು ಎಂಬುದು ಇಲ್ಲಿದೆ.

ಗೋರಂಟಿ ಅಥವಾ ಮೆಹಂದಿ ಎಲೆಗಳನ್ನು ಶತಮಾನಗಳಿಂದಲೂ ತಲೆಗೂದಲಿನ ಸೌಂದರ್ಯಕ್ಕೆ ಬಳಸಲಾಗುತ್ತಿದೆ. ಇದು ರಾಸಾಯನಿಕ ಬಣ್ಣಗಳಿಗೆ ನೈಸರ್ಗಿಕ ಪರ್ಯಾಯವಾಗಿ, ನೆತ್ತಿ ಮತ್ತು ಕೂದಲನ್ನು ಪೋಷಿಸುವ ಜೊತೆಗೆ ಬಿಳಿ ಕೂದಲಿಗೆ ಪರಿಹಾರ ನೀಡುವು ಕಾರಣ ವಿಶೇಷವಾಗಿ ಇದು ಜನಪ್ರಿಯವಾಗಿದೆ. ಆರೋಗ್ಯಕರ, ಹೊಳೆಯುವ ಕೂದಲನ್ನು ಪಡೆಯಲು ಗೋರಂಟಿ ಎಲೆಗಳು ಸಹಾಯ ಮಾಡುತ್ತದೆ. ಇದು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ನೆತ್ತಿಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ತಲೆಗೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೆಹಂದಿಯನ್ನು ಬಳಸಲಾಗುತ್ತದೆ. ಗೋರಂಟಿ ಹಚ್ಚುವುದರಿಂದ ಕೂದಲಿಗೆ ತುಂಬಾ ಸುಂದರವಾದ ಬಣ್ಣ ಬರುತ್ತದೆ. ಇದಕ್ಕಾಗಿ ಒಣ ಗೋರಂಟಿ ಬದಲಿಗೆ ಹಸಿರು ಎಲೆ ಗೋರಂಟಿ ಬಳಸುವುದರಿಂದ ಪ್ರಯೋಜನ ಪಡೆಯಬಹುದು. ಇದಕ್ಕಾಗಿ ಮನೆಯಂಗಳದಲ್ಲಿ ಗೋರಂಟಿ ಗಿಡವನ್ನು ನೆಟ್ಟಿರುವುದು ಉತ್ತಮ. ನಿಮಗೆ ಬೇಕೆಂದಾಗ ಗೋರಂಟಿ ಎಲೆಗಳನ್ನು ಸಂಗ್ರಹಿಸಬಹುದು. ಈ ಗೋರಂಟಿಯನ್ನು ಪುಡಿಮಾಡಿ ಕೂದಲಿಗೆ ಹಚ್ಚಿಕೊಳ್ಳಬಹುದು. ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಸಂಪೂರ್ಣವಾಗಿ ಕಪ್ಪು, ಮೃದು ಮತ್ತು ಹೊಳೆಯುತ್ತದೆ. ಹಸಿರು ಗೋರಂಟಿಯನ್ನು ಕೂದಲಿಗೆ ಹಚ್ಚುವುದರಿಂದ ಬಿಳಿ ಬಣ್ಣ ಬದಲಾಗುವುದು ಮಾತ್ರವಲ್ಲದೆ ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಹಾಗಿದ್ದರೆ ಗೋರಂಟಿ ಎಲೆಗಳನ್ನು ಕೂದಲಿಗೆ ಹೇಗೆ ಹಚ್ಚಬೇಕು, ಗೋರಂಟಿಯಲ್ಲಿ ಏನು ಮಿಶ್ರಣ ಮಾಡಬೇಕು ಎಂಬುದು ಇಲ್ಲಿದೆ.

ಕೂದಲಿಗೆ ಗೋರಂಟಿ ಎಲೆಗಳನ್ನು ಹೇಗೆ ಬಳಸುವುದು

ತಾಜಾ ಗೋರಂಟಿ ಎಲೆಗಳನ್ನು ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಮೆಹಂದಿಯನ್ನು ಮಿಕ್ಸರ್‌ನಲ್ಲಿಯೂ ರುಬ್ಬಬಹುದು ಅಥವಾ ರುಬ್ಬುವ ಕಲ್ಲಿನಲ್ಲಿಯೂ ರುಬ್ಬಬಹುದು. ಇದನ್ನು ದಪ್ಪವಾಗಿ ಮತ್ತು ನಯವಾದ ಪೇಸ್ಟ್ ರೀತಿಯಲ್ಲಿ ತಯಾರಿಸಬೇಕು. ನಂತರ ಅದಕ್ಕೆ ಸ್ವಲ್ಪ ಅಲೋವೆರಾ ಜೆಲ್, ಮೆಂತ್ಯ ಬೀಜಗಳು ಮತ್ತು ದಾಸವಾಳದ ಹೂವುಗಳನ್ನು ಸೇರಿಸಬೇಕು. ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ, ಅವುಗಳನ್ನು ಮತ್ತೊಮ್ಮೆ ರುಬ್ಬಿಕೊಳ್ಳಿ.

ಈ ಗೋರಂಟಿ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ, ಕನಿಷ್ಠ 3 ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಕೂದಲು ಒಣಗಿದಾಗ, ಎಣ್ಣೆಯನ್ನು ಚೆನ್ನಾಗಿ ಹಚ್ಚಿ, ಮರುದಿನ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ಕೂದಲಿಗೆ ಗೋರಂಟಿ ಎಲೆಗಳನ್ನು ಹಚ್ಚುವುದರ ಪ್ರಯೋಜನಗಳು

ಕೂದಲಿಗೆ ಹಸಿರು ಗೋರಂಟಿ ಹಚ್ಚುವುದರಿಂದ ಬಿಳಿ ಕೂದಲು ಕ್ರಮೇಣ ಕಪ್ಪಾಗಲು ಪ್ರಾರಂಭಿಸುತ್ತದೆ. ಈ ಮೂಲಕ ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಮೆಹಂದಿಯಲ್ಲಿ ಟ್ಯಾನಿನ್ ಇದ್ದು, ಇದು ಕೂದಲಿನ ಬಣ್ಣವನ್ನು ಸುಧಾರಿಸುತ್ತದೆ. ಇದರಲ್ಲಿರುವ ವಿಟಮಿನ್ ಇ ಅಂಶವು ಕೂದಲನ್ನು ತುಂಬಾ ಮೃದುಗೊಳಿಸುತ್ತದೆ. ಮೆಹಂದಿ ಎಲೆಗಳು ನೈಸರ್ಗಿಕ ಪ್ರೋಟೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಅದು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಮೆಂತ್ಯ, ಅಲೋವೆರಾ ಮತ್ತು ದಾಸವಾಳದ ಹೂವುಗಳು ಕೂದಲಿನ ಬೆಳವಣಿಗೆಯಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಇವು ಕೂಡ ಕೂದಲು ಮೃದುವಾಗಲು ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಕೂದಲಿನ ವಿನ್ಯಾಸವು ಉತ್ತಮವಾಗುವುದಲ್ಲದೆ, ಬಣ್ಣ ಸಹ ಗಾಢವಾಗುತ್ತದೆ. ಈ ರೀತಿ ಗೋರಂಟಿ ಹಚ್ಚುವುದರಿಂದ ತಲೆಹೊಟ್ಟು ಮತ್ತು ಕೂದಲಿನ ತುದಿ ಸೀಳುವ ಸಮಸ್ಯೆಯೂ ನಿವಾರಣೆಯಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ