logo
ಕನ್ನಡ ಸುದ್ದಿ  /  ಜೀವನಶೈಲಿ  /  Dry Fruits: ಡ್ರೈಫ್ರೂಟ್ಸ್‌ ಆರೋಗ್ಯಕ್ಕೆ ಉತ್ತಮ ನಿಜ, ಆದರೆ ಅತಿಯಾಗಿ ತಿನ್ನೋದ್ರಿಂದ ಪ್ರಯೋಜನಕ್ಕಿಂತ ಅಪಾಯವೇ ಹೆಚ್ಚು

Dry Fruits: ಡ್ರೈಫ್ರೂಟ್ಸ್‌ ಆರೋಗ್ಯಕ್ಕೆ ಉತ್ತಮ ನಿಜ, ಆದರೆ ಅತಿಯಾಗಿ ತಿನ್ನೋದ್ರಿಂದ ಪ್ರಯೋಜನಕ್ಕಿಂತ ಅಪಾಯವೇ ಹೆಚ್ಚು

Reshma HT Kannada

Aug 17, 2023 10:00 AM IST

google News

ಡ್ರೈಫ್ರೂಟ್ಸ್‌ ಅತಿಯಾಗಿ ತಿನ್ನೋದು ಅಪಾಯಕಾರಿ

    • ಒಣ ಹಣ್ಣು ಅಥವಾ ಡ್ರೈ ಫ್ರೂಟ್ಸ್‌ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಆದರೆ ಇದನ್ನು ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ. ಒಣ ಹಣ್ಣುಗಳನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ.
ಡ್ರೈಫ್ರೂಟ್ಸ್‌ ಅತಿಯಾಗಿ ತಿನ್ನೋದು ಅಪಾಯಕಾರಿ
ಡ್ರೈಫ್ರೂಟ್ಸ್‌ ಅತಿಯಾಗಿ ತಿನ್ನೋದು ಅಪಾಯಕಾರಿ

ಒಣಹಣ್ಣುಗಳನ್ನು ಪೋಷಕಾಂಶ ಮತ್ತು ಶಕ್ತಿಯ ಉಗ್ರಾಣವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ವೈದ್ಯರು ಪ್ರತಿದಿನ ಒಂದು ಹಿಡಿ ಒಣಹಣ್ಣುಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಇವುಗಳ ಸೇವನೆ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದ್ದರೂ, ಅತಿಯಾಗಿ ತಿನ್ನುವುದರಿಂದ ದೇಹಕ್ಕೆ ಪ್ರಯೋಜನವಾಗುವುದಿಲ್ಲ, ಬದಲು ಹಾನಿಯಾಗುತ್ತದೆ ಎಂಬುದು ಹಲವರಿಗೆ ತಿಳಿದಿರಕ್ಕಿಲ್ಲ.

ಒಣ ಹಣ್ಣುಗಳ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂಬುದಕ್ಕೆ ಹಲವು ಕಾರಣಗಳಿವೆ. ಇದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಮಲಬದ್ಧತೆ

ಒಣ ಹಣ್ಣುಗಳಲ್ಲಿ ಉತ್ತಮ ನಾರಿನಂಶವಿದೆ. ಇದರಿಂದ ವ್ಯಕ್ತಿಗೆ ಮಲ ವಿಸರ್ಜನೆಗೆ ಸುಲಭವಾಗುತ್ತದೆ. ಆದರೆ ಇದನ್ನು ಹೆಚ್ಚು ಸೇವಿಸುವುದರಿಂದ ಮಲಬದ್ಧತೆ, ಹೊಟ್ಟೆನೋವು, ಹೊಟ್ಟೆ ಉಬ್ಬರ, ಹೊಟ್ಟೆನೋವು, ಅತಿಸಾರದಂತಹ ಸಮಸ್ಯೆಗಳು ಉಂಟಾಗುತ್ತವೆ.

ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆ

ಒಣಹಣ್ಣುಗಳಲ್ಲಿ ನೈಸರ್ಗಿಕ ಸಕ್ಕರೆಯಂಶ ಹೆಚ್ಚಿರುತ್ತದೆ. ಇದನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಫ್ರಕ್ಟೋಸ್ ಪ್ರಮಾಣ ಹೆಚ್ಚಾಗುತ್ತದೆ. ಇದು ವ್ಯಕ್ತಿಯ ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಮಧುಮೇಹದಂತಹ ಸಮಸ್ಯೆ ಹೆಚ್ಚಲು ಇದು ಕಾರಣವಾಗಬಹುದು.

ಬೊಜ್ಜು

ತೂಕ ನಷ್ಟದ ವಿಚಾರ ಬಂದಾಗ ಜನರು ಒಣಹಣ್ಣುಗಳನ್ನು ತಿನ್ನಲು ಸಲಹೆ ನೀಡುತ್ತಾರೆ. ಒಣಹಣ್ಣುಗಳ ಸೇವನೆ ತೂಕ ನಷ್ಟಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ ಹೆಚ್ಚು ಒಣಹಣ್ಣುಗಳನ್ನು ತಿನ್ನುವುದರಿಂದ ತೂಕ ಕಡಿಮೆಯಾಗುವ ಬದಲು ಬೊಜ್ಜು ಹೆಚ್ಚುತ್ತದೆ. ಏಕೆಂದರೆ ಅವುಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದು ಬೊಜ್ಜು ಹೆಚ್ಚಲು ಕಾರಣವಾಗಬಹುದು. ಅವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

ಅಜೀರ್ಣ

ಒಣಹಣ್ಣುಗಳಲ್ಲಿ ಇರುವ ನಾರಿನಾಂಶ ಜೀರ್ಣಕ್ರಿಯೆಗೆ ಉತ್ತಮ ಎಂದು ಹೇಳಲಾಗುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಇದರಿಂದಾಗಿ ವ್ಯಕ್ತಿಯು ಅಜೀರ್ಣ, ಹೊಟ್ಟೆನೋವು, ಹೊಟ್ಟೆಸೆಳೆತ, ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಅನುಭವಿಸಬಹುದು.

ಗ್ಯಾಸ್ಟ್ರಿಕ್‌ ಸಮಸ್ಯೆ

ಹೆಚ್ಚು ಒಣಹಣ್ಣುಗಳನ್ನು ಸೇವಿಸುವುದರಿಂದ ಹೊಟ್ಟೆಯುಬ್ಬರ ಮತ್ತು ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ಹೆಚ್ಚಬಹುದು. ಅಷ್ಟೇ ಅಲ್ಲ, ಕೆಲವು ಒಣಹಣ್ಣುಗಳನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ವಿಷಯದ ಅಂಶ ಏರಿಕೆಗೂ ಕಾರಣವಾಗಬಹುದು. ಬ್ರೆಜಿಲ್ ನಟ್ಸ್, ಬಾದಾಮಿ ಮತ್ತು ಜಾಯಿಕಾಯಿ ಸೇವನೆಯ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.

ಇದನ್ನೂ ಓದಿ

Menstrual Pain: ಮುಟ್ಟಿನ ದಿನಗಳಲ್ಲಿ ಕಾಡುವ ಅಸಹಜ ನೋವಿಗೆ ಈ 5 ನೈಸರ್ಗಿಕ ಪಾನೀಯಗಳಲ್ಲಿದೆ ಪರಿಹಾರ

ಕಾಡುವ ಮುಟ್ಟಿನ ನೋವು ವಿಪರೀತ ಹಿಂಸೆ ನೀಡುವುದು ಅಹಜ. ಮುಟ್ಟಿನ ದಿನಗಳಲ್ಲಿ ಉಂಟಾಗುವ ಈ ನೋವಿಗೆ ಮನೆಯಲ್ಲೇ ಕೆಲವೊಂದು ಪಾನೀಯಗಳನ್ನು ಸೇವಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅಂತಹ 5 ಪಾನೀಯಗಳ ಕುರಿತ ವಿವರ ಇಲ್ಲಿದೆ.

ಈ ಚಿತ್ರ ಲೇಖನವನ್ನು ಪೂರ್ತಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

Killer Diets: ಮಿತಿ ಮೀರಿದರೆ ಪ್ರಾಣಕ್ಕೆ ಸಂಚು ತರುವ 5 ಡಯೆಟ್‌ ವಿಧಾನಗಳಿವು; ಇವುಗಳ ಅನುಕರಣೆಗೂ ಮೊದಲು ತಜ್ಞರ ಸಲಹೆ ಪಡೆಯಲು ಮರೆಯದಿರಿ

ತೂಕ ಇಳಿಕೆ, ಆರೋಗ್ಯ ರಕ್ಷಣೆ ಹೀಗೆ ಹಲವು ಕಾರಣಗಳಿಂದ ಇತ್ತೀಚೆಗೆ ಡಯೆಟ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೊಂದು ಹೆಸರಿನ ಡಯೆಟ್‌ ಕ್ರಮಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಆದರೆ ಯಾವುದೇ ಡಯೆಟ್‌ ಕ್ರಮವನ್ನು ಅನುಸರಿಸುವ ಮೊದಲು ತಜ್ಞರ ಸಲಹೆ ಪಡೆಯುವುದು ಅವಶ್ಯ. ಇಲ್ಲದಿದ್ದರೆ ಪ್ರಾಣಾಪಾಯ ಉಂಟಾಗಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ