logo
ಕನ್ನಡ ಸುದ್ದಿ  /  ಜೀವನಶೈಲಿ  /  ಡಿಸೆಂಬರ್‌ನಲ್ಲಿ ಗೋವಾ ಟ್ರಿಪ್‌ ಹೋಗ್ಬೇಕು ಅಂತಿದ್ದೀರಾ, ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್ ಗಮನಿಸಿ; ಗೋಕರ್ಣ, ಜೋಗ್‌ಫಾಲ್ಸ್ ಕೂಡ ನೋಡಿ ಬರಬಹುದು

ಡಿಸೆಂಬರ್‌ನಲ್ಲಿ ಗೋವಾ ಟ್ರಿಪ್‌ ಹೋಗ್ಬೇಕು ಅಂತಿದ್ದೀರಾ, ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್ ಗಮನಿಸಿ; ಗೋಕರ್ಣ, ಜೋಗ್‌ಫಾಲ್ಸ್ ಕೂಡ ನೋಡಿ ಬರಬಹುದು

Reshma HT Kannada

Nov 21, 2024 12:58 PM IST

google News

ಕೆಎಸ್‌ಟಿಡಿಸಿ ಗೋವಾ ಟೂರ್ ಪ್ಯಾಕೇಜ್‌

    • ನೀವು ಬೆಂಗಳೂರಿನಲ್ಲಿದ್ದು ಗೋವಾ ಟ್ರಿಪ್ ಹೋಗಬೇಕು ಎನ್ನುವ ಕನಸು ಕಾಣ್ತಾ ಇದ್ದೀರಾ. ನಿಮಗಾಗಿ ಕೆಎಸ್‌ಟಿಡಿಸಿ ಸ್ಪೆಷಲ್ ಟೂರ್ ಪ್ಯಾಕೇಜ್ ಘೋಷಿಸಿದೆ. 4 ದಿನಗಳ ಈ ಪ್ಯಾಕೇಜ್‌ನಲ್ಲಿ ನೀವು ಗೋಕರ್ಣ ಹಾಗೂ ಜೋಗ್‌ಫಾಲ್ಸ್ ಕೂಡ ನೋಡಿ ಬರಬಹುದು. ಈ ಟೂರ್‌ ಪ್ಯಾಕೇಜ್‌ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಕೆಎಸ್‌ಟಿಡಿಸಿ ಗೋವಾ ಟೂರ್ ಪ್ಯಾಕೇಜ್‌
ಕೆಎಸ್‌ಟಿಡಿಸಿ ಗೋವಾ ಟೂರ್ ಪ್ಯಾಕೇಜ್‌

ಡಿಸೆಂಬರ್ ಬಂತು ರಜೆ ಎಲ್ಲಾ ಈ ತಿಂಗಳಲ್ಲಿ ಮುಗಿಸಿಲ್ಲ ಅಂದ್ರೆ ಲ್ಯಾಪ್ಸ್ ಆಗುತ್ತೆ, ಎಲ್ಲಾದ್ರೂ ಒಂದು 4 ದಿನ ಟ್ರಿಪ್‌ ಹೋಗಬೇಕು ಅಂತಿದ್ರೆ ನೀವು ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು. ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಿಗೂ ಕೆಎಸ್‌ಟಿಡಿಸಿ ಬಸ್ ಟೂರ್ ಪ್ಯಾಕೇಜ್‌ಗಳಿವೆ. ಇಂದಿನ ಲೇಖನದಲ್ಲಿ ಗೋವಾ ಟೂರ್ ಪ್ಯಾಕೇಜ್ ಕುರಿತ ವಿವರ ಇದೆ.

ಬೆಂಗಳೂರಲ್ಲಿ ಇರೋರಿಗೆ ಸಮುದ್ರ ತೀರದಲ್ಲಿ ಅಡ್ಡಾಡೋದು ಏನೋ ಒಂಥರಾ ಖುಷಿ ಕೊಡುತ್ತೆ. ಅದರಲ್ಲೂ ನೀವು ಗೋವಾ ಹೋಗ್ಬೇಕು ಅನ್ನೋ ಪ್ಲಾನ್‌ನಲ್ಲಿ ಇದ್ರೆ ಈ ಟೂರ್ ಪ್ಯಾಕೇಜ್ ನಿಮಗೆ ಖಂಡಿತ ಇಷ್ಟವಾಗುತ್ತದೆ.

4 ದಿನಗಳ ಈ ಟೂರ್‌ ಪ್ಯಾಕೇಜ್‌ನಲ್ಲಿ ಗೋವಾ ಸಮುದ್ರ ತೀರಗಳ ಅಂದವನ್ನು ಕಣ್ತುಂಬಿಕೊಳ್ಳುವುದು ಮಾತ್ರವಲ್ಲ, ಇದರ ಜೊತೆಗೆ ನೀವು ಗೋಕರ್ಣ, ವಿಶ್ವವಿಖ್ಯಾತ ಜೋಗ ಜಲಪಾತದ ಸೌಂದರ್ಯವನ್ನೂ ಸವಿದು ಬರಬಹುದು. ಇದಕ್ಕಾಗಿ ನಿಮಗೆ ಬೇಕಿರೋದು ಹಣ ಹಾಗೂ ಸಮಯ ಮಾತ್ರ.

ಬೀಚ್‌ ಹ್ಯಾಲಿಡೇಸ್‌ ಹೆಸರಿನ ಈ ಪ್ಯಾಕೇಜ್‌ನಲ್ಲಿ ಏನೆಲ್ಲಾ ಇರುತ್ತೆ, ಯಾವೆಲ್ಲಾ ಸ್ಥಳಗಳನ್ನೂ ನೋಡಬಹುದು, ದರ ಎಷ್ಟು, ಎಲ್ಲಿಂದ ಹೊರಡುವುದು ಎಂಬಿತ್ಯಾದಿ ವಿವರಗಳು ಇಲ್ಲಿವೆ ನೋಡಿ.

ಟೂರ್‌ ಪ್ಯಾಕೇಜ್ ವಿವರ

ಈ ಟೂರ್‌ ಪ್ಯಾಕೇಜ್ ಪ್ರತಿ ಗುರುವಾರ ಇರುತ್ತದೆ. ಅಕ್ಟೋಬರ್‌ನಿಂದ ಜನವರಿವರೆಗೆ ಈ ಪ್ಯಾಕೇಜ್ ಲಭ್ಯವಿರುತ್ತದೆ. ಏನೆಲ್ಲಾ ನೋಡಬಹುದು ಎಂಬದನ್ನು ನೋಡಿ.

ಮೊದಲ ದಿನ: ರಾತ್ರಿ 8 ಗಂಟೆಗೆ ಯಶವಂತಪುರ ಬಿಎಂಟಿಸಿ ಬಸ್‌ ನಿಲ್ದಾಣದಿಂದ ಹೊರಡುವುದು

ಎರಡನೇ ದಿನ: ಬೆಳಿಗ್ಗೆ 4.30ಕ್ಕೆ ಶಿವಮೊಗ್ಗದ ಸಾಗರ ತಲುಪುವುದು. ನಂತರ 6.30ರವರೆಗೆ ಫ್ರೆಶ್ ಆಗುವುದು. 7 ರಿಂದ 8.30ರವರೆಗೆ ಜೋಗ ಜಲಪಾತ ನೋಡುವುದು. 8.30ಕ್ಕೆ ಜೋಗದಿಂದ ಹೊರಟು 11.30 ರಿಂದ 12.30 ಗೋಕರ್ಣದ ಮಹಾಲೇಶ್ವರ ದೇವಸ್ಥಾನ ನೋಡುವುದು. ಅಂಕೋಲದಲ್ಲಿ ಊಟ ಮುಗಿಸಿ ಸಂಜೆ 5.15 ರಿಂದ ಗೋವಾ 6.15 ಕೊಲ್ವಾ ಬೀಚ್‌. 7.30ಕ್ಕೆ ಹಳೆ ಗೋವಾ ತಲುಪಿ ಇಲ್ಲಿ ತಂಗುವುದು.

ದಿನ ಮೂರು: ಬೆಳಿಗ್ಗೆ ಹಳೆ ಗೋವಾದಿಂದ ಹೊರಟು 6.30 ರಿಂದ 7.30ರ ತನಕ ವೆಗಟಾರ್ ಬೀಚ್ ನೋಡುವುದು. 8 ರಿಂದ 8.30ರ ತನಕ ಕಲಾಂಗುಟ್ ಬೀಚ್ ಬಳಿ ಉಪಾಹಾರ ಸೇವನೆ. 9.20 ರಿಂದ 11.30 ಬೋಟ್‌ನಲ್ಲಿ ಡಾಲ್ಫಿನ್ ವೀಕ್ಷಣೆ ಹಾಗೂ ಅಗೋಡಾ ಪೋರ್ಟ್ ವೀಕ್ಷಣೆ. 11.30ಕ್ಕೆ ಅಗೊಡಾ ಬೀಚ್‌ನಿಂದ ಹೊರಟು ಪುನಃ 12 ರಿಂದ 5ರ ತನಕ ಊಟ ಮುಗಿಸಿ ಕಲಾಂಗುಟ್ ಬೀಚ್ ನೋಡುವುದು. ಸಂಜೆ 5 ರಿಂದ 6 ಮಾಂಡೋವಿ ನದಿಯಲ್ಲಿ ದೋಣಿ ವಿಹಾರ. ರಾತ್ರಿ 8ಕ್ಕೆ ಹಳೆ ಗೋವಾ ತಲುಪಿ ಅಲ್ಲೇ ಊಟ ಮಾಡುವುದು.

ದಿನ 4: ಬೆಳಿಗ್ಗೆ 6.45 ರಿಂದ 7.45 ಡೊನಾಪೌಲಾದಲ್ಲಿ ಸನ್‌ರೈಸ್ ನೋಡಲು ಹೋಗುವುದು. ಹಳೆ ಗೋವಾದಲ್ಲಿ ಚೆಕೌಟ್ ಮಾಡಿ 10 ರಿಂದ 11 ಸೇಂಟ್ ಕ್ಸೇವಿಯರ್ ಚರ್ಚ್‌ ನೋಡುವುದು. 11.30 ರಿಂದ 1.30 ಶ್ರೀ ಮಂಗೇಶಿ ದೇವಸ್ಥಾನ ಮತ್ತು ಶ್ರೀ ಶಾಂತದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡುವುದು. 1.30 ರಿಂದ 2.00 ಪೊಂಡಾದಲ್ಲಿ ಊಟ ಮುಗಿಸಿ ಅಲ್ಲಿಂದ ಹೊರಡುವುದು. ಪೊಂಡಾದಲ್ಲಿ ಹೊರಟು 5.15 ರಿಂದ 5.45ರವರೆಗೆ ಅಂಕೋಲಾದಲ್ಲಿ ಟೀ ವಿರಾಮ. ಅಲ್ಲಿಂದ ಬೆಂಗಳೂರಿಗೆ ಹೊರಟು ಮಾರ್ಗ ಮಧ್ಯದಲ್ಲಿ ಊಟ ಮಾಡಿ ಬೆಂಗಳೂರಿಗೆ ಹೊರಡುವುದು.

ದಿನ 5: ಬೆಳಿಗ್ಗೆ 6 ಗಂಟೆ ಹೊತ್ತಿಗೆ ಬೆಂಗಳೂರು ತಲಪುವುದು.

ದರ, ಸಂಪರ್ಕ ವಿವರ

ಒಟ್ಟು 4 ದಿನಗಳ ಈ ಟೂರ್‌ ಪ್ಯಾಕೇಜ್‌ನಲ್ಲಿ ಊಟ ವಸತಿ ಎಲ್ಲವೂ ಸೇರಿರುತ್ತದೆ. ಈ ಪ್ಯಾಕೇಜ್ ಒಬ್ಬರಿಗೆ 12550 ರೂ, ಇಬ್ಬರಿಗೆ 9690 ರೂ ಹಾಗೂ ಮೂವರಿಗೆ 9140 ತಲಾ ಇರುತ್ತದೆ. ಈ ಪ್ಯಾಕೇಜ್ ಕುರಿತ ಹೆಚ್ಚಿನ ಮಾಹಿತಿಗೆ +91 80-4334 4334 ಈ ಸಂಖ್ಯೆಯನ್ನು ಸಂಪರ್ಕಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ