ಎಚ್‌ಎಂಡಿ ಸ್ಕೈಲೈನ್, ನೀವು ಮನೆಯಲ್ಲೇ ನಿಮ್ಮ ಸ್ಮಾರ್ಟ್‌ಫೋನ್ ರಿಪೇರಿ ಮಾಡಬಹುದು, ಹೇಗಂತಿರಾ, ಇಲ್ಲಿದೆ ವಿವರ
ಎಚ್‌ಎಂಡಿ ಸ್ಕೈಲೈನ್ ಎಂಬ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಬಿಡುಗಡೆ ಸಮಯದ ಆಫರ್ ದರ 35,999 ರೂಪಾಯಿ ಇದೆ. ಇದನ್ನು ಬಳಕೆದಾರರು ಮನೆಯಲ್ಲಿಯೇ ರಿಪೇರಿ ಮಾಡಬಹುದು. ಅಂದಹಾಗೆ, ಇದು 108 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿದೆ.
ಎಚ್‌ಎಂಡಿ ಅಂದ್ರೆ ಏನು ಎಂದು ಬಹುತೇಕರಿಗೆ ತಿಳಿದಿರಬಹುದು. ಎಚ್‌ಎಂಡಿ ಸ್ಕೈಲೈನ್ ಫೋನ್‌ಗಳು ದೇಶದಲ್ಲಿ ಜನಪ್ರಿಯತೆ ಪಡೆಯುತ್ತಿವೆ. ಎಚ್‌ಎಂಡಿ ವಿಸ್ತೃತ ರೂಪ: ಹ್ಯೂಮನ್ ಮೊಬೈಲ್ ಡಿವೈಸ್. ಇದೀಗ ಈ ಕಂಪನಿಯು ಎಚ್‌ಎಂಡಿ ಸ್ಕೈಲೈನ್ ಎಂಬ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಅಡ್ವಾನ್ಸಡ್ ಕ್ಯಾಮೆರಾ ಮತ್ತು ಸುಲಭವಾಗಿ ರಿಪೇರಿ ಮಾಡುವ ಫೀಚರ್ ಇದೆ. ಸೆಪ್ಟೆಂಬರ್ 17ರ ಮಧ್ಯರಾತ್ರಿಯಿಂದ ಎಚ್‌ಎಂಡಿ ಸ್ಕೈಲೈನ್ ಪ್ರಿ ಆರ್ಡರ್ ಆರಂಭವಾಗಿದೆ.
ಎಚ್‌ಎಂಡಿ ಸ್ಕೈಲೈನ್: ದರವೆಷ್ಟು?
ಬಿಡುಗಡೆ ಆಫರ್ ಆಗಿ ಎಚ್‌ಎಂಡಿ ಸ್ಕೈಲೈನ್ ಅನ್ನು ಕಂಪನಿಯು 35,999 ರೂಪಾಯಿಗೆ ಮಾರಾಟ ಮಾಡುತ್ತಿದೆ. ಈ ಖರೀದಿ ಜತೆ ವಿಶೇಷ ಆಫರ್ ಆಗಿ ಗ್ರಾಹಕರಿಗೆ 33 ವ್ಯಾಟ್‌ನ ಟೈಪ್ ಸಿ ಫಾಸ್ಟ್ ಚಾರ್ಜರ್ ದೊರಕಲಿದೆ.
ಎಷ್ಟು ಬಣ್ಣಗಳಲ್ಲಿ ದೊರಕುತ್ತದೆ?
ಎಚ್‌ಎಂಡಿ ಸ್ಕೈಲೈನ್ ಸ್ಮಾರ್ಟ್‌ಫೋನ್ ಎರಡು ಬಣ್ಣಗಳಲ್ಲಿ ದೊರಕುತ್ತದೆ. ಟ್ವಿಸ್ಟೆಡ್ ಬ್ಲ್ಯಾಕ್ ಮತ್ತು ನಿಯಾನ್ ಪಿಂಕ್ ಬಣ್ಣಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್.ಇನ್ ಮತ್ತು ಎಚ್‌ಎಂಡಿ.ಕಾಂನಲ್ಲಿ ಖರೀದಿಸಬಹುದು. ಭಾರತದ ಅಧಿಕೃತ ರಿಟೇಲ್ ಸ್ಟೋರ್‌ಗಳಲ್ಲಿಯೂ ಎಚ್‌ಎಂಡಿ ಸ್ಮಾರ್ಟ್‌ಫೋನ್ ಖರೀದಿಸಬಹುದು.
ಏನಿದು ರಿಪೇರಿ ವಿಷಯ?
ಎಚ್‌ಎಂಡಿ ಸ್ಕೈಲೈನ್‌ನಲ್ಲಿ ಜೆನ್2 ರಿಪೇರಿಬಿಲಿಟಿ ಫೀಚರ್ ಇದೆ. ತಮ್ಮ ಮನೆಯಲ್ಲಿಯೇ ಈ ಸ್ಮಾರ್ಟ್‌ಫೋನ್ ಅನ್ನು ಬಳಕೆದಾರರು ರಿಪೇರಿ ಮಾಡುವ ಅವಕಾಶ ನೀಡಲಾಗಿದೆ. ಇದರಲ್ಲಿ ಒಂದು ಸ್ಕ್ರೂ ಮೆಕಾನಿಸಂ ಇದ್ದು, ಬ್ಯಾಟರಿ ಮುಂತಾದ ಆಂತರಿಕ ಬಿಡಿಭಾಗಗಳನ್ನು ಕಳಚಿ ರಿಪೇರಿ ಮಾಡಬಹುದಾಗಿದೆ.
ಎಚ್‌ಎಂಡಿ ಸ್ಕೈಲೈನ್ ಫೀಚರ್‌ಗಳು
ಎಚ್‌ಎಂಡಿ ಸ್ಕೈಲೈನ್ ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಸೆಟಪ್ ಇದೆ. ಅಂದ್ರೆ, 108MP OIS ಪ್ರಾಥಮಿಕ ಕ್ಯಾಮೆರಾ, , 50MP ಟೆಲಿಫೋಟೋ ಲೆನ್ಸ್, 13MP ಅಲ್ಟ್ರಾ-ವೈಡ್ ಲೆನ್ಸ್ ಒಳಗೊಂಡ ತ್ರಿವಳಿ ಕ್ಯಾಮೆರಾ ಇದೆ. ಈ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 50 ಮೆಗಾಫಿಕ್ಸೆಲ್‌ನ ಆಟೋಫೋಕಸ್ ಸೆಲ್ಫಿ ಕ್ಯಾಮೆರಾ ಕೂಡ ಇದೆ. ಇದು ಇದು ಕ್ಯಾಪ್ಚರ್ ಫ್ಯೂಷನ್, 4ಎಕ್ಸ್ ಆಪ್ಟಿಕಲ್ ಜೂಮ್, ಸೆಲ್ಫಿ ಗೆಸ್ಚರ್ ಸೇರಿದಂತೆ ಹಲವು ಫೀಚರ್‌ಗಳನ್ನು ಒಳಗೊಂಡಿದೆ.
ಈ ಸ್ಮಾರ್ಟ್‌ಫೋನ್‌ನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 7ಎಸ್ ಜೆನ್ 2 ಚಿಪ್‌ಸೆಟ್ ಇದೆ. 12 ಜಿಬಿ ರಾಮ್ ಮತ್ತು 256 ಜಿಬಿ ಸ್ಟೋರೇಜ್ ಇದೆ. ಇದು 144 ಎಚ್‌ಝಡ್ ಪಿಓಲೆಡ್ ಪ್ಯಾನೆಲ್ ಹೊಂದಿದೆ. ಇದು ಎಚ್‌ಡಿಆರ್10 ಬೆಂಬಲಿತವಾಗಿದೆ. ಯಾವುದೇ ಕ್ಯೂ12 ಚಾರ್ಜರ್‌ನಲ್ಲಿ ವೈರ್‌ಲೆಸ್ ಆಗಿ ಚಾರ್ಜ್ ಮಾಡಬಹುದು. ಎರಡು ವರ್ಷ ಒಎಸ್ ಅಪ್‌ಗ್ರೇಡ್, 3 ವರ್ಷಗಳ ಸೆಕ್ಯುರಿಟಿ ಅಪ್‌ಗ್ರೇಡ್ ಅನ್ನು ನೀಡುತ್ತದೆ.
ಒಟ್ಟಾರೆ ಎಚ್‌ಎಂಡಿ ಸ್ಕೈಲೈನ್ ಕ್ಯಾಮೆರಾ ಬಹುತೇಕರಿಗೆ ಇಷ್ಟವಾಗುವಂತೆ ಇದೆ. ಅತ್ಯಧಿಕ ಮೆಗಾಫಿಕ್ಸೆಲ್ ಮತ್ತು ತಂತ್ರಜ್ಞಾನ ಇದರ ವಿಶೇಷತೆ. ಇದೇ ಸಮಯದಲ್ಲಿ ರಿಪೇರಿ ಮಾಡುವ ಸಾಮರ್ಥ್ಯ ಇರುವ ಕಾರಣ ಒಂದು ಸ್ಕ್ರೂ ಓಪನ್ ಮಾಡಿ ರಿಪೇರಿ ಮಾಡಬಹುದು.