logo
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಕರಿಬೇವಿನ ಪಾನೀಯ: ತೂಕ ಇಳಿಕೆಯಿಂದ ಮಧುಮೇಹ ನಿರ್ವಹಣೆವರೆಗೆ ಇದರ ಪ್ರಯೋಜನಗಳು ಅದ್ಭುತ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಕರಿಬೇವಿನ ಪಾನೀಯ: ತೂಕ ಇಳಿಕೆಯಿಂದ ಮಧುಮೇಹ ನಿರ್ವಹಣೆವರೆಗೆ ಇದರ ಪ್ರಯೋಜನಗಳು ಅದ್ಭುತ

Priyanka Gowda HT Kannada

Sep 07, 2024 05:03 PM IST

google News

ಕರಿಬೇವಿನ ಎಲೆಗಳ ಪಾನೀಯ ಸೇವನೆಯ 5 ಅದ್ಭುತ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

  • ಪ್ರತಿದಿನ ಬೆಳಗ್ಗೆದ್ದ ಕೂಡಲೇ ಟೀ, ಕಾಫಿ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ. ಕರಿಬೇವಿನ ಪಾನೀಯವನ್ನು ತಯಾರಿಸಿ ಸೇವಿಸಿ. ಪ್ರತಿದಿನ ಇದರ ಸೇವನೆಯು ತೂಕ ಇಳಿಕೆಯಿಂದ ಹಿಡಿದು ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರ 5 ಅದ್ಭುತ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕರಿಬೇವಿನ ಎಲೆಗಳ ಪಾನೀಯ ಸೇವನೆಯ 5 ಅದ್ಭುತ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕರಿಬೇವಿನ ಎಲೆಗಳ ಪಾನೀಯ ಸೇವನೆಯ 5 ಅದ್ಭುತ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ. (freepik)

ಕರಿಬೇವಿನ ಎಲೆಗಳು, ಸಾಮಾನ್ಯವಾಗಿ ದಕ್ಷಿಣ ಏಷ್ಯಾದ ಪಾಕಪದ್ಧತಿಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳು ಸುವಾಸನೆಭರಿತವಾಗಿದ್ದು, ಸ್ವಲ್ಪ ಕಹಿ ರುಚಿಯನ್ನು ಹೊಂದಿದೆ. ಕರಿಬೇವಿನ ಎಲೆಗಳಲ್ಲಿ ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಜೀರ್ಣಕಾರಿ ಗುಣಲಕ್ಷಣಗಳು ಸೇರಿವೆ. ತಾಜಾವಾಗಿದ್ದರೆ ಮಾತ್ರವಲ್ಲ ಒಣಗಿದ್ದರೂ ಸಹ ಕರಿಬೇವಿನ ಎಲೆಗಳನ್ನು ಸಾಂಪ್ರದಾಯಿಕ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ. ಇವು ಪೌಷ್ಟಿಕಾಂಶ ಭರಿತವಾಗಿದ್ದು, ಔಷಧೀಯ ಗುಣಗಳಿಗೆ ಹೆಚ್ಚು ಗುರುತಿಸಲ್ಪಟ್ಟಿದೆ. ದೈನಂದಿನ ದಿನಚರಿಯಲ್ಲಿ ಪ್ರತಿದಿನ ಬೆಳಿಗ್ಗೆ ಕರಿಬೇವಿನ ಎಲೆಗಳ ಪಾನೀಯವನ್ನು ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ತೂಕ ನಷ್ಟದಿಂದ ಮಧುಮೇಹ ನಿರ್ವಹಣೆಯವರೆಗೆ ಈ ಆರೋಗ್ಯಕರ ಪಾನೀಯವನ್ನು ಸೇವಿಸುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು.

ಕರಿಬೇವಿನ ಎಲೆಗಳ ಪಾನೀಯದ 5 ಪ್ರಯೋಜನಗಳು

ತೂಕ ನಷ್ಟಕ್ಕೆ ಸಹಕಾರಿ: ಕರಿಬೇವಿನ ಎಲೆಗಳು ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರಿಬೇವಿನ ಪಾನೀಯ ಕುಡಿಯುವುದರಿಂದ ಮೆಟಾಬಾಲಿಸಮ್ ಅನ್ನು ಹೆಚ್ಚಿಸುತ್ತದೆ. ಇದು ಕ್ಯಾಲೊರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬರ್ನ್ ಮಾಡುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ, ಇದು ದೇಹದ ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೂಕ ಹೆಚ್ಚಾಗುವುದನ್ನು ತಡೆಯಲು ಸಹಕಾರಿಯಾಗಿದೆ.

ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುತ್ತದೆ: ಕರಿಬೇವಿನ ಪಾನೀಯ ಸೇವನೆಯು ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಇದು ಮಲಬದ್ಧತೆ, ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕರುಳಿನ ಚಲನೆ, ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೂದಲು ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿ: ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಅದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಕರಿಬೇವಿನ ಎಲೆಗಳ ಪಾನೀಯವನ್ನು ನಿಯಮಿತವಾಗಿ ಕುಡಿಯುವುದರಿಂದ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಅಕಾಲಿಕ ಬೂದುಬಣ್ಣವನ್ನು ತಡೆಯಲು ಸಹಾಯ ಮಾಡುತ್ತದೆ. ಇದರ ಪಾನೀಯ ಸೇವನೆಯಿಂದ ತ್ವಚೆಯ ಹೊಳಪು ಹೆಚ್ಚುತ್ತದೆ. ಮುಖದಲ್ಲಿನ ಮೊಡವೆ, ಕಲೆಗಳನ್ನು ಕಡಿಮೆ ಮಾಡುತ್ತದೆ.

ಮಧುಮೇಹ ನಿರ್ವಹಣೆ: ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿವೆ. ಕರಿಬೇವಿನ ಪಾನೀಯದ ನಿಯಮಿತ ಸೇವನೆಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳಲ್ಲಿರುವ ಆಂಟಿಹೈಪರ್ಗ್ಲೈಸೆಮಿಕ್ ಗುಣಲಕ್ಷಣಗಳು ಮಧುಮೇಹಿಗಳ ಆಹಾರಕ್ರಮಕ್ಕೆ ಪ್ರಯೋಜನಕಾರಿಯಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ: ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯ ಪೋಷಕಾಂಶಗಳಿಂದ ತುಂಬಿವೆ. ಕರಿಬೇವಿನ ಪಾನೀಯವನ್ನು ಕುಡಿಯುವುದರಿಂದ ದೇಹವು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಲು ಸಹಾಯ ಮಾಡುತ್ತದೆ.

ಕರಿಬೇವಿನ ಪಾನೀಯ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ತಾಜಾ ಕರಿಬೇವಿನ ಎಲೆಗಳು- 1 ಕಪ್, ನೀರು- 2 ಕಪ್

ಮಾಡುವ ವಿಧಾನ: ಮೊದಲಿಗೆ ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆಯಿರಿ. ಬಾಣಲೆಯಲ್ಲಿ ನೀರನ್ನು ಕುದಿಯುವವರೆಗೆ ಇಡಿ. ನಂತರ ಕುದಿಯುತ್ತಿರುವ ನೀರಿಗೆ ತೊಳೆದ ಕರಿಬೇವಿನ ಎಲೆಗಳನ್ನು ಸೇರಿಸಿ. ಇವನ್ನು ಸುಮಾರು 5 ರಿಂದ 7 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಬಳಿಕ ಒಂದು ಪಾತ್ರೆಗ ಇದನ್ನು ಸೋಸಿ, ಬೆಚ್ಚಗಿರುವಾಗಲೇ ನೀರನ್ನು ಸೇವಿಸಿ.

ಮುಖ್ಯವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ನೀರನ್ನು ಕುಡಿಯುವುದು ಬಹಳ ಉತ್ತಮ. ಈ ಆರೋಗ್ಯಕರ ಪಾನೀಯದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವ ಮೂಲಕ ಧನಾತ್ಮಕವಾಗಿ ಮುಂದುವರೆಯಿರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ