ಡಯಾಬಿಟಿಸ್ ಕಂಟ್ರೋಲ್‌ಗೆ ಬರ್ತಾ ಇಲ್ವಾ? ಈ ಪಾನೀಯಗಳನ್ನು ಕುಡಿದು ನೋಡಿ; ಮಧುಮೇಹಕ್ಕೆ ಇವು ರಾಮಬಾಣ
Oct 10, 2024 07:10 PM IST
ಡಯಾಬಿಟಿಸ್ ಕಂಟ್ರೋಲ್‌ಗೆ ಬರ್ತಾ ಇಲ್ವ? ಈ ಪಾನೀಯಗಳನ್ನು ಕುಡಿದು ನೋಡಿ; ಡಯಾಬಿಟಿಸ್‌ಗೆ ಇವು ರಾಮಬಾಣ
- ಡಯಾಬಿಟಿಸ್ ಅಥವಾ ಮಧುಮೇಹ ಇದು ದೀರ್ಘಕಾಲದ ರೋಗಗಳ ಸಾಲಿಗೆ ಸೇರಿದೆ. ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲವಾದರೂ ಉತ್ತಮ ಆಹಾರ ಮತ್ತು ಜೀವನಶೈಲಿಯಿಂದ ನಿಯಂತ್ರಿಸಬಹುದಾಗಿದೆ. ಕೆಲವು ಪಾನೀಯಗಳು ಡಯಾಬಿಟಿಸ್ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಅವುಗಳು ಯಾವುವು ಇಲ್ಲಿದೆ ಓದಿ.
ನಿಮಗೆ ಡಯಾಬಿಟಿಸ್ ಇದ್ದರೂ ಅಥವಾ ಇಲ್ಲದಿದ್ದರೂ ಉತ್ತಮ ಆಹಾರ ಹಾಗೂ ಜೀವನಶೈಲಿ ರೂಢಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಮುಖ್ಯವಾಗಿದೆ. ಒಂದುವೇಳೆ ನೀವು ಡಯಾಬಿಟಿಸ್‌ನಿಂದ ಬಳಲುತ್ತಿದ್ದರೆ ಆಗ ಹೆಚ್ಚು ಕಾಳಜಿವಹಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಡಯಾಬಿಟಿಸ್ ಹೊಂದಿರುವರು ತಮ್ಮ ಆಹಾರದಲ್ಲಿ ತರಕಾರಿ, ಹಣ್ಣು, ಬೇಳೆಕಾಳು, ಕಡಿಮೆ ಕೊಬ್ಬು ಹೊಂದಿರುವ ಡೈರಿ ಉತ್ಪನ್ನಗಳನ್ನು ಸೇರಿಸಿಕೊಳ್ಳುವುದು ಮುಖ್ಯವಾಗಿದೆ. ಇದರ ಜೊತೆಗೆ ಸಿಹಿ ತಿನಿಸು ಹಾಗೂ ರೆಡ್ ಮೀಟ್‌ಗಳಿಂದ ದೂರವಿರುವುದು ಉತ್ತಮವಾಗಿದೆ. ಡಯಾಬಿಟಿಸ್‌ನಿಂದ ಬಳಲುತ್ತಿರುವವರು ಪ್ರತಿದಿನವನ್ನು ಆರೋಗ್ಯಕರ ಅಭ್ಯಾಸಗಳಿಂದ ಪ್ರಾರಂಭಿಸಿದರೆ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಸುಲಭದ ಕೆಲಸವಾಗಿದೆ. ದೀರ್ಘಕಾಲದ ರೋಗಗಳ ಸಾಲಿಗೆ ಸೇರಿರುವ ಡಯಾಬಿಟಿಸ್ ನಿರ್ವಹಣೆ ಮಾಡಲು ಕೆಲವು ಪಾನೀಯಗಳು ಸಹಾಯ ಮಾಡುತ್ತವೆ. ಹಾಗಾದರೆ ಯಾವ ಪಾನೀಯಗಳು ಡಯಾಬಿಟಿಸ್ ನಿರ್ವಹಣೆ ಮಾಡಲು ಸಹಾಯಮಾಡುತ್ತವೆ ಇಲ್ಲಿದೆ ಓದಿ.
ಡಯಾಬಿಟಿಸ್‌ಗೆ ಬೆಸ್ಟ್ ಈ ಪಾನೀಯಗಳು
ಬಿಸಿ ನೀರು ಮತ್ತು ನಿಂಬೆ ರಸ: ಒಂದು ಲೋಟ ಬಿಸಿ ನೀರಿಗೆ ಕೆಲವು ಹನಿ ನಿಂಬೆ ರಸ ಸೇರಿಸಿ ಕುಡಿಯುವುದರ ಮೂಲಕ ದಿನ ಪ್ರಾರಂಭಿಸಬಹುದು. ಇದು ದೇಹದಲ್ಲಿರುವ ಟಾಕ್ಸಿನ್ ಹೊರಹಾಕಲು ಸಹಾಯ ಮಾಡುತ್ತದೆ. ತೂಕ ನಿರ್ವಹಣೆಗೆ ಉತ್ತಮವಾದ ಈ ಪಾನೀಯ ಡಯಾಬಿಟಿಸ್ ಹೊಂದಿದವರಿಗೆ ಉತ್ತಮ.
ದಾಲ್ಚಿನ್ನಿ ಚಹಾ: ದಾಲ್ಚಿನ್ನಿ ರಕ್ತದಲ್ಲಿನ ಇನ್ಸುಲಿನ್ ಅನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ದಾಲ್ಚಿನ್ನಿ ಸಹಾಯ ಮಾಡುತ್ತದೆ. ಹಾಗಾಗಿ ಅದರಿಂದ ಚಹಾ ತಯಾರಿಸಿ ಕುಡಿಯಿರಿ.
ಹಾಗಲಕಾಯಿ ರಸ: ಹಾಗಲಕಾಯಿ ಕಹಿ ಗುಣವನ್ನು ಹೊಂದಿರುವ ತರಕಾರಿ. ಹಾಗಾಗಿ ಇದನ್ನು ಡಯಾಟಿಸ್‌ಗೆ ಉತ್ತಮವೆಂದು ಹೇಳಲಾಗುತ್ತದೆ. ಇದು ಇನ್ಸುಲಿನ್‌ನ ಕೆಲಸವನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮ ಮಾಡುತ್ತದೆ. ಹಾಗಲಕಾಯಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೆಚ್ಚಿನ ಪರಿಣಾಮ ಗುರುತಿಸಬಹುದಾಗಿದೆ.
ಮೆಂತ್ಯ ನೀರು: ಮೆಂತ್ಯದಲ್ಲಿ ಕರಗುವ ಫೈಬರ್‌ಗಳು ಹೇರಳವಾಗಿವೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೆಂತ್ಯದ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ ಆ ನೀರನ್ನು ಕುಡಿಯಿರಿ.
ನೆಲ್ಲಿಕಾಯಿ ರಸ: ನೆಲ್ಲಿಕಾಯಿಯು ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಹಣ್ಣಾಗಿದೆ. ಆಮ್ಲಾ ಎಂದೂ ಕರೆಯಲ್ಪಡುವ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ನೆಲ್ಲಿಕಾಯಿ ರಸವು ಮಧುಮೇಹಿಗಳಿಗೆ ಉತ್ತಮವಾಗಿದೆ.
ಅಲೋವೆರಾ ಜ್ಯೂಸ್: ಅಲೋವೆರಾ ತ್ವಚೆ ಮತ್ತು ಗಾಯಗಳಿಗೆ ಅದ್ಭುತವಾಗಿದೆ. ಇದು ರಕ್ತದಲ್ಲಿನ ಗ್ಲುಕೋಸ್ ಅನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ.
ತುಳಸಿ ಚಹಾ: ತುಳಸಿ ಎಲೆಗಳು ಮಧುಮೇಹ ತಡೆಯುವ ಗುಣಲಕ್ಷಣ ಹೊಂದಿದೆ. ತಾಜಾ ತುಳಸಿ ಎಲೆಗಳಿಂದ ತಯಾರಿಸಿದ ಚಹಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪಿನ ಸ್ಮೂಥಿ: ಪಾಲಕ್ ಸೊಪ್ಪುನಿಂದ ತಯಾರಿಸಿದ ಸ್ಮೂಥಿ ನಾರಿನಾಂಶ ಮತ್ತು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಇದು ಸದಾ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ.
ಈ ಪಾನೀಯಗಳನ್ನು ಕುಡಿಯಲು ಬೆಸ್ಟ್ ಸಮಯ ಯಾವುದು?
ಸಾಮಾನ್ಯವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಕುಡಿದರೆ ಪರಿಣಾಮ ಅಧಿಕವಾಗಿರುತ್ತದೆ. ಏಕೆಂದರೆ ಹೊಟ್ಟೆಯಲ್ಲಿ ಬೇರೆ ಯಾವುದೇ ಆಹಾರಗಳಿಲ್ಲದಿರುವುದರಿಂದ ಈ ಪಾನಿಯಗಳನ್ನು ಸುಲಭವಾಗಿ ಹೀರಿಕೊಳ್ಳಬಹುದಾಗಿದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.
ಡಯಾಬಿಟಿಸ್ ಇದ್ದವರು ಯಾವುದರಿಂದ ದೂರವಿರಬೇಕು?
ಡಯಾಬಿಟಿಸ್ ಹೊಂದಿದವರು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸುವಂತಹ ಆಹಾರಗಳಿಂದ ದೂರವಿರಬೇಕು. ಏಕೆಂದರೆ ಸ್ವಲ್ಪ ಪ್ರಮಾಣ ಸಕ್ಕರೆ ಸೇವಿಸಿದರೂ ಸಹ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆಯಾಗುತ್ತದೆ. ಮದ್ಯಪಾನ, ಎನರ್ಜಿ ಡ್ರಿಂಕ್ಸ್ ಹಾಗೂ ಸಿಹಿ ಪ್ರಮಾಣ ಹೆಚ್ಚಿರುವ ಕಾಫಿ, ಟೀಗಳಿಂದ ಡಯಾಬಿಟಿಸ್‌ನವರು ದೂರವಿರುವುದು ಉತ್ತಮ.