Benefits of Yoga: ಇದು ಯಾವ ಆಸನ ಗೊತ್ತಾ..ಬೆಳಂಬೆಳಗ್ಗೆ ಈ ಯೋಗಾಸನ ಮಾಡಿದ್ರೆ ಎಷ್ಟೆಲ್ಲಾ ಉಪಯೋಗ ಇದೆ ನೋಡಿ
Sep 26, 2022 08:02 PM IST
ನಟರಾಜಾಸನದ ಪ್ರಯೋಜನಗಳು
- ಈ ಆಸನವನ್ನು ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಬೇಕು. ಮುಂಜಾನೆ ಅಥವಾ ಮುಸ್ಸಂಜೆಯಲ್ಲಿ ಯೋಗಾಭ್ಯಾಸ ಮಾಡುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಬೆಳಂಬೆಳಗ್ಗೆ ನಟರಾಜಾಸನ ಮಾಡುವುದರಿಂದ ಅಜೀರ್ಣ ಸಮಸ್ಯೆ ಇರುವುದಿಲ್ಲ.
ಪ್ರತಿದಿನ ಊಟ, ತಿಂಡಿ, ನಿದ್ರೆ ಹೇಗೆ ಮುಖ್ಯವೋ, ದೇಹಕ್ಕೆ ವ್ಯಾಯಾಮ ಕೂಡಾ ಅಷ್ಟೇ ಮುಖ್ಯ. ಕೆಲವೊಂದು ಆಸನಗಳು ದೇಹ ಹಾಗೂ ಮನಸ್ಸು ಎರಡಕ್ಕೂ ಬಹಳ ಉಲ್ಲಾಸ ನೀಡುತ್ತದೆ. ಅದರಲ್ಲಿ ನಟರಾಜಾಸನ ಕೂಡಾ ಒಂದು. ವೀಕೆಂಡ್‌ನಲ್ಲಿ ಆರಾಮವಾಗಿ ಮನೆಯಲ್ಲಿ ಎಂಜಾಯ್ ಮಾಡುವವರು ರಜೆ ಮುಗಿಯುತ್ತಿದ್ದಂತೆ ಮತ್ತೆ ಅದೇ ಕೆಲಸದ ಒತ್ತಡ, ಸಮಸ್ಯೆಗಳಿಂದ ಬಳಲುತ್ತಾರೆ.
ನಮ್ಮ ಮೂಡ್ ರೀಚಾರ್ಜ್ ಮಾಡುವ ಮತ್ತು ಚೈತನ್ಯ ನೀಡುವ ವ್ಯಾಯಾಮಗಳೊಂದಿಗೆ ದಿನವನ್ನು ಪ್ರಾರಂಭಿಸುವುದು ಬಹಳ ಉತ್ತಮ. ಪ್ರತಿದಿನ 15 ನಿಮಿಷಗಳ ಕಾಲ ಯೋಗ ಮಾಡುವುದರಿಂದ ನಮ್ಮ ದೇಹ ಹಗುರವಾಗಿರುತ್ತದೆ. ನಟರಾಜಾಸನ ನಟ, ರಾಜಾ ಮತ್ತು ಆಸನ ಎಂಬ ಮೂರು ಪದಗಳ ಸಂಯೋಜನೆಯಾಗಿದೆ. ನಟ ಎಂದರೆ ನೃತ್ಯ, ರಾಜಾ ಎಂದರೆ ರಾಜ, ಆಸನ ಎಂದರೆ ಭಂಗಿ. ಈ ಮೂರರ ಸಂಯೋಜನೆಯಾದ ನಟರಾಜಾಸನವು ನೃತ್ಯ ಭಂಗಿಯ ಸುಂದರ ಭಗವಂತನನ್ನು ಸಂಕೇತಿಸುತ್ತದೆ.
ಈ ಆಸನವನ್ನು ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಬೇಕು. ಮುಂಜಾನೆ ಅಥವಾ ಮುಸ್ಸಂಜೆಯಲ್ಲಿ ಯೋಗಾಭ್ಯಾಸ ಮಾಡುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಬೆಳಂಬೆಳಗ್ಗೆ ನಟರಾಜಾಸನ ಮಾಡುವುದರಿಂದ ಅಜೀರ್ಣ ಸಮಸ್ಯೆ ಇರುವುದಿಲ್ಲ. ಈ ಆಸನವು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಮತ್ತು ಶಕ್ತಿ ಉತ್ಪಾದನೆಗೆ ಸಹಾಯ ಮಾಡುತ್ತದೆ. ಈ ಯೋಗಾಸನವು ದೇಹವನ್ನು ಸದೃಢಗೊಳಿಸಲು ಸಹಾಯ ಮಾಡುತ್ತದೆ.
ನಟರಾಜಾಸನ ಮಾಡುವುದು ಹೇಗೆ..?
ಮೊದಲು ನೆಲದ ಮೇಲೆ ಅಥವಾ ಯೋಗ ಮ್ಯಾಟ್ ಮೇಲೆ ನೇರವಾಗಿ ನಿಂತುಕೊಳ್ಳಿ.
ಬಲಗಾಲನ್ನು ಹಿಂದಕ್ಕೆ ಮಡಚಿ ಬಲಗೈಯಿಂದ ಹಿಡಿದುಕೊಂಡು ಒಂದು ಕಾಲಿನ ಮೇಲೆ ನಿಂತುಕೊಳ್ಳಿ.
ನಂತರ 10 ಸೆಕಂಡ್‌ಗಳ ಕಾಲ ವಿಶ್ರಾಂತಿ ಮಾಡಿ ಇನ್ನೊಂದು ಬದಿ ಹೀಗೆ ಪ್ರಯತ್ನಿಸಿ
ಎಡಗಾಲನ್ನು ಹಿಂದಕ್ಕೆ ಮಡಚಿ ಎಡಗೈಯಿಂದ ಹಿಡಿದುಕೊಳ್ಳಿ. ಕೆಲವು ಸೆಕೆಂಡುಗಳ ಕಾಲ ಈ ರೀತಿ ಇರಿ.
ಮತ್ತೆ ಬಲಗಾಲನ್ನು ಮತ್ತೆ ಹಿಂದಕ್ಕೆ ಮಡಚಿ ಹಿಡಿದುಕೊಳ್ಳಿ ಹಾಗೆಯೇ ಸ್ವಲ್ಪ ಮುಂದಕ್ಕೆ ಬಾಗಿ. ನಿಮ್ಮ ದೇಹವು ಮುಂದಕ್ಕೆ ಬಾಗುವಷ್ಟು ಬಾಗಿ ಮತ್ತೊಂದು ಕೈಯ್ಯನ್ನು ಮುಂದಕ್ಕೆ ಚಾಚಿ, ಕಾಲನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಎತ್ತಿ.
ನಿಮ್ಮ ದೇಹವನ್ನು ಒಂದು ಕಾಲಿನ ಮೇಲೆ ಸಮತೋಲನಗೊಳಿಸಿ. ಇದೇ ರೀತಿ ಮತ್ತೊಂದು ಬದಿ ಪ್ರಯತ್ನಿಸಿ.
ನಟರಾಜಾಸನದ ಪ್ರಯೋಜನಗಳು
ಈ ಯೋಗಾದ ಭಂಗಿ ದೇಹಕ್ಕೆ ಸಮತೋಲನ ಒದಗಿಸಲು ಉಪಯುಕ್ತವಾಗಿದೆ. ಈ ಆಸನವು ಸ್ನಾಯುಗಳು, ಕಾಲುಗಳು, ಎದೆಯ ಪ್ರದೇಶ, ಭುಜ, ಬೆನ್ನು, ತೋಳುಗಳು, ತೊಡೆ , ಸೊಂಟ, ಹೊಟ್ಟೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕಾಲುಗಳನ್ನು ಬಲವಾಗಿಸುತ್ತದೆ.
ಈ ಭಂಗಿಯು ದೇಹದಿಂದ ಒತ್ತಡವನ್ನು ನಿವಾರಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ನಟರಾಜಾಸನ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.