Dry Fruits: ಆಯುರ್ವೇದದ ಪ್ರಕಾರ ಬಾದಾಮಿ, ವಾಲ್‌ನಟ್ಸ್‌ನಂತ ಡ್ರೈ ಫ್ರೂಟ್‌ಗಳನ್ನು ಯಾರು, ಯಾವ ಸಮಯದಲ್ಲಿ ತಿನ್ನಬೇಕು
Dec 21, 2023 04:28 PM IST
ವಾತ ದೋಷ, ಪಿತ್ರ ದೋಷ, ಕಫಾ ದೋಷವಿರುವವರು ಆಯಾ ಸಮಸ್ಯೆಗೆ ತಕ್ಕಂತ ಡ್ರೈ ಫ್ರೂಟ್ಸ್ ತಿನ್ನಬೇಕು
Dry Fruits: ಆಯುರ್ವೇದದ ಪ್ರಕಾರ ನಮಗಿರುವ ದೋಷದ ಪ್ರಕಾರ ಡ್ರೈ ಫ್ರೂಟ್‌ಗಳನ್ನು ಸೇವಿಸಬೇಕು. ವಾತ ದೋಷ, ಪಿತ್ರ ದೋಷ, ಕಫಾ ದೋಷವಿರುವವರು ಆಯಾ ಸಮಸ್ಯೆಗೆ ತಕ್ಕಂತ ಡ್ರೈ ಫ್ರೂಟ್ಸ್ ತಿನ್ನಬೇಕು.
Dry Fruits: ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದ ವಿಚಾರ. ಆದರೆ ಆಯುರ್ವೇದದ ಪ್ರಕಾರ ಅದನ್ನು ಸೇವಿಸಲು ನಿರ್ದಿಷ್ಟ ಸಮಯ ಹಾಗೂ ವಿಧಾನವಿದೆ. ಸುಮಾರು 5 ಸಾವಿರ ವರ್ಷಗಳ ಹಿಂದಿನ ಆಯುರ್ವೇದ ಇಂದಿಗೂ ಅಸ್ವಿತ್ವದಲ್ಲಿದೆ. ಹೋಮಿಯೋಪತಿ, ಅಲೋಪತಿ ವೈದ್ಯಕೀಯ ಪದ್ಧತಿಗಳ ನಡುವೆ ಅನೇಕ ಜನರು ಇಂದಿಗೂ ಆಯುರ್ವೇದ ಬಳಸುತ್ತಿದ್ದಾರೆ.
ಆಯುರ್ವೇದದ ಪ್ರಕಾರ ಡ್ರೈ ಫ್ರೂಟ್‌ಗಳನ್ನು ಯಾವ ಸಮಯದಲ್ಲಿ ಹಾಗೂ ಹೇಗೆ ತಿನ್ನಬೇಕೆಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ. ಆಯುರ್ವೇದಲ್ಲಿ ಹೇಳಿರುವಂತೆ ನಿಮಗಿರುವ ದೋಷದ ಪ್ರಕಾರ ಯಾವ ಡ್ರೈ ಫ್ರೂಟ್‌ಗಳನ್ನು ತಿನ್ನಬೇಕೆಂದು ಆರಿಸಿಕೊಳ್ಳಬೇಕು. ಅಂದರೆ, ವಾತ, ಪಿತ್ತ ಮತ್ತು ಕಫ, ಈ ಸಮಸ್ಯೆಗಳು ಯಾರಿಗೆ ಇರಲಿದೆಯೋ ಅದಕ್ಕೆ ಅನುಸಾರವಾಗಿ ಡ್ರೈ ಫ್ರೂಟ್‌ಗಳನ್ನು ಸೇವಿಸಬೇಕು.
ವಾತ ದೋಷ
ವಾತ ದೋಷ ಗಾಳಿಗೆ ಸಂಬಂಧಿಸಿದೆ, ಇದರಲ್ಲಿ ಪ್ರಾಣವಾಯು, ಸಮಾನವಾಯು, ವ್ಯಾನವಾಯು, ಉದಾನವಾಯು, ಅಪಾನವಾಯು ಎಂಬ 5 ಉಪದೋಷಗಳಿವೆ. ವಾತ ದೋಷವು ಮನಸ್ಸು ಮತ್ತು ದೇಹದ ಎಲ್ಲಾ ಚಲನೆಗಳನ್ನು ನಿರ್ವಹಿಸುತ್ತದೆ. ರಕ್ತದ ಹರಿವು, ತ್ಯಾಜ್ಯಗಳ ಸ್ಥಳಾಂತರಿಸುವಿಕೆ, ಉಸಿರಾಟ ಮತ್ತು ಮೆದುಳಿನ ಆಲೋಚನೆಗಳ ಚಲನೆಯನ್ನು ನಿಯಂತ್ರಿಸುತ್ತದೆ. ಆದ್ದರಿಂದ ನೀವು ವಾತ ಸಮಸ್ಯೆಯಿಂದ ಬಳಲುತ್ತಿದ್ದರೆ ಆ ಸಮಸ್ಯೆಯನ್ನು ನಿಯಂತ್ರಿಸಬಲ್ಲ ವಾಲ್‌ನಟ್ಸ್ ಮತ್ತು ಬಾದಾಮಿಗಳಂತಹ ಡ್ರೈ ಫ್ರೂಟ್‌ಗಳನ್ನು ಆರಿಸಿಕೊಳ್ಳಬೇಕು.
ಪಿತ್ತ ದೋಷ
ಪಿತ್ತ ದೋಷವು ಬೆಂಕಿ ಮತ್ತು ನೀರು ಸೇರಿ ಎರಡು ಅಂಶಗಳಿಂದ ಮಾಡಲ್ಪಟ್ಟಿದೆ. ಪಿತ್ತದೋಷದಿಂದ ದೇಹದಲ್ಲಿ ಹಾರ್ಮೋನುಗಳು ಮತ್ತು ಕಿಣ್ವಗಳು ನಿಯಂತ್ರಣದಲ್ಲಿರುತ್ತದೆ. ಇದರಿಂದ ದೇಹದ ಉಷ್ಣತೆ, ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಪಿತ್ತರಸವು ದೇಹದಲ್ಲಿ ಹೊಟ್ಟೆ ಮತ್ತು ಸಣ್ಣ ಕರುಳಿನಲ್ಲಿದೆ.
ಪಿತ್ತ ದೋಷ ನಿಯಂತ್ರಣದಲ್ಲಿರದಿದ್ದರೆ ಮಲಬದ್ಧತೆ, ಅಜೀರ್ಣ, ಆ್ಯಸಿಡಿಟಿ ಮುಂತಾದ ಉದರ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಪಿತ್ತ ದೋಷ ಇರುವವರಿಗೆ ಖರ್ಜೂರ, ಒಣದ್ರಾಕ್ಷಿಗಳಂತಹ ದೇಹವನ್ನು ತಂಪಾಗಿಸುವ ಡ್ರೈ ಫ್ರೂಟ್‌ಗಳು ಹೆಚ್ಚು ಪ್ರಯೋಜನಾಕಾರಿ.
ಕಫ ದೋಷ
ಕಫ ದೋಷವು ಕಫಾ, ಮಣ್ಣು ಮತ್ತು ನೀರಿನ ಗುಣಲಕ್ಷಣಗಳಿಗೆ ಸಂಬಂಧಿಸಿದೆ. ಕಫ ದೋಷದಿಂದ ಮಲಬದ್ಧತೆ, ತೂಕ ಹೆಚ್ಚಾಗುವುದು ಮತ್ತು ಜೀರ್ಣಕ್ರಿಯೆಗೆ ಸಮಸ್ಯೆ ಆಗಬಹುದು. ಇಂತವರು ಚಳಿಗಾಲದಲ್ಲಿ ಹೆಚ್ಚು ಸಮಸ್ಯೆಗೆ ಒಳಗಾಗುತ್ತಾರೆ. ಸಿಹಿ, ಹುಳಿ, ಖಾರ, ಡೈರಿ ಉತ್ಪನ್ನಗಳ ಸೇವನೆ, ಅಸಮಪರ್ಕ ಜೀವನಶೈಲಿಯಿಂದ ಈ ದೋಷ ಹೆಚ್ಚಾಗುತ್ತದೆ. ಇದರಿಂದ ಉಸಿರಾಟ, ಜೀರ್ಣಾಂಗ ವ್ಯವಸ್ಥೆ ಮತ್ತು ಕೀಲುಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತದೆ. ಕಫ ದೋಷ ಇರುವವರು ಒಣಗಿದ ಅಂಜೂರದ ಹಣ್ಣುಗಳು ಮತ್ತು ಏಪ್ರಿಕಾಟ್‌ಗಳನ್ನು ತಿನ್ನಬಹುದು.
ಯಾವ ಸಮಯದಲ್ಲಿ ಸೇವಿಸಬೇಕು?
ಸಾಮಾನ್ಯವಾಗಿ ಬೆಳಗಿನ ಜಾವ ನೀವು ಡ್ರೈ ಫ್ರೂಟ್ಸ್ ಸೇವಿಸಿದರೆ ಒಳ್ಳೆಯದು. ರಾತ್ರಿಯಿಡೀ ನೆನೆಸಿದ ಒಣದ್ರಾಕ್ಷಿ, ವಾಲ್‌ನಟ್ಸ್ ಅಥವಾ ಬಾದಾಮಿಯನ್ನು ಬೆಳಗಿನ ಜಾವ ಸೇವಿಸಬಹುದು. ಊಟದ ಸಮಯದಲ್ಲೂ ಒಣಹಣ್ಣುಗಳನ್ನು ಸೇವಿಸಬಹುದು. ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾತ್ರಕ್ಕೆ ಅತಿಯಾಗಿ ತಿನ್ನದೆ ಮಿತವಾಗಿ ಸೇವಿಸಿ.