logo
ಕನ್ನಡ ಸುದ್ದಿ  /  ಜೀವನಶೈಲಿ  /  ದಿನವಿಡೀ ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತೀರಾ: ಹಾಗಿದ್ದರೆ ಕುರ್ಚಿ ಸೂರ್ಯ ನಮಸ್ಕಾರ ಪ್ರಯತ್ನಿಸಿ, ಇದರ ಪ್ರಯೋಜನ ಹಲವು

ದಿನವಿಡೀ ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತೀರಾ: ಹಾಗಿದ್ದರೆ ಕುರ್ಚಿ ಸೂರ್ಯ ನಮಸ್ಕಾರ ಪ್ರಯತ್ನಿಸಿ, ಇದರ ಪ್ರಯೋಜನ ಹಲವು

Priyanka Gowda HT Kannada

Nov 13, 2024 09:45 AM IST

google News

ದಿನವಿಡೀ ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತೀರಾ: ಹಾಗಿದ್ದರೆ ಕುರ್ಚಿ ಸೂರ್ಯ ನಮಸ್ಕಾರ ಪ್ರಯತ್ನಿಸಿ, ಇದರ ಪ್ರಯೋಜನ ಹಲವು

  • ದಿನವಿಡೀ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಅಥವಾ ಕುಳಿತುಕೊಂಡೇ ಕೆಲಸ ಮಾಡುವವರು ಈ ಆಸನವನ್ನು ಮಾಡುವುದರಿಂದ ಪ್ರಯೋಜನವನ್ನು ಪಡೆಯಬಹುದು. ಈ ಭಂಗಿಯನ್ನು ಪ್ರಯತ್ನಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಕುರ್ಚಿಯಲ್ಲಿ ಕುಳಿತು ಸೂರ್ಯ ನಮಸ್ಕಾರ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.

ದಿನವಿಡೀ ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತೀರಾ: ಹಾಗಿದ್ದರೆ ಕುರ್ಚಿ ಸೂರ್ಯ ನಮಸ್ಕಾರ ಪ್ರಯತ್ನಿಸಿ, ಇದರ ಪ್ರಯೋಜನ ಹಲವು
ದಿನವಿಡೀ ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತೀರಾ: ಹಾಗಿದ್ದರೆ ಕುರ್ಚಿ ಸೂರ್ಯ ನಮಸ್ಕಾರ ಪ್ರಯತ್ನಿಸಿ, ಇದರ ಪ್ರಯೋಜನ ಹಲವು (PC: Canva)

ಸಂಸ್ಕೃತ ಭಾಷೆಯ ಯುಜ್ ಎಂಬ ಪದದಿಂದ ಯೋಗ ಎಂಬ ಶಬ್ಧ ಬಂದಿದೆ. ಪ್ರತಿದಿನ ಯೋಗಾಸನವನ್ನು ಅಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸಿಗೆ ಹಲವು ಪ್ರಯೋಜನಗಳಿವೆ. ಯೋಗದಲ್ಲಿ ಎಂಟು ವಿಭಿನ್ನ ಭಾಗಗಳಿದ್ದು, ಉತ್ತಮ ಆರೋಗ್ಯ ಹಾಗೂ ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹಲವಾರು ರೀತಿಯ ಯೋಗಾಸನಗಳಿದ್ದು, ಎಲ್ಲವೂ ಕೂಡ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಈ ಯೋಗಾಸನಗಳಲ್ಲಿ ಕುರ್ಚಿ ಸೂರ್ಯ ನಮಸ್ಕಾರ ಸಹ ಒಂದು. ದಿನವಿಡೀ ಕಂಪ್ಯೂಟರ್ ಮುಂದೆ ಅಥವಾ ಕುಳಿತುಕೊಂಡೇ ಇರುವವರೆ ಈ ಆಸನವನ್ನು ಮಾಡುವುದರಿಂದ ಪ್ರಯೋಜನವನ್ನು ಪಡೆಯಬಹುದು. ಸೂರ್ಯ ನಮಸ್ಕಾರ ಭಂಗಿಯನ್ನು ಮಾಡಿದಾಗ, ದೇಹವು ಸೂರ್ಯ ದೇವರನ್ನು ಪೂಜಿಸುವಂತೆಯೇ ಕಾಣುತ್ತದೆ. ಹೀಗಾಗಿ ಇದನ್ನು ಸೂರ್ಯ ನಮಸ್ಕಾರ ಎಂದು ಕರೆಯಲಾಗುತ್ತದೆ. ಈ ಆಸನವನ್ನು ಪ್ರಯತ್ನಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಕುರ್ಚಿಯಲ್ಲಿ ಕುಳಿತು ಸೂರ್ಯ ನಮಸ್ಕಾರ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.

ಕುರ್ಚಿಯಲ್ಲಿ ಕುಳಿತು ಸೂರ್ಯ ನಮಸ್ಕಾರ ಮಾಡುವುದು ಹೇಗೆ?

- ಈ ಭಂಗಿಯನ್ನು ಮೊದಲಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೂಲಕ ಪ್ರಾರಂಭಿಸಿ. ಕಾಲುಗಳನ್ನು ಒಟ್ಟಿಗೆ ಇರಿಸಿ. ಕೈಯನ್ನು ನಿಮ್ಮ ಎದೆಯ ಮುಂದೆ ಮಡಚಿ. ಕುತ್ತಿಗೆ ಮತ್ತು ಬೆನ್ನುಮೂಳೆಯನ್ನು ನೇರವಾಗಿರಿಸಿ.

- ದೀರ್ಘವಾಗಿ ಉಸಿರಾಡಿ. ಉಸಿರು ಬಿಡುವಾಗ, ತೋಳುಗಳನ್ನು ಭುಜಗಳ ಮೇಲೆ ಚಾಚಿ. ಉಸಿರಾಡುವಾಗ ಈ ಭಂಗಿಯನ್ನು ಹಿಡಿದಿಟ್ಟುಕೊಳ್ಳಿ.

- ನಿಮ್ಮ ತಲೆಯನ್ನು ಬಗ್ಗಿಸುವಾಗ ಉಸಿರನ್ನು ಬಿಡಿ. ನಂತರ ಮುಂದಕ್ಕೆ ಚಲಿಸಿ. ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸಿ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಇರಿಸಿ, ಕೆಳಗೆ ನೋಡಿ. ಕೆಲವು ಉಸಿರಾಟದವರೆಗೆ ಈ ಭಂಗಿಯನ್ನು ಹಿಡಿದಿಟ್ಟುಕೊಳ್ಳಿ.

- ಉಸಿರಾಡುತ್ತಾ, ನೇರವಾಗಿ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ನಿಮ್ಮ ಬಲಗಾಲನ್ನು ಮೇಲಕ್ಕೆತ್ತಿ ಮೊಣಕಾಲನ್ನು ಬಗ್ಗಿಸಿ. ಮೊಣಕಾಲನ್ನು ಎದೆಯ ಹತ್ತಿರ ತಂದು ಎರಡೂ ಕೈಗಳಿಂದ ಹಿಡಿದುಕೊಳ್ಳಿ. ಮೇಲಕ್ಕೆ ನೋಡುತ್ತಾ, ಕುತ್ತಿಗೆಯನ್ನು ಹಿಂದಕ್ಕೆ ಚಾಚಿ.

- ನಂತರ ಕುತ್ತಿಗೆಯನ್ನು ನಿಧಾನಕ್ಕೆ ಮುಂದಕ್ಕೆ ತನ್ನಿ. ಹಣೆಯ ಮೂಲಕ ಮೊಣಕಾಲನ್ನು ಸ್ಪರ್ಶಿಸಿ. ಕಾಲನ್ನು ಎದೆಗೆ ಹತ್ತಿರಕ್ಕೆ ತನ್ನಿ.

- ಕಾಲನ್ನು ನೆಲದ ಕಡೆಗೆ ಇಟ್ಟು, ಬೆನ್ನುಮೂಳೆಯನ್ನು ನೇರಗೊಳಿಸಿ. ನಂತರ ಕಾಲುಗಳನ್ನು ಮೇಲಕ್ಕೆತ್ತಿ, ನೆಲಕ್ಕೆ ಸಮಾನಾಂತರವಾಗಿ ಇರಿಸಿ. ನಂತರ ವಿಶ್ರಾಂತಿ ಪಡೆಯಿರಿ.

ಈ ಹಂತವನ್ನು ಪೂರ್ಣಗೊಳಿಸಿದಾಗ, ಕೊನೆಯ ಹಂತದಿಂದ ಮೊದಲ ಹಂತಕ್ಕೆ ಅವುಗಳನ್ನು ಪುನರಾವರ್ತಿಸಬಹುದು.

ಕುರ್ಚಿ ಸೂರ್ಯ ನಮಸ್ಕಾರದ ಆರೋಗ್ಯ ಪ್ರಯೋಜನಗಳು

ಸ್ನಾಯುಗಳನ್ನು ಬಲಪಡಿಸುತ್ತದೆ: ಈ ಭಂಗಿಯನ್ನು ಪ್ರಯತ್ನಿಸುವುದರಿಂದ ಕಾಲುಗಳು, ಬೆನ್ನುಮೂಳೆ ಮತ್ತು ತೋಳುಗಳ ಸ್ನಾಯುಗಳನ್ನು ಬಲಪಡಿಸುತ್ತದೆ. ಹೆಚ್ಚು ಅವಧಿಯವರೆಗೆ ಕುಳಿತುಕೊಂಡೇ ಕೆಲಸ ಮಾಡುವವರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ.

ಸುಧಾರಿತ ರಕ್ತಪರಿಚಲನೆ: ಈ ಭಂಗಿಯಲ್ಲಿ ಚಲನೆಗಳ ಹರಿವು ದೇಹದಾದ್ಯಂತ ರಕ್ತಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಉತ್ತಮವಾಗಿ ತಲುಪಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಕಾರಿಯಾಗಿದೆ.

ಒತ್ತಡ ನಿರ್ವಹಣೆ: ಸೂರ್ಯ ನಮಸ್ಕಾರದ ಈ ಬದಲಾವಣೆಯು ನಿಯಂತ್ರಿತ ಉಸಿರಾಟವನ್ನು ಒಳಗೊಂಡಿದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯ ಸುಧಾರಿಸುವಲ್ಲಿ ಸಹಕಾರಿ: ಈ ಭಂಗಿಯನ್ನು ಮಾಡುವುದರಿಂದ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ. ಕೀಲುಗಳನ್ನು ನಯಗೊಳಿಸಲು ಸಹಾಯ ಮಾಡುವ ಸೈನೋವಿಯಲ್ ದ್ರವದ ಉತ್ಪಾದನೆಗೆ ಸಹಾಯ ಮಾಡುತ್ತದೆ. ನಿಯಮಿತವಾಗಿ ಈ ಯೋಗಾಭ್ಯಾಸವನ್ನು ಮಾಡುವುದರಿಂದ ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ