logo
ಕನ್ನಡ ಸುದ್ದಿ  /  ಜೀವನಶೈಲಿ  /  Health After 40: ನಲವತ್ತರ ನಂತರವೂ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಹೇಗೆ? ಮಾನಸಿಕ, ದೈಹಿಕ ಆರೋಗ್ಯ ಪಾಲನೆಗೆ ತಜ್ಞರ ಸಲಹೆ ಇಲ್ಲಿದೆ

Health After 40: ನಲವತ್ತರ ನಂತರವೂ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಹೇಗೆ? ಮಾನಸಿಕ, ದೈಹಿಕ ಆರೋಗ್ಯ ಪಾಲನೆಗೆ ತಜ್ಞರ ಸಲಹೆ ಇಲ್ಲಿದೆ

Reshma HT Kannada

Jun 07, 2023 05:00 PM IST

google News

40ರ ನಂತರವೂ ಫಿಟ್‌ನೆಸ್‌ ಕಾಯ್ದುಕೊಳ್ಳವುದು ಬಹಳ ಮುಖ್ಯ

    • Physical and Mental Health After 40: ವಯಸ್ಸಾಗುತ್ತಿದ್ದಂತೆ ಇಲ್ಲದ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುವುದು ಸಹಜ. 40ರ ನಂತರವೂ ದೇಹದಲ್ಲಿ ಫಿಟ್‌ನೆಸ್‌ ಕಾಯ್ದುಕೊಳ್ಳುವ ಮೂಲಕ ರೋಮಾಂಚಕ ಹಾಗೂ ಸಕ್ರಿಯ ಜೀವನವನ್ನು ಆನಂದಿಸಬಹುದು. ಹಾಗಾದರೆ ಇದು ಹೇಗೆ ಸಾಧ್ಯ? ಇಲ್ಲಿದೆ ನೋಡಿ ಉತ್ತರ. 
40ರ ನಂತರವೂ ಫಿಟ್‌ನೆಸ್‌ ಕಾಯ್ದುಕೊಳ್ಳವುದು ಬಹಳ ಮುಖ್ಯ
40ರ ನಂತರವೂ ಫಿಟ್‌ನೆಸ್‌ ಕಾಯ್ದುಕೊಳ್ಳವುದು ಬಹಳ ಮುಖ್ಯ

40 ವಯಸ್ಸಿನ ನಂತರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಯಾಕೆಂದರೆ ಇದು ಜೀವನದ ಪ್ರಮುಖ ಘಟ್ಟ. ಈ ವಯಸ್ಸಿನಲ್ಲಿ ಆರೋಗ್ಯ ರಕ್ಷಣೆಯ ಕ್ರಮಗಳನ್ನು ಪಾಲಿಸುವ ಜೊತೆಗೆ ಜೀವನಶೈಲಿ ಆಯ್ಕೆಗಳು ನಮ್ಮ ಒಟ್ಟಾರೆ ಯೋಗಕ್ಷೇಮದ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ದೇಹಕ್ಕೆ ಅಗತ್ಯ ಇಂಧನಗಳನ್ನು ಒದಗಿಸಲು ಹಾಗೂ ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಪೋಷಕಾಂಶ ಸಮೃದ್ಧ ಆಹಾರ ಸೇವನೆಯ ಜೊತೆಗೆ ಸಮತೋಲಿತ ಆಹಾರ ಸೇವಿಸುವುದು ಬಹಳ ಮುಖ್ಯವಾಗುತ್ತದೆ.

ದೇಹಕ್ಕಿರಲಿ ವಿಶ್ರಾಂತಿ

ಸ್ನಾಯುವಿನ ದ್ರವ್ಯರಾಶಿಯನ್ನು ಸಂರಕ್ಷಿಸಲು, ಮೂಳೆಗಳನ್ನು ಬಲಪಡಿಸಲು ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸಲು ನಿಯಮಿತ ವ್ಯಾಯಾಮವು ಬಹಳ ಮುಖ್ಯವಾಗುತ್ತದೆ. ಇದರೊಂದಿಗೆ ಮಾನಸಿಕ ಆರೋಗ್ಯ ಸುಧಾರಿಸುವುದು ಹಾಗೂ ಒತ್ತಡ ನಿರ್ವಹಿಸುವುದು ಬಹಳ ಮುಖ್ಯ. ಅದಕ್ಕಾಗಿ ವಿಶ್ರಾಂತಿ ತಂತ್ರಗಳನ್ನು ಅನುಸರಿಸಬೇಕು. ಸಾವಧಾನತೆಯನ್ನು ಅಭ್ಯಾಸ ಮಾಡುವುದು ಅವಶ್ಯ.

ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ರೋಗಗಳಿಗೆ ಸಂಬಂಧಿಸಿ ನಿಯಮಿತ ತಪಾಸಣೆ, ಸ್ಕ್ರೀನಿಂಗ್‌ಗಳಿಗೂ ಪ್ರಾಮುಖ್ಯತೆ ನೀಡಬೇಕು.

ನಿದ್ದೆಗೆ ಆದ್ಯತೆ ನೀಡಿ

ನಿದ್ದೆಗೆ ಆದ್ಯತೆ ನೀಡುವುದು, ದೇಹ ನಿರ್ಜಲೀಕರಣ ಉಂಟಾಗದಂತೆ ಕಾಪಾಡಿಕೊಳ್ಳುವುದು, ಅತಿಯಾದ ಧೂಮಪಾನ ಹಾಗೂ ಮದ್ಯಪಾನ ಸೇವನೆಯನ್ನು ತಪ್ಪಿಸುವುದು ಇವು ಬಹಳ ಮುಖ್ಯವಾಗುತ್ತದೆ. 40ರ ನಂತರ ತಪ್ಪದೇ ಈ ಮೇಲಿನ ಜೀವನಕ್ರಮವನ್ನು ಪಾಲಿಸುವುದು ಬಹಳ ಮುಖ್ಯವಾಗುತ್ತದೆ.

ಹಿಂದುಸ್ತಾನ್‌ ಟೈಮ್ಸ್‌ ಲೈಫ್‌ಸ್ಟೈಲ್‌ಗೆ ಸಂದರ್ಶನ ನೀಡಿದ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ಆಂತರಿಕ ವೈದ್ಯಕೀಯ ಹಿರಿಯ ಸಲಹೆಗಾರ ಡಾ. ತರುಣ್‌ ಸಾಹ್ನಿ ಈ ರೀತಿ ಹೇಳಿದ್ದಾರೆ.

40ರ ನಂತರ ಕಾಡುವ ಕಾಯಿಲೆಗಳು

ʼಗಂಭೀರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು 40ರ ನಂತರ ಆರೋಗ್ಯ ಕಾಳಜಿ ವಹಿಸುವುದು ಬಹಳ ಮುಖ್ಯವಾಗುತ್ತದೆ. ಈ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹೆಚ್ಚು. ಅದರಲ್ಲಿ ಹೃದ್ರೋಗವು ಅಗ್ರಸ್ಥಾನದಲ್ಲಿದೆ. ಏಕೆಂದರೆ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್‌ ಮಟ್ಟದ ಏರಿಕೆ, ಬೊಜ್ಜು, ಜಡ ಜೀವನಶೈಲಿಯಂತಹ ಅಪಾಯಕಾರಿ ಅಂಶಗಳು ಈ ವಯಸ್ಸಿನಲ್ಲಿ ಹೆಚ್ಚು ಪರಿಣಾಮ ಬೀರಬಹುದು. ಟೈಪ್‌ 2 ಮಧುಮೇಹವು ಈ ವಯಸ್ಸಿನಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಅದರಲ್ಲೂ ಅನುವಂಶೀಯವಾಗಿ ಈ ಸಮಸ್ಯೆ ಇರುವವರು ಹಾಗೂ ಜಡ ಜೀವನಶೈಲಿ ಪಾಲಿಸುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸುತ್ತದೆ.

ನಿಯಮಿತ ತಪಾಸಣೆ ಅವಶ್ಯ

ಸ್ತನ, ಕೊಲೊರೆಕ್ಟರ್‌ ಮತ್ತು ಪ್ರಾಸ್ಟೇಟ್‌ ಕ್ಯಾನ್ಸರ್‌ನ ಅಪಾಯವೂ 40 ನಂತರ ಹೆಚ್ಚು ಕಾಣಿಸುತ್ತದೆ. ಹಾಗಾಗಿ ನಿಯಮಿತ ತಪಾಸಣೆ ಹಾಗೂ ಆರೋಗ್ಯಕರ ಜೀವನಶೈಲಿ ಬಹಳ ಅಗತ್ಯ. ವಿಶೇಷವಾಗಿ ಋತುಬಂಧಕ್ಕೆ ಸಮೀಪ ಇರುವ ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್‌ನಂತಹ ಸಮಸ್ಯೆಗಳು ಕಾಣಿಸುವುದು ಹೆಚ್ಚು. 40ರ ನಂತರ ಮಹಿಳೆಯರು ಕ್ಯಾಲ್ಸಿಯಂ ಸಮೃದ್ಧ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮಾಡುವುದು ಅವಶ್ಯʼ ಎನ್ನುತ್ತಾರೆ.

ಹೀಗಿರಲಿ ಜೀವನಶೈಲಿ

ʼ40ರ ನಂತರ ಹೆಚ್ಚಿದ ಒತ್ತಡ ಹಾಗೂ ಜೀವನಶೈಲಿಯ ಬದಲಾವಣೆಗಳಿಂದ ಆತಂಕ ಹಾಗೂ ಖಿನ್ನತೆಯಂತಹ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ಕಾಡುವುದು ಸಹಜ. ಆ ಕಾರಣಕ್ಕೆ ಏರೋಬಿಕ್‌ ಚಟುವಟಿಕೆ, ವ್ಯಾಯಾಮ, ನಡಿಗೆಯನ್ನು ರೂಢಿಸಿಕೊಳ್ಳುವ ಜೊತೆಗೆ ಸಂಸ್ಕರಿಸಿದ ಆಹಾರಗಳು ಹಾಗೂ ಸ್ಯಾಚುರೇಟೆಡ್‌ ಕೊಬ್ಬಿನಾಂಶ ಇರುವ ಆಹಾರಗಳ ಸೇವನೆಗೆ ಕಡಿವಾಣ ಹಾಕಬೇಕು. ಹಣ್ಣು, ತರಕಾರಿ, ಧಾನ್ಯಗಳು, ಲೀನ್‌ ಪ್ರೊಟೀನ್‌ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಇರುವ ಸಮತೋಲಿತ ಆಹಾರಗಳ ಸೇವನೆಗೆ ಒತ್ತು ನೀಡಬೇಕು. ಧ್ಯಾನದಂತಹ ತಂತ್ರಗಳ ಮೂಲಕ ಒತ್ತಡ ನಿರ್ವಹಿಸುವ ಜೊತೆಗೆ, ಸಾಕಷ್ಟು ನಿದ್ರೆಗೂ ಆದ್ಯತೆ ನೀಡಬೇಕು. ಧೂಮಪಾನ, ಅತಿಯಾದ ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯಂತಹ ಅಪಾಯಕಾರಿ ನಡವಳಿಕೆಗಳನ್ನು ತಪ್ಪಿಸಿ. ಈ ಎಲ್ಲಾ ಕ್ರಮಗಳನ್ನು ಅನುಸರಿಸುವ ಜೊತೆಗೆ ಒಟ್ಟಾರೆ ಯೋಗಕ್ಷೇಮ ಸುಧಾರಣೆಗೆ ಉತ್ತೇಜಿಸಬಹುದು ಮತ್ತು 40ರ ನಂತರ ಜೀವನವನ್ನು ಆನಂದಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ