logo
ಕನ್ನಡ ಸುದ್ದಿ  /  ಜೀವನಶೈಲಿ  /  Openai Chatgpt Whatsapp: ವಾಟ್ಸಪ್‌ನಲ್ಲಿ ಚಾಟ್‌ಜಿಪಿಟಿ ಉಚಿತವಾಗಿ ಬಳಸುವುದು ಹೇಗೆ? ಓಪನ್‌ಎಐಗೆ ಹಾಯ್‌ ಎಂದು ಮೆಸೆಜ್‌ ಮಾಡಿ

Openai Chatgpt Whatsapp: ವಾಟ್ಸಪ್‌ನಲ್ಲಿ ಚಾಟ್‌ಜಿಪಿಟಿ ಉಚಿತವಾಗಿ ಬಳಸುವುದು ಹೇಗೆ? ಓಪನ್‌ಎಐಗೆ ಹಾಯ್‌ ಎಂದು ಮೆಸೆಜ್‌ ಮಾಡಿ

Praveen Chandra B HT Kannada

Dec 19, 2024 05:47 PM IST

google News

ChatGPT on WhatsApp:: ವಾಟ್ಸಪ್‌ನಲ್ಲಿ ಚಾಟ್‌ಜಿಪಿಟಿ ಉಚಿತವಾಗಿ ಬಳಸುವುದು ಹೇಗೆ?

    • Openai Chatgpt Whatsapp: ಓಪನ್‌ಎಐಯು ಇದೀಗ ಚಾಟ್‌ಜಿಪಿಟಿಯನ್ನು ವಾಟ್ಸಪ್‌ ಮೆಸೆಂಜರ್‌ಗೆ ಪರಿಚಯಿಸಿದೆ. ಬಳಕೆದಾರರು ಈ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಜತೆ ಸ್ನೇಹಿತರಲ್ಲಿ ಚಾಟಿಂಗ್‌ ಮಾಡುವಂತೆ ಸಂವಹನ ನಡೆಸಬಹುದಾಗಿದೆ. ಇದನ್ನು ವಾಟ್ಸಪ್‌ನಲ್ಲಿ ಹೇಗೆ ಬಳಸಬೇಕೆಂಬ ಮಾಹಿತಿ ಇಲ್ಲಿದೆ.
ChatGPT on WhatsApp:: ವಾಟ್ಸಪ್‌ನಲ್ಲಿ ಚಾಟ್‌ಜಿಪಿಟಿ ಉಚಿತವಾಗಿ ಬಳಸುವುದು ಹೇಗೆ?
ChatGPT on WhatsApp:: ವಾಟ್ಸಪ್‌ನಲ್ಲಿ ಚಾಟ್‌ಜಿಪಿಟಿ ಉಚಿತವಾಗಿ ಬಳಸುವುದು ಹೇಗೆ?

Openai Chatgpt Whatsapp: ಓಪನ್‌ಎಐಯು ಇದೀಗ ಚಾಟ್‌ಜಿಪಿಟಿಯನ್ನು ವಾಟ್ಸಪ್‌ ಮೆಸೆಂಜರ್‌ಗೆ ಪರಿಚಯಿಸಿದೆ. ಬಳಕೆದಾರರು ಈ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಜತೆ ಸ್ನೇಹಿತರಲ್ಲಿ ಚಾಟಿಂಗ್‌ ಮಾಡುವಂತೆ ಸಂವಹನ ನಡೆಸಬಹುದಾಗಿದೆ. ಓಪನ್‌ಎಐನ 12 ದಿನಗಳ ಸರಣಿ ಕಾರ್ಯಕ್ರಮದಲ್ಲಿ ಈ ಕುರಿತು ಘೋಷಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಮುಖ ಅಪ್‌ಡೇಟ್‌ಗಳು ಮತ್ತು ಫೀಚರ್‌ಗಳನ್ನು ಈ ಸಂದರ್ಭದಲ್ಲಿ ಘೋಷಿಸಸಲಾಗಿದೆ. ಸೊರಾದಂತಹ ಟೂಲ್ಸ್‌ ಪರಿಚಯಿಸುವ ಸಮಯದಲ್ಲಿ ಓಪನ್‌ ಎಐಯು ಜಾಗತಿಕವಾಗಿ ಚಾಟ್‌ಜಿಪಿಟಿ ಚಾಟ್‌ ಅನ್ನು ಪರಿಚಯಿಸಿದೆ.

ವಾಟ್ಸಪ್‌ನಲ್ಲಿ ಚಾಟ್‌ಜಿಪಿಟಿ ಬಳಕೆ ಹೇಗೆ?

ವಾಟ್ಸಪ್‌ನಲ್ಲಿ ಓಪನ್‌ಎಐ ಚಾಟ್‌ಜಿಪಿಟಿ ಬಳಸಲು ಬಯಸುವವರು +1-1800-242-8478 ಸಂಖ್ಯೆಯನ್ನು ಸೇವ್‌ ಮಾಡಬೇಕು. ವಾಟ್ಸಪ್‌ನಲ್ಲಿಈ ಸಂಖ್ಯೆಯ ಕಾಂಟ್ಯಾಕ್ಟ್‌ ಜತೆ ಸ್ನೇಹಿತರಲ್ಲಿ ಮಾಡುವಂತೆ ಸಂವಹನ ನಡೆಸಬಹುದು. ಪ್ರಶ್ನೆಗಳನ್ನು ಕೇಳಬಹುದು. ಇದನ್ನು ಉಚಿತವಾಗಿ ಬಳಕೆ ಮಾಡಬಹುದು. ಕಡಿಮೆ ಇಂಟರ್‌ನೆಟ್‌ ಇರುವಲ್ಲಿಯೂ ಇದನ್ನು ಉತ್ತಮವಾಗಿ ಬಳಸಬಹುದು ಎಂದು ಎಐ ತಿಳಿಸಿದೆ.

ಈಗಾಗಲೇ ಜಗತ್ತಿನಾದ್ಯಂತ 270 ಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸಪ್‌ನಲ್ಲಿ ಓಪನ್‌ ಎಐಯನ್ನು ಪರಿಚಯಿಸಲಾಗಿದೆ. ಫೇಸ್‌ಬುಕ್‌ ಮೆಟಾ ಎಐ ಟೂಲ್‌ಗೆ ಸ್ಪರ್ಧೆ ಹೆಚ್ಚುತ್ತಿರುವ ಸಮಯದಲ್ಲಿ ವಾಟ್ಸಪ್‌ನಲ್ಲಿ ಓಪನ್‌ಎಐ ಪರಿಚಯಿಸಲಾಗಿದೆ. ವಾಟ್ಸಪ್‌ ಈಗಾಗಲೇ ಜಗತ್ತಿನ ನಾನಾ ಕಡೆಗಳಲ್ಲಿ ಜನಪ್ರಿಯತೆ ಪಡೆದಿದೆ. ಅತ್ಯಧಿಕ ವೇಗದ ಇಂಟರ್‌ನೆಟ್‌ ಇರುವಲ್ಲಿ ಮಾತ್ರವಲ್ಲದೆ ಕಡಿಮೆ ವೇಗದ ಇಂಟರ್‌ನೆಟ್‌ ಇರುವಲ್ಲಿಯೂ ವಾಟ್ಸಪ್‌ನ ಈ ಓಪನ್‌ಎಐ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದು ಕಂಪನಿ ತಿಳಿಸಿದೆ. "ಡೇಟಾ ಮಿತಿ ಇರುವ ಪ್ರದೇಶಗಳಲ್ಲಿನ ಜನರು ಕೂಡ ಈಗ ಎಐ ಪವರ್‌ನ ಅಸಿಸ್ಟೆನ್ಸ್‌ ಅನ್ನು ಬಳಸಬಹುದು. ಇದಕ್ಕಾಗಿ ಚಾಟ್‌ಜಿಪಿಟಿ ಆಪ್‌ನಂತೆ ಸಾಕಷ್ಟು ಇಂಟರ್‌ನೆಟ್‌ ಬಳಕೆಯಾಗದು" ಎಂದು ಓಪನ್‌ಎಐ ತಿಳಿಸಿದೆ.

ವಾಟ್ಸಪ್‌ನಲ್ಲಿರುವ ಚಾಟ್‌ಜಿಪಿಟಿಯು ಓಪನ್‌ಎಐನ ಜಿಪಿಟಿ 4ಒ ಮಿನಿ ಮಾಡೆಲ್‌ ( GPT-4o-mini model) ಅನ್ನು ಬಳಸುತ್ತದೆ. ಇದೇ ವರ್ಷನ್‌ ಉಚಿತ ಚಾಟ್‌ಜಿಪಿಟಿ ಆಪ್‌ನಲ್ಲಿಯೂ ಇದೆ. ಬಳಕೆದಾರರು ಎಐ ಜತೆಗೆ ವಾಟ್ಸಪ್‌ನಲ್ಲಿ ಚಾಟ್‌ ಮಾಡಬಹುದು. ಕ್ರಿಯೆಟಿವ್‌ ಬರವಣಿಗೆಗೆ ಸಹಾಯ ಪಡೆಯಬಹುದು. ಈ ವಾಕ್ಯವನ್ನು ಇನ್ನೂ ಚೆನ್ನಾಗಿ ಬರೆದುಕೊಡು ಎಂದು ಹೇಳಬಹುದು. ಪ್ರವಾಸ ಹೋಗಲು ಅಥವಾ ರೆಸಿಪಿ ಶಿಫಾರಸು ಕೇಳಬಹುದು. ಈಗಿನ ಸುದ್ದಿಗಳು ಅಥವಾ ಹೆಚ್ಚಿನ ವಿವರವನ್ನು ಪಡೆಯಬಹುದು. ಒಟ್ಟಾರೆ, ಉಚಿತ ಚಾಟ್‌ಜಿಪಿಟಿಯಲ್ಲಿ ಯಾವೆಲ್ಲ ಮಾಹಿತಿ ಪಡೆಯಬಹುದೋ ಅದೆಲ್ಲವನ್ನೂ ವಾಟ್ಸಪ್‌ ಮೂಲಕವೇ ಮಾಡಲು ಸಾಧ್ಯವಾಗಲಿದೆ.

ವಾಟ್ಸಪ್‌ನಲ್ಲಿ ಚಾಟ್‌ಜಿಪಿಟಿ ಬಳಸಲು ಈ ಮುಂದಿನ ಹಂತಗಳನ್ನು ಫಾಲೋ ಮಾಡಿ

  1. ಮೊದಲಿಗೆ ಮೊಬೈಲ್‌ನಲ್ಲಿ 1-800-242-8478 ಸಂಖ್ಯೆಯನ್ನು ಸೇವ್‌ ಮಾಡಿ. ಅದಕ್ಕೆ ಯಾವ ಹೆಸರಿನಿಂದ ಸೇವ್‌ ಮಾಡಬಹುದು. ಆದರೆ, ವಾಟ್ಸಪ್‌ನಲ್ಲಿ ಓಪನ್‌ಎಐ ಎಂದೇ ಕಾಣುತ್ತದೆ.
  2. ಸೇವ್‌ ಮಾಡಿದ ಬಳಿಕ ವಾಟ್ಸಪ್‌ಗೆ ಹೋಗಿ 1-800-242-8478 ಸಂಖ್ಯೆಯನ್ನು ಹುಡುಕಿ ಅಥವಾ ಓಪನ್‌ಎಐ ಎಂದು ಹುಡುಕಿದರೂ ದೊರಕುತ್ತದೆ.
  3. ಅಲ್ಲಿ ನಮ್ಮ ವಾಟ್ಸಪ್‌ನಲ್ಲಿ ಇತರರ ಕಾಂಟ್ಯಾಕ್ಟ್‌ ಕಾಣುವಂತೆ ಓಪನ್‌ಎಐ ಎಂಬ ಹೆಸರು ಕಾಣಿಸುತ್ತದೆ. ಅಲ್ಲ ನೀವು ಓಪನ್‌ಎಐ ಜತೆಗೆ ಚಾಟ್‌ ಮಾಡಬಹುದು. ಚಾಟ್‌ಜಿಪಿಟಿ ಜತೆ ಪ್ರಶ್ನೆಗಳನ್ನು ಕೇಳಬಹುದು. ಪ್ರಬಂಧ ಬರೆಯಲು ತಿಳಿಸಬಹುದು. ನೀವು ಬರೆದಿರುವುದನ್ನು ಇನ್ನಷ್ಟು ಚೆನ್ನಾಗಿ ಬರೆಯಲು ತಿಳಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಚಾಟ್‌ಜಿಪಿಟಿ ಉತ್ತರ ನೀಡಲಿದೆ.

ಇದನ್ನೂ ಓದಿ: ChatGPT Jobs: ಚಾಟ್‌ಜಿಪಿಟಿ ಕ್ಷೇತ್ರದಲ್ಲಿ ಬಹುಬೇಡಿಕೆಯ ಉದ್ಯೋಗಗಳಿವು, ಈ ಕೌಶಲ ಕಲಿಯಿರಿ ಕೈತುಂಬಾ ವೇತನ ಪಡೆಯಿರಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ