Hair Care: ತಲೆಗೂದಲಿಗೆ ರಾಸಾಯನಿಕ ಬಣ್ಣ ಒಳ್ಳೆಯದಲ್ಲ ಎಂದು ಮೆಹಂದಿಯ ಮೊರೆ ಹೋಗಿದ್ದೀರಾ: ಹಾಗಿದ್ದರೆ ಈ ಸ್ಟೋರಿಯನ್ನು ಮಿಸ್ ಮಾಡ್ದೆ ಓದಿ-hair care tips side effects of using mehendi on hair henna hair dye side effects disadvantages of henna for hair prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Hair Care: ತಲೆಗೂದಲಿಗೆ ರಾಸಾಯನಿಕ ಬಣ್ಣ ಒಳ್ಳೆಯದಲ್ಲ ಎಂದು ಮೆಹಂದಿಯ ಮೊರೆ ಹೋಗಿದ್ದೀರಾ: ಹಾಗಿದ್ದರೆ ಈ ಸ್ಟೋರಿಯನ್ನು ಮಿಸ್ ಮಾಡ್ದೆ ಓದಿ

Hair Care: ತಲೆಗೂದಲಿಗೆ ರಾಸಾಯನಿಕ ಬಣ್ಣ ಒಳ್ಳೆಯದಲ್ಲ ಎಂದು ಮೆಹಂದಿಯ ಮೊರೆ ಹೋಗಿದ್ದೀರಾ: ಹಾಗಿದ್ದರೆ ಈ ಸ್ಟೋರಿಯನ್ನು ಮಿಸ್ ಮಾಡ್ದೆ ಓದಿ

ರಾಸಾಯನಿಕ ಬಣ್ಣಗಳಿಗಿಂತ ನೈಸರ್ಗಿಕ ಪರ್ಯಾಯವಾಗಿರುವ ಮೆಹಂದಿ ಉತ್ಪನ್ನಗಳು ಉತ್ತಮ ಎಂದು ಬಹುತೇಕರು ತಮ್ಮ ತಲೆಗೂದಲಿಗೆ ಹಚ್ಚುತ್ತಾರೆ. ಇದು ಕೂದಲನ್ನು ಕಂಡೀಷನಿಂಗ್ ಮಾಡುವುದು ಮಾತ್ರವಲ್ಲದೆ ಹೊಳಪನ್ನು ಸಹ ಹೆಚ್ಚಿಸುತ್ತದೆ. ಆದರೂ ಮೆಹಂದಿಯನ್ನು ಬಳಸುವುದರಿಂದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ..

ತಲೆಗೂದಲಿಗೆ ಮೆಹಂದಿಯನ್ನು ಬಳಸುವುದರಿಂದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ..
ತಲೆಗೂದಲಿಗೆ ಮೆಹಂದಿಯನ್ನು ಬಳಸುವುದರಿಂದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ..

ಬಹುತೇಕ ಮಂದಿಗೆ ತಮ್ಮ ತಲೆಗೂದಲಿಗೆ ಬಣ್ಣ ಹಾಕುವುದು (Hair Colouring) ಎಂದರೆ ಬಹಳ ಅಚ್ಚುಮೆಚ್ಚು. ಕೆಲವರು ರಾಸಾಯನಿಕ ಬಣ್ಣಗಳತ್ತ ಮೊರೆ ಹೋದ್ರೆ ಇನ್ನೂ ಕೆಲವರು ನೈಸರ್ಗಿಕವಾಗಿ ಸಿಗುವ ಮೆಹಂದಿ (ಗೋರಂಟಿ) ಉತ್ಪನ್ನವನ್ನು ಬಳಸುತ್ತಾರೆ. ರಾಸಾಯನಿಕ ಬಣ್ಣ ಹಾನಿಕಾರಕ ಎಂದು ಗೋರಂಟಿ ಉತ್ಪನ್ನವನ್ನು ಆಯ್ದುಕೊಂಡಿದ್ದರೆ ಎಚ್ಚರವಿರಿ. ಯಾಕೆಂದರೆ ಗೋರಂಟಿ (ಮೆಹಂದಿ) ಬಳಸುವುದರಿಂದಲೂ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ.

ಮೆಹಂದಿಯನ್ನು ಬಳಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳೇನು?

ಅಲರ್ಜಿ ಉಂಟಾಗಬಹುದು: ತಲೆಗೂದಲಿಗೆ ಗೋರಂಟಿಯನ್ನು ಬಳಸುವುದರಿಂದ ನೆತ್ತಿ ಮತ್ತು ಸುತ್ತಮುತ್ತಲಿನ ಚರ್ಮದ ಮೇಲೆ ತುರಿಕೆ, ಕೆಂಪು, ಊತ ಅಥವಾ ದದ್ದು ಉಂಟಾಗಬಹುದು. ಮೆಹಂದಿಯಿಂದ ಅಲರ್ಜಿ ಇರುವವರಿಗೆ ಈ ಸಾಧ್ಯತೆ ಹೆಚ್ಚಿರುತ್ತದೆ.

ಶುಷ್ಕತೆ ಮತ್ತು ದುರ್ಬಲತೆ: ಕೂದಲು ಶುಷ್ಕತೆ, ಒರಟಾಗುವುದು ಮತ್ತು ಒಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಯಾಕೆಂದರೆ ಗೋರಂಟಿಯು ಸಂಕೋಚಕ ಗುಣಗಳನ್ನು ಹೊಂದಿರುವುದರಿಂದ ಇದು ಕೂದಲಿನಿಂದ ನೈಸರ್ಗಿಕ ತೈಲಗಳನ್ನು ತೆಗೆದುಹಾಕಬಹುದು. ಅಲ್ಲದೆ ಒಣ (ಡ್ರೈ) ಕೂದಲು ಇರುವವರು ಗೋರಂಟಿ ಹಚ್ಚಿದರೆ, ಕೂದಲು ಮತ್ತಷ್ಟು ಒರಟಾಗುವುದು.

ನೆತ್ತಿಯ ಕಿರಿಕಿರಿ: ತುರಿಕೆ, ಕೆಂಪು ಅಥವಾ ನೆತ್ತಿಯ ಉರಿಯೂತದಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ. ಮೆಹಂದಿಯನ್ನು ಪದೇ ಪದೇ ಬಳಸುವುದರಿಂದ ಅಥವಾ ಕೆಲವು ಮೆಹಂದಿ ಉತ್ಪನ್ನಗಳಲ್ಲಿ ಅಮೋನಿಯಾ ಅಥವಾ PPD (ಪ್ಯಾರಾ-ಫೀನಿಲೆನೆಡಿಯಮೈನ್) ಅಂತಹವುಗಳು ಇರುವುದರಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತದೆ.

ಬಣ್ಣ ವ್ಯತ್ಯಾಸಗಳು: ಕಿತ್ತಳೆ ಅಥವಾ ಬೇರೆ ಯಾವುದೇ ಬಣ್ಣವನ್ನು ಬಳಸುವುದರಿಂದ ಅದು ನಿಮ್ಮ ಕೂದಲಿಗೆ ಹೊಂದಿಕೆಯಾಗದಿರಬಹುದು. ಕೂದಲಿನ ನೈಸರ್ಗಿಕ ಬಣ್ಣ ಮತ್ತು ಸ್ಥಿತಿಯನ್ನು ಆಧರಿಸಿ ಬಣ್ಣವು ಬದಲಾಗಬಹುದು.

ಮೆಹಂದಿ ತೆಗೆಯುವಲ್ಲಿ ತೊಂದರೆ: ಮೆಹಂದಿ ಹಚ್ಚಿ ಅದನ್ನು ತೊಳೆಯುವಾಗ ಕಷ್ಟವಾಗಬಹುದು. ಕಲೆ ಉಳಿದಿದ್ದರೆ ಕಿರಿಕಿರಿ ಎನಿಸಬಹುದು. ಮೆಹಂದಿಯನ್ನು ಕೂದಲಿಗೆ ಹಚ್ಚಿ ಅದನ್ನು ಸ್ವಲ್ಪ ಸಮಯ ಹಾಗೆಯೇ ಬಿಟ್ಟಾಗ ಒಣಗುತ್ತದೆ. ಹೀಗಾಗಿ ಕೂದಲನ್ನು ತೊಳೆಯುವಾಗ ತುಂಬಾ ಕಷ್ಟವಾಗಬಹುದು.

ಕೂದಲಿನ ರಚನೆಯಲ್ಲಿ ಬದಲಾವಣೆ: ತಲೆಗೂದಲಿಗೆ ಮೆಹಂದಿಯನ್ನು ಬಳಸುವುದರಿಂದ ಕಾಲಾನಂತರದಲ್ಲಿ ಕೂದಲಿನ ವಿನ್ಯಾಸದಲ್ಲಿ ಬದಲಾವಣೆಗಳು ಉಂಟಾಗಬಹುದು. ನಿಯಮಿತವಾಗಿ ಬಳಸುವುದರಿಂದ ಕೂದಲು ಒರಟಾಗಬಹುದು.

ಅಡ್ಡಪರಿಣಾಮಗಳನ್ನು ತಗ್ಗಿಸುವುದು ಹೇಗೆ?

ಪ್ಯಾಚ್ ಟೆಸ್ಟ್: ಮೆಹಂದಿ ಬಳಸುವುದರಿಂದ ಅಲರ್ಜಿ ಉಂಟಾಗುತ್ತದೆ ಎಂಬುದನ್ನು ಕಂಡುಕೊಳ್ಳಲು ಪೂರ್ತಿ ಹಾಕುವ 48 ಗಂಟೆಗಳಿಗೆ ಮುನ್ನ ಪ್ಯಾಚ್ ಪರೀಕ್ಷೆಯನ್ನು ಮಾಡಿ. ಇದರಿಂದ ಆ ಮೆಹಂದಿಯಿಂದ ನಿಮಗೆ ಅಲರ್ಜಿ ಉಂಟಾಗುತ್ತದೆಯೇ ಅಥವಾ ಇಲ್ಲವೆ ಎಂಬುದು ತಿಳಿದುಬರುತ್ತದೆ.

ಮಾಯಿಶ್ಚರೈಸಿಂಗ್: ಮೆಹಂದಿಯಿಂದ ಉಂಟಾಗುವ ಶುಷ್ಕತೆಯನ್ನು ತಡೆಯಲು ಕಂಡೀಷನಿಂಗ್ ಚಿಕಿತ್ಸೆಯನ್ನು ಬಳಸಿ. ತಲೆಗೂದಲು ಮಾಯಿಶ್ಚರೈಸ್ ಆಗಿರುವತ್ತ ಗಮನಹರಿಸಿ.

ಉತ್ತಮ ಗುಣಮಟ್ಟದ ಮೆಹಂದಿ: ರಾಸಾಯನಿಕಗಳನ್ನು ಸೇರಿಸದೆಯೇ ನೈಸರ್ಗಿಕ ಅಥವಾ ಉತ್ತಮ ಗುಣಮಟ್ಟದ ಮೆಹಂದಿಯನ್ನು ಆಯ್ಕೆಮಾಡಿ.

ವೃತ್ತಿಪರರನ್ನು ಸಂಪರ್ಕಿಸಿ: ತಲೆಗೂದಲಿನ ಬೇರೆ ಏನಾದರೂ ಸಮಸ್ಯೆಗಳನ್ನು ಹೊಂದಿದ್ದರೆ, ಮೆಹಂದಿ ಬಳಸುವ ಮೊದಲು ವೃತ್ತಿಪರ ತಜ್ಞರನ್ನು ಸಂಪರ್ಕಿಸಿ.

ಮೇಲೆ ತಿಳಿಸಿದಂತೆ ಸಂಭಾವ್ಯ ಅಡ್ಡ ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸಿ, ನಿಮ್ಮ ತಲೆಗೂದಲಿಗೆ ಮೆಹಂದಿಯನ್ನು ಬಳಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ಖಂಡಿತಾ ಇದು ಸಹಾಯಕವಾಗಿದೆ.