Viral Video: ಮಗಳ ಸೋಲನ್ನೇ ಗೆಲುವಾಗಿಸಿದ ಅಪ್ಪ; ಪುಟ್ಟ ಬಾಲಕಿಯ ಬೆಟ್ಟದಂಥಾ ಖುಷಿಗೆ ಹೆತ್ತವರೇ ಮುನ್ನುಡಿ
Parenting Tips: ಮಕ್ಕಳೊಂದಿಗೆ ಅಪ್ಪ-ಅಮ್ಮ ಇರಬೇಕು ಎನ್ನುವುದಕ್ಕೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಒಂದು ಸಾಕು. ಸತತ ವಿಫಲವಾಗುತ್ತಿದ್ದ ತನ್ನ ಮಗಳನ್ನು ತಂದೆ ಗೆಲ್ಲಿಸುತ್ತಾರೆ. ಅಪ್ಪ ಮಾಡಿದ ಆ ನೆರವಿಂದ ಮಗಳು ಖುಷಿಯ ಅಲೆಯಲ್ಲಿ ತೇಲುತ್ತಾಳೆ. ಈ ವೈರಲ್‌ವಿಡಿಯೋ ಇಲ್ಲಿದೆ.
ಪುಟ್ಟ ಮಕ್ಕಳಿಗೆ ತನ್ನ ಹೆತ್ತವರೇ ಆಸರೆ ಹಾಗೂ ಭದ್ರತೆ. ತಂದೆ-ತಾಯಿ ಜೊತೆಗಿದ್ದರೆ ನೂರಾನೆ ಬಲ. ಏನಾದರೂ ಸಾಧಿಸಬಲ್ಲೆ ಎಂಬ ಧೈರ್ಯ ಮಕ್ಕಳಿಲ್ಲಿ ಚಿಗುತ್ತವೆ. ಮಕ್ಕಳ ಗೆಲುವಿಗಿಂತ ಹೆಚ್ಚಾಗಿ ಸೋಲಿನಲ್ಲಿ ಜೊತೆಗಿರುವುದು ತಂದೆ-ತಾಯಿಗಳ ಕರ್ತವ್ಯ. ಮಕ್ಕಳ ಗೆಲುವನ್ನು ಸಂಭ್ರಮಿಸುವುದರೊಂದಿಗೆ, ಅವರ ಸೋಲಿನಲ್ಲೂ ಜೊತೆಗೆ ನಿಂತು ಮುನ್ನಡೆಸುವುದು ಹೆತ್ತವರ ಜವಾಬ್ದಾರಿ. ಅದರಲ್ಲೂ ಒಂದರಿಂದ 6 ವರ್ಷದವರೆಗಿನ ಮಕ್ಕಳನ್ನೂ ನಾಜೂಕಾಗಿ ಬೆಳೆಸಬೇಕು. ಪ್ರತಿ ಹಂತದಲ್ಲಿಯೂ ಮಕ್ಕಳ ಜೊತೆಗಿದ್ದು ಕೈಹಿಡಿದು ಮುನ್ನಡೆಸಬೇಕು. ಹೆತ್ತವರ ಉಪಸ್ಥಿತಿ ಬೇಕು ಎನ್ನುವಾಗ ತಂದೆ ತಾಯಿಯರು ಮಕ್ಕಳ ಜೊತೆಗಿರಬೇಕು.
ನಾವಿಲ್ಲಿ ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣವೊಂದಿದೆ. ಪುಟ್ಟ ಮಕ್ಕಳೊಂದಿಗೆ ತಂದೆ-ತಾಯಿ ಇದ್ದರೆ, ಆ ಮಕ್ಕಳು ಸೋಲಿನಲ್ಲೂ ಗೆಲುವನ್ನು ಕಾಣುತ್ತಾರೆ. ವಾಸ್ತವದಲ್ಲಿ ಮಕ್ಕಳ ಸೋಲಿಗೆ ಹೆತ್ತವರು ಅವಕಾಶವೇ ನೀಡುವುದಿಲ್ಲ. ಯಾವ ಮಕ್ಕಳ ಸೋಲನ್ನೂ ಅಪ್ಪ - ಅಮ್ಮಂದಿರು ಬಯಸುವುದಿಲ್ಲ. ಸೋಲುವ ಹಂತದಲ್ಲಿ ಮಕ್ಕಳ ಕೈ ಹಿಡಿದು ಮುನ್ನಡೆಸಿದಾಗ, ಆ ಮಕ್ಳಳ ಖುಷಿ ಇಮ್ಮಡಿಯಾಗುತ್ತದೆ.
ಇದನ್ನೂ ಓದಿ | Valentines Day: ವೈಟ್‌ಡೇಯಿಂದ ಸಾಮೂಹಿಕ ವಿವಾಹದವರೆಗೆ; ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್ ಡೇಯನ್ನು ಹೇಗೆಲ್ಲಾ ಆಚರಿಸ್ತಾರೆ ನೋಡಿ
ಮಕ್ಕಳೊಂದಿಗೆ ಅಪ್ಪ ಅಮ್ಮ ಇರಬೇಕು ಎನ್ನುವುದಕ್ಕೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಒಂದು ಸಾಕು. ಸತತ ವಿಫಲವಾಗುತ್ತಿದ್ದ ತನ್ನ ಮಗಳನ್ನು, ತಂದೆ ಬಂದು ಗೆಲ್ಲಿಸುತ್ತಾರೆ. ಇದು ಅಪ್ಪನ ಜವಾಬ್ದಾರಿ. ಅಪ್ಪ ಮಾಡಿದ ಆ ಒಂದು ಸಣ್ಣ ನೆರವಿಂದ ಮಗಳು ಖುಷಿಯ ಅಲೆಯಲ್ಲಿ ತೇಲುತ್ತಾಳೆ. ತಾನು ಭಾರಿ ಸಾಧನೆ ಮಾಡಿದೆ ಎಂಬ ಆತ್ಮವಿಶ್ವಾಸ ಆ ಮಗುವಿನಲ್ಲಿ ಬೆಳೆಯುತ್ತದೆ.
ಇದನ್ನೂ ಓದಿ | Valentine Day 2024: ವ್ಯಾಲೆಂಟೈನ್ ಡೇ ಪಾರ್ಟಿಗೆ ಹೋಗ್ತಿದ್ದೀರಾ; ಎಲ್ಲರ ನಡುವೆ ಆಕರ್ಷಕವಾಗಿ ಕಾಣಲು ಈ ಮೇಕಪ್ ಟಿಪ್ಸ್ ಬಳಸಿ
ಈ ಪುಟ್ಟ ಬಾಲಕಿಯೊಬ್ಬಳು ಎಕ್ಸೈಸ್ ರಿಂಗ್ (ಹುಲಾ ಹೂಪ್ ರಿಂಗ್) ಅನ್ನು ಸೊಂಟದ ಭಾಗಕ್ಕೆ ಹಾಕಿಕೊಂಡು ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡಲು ನೋಡುತ್ತಾಳೆ. ಆದರೆ ಸತತ ಪ್ರಯತ್ನಗಳಲ್ಲೂ ಅದು ಕೆಳಗೆ ಬೀಳುತ್ತದೆ. ಬಾಲಕಿಯ ಜೊತೆಗಿರುವ ಇತರ ಮಕ್ಕಳು, ಅದೇ ರಿಂಗ್ ಅನ್ನು ಯಶಸ್ವಿಯಾಗಿ ತಿರುಗಿಸುತ್ತಾರೆ. ಆದರೆ, ತನ್ನ ವೈಫಲ್ಯದಿಂದಾಗಿ ಈ ಬಾಲಕಿಗೆ ಬೇಸರವಾಗುತ್ತದೆ.
ಮಗಳ ವೈಫಲ್ಯವನ್ನೇ ಮರೆಮಾಚಿದ ಅಪ್ಪ
ಮಗಳು ಸತತ ಪ್ರಯತ್ನದಲ್ಲಿ ವಿಫಲವಾಗುತ್ತಿದ್ದುದನ್ನೂ ಮರೆಯಲ್ಲಿ ನಿಂತು ವೀಕ್ಷಿಸಿದ ಅಪ್ಪ, ಅವಳಿಗೆ ಗೊತ್ತಾಗದಂತೆ ನೆರವಿಗೆ ಧಾವಿಸುತ್ತಾರೆ. ಹಿಂದಿನಿಂದ ಬಂದು ಎಕ್ಸೈಸ್ ರಿಂಗ್ ಅನ್ನು ಹಿಡಿದುಕೊಂಡು ತಿರುಗಿಸುತ್ತಾರೆ. ಆಗ ಆ ಬಾಲಕಿ ತನ್ನ ಪ್ರಯತ್ನದಿಂದಲೇ ರಿಂಗ್ ತಿರುಗುತ್ತಿದೆ ಎಂದು ಖಷಿಯಾಗುತ್ತಾಳೆ. ಇದನ್ನು ನೋಡಿದ ಬಾಲಕಿ ಸಹಪಾಠಿಗಳು ಕೂಡಾ ಖುಷಿಯಾಗುತ್ತಾರೆ. ಮಗಳ ಗೆಲುವನ್ನು ಅಪ್ಪ ಕೂಡಾ ಸಂಭ್ರಮಿಸ್ತಾರೆ.
ಮಕ್ಕಳು ವಿಫಲರಾದಾಗ ಅವರನ್ನು ಬೈಯುವ ಬದಲಿಗೆ ತಿದ್ದುವ ಪ್ರಯತ್ನ ಮಾಡಬೇಕು. ಮಕ್ಕಳು ತಮ್ಮ ಸಾಮರ್ಥ್ಯ ಮೀರಿದ ಕಲಿಕೆಗೆ ಹೋದಾಗ, ವಿಫಲರಾಗುವ ಸಾಧ್ಯತೆ ಹೆಚ್ಚು. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ನೋವಾಗುತ್ತದೆ. ಆಗ ಆ ಮಕ್ಕಳಿಗೆ ತಾತ್ಕಾಲಿಕ ಖುಷಿ ನೀಡುವುದು ಹೆತ್ತವರ ಜವಾಬ್ದಾರಿ.
(This copy first appeared in Hindustan Times Kannada website. To read more like this please logon to kannada.hindustantimes.com)