logo
ಕನ್ನಡ ಸುದ್ದಿ  /  ಜೀವನಶೈಲಿ  /  ಪೀನಟ್ ಬಟರ್ ಸೇವನೆಗೆ ಸೂಕ್ತ ಸಮಯ ಯಾವುದು; ಆಯುರ್ವೇದ ಏನ್ ಹೇಳುತ್ತೆ? ತಜ್ಞರ ಅಭಿಪ್ರಾಯ ತಿಳಿಯೋಣ ಬನ್ನಿ

ಪೀನಟ್ ಬಟರ್ ಸೇವನೆಗೆ ಸೂಕ್ತ ಸಮಯ ಯಾವುದು; ಆಯುರ್ವೇದ ಏನ್ ಹೇಳುತ್ತೆ? ತಜ್ಞರ ಅಭಿಪ್ರಾಯ ತಿಳಿಯೋಣ ಬನ್ನಿ

Jayaraj HT Kannada

Feb 15, 2024 07:30 AM IST

google News

ಪೀನಟ್ ಬಟರ್ ಸೇವನೆಗೆ ಸೂಕ್ತ ಸಮಯ ಯಾವುದು

    • Peanut Butter: ಆಯುರ್ವೇದದ ಪ್ರಕಾರ, ಪೀನಟ್‌ ಬಟರ್‌ ಅನ್ನು ದಿನದ ಸರಿಯಾದ ಸಮಯದಲ್ಲಿ ಸೇವಿಸಬೇಕು. ಆ ಸಮಯ ತಪ್ಪಿದರೆ ಆರೋಗ್ಯಕ್ಕೆ ಹಾನಿಯಾಗಬಹುದು. ಹೀಗಾಗಿ ತಜ್ಞರ ಸಲಹೆಯಂತೆ ಪೀನಟ್‌ ಬಟರ್ ಸೇವಿಸುವ ಸರಿಯಾದ ಸಮಯವನ್ನು‌ ತಿಳಿದುಕೊಳ್ಳಿ.
ಪೀನಟ್ ಬಟರ್ ಸೇವನೆಗೆ ಸೂಕ್ತ ಸಮಯ ಯಾವುದು
ಪೀನಟ್ ಬಟರ್ ಸೇವನೆಗೆ ಸೂಕ್ತ ಸಮಯ ಯಾವುದು (Pixabay)

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪೀನಟ್‌ ಬಟರ್‌ (peanut butter) ಅನ್ನು ಇಷ್ಟಪಟ್ಟು ತಿನ್ನುವವರಿದ್ದಾರೆ. ಇದು ನಾಲಿಗೆಗೆ ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು.‌ ಉಪಾಹಾರಕ್ಕೆ ಹೊಸ ರುಚಿಯ ಜೊತೆಗೆ ನಿಮ್ಮನ್ನು ಶಕ್ತಿಯುತವಾಗಿಸುತ್ತದೆ. ಪೀನಟ್‌ ಬಟರ್‌ನಲ್ಲಿ ಹಲವಾರು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿವೆ. ಇದರೊಂದಿಗೆ ಫೈಬರ್, ಪ್ರೋಟೀನ್, ಆರೋಗ್ಯಕರ ಕೊಬ್ಬಿನಾಂಶಗಳಿಂದ ತುಂಬಿದೆ.

ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುವ ಈ ಬಟರ್‌, ಹಸಿವನ್ನು ನಿಗ್ರಹಿಸುತ್ತದೆ. ತೂಕ ಇಳಿಸುವ ಡಯಟ್ ಪಾಲಿಸುವವರು ಪೀನಟ್‌ ಬಟರ್‌ ಸೇವಿಸುತ್ತಾರೆ. ಸಾಮಾನ್ಯ ಬೆಣ್ಣೆಗೆ ಹೋಲಿಸಿದರೆ ಕಡಲೆಕಾಯಿ ಬೆಣ್ಣೆಯಲ್ಲಿ ಕೊಬ್ಬಿನಾಂಶ ಕಡಿಮೆ. ಇದರಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿದ್ದು, ಕಪ್‌ ಕೇಕ್‌, ಪ್ಯಾನ್‌ಕೇಕ್‌, ಬ್ರೆಡ್ ಜೊತೆಗೆ ಸೇವಿಸಲು ಆರೋಗ್ಯಕರ ಪರ್ಯಾಯ ಆಹಾರವಾಗಿದೆ.

ಇದನ್ನೂ ಓದಿ | Curry Leaves: ಅಡುಗೆಗೆ ಮಾತ್ರವಲ್ಲ ತೂಕ ಇಳಿಸಲೂ ಬೇಕು ಕರಿಬೇವಿನ ಎಲೆಗಳು; ಮಧುಮೇಹಿಗಳಿಗೂ ಸೂಪರ್‌ ಫುಡ್‌ ಇದು

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರೊಂದಿಗೆ ಹೃದಯದ ಆರೋಗ್ಯ ಹೆಚ್ಚಿಸಲು ನೆರವಾಗುತ್ತದೆ. ಆದರೆ, ಈ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಮತ್ತು ಯಾವುದೇ ಅಡ್ಡಪರಿಣಾಮಗಳನ್ನು ತಪ್ಪಿಸಲು ಅದನ್ನು ಸೂಕ್ತ ಸಮಯದಲ್ಲಿ ಸೇವಿಸಬೇಕು.

ಪೀನಟ್‌ ಬಟರ್‌ ಸೇವಿಸಲು ಸರಿಯಾದ ಸಮಯ ಯಾವುದು?

“ಜನರು ಸಾಮಾನ್ಯವಾಗಿ ಪೀನಟ್‌ ಬಟರ್‌ ಅನ್ನು ಬೆಳಗ್ಗೆ ತಮ್ಮ ಬ್ರೆಡ್‌ಗಳ ಮೇಲೆ ಹರಡಿ ಸೇವಿಸುತ್ತಿದ್ದಾರೆ. ಆಯುರ್ವೇದದ ಪ್ರಕಾರ, ಬೆಳಗ್ಗಿನ‌ 6ರಿಂದ 10 ಗಂಟೆಯರವರೆಗಿನ ಅವಧಿಯನ್ನು ಕಫ ದೋಷದ ಸಮಯ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಪೀನಟ್‌ ಬಟರ್‌ ಸಹಿತ ಉಪಾಹಾರ ಸೇವಿಸಿದರೆ, ಕಫದ ಸಮಸ್ಯೆ ಆಗಬಹುದು. ಅದು ಎಣ್ಣೆಯುಕ್ತ ಆಹಾರವಾಗಿದ್ದು, ಕೊಬ್ಬಿನಾಂಶ ಇದೆ. ಹೀಗಾಗಿ ಈ ಸಮಯದಲ್ಲಿ ಕಡಲೆಕಾಯಿ ಬೆಣ್ಣೆಯನ್ನು ಸೇವಿಸುವುದನ್ನು ತಪ್ಪಿಸಬೇಕು. ಇದರ ಹೊರತಾಗಿ ದಿನದ ಯಾವುದೇ ಸಮಯದಲ್ಲಿ ಸೇವಿಸುವುದು ಹೆಚ್ಚು ಸೂಕ್ತ” ಎಂದು ಡಾ.ನಿತಿಕಾ ಕೊಹ್ಲಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಯಾರು ಪೀನಟ್‌ ಬಟರ್‌ ತಿನ್ನಬಾರದು

ಅಲರ್ಜಿ ಸಮಸ್ಯೆಗಳು ಮತ್ತು ಜೀರ್ಣಕ್ರಿಯೆ ಸರಿಯಾಗಿ ಆಗದವರು ಇದನ್ನು ಅತಿಯಾಗಿ ತಿನ್ನಬಾರದು. ಉರಿಯೂತವನ್ನು ತಪ್ಪಿಸಲು ಅದರ ಸೇವನೆಯನ್ನು ನಿರ್ಬಂಧಿಸಬೇಕು ಎಂದು ಡಾ.ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನದ ಆಹಾರ ಕ್ರಮದಲ್ಲಿರಲಿ ಈ ಪದಾರ್ಥಗಳು

ಕಡಲೆಕಾಯಿ ಬೆಣ್ಣೆಯ ಪ್ರಯೋಜನಗಳು

ಸೂಕ್ತ ಸಮಯದಲ್ಲಿ ಪೀನಟ್‌ ಬಟರ್‌ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಜೀರ್ಣಕ್ರಿಯೆ ಮತ್ತು ಅಲರ್ಜಿ ಸಮಸ್ಯೆಗಳು ಇಲ್ಲದಿದ್ದರೆ, ಇದರ ಸೇವನೆಯಿಂದ ದೀರ್ಘಕಾಲದ ಕಾಯಿಲೆಗಳ ನಿರ್ವಹಣೆ ಸುಲಭ.

  • ಕ್ಯಾನ್ಸರ್‌ನಿಂದ ರಕ್ಷಣೆ

ಪೀನಟ್‌ ಬಟರ್ ಸೇವನೆಯು ಕರುಳಿನ (ಕೊಲೊರೆಕ್ಟಲ್ ) ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಮತ್ತೊಂದು ಅಧ್ಯಯನ ವರದಿ ಹೇಳಿದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಇದರಲ್ಲಿರುವ ರೆಸ್ವೆರಾಟ್ರಾಲ್ ಮತ್ತು ಫೈಟೊಸ್ಟೆರಾಲ್‌ಗಳು ಇದಕ್ಕೆ ನೆರವಾಗುತ್ತದೆ.

  • ಮಧುಮೇಹ ತಡೆಯುತ್ತದೆ

ಪೀನಟ್‌ ಬಟರ್‌, ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಏರಿಕೆಯನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಮಧುಮೇಹದ ಅಪಾಯ ತಡೆಯುತ್ತದೆ. ಒಂದು ಅಧ್ಯಯನದ ಪ್ರಕಾರ, ಕಡಲೆಕಾಯಿ ಬೆಣ್ಣೆಯನ್ನು ವಾರಕ್ಕೆ ಐದು ಬಾರಿ ಅಥವಾ ಅದಕ್ಕಿಂತ ಹೆಚ್ಚು ಸೇವಿಸುವುದರಿಂದ ಮಧುಮೇಹದ ಸಂಭವವು 21 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ.

  • ಹೃದಯದ ಆರೋಗ್ಯ

ಪೀನಟ್‌ ಬಟರ್‌ನಲ್ಲಿ ಒಮೆಗಾ -6 ಕೊಬ್ಬಿನಾಮ್ಲವಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಬಟರ್ ಅರ್ಜಿನೈನ್ ಎಂಬ ಅಮೈನೋ ಆಮ್ಲದ ನೈಸರ್ಗಿಕ ಮೂಲವಾಗಿದೆ. ಇದು ರಕ್ತನಾಳಗಳ ಕಾರ್ಯವನ್ನು ಉತ್ತೇಜಿಸುವ ಮೂಲಕ ಹೃದಯದ ಕಾಯಿಲೆಯನ್ನು ತಡೆಯುತ್ತದೆ.

  • ಏಕಾಗ್ರತೆ ಹೆಚ್ಚಿಸುತ್ತದೆ

ನೀವು ವಿದ್ಯಾರ್ಥಿ ಅಥವಾ ಸಂಶೋಧಕರಾಗಿದ್ದರೆ, ದೀರ್ಘಕಾಲದ ಅಧ್ಯಯನ ಮಾಡುವಾಗ ಪೀನಟ್‌ ಬಟರ್ ನಿಮಗೆ ನೆರವಾಗಬಹುದು. ಇದು ಅಪಾರ ಪ್ರಮಾಣದ ಪೋಷಕಾಂಶಗಳಿಂದ ತುಂಬಿರುತ್ತವೆ. ಅದು ನಿಮ್ಮ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ | Viral Video: ಮಗಳ ಸೋಲನ್ನೇ ಗೆಲುವಾಗಿಸಿದ ಅಪ್ಪ; ಪುಟ್ಟ ಬಾಲಕಿಯ ಬೆಟ್ಟದಂಥಾ ಖುಷಿಗೆ ಹೆತ್ತವರೇ ಮುನ್ನುಡಿ

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ