ಏಷ್ಯಾದಿಂದ ಯುರೋಪ್ಗೆ ಕೇವಲ 47 ನಿಮಿಷಗಳಲ್ಲಿ ಹಗ್ಗದ ಮೇಲೆ ನಡೆದ ವೀರ; ವೈರಲ್ ಆಯ್ತು ವಿಡಿಯೋ
Sep 18, 2024 02:07 PM IST
ಪ್ರಾತಿನಿಧಿಕ ಚಿತ್ರ
- ವೈರಲ್ ವಿಡಿಯೋ: ಮನುಷ್ಯ ಮನಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತದೆ. ಈ ಜಗತ್ತಿನಲ್ಲಿ ಅನೇಕ ಅಪಾಯಕಾರಿ ಸಾಹಸಗಳನ್ನೂ ಮಾನವ ಮಾಡಿದ್ದಾನೆ ಅದೇ ರೀತಿ ಏಷ್ಯಾದಿಂದ ಯುರೋಪ್ಗೆ ಕೇವಲ 47 ನಿಮಿಷಗಳಲ್ಲಿ ಹಗ್ಗದ ಮೇಲೆ ಜಾನ್ ರೂಸ್ ನಡೆದಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.
ಮನುಷ್ಯರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಈ ಜಗತ್ತಿನಲ್ಲಿ ಅನೇಕ ಅಪಾಯಕಾರಿ ಸಾಹಸ ಕ್ರೀಡೆಗಳಿವೆ. ಸ್ಲಾಕ್ಲೈನಿಂಗ್ ಅಂತಹ ಕ್ರೀಡೆಗಳಲ್ಲಿ ಒಂದಾಗಿದೆ. ಹೀಗೆಂದರೆ ನೀವು ಒಂದು ತೆಳುವಾದ ಹಗ್ಗದ ಮೇಲೆ ತುಂಬಾ ಎತ್ತರದಲ್ಲಿ ನಡೆಯುವ ಒಂದು ಚಟುವಟಿಕೆ. ಇದನ್ನು ಮಾಡುವುದು ತುಂಬಾ ಅಪಾಯಕಾರಿ. ಸಾಹಸಿಗಳು ಮಾತ್ರ ಇದನ್ನು ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ಎಷ್ಟು ಬ್ಯಾಲೆನ್ಸ್‌ಬೇಕು ಎಂದರೆ. ಆ ಒಂದು ಮೂರು, ನಾಲ್ಕು ಇಂಚುಗಳ ಹಗ್ಗದ ಮೇಲೆ ನೀವು ನಡೆಯುವಷ್ಟು ತಾಳ್ಮೆ, ಏಕಾಗ್ರತೆ ಮತ್ತು ಆ ಮಟ್ಟಿಗಿನ ಧೈರ್ಯದ ಅಗತ್ಯತೆ ಇರುತ್ತದೆ. ಇಲ್ಲೊಬ್ಬ ಸಾಹಸಿ ಏನು ಮಾಡಿದ್ದಾನೆ ಗೊತ್ತಾ? ಏಷ್ಯಾದಿಂದ ಯುರೋಪ್ಗೆ ಕೇವಲ 47 ನಿಮಿಷಗಳಲ್ಲಿ ಹಗ್ಗದ ಮೇಲೆ ನಡೆದುಕೊಂಡು ಸಾಗಿದ್ಧಾನೆ. ಈ ಕುರಿತಾದ ವಿವರಣೆ ಇಲ್ಲಿದೆ.
ಈ ರೀತಿ ಅನೇಕ ಜನರು ಅನೇಕ ದಾಖಲೆಗಳನ್ನು ರಚಿಸಿದ್ದಾರೆ. ಆದರೆ ಎಸ್ಟೋನಿಯಾದ ಜಾನ್ ರೂಸ್ ಅವರೆಲ್ಲರಿಗಿಂತ ಅತ್ಯಂತ ಕಠಿಣ ಸಾಧನೆ ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದಾರೆ. ಈ ಸ್ಲಾಕ್ಲೈನರ್ ಬಿಗಿಹಗ್ಗದ ಮೇಲೆ ನಡೆದು ಸಾಧನೆ ಮಾಡಿದ್ದಾರೆ. ಎಲ್ಲರಿಗೂ ಇವರ ಸಾಧನೆ ನೋಡಿ ಅಚ್ಚರಿಯಾಗಿದೆ.
ಇನ್ನೊಂದಷ್ಟು ಜನ ರೆಕ್ಕೆ ಇದ್ದರೆ ಹಕ್ಕಿಯಾಗಿ ಹಾರಿ ಹೋಗಬಹುದಿತ್ತು. ಆದರೆ ಅದೂ ಬೇಡ ಎಂದು ಇವರು ಈ ರೀತಿ ಸಾಹಸ ಮಾಡಿದ್ದಾರಲ್ಲ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಅವರು ನಡೆದು ಸಾಗಿದ ವಿಡಿಯೋ ಯುಟ್ಯೂಬ್‌ನಲ್ಲಿ ಲಭ್ಯವಿದೆ ನಾವು ಅದನ್ನು ಈ ಕೆಳಗೆ ನೀಡಿದ್ದೇವೆ.
ಜಾನ್ ರೂಸ್ ನಡೆಯಬೇಕಿದ್ದ ಹಗ್ಗವನ್ನು ಜುಲೈ 15 ರಂದು ಇಸ್ತಾನ್‌ಬುಲ್‌ನಲ್ಲಿ ಹುತಾತ್ಮರ ಸೇತುವೆಯ ಮೇಲೆ ಕಟ್ಟಲಾಯಿತು. ರೂಸ್ ಏಷ್ಯಾ ಖಂಡದಿಂದ ನಡೆಯಲು ಆರಂಭಿಸಿದರಂತೆ. ಅಲ್ಲಿಂದ ನಡೆಯಲು ಆರಂಭಿಸಿ ಯುರೋಪ್ ಖಂಡವನ್ನು ತಲುಪಿದ್ದಾರೆ. ಏಷ್ಯಾ ಮತ್ತು ಯುರೋಪ್ ನಡುವಣ ಅತಿ ಎತ್ತರದ ಪ್ರದೇಶದಲ್ಲಿ ಇವರು ಹಗ್ಗ ಕಟ್ಟಿಕೊಂಡು ನಡೆದು ಸಾಗಿದ್ದಾರೆ. ಹಗ್ಗವನ್ನು ಬಾಸ್ಫರಸ್ ಜಲಸಂಧಿಯಿಂದ 165 ಮೀಟರ್ ಎತ್ತರದಲ್ಲಿ ಕಟ್ಟಲಾಗಿತ್ತು. ಎರಡು ದೊಡ್ಡ ಸಮುದ್ರಗಳನ್ನು ಸಂಪರ್ಕಿಸುವ ಕಿರಿದಾದ ಜಲಮಾರ್ಗ ಅಲ್ಲಿತ್ತು. ಇದರ ಉದ್ದ 1,074 ಮೀಟರ್.
ಇಲ್ಲಿದೆ ನೋಡಿ ವಿಡಿಯೋ
ಜಾನ್ ರೂಸ್ ಏಷ್ಯಾದಿಂದ ಯುರೋಪ್ಗೆ ಕೇವಲ 47 ನಿಮಿಷಗಳಲ್ಲಿ ನಡೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕಾಂಟಿನೆಂಟಲ್ ಪಾಸ್‌ನ ಭಾಗವಾಗಿರುವ ಈವೆಂಟ್ ಅನ್ನು ಟರ್ಕಿಯ ಸಾರಿಗೆ ಮತ್ತು ಮೂಲಸೌಕರ್ಯ ಸಚಿವಾಲಯ, ಹೆದ್ದಾರಿಗಳ ಜನರಲ್ ಡೈರೆಕ್ಟರೇಟ್ ಬೆಂಬಲಿತ್ತು. ಈ ಬಿಗಿಹಗ್ಗದಲ್ಲಿ ನಡೆಯುವುದು ಕಷ್ಟದ ಕೆಲಸ. ಜಾನ್ ರೂಸ್ ಈ ಸಾಧನೆಯೊಂದಿಗೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಜಾನ್ ರೌಸ್ ಒಳಗೊಂಡಿರುವ ವೀಡಿಯೊವನ್ನು USA ಟುಡೆ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದೆ. ಹಗ್ಗದ ಉದ್ದ. 1074 ಮೀಟರ್ ಆಗಿದೆ. ಇದರಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಯಾವ ರೀತಿ ನಿರ್ಧಾರ ಮಾಡಿ, ಏನೆಲ್ಲ ಪ್ರಯತ್ನಪಟ್ಟರು ಎಂದು ಇದರಲ್ಲಿ ತಿಳಿಸಲಾಗಿದೆ.
ವಿಭಾಗ