ಬೆಳಗಾವಿಯಲ್ಲಿದ್ದು ಬೆಂಗಳೂರು, ಮೈಸೂರು ಸುತ್ತಾಡೋ ಆಸೆ ಆಗಿದ್ಯಾ; ಕೆಎಸ್‌ಟಿಡಿಸಿ ನಿಮಗಾಗಿ ಪರಿಚಯಿಸಿದೆ ಟೂರ್‌ ಪ್ಯಾಕೇಜ್‌, ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗಾವಿಯಲ್ಲಿದ್ದು ಬೆಂಗಳೂರು, ಮೈಸೂರು ಸುತ್ತಾಡೋ ಆಸೆ ಆಗಿದ್ಯಾ; ಕೆಎಸ್‌ಟಿಡಿಸಿ ನಿಮಗಾಗಿ ಪರಿಚಯಿಸಿದೆ ಟೂರ್‌ ಪ್ಯಾಕೇಜ್‌, ವಿವರ ಇಲ್ಲಿದೆ

ಬೆಳಗಾವಿಯಲ್ಲಿದ್ದು ಬೆಂಗಳೂರು, ಮೈಸೂರು ಸುತ್ತಾಡೋ ಆಸೆ ಆಗಿದ್ಯಾ; ಕೆಎಸ್‌ಟಿಡಿಸಿ ನಿಮಗಾಗಿ ಪರಿಚಯಿಸಿದೆ ಟೂರ್‌ ಪ್ಯಾಕೇಜ್‌, ವಿವರ ಇಲ್ಲಿದೆ

ನೀವು ಬೆಳಗಾವಿ ಭಾಗದಲ್ಲಿ ವಾಸ ಮಾಡುವವರಾಗಿದ್ದು ಬೆಂಗಳೂರು, ಮೈಸೂರು ಜೊತೆ ಬೇಲೂರನ್ನು ನೋಡಿ ಬರುವ ಆಸೆ ಇದ್ಯಾ, ಹೇಗೆ ಹೋಗೋದು ಅಂತ ನಿಮಗೆ ಗೊತ್ತಿಲ್ವಾ, ಚಿಂತೆ ಮಾಡ್ಬೇಡಿ. ಕೆಎಸ್‌ಟಿಡಿಸಿ ನಿಮಗಾಗಿ 5 ದಿನ ಟೂರ್ ಪ್ಯಾಕೇಜ್ ಘೋಷಿಸಿದೆ. ಈ ಬಸ್ ಟೂರ್ ಪ್ಯಾಕೇಜ್ ದರ ಎಷ್ಟು, ಯಾವೆಲ್ಲಾ ಸ್ಥಳ ನೋಡಬಹುದು, ಬುಕ್ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

ಬೆಳಗಾವಿಯಿಂದ ಕೆಎಸ್‌ಟಿಡಿಸಿ ಪರಿಚಯಿಸಿದೆ 5 ದಿನಗಳ ಟೂರ್‌ ಪ್ಯಾಕೇಜ್‌
ಬೆಳಗಾವಿಯಿಂದ ಕೆಎಸ್‌ಟಿಡಿಸಿ ಪರಿಚಯಿಸಿದೆ 5 ದಿನಗಳ ಟೂರ್‌ ಪ್ಯಾಕೇಜ್‌ (PC: Canva)

ಪ್ರವಾಸ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿದಿನ ಪ್ರವಾಸ ಮಾಡುವವರೂ ಇದ್ದಾರೆ. ಅಂಥವರ ಮಧ್ಯೆ ನಾವು ಆಗೊಮ್ಮೆ ಈಗೊಮ್ಮೆ ಪ್ರವಾಸ ಹೋಗಬೇಕು ಎಂದುಕೊಂಡರೂ ಆಗುವುದಿಲ್ಲ. ಸಮಯವಿದ್ದರೆ ಹಣವಿಲ್ಲ, ಹಣವಿದ್ದರೆ ಸಮಯವಿಲ್ಲ ಈ ಎರಡೂ ಇದ್ದರೂ ಜೊತೆ ಕರೆದುಕೊಂಡು ಹೋಗುವವರಿಲ್ಲ.

ನೀವು ಈ ಗುಂಪಿಗೆ ಸೇರಿದವರಾಗಿದ್ದರೆ ನಿಮಗಾಗಿ ಕೆಎಸ್‌ಟಿಡಿಸಿ ವಿಶೇಷ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಕರ್ನಾಟಕದ ಪ್ರಮುಖ ಊರುಗಳಿಂದ ಕೆಎಸ್‌ಟಡಿಸಿ ಟೂರ್ ಪ್ಯಾಕೇಜ್‌ಗಳಿವೆ. ನೀವು ಬೆಳಗಾಂ ಸುತ್ತಮುತ್ತ ವಾಸಿಸುವವರಾಗಿದ್ದು, ನಿಮಗೆ ಬೆಂಗಳೂರು, ಮಂಗಳೂರು, ಬೇಲೂರು ಸುತ್ತಾಡುವ ಆಸೆ ಇದ್ದರೆ ಕೆಎಸ್‌ಟಿಡಿಸಿ ಈ ಟೂರ್ ಪ್ಯಾಕೇಜ್ ನಿಮಗೆ ಹೇಳಿ ಮಾಡಿಸಿದ್ದು.

ಬೆಳಗಾವಿ ಬೆಂಗಳೂರು ಮೈಸೂರು ಪ್ಯಾಕೇಜ್‌

5 ದಿನಗಳ ಟೂರ್ ಪ್ಯಾಕೇಜ್ ಇದಾಗಿದೆ. ಇದರಲ್ಲಿ ಬೆಂಗಳೂರು, ಮೈಸೂರು ಹಾಗೂ ಬೇಲೂರನ್ನು ನೋಡಿ ಬರಬಹುದು. ಪ್ರತಿ ಗುರುವಾರ ಈ ಟೂರ್ ಪ್ಯಾಕೇಜ್ ಇರುತ್ತದೆ. ರಾತ್ರಿ 9 ಗಂಟೆಗೆ ಬೆಳಗಾವಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಈ ಟೂರ್ ಬಸ್ ಹೊರಡುತ್ತದೆ.

ಯಾವೆಲ್ಲಾ ಜಾಗಗಳನ್ನು ನೋಡಬಹುದು

* ಮೊದಲ ದಿನ: ರಾತ್ರಿ 9 ಗಂಟೆಗೆ ಬೆಳಗಾವಿಯಿಂದ ಹೊರಡುವುದು

* ಎರಡನೇ ದಿನ: ಬೆಳಿಗ್ಗೆ ಹಳೆಬೀಡು ತಲುಪಿ ಸ್ನಾನ, ತಿಂಡಿ ಮುಗಿಸಿ 8 ರಿಂದ 9.30ರ ತನಕ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡುವುದು. 10 ರಿಂದ 11 ಬೇಲೂರು. 11 ರಿಂದ 2 ಗಂಟೆವರೆಗೆ ಊಟ ಮುಗಿಸಿ ಶ್ರವಣಬೆಳಗೊಳ ತಲುಪುವುದು. 2 ರಿಂದ 3 ಗಂಟೆ ಶ್ರವಣಬೆಳಗೊಳ ನೋಡುವುದು. 4.30 ರಿಂದ 8 ಮೈಸೂರಿನ ಕೆಆರ್‌ಎಸ್‌ ಗಾರ್ಡನ್ ನೋಡಿ ರಾತ್ರಿ ಮೈಸೂರಿನಲ್ಲಿ ಉಳಿಯುವುದು.

ಮೂರನೇ ದಿನ: ಬೆಳಿಗ್ಗೆ ಉಪಾಹಾರ ಮುಗಿಸಿ, ಬೆಳಿಗ್ಗೆ 8 ರಿಂದ ಸಂಜೆ 6ರವರೆಗೆ ಚಾಮುಂಡಿ ಬೆಟ್ಟ, ಮೃಗಾಲಯ, ಅರಮನೆ, ಸೇಂಟ್ ಫಿಲೋಮಿನಾ ಚರ್ಚ್‌, ಶ್ರೀರಂಗಪಟ್ಟಣ ದೇವಾಲಯ, ಟಿಪ್ಪುವಿನ ಬೇಸಿಗೆ ಅರಮನೆ ನೋಡಿಕೊಂಡು ರಾತ್ರಿ 8.30ಕ್ಕೆ ಶಿವಮಸಮುದ್ರ ತಲುಪಿ ಅಲ್ಲೇ ಉಳಿದುಕೊಳ್ಳುವುದು.

ದಿನ 4: ಬ್ರೇಕ್‌ಫಾಸ್ಟ್ ಮುಗಿಸಿ ಬೆಂಗಳೂರಿಗೆ ಹೊರಡುವುದು. ಬೆಳಿಗ್ಗೆ 10 ರಿಂದ ಸಂಜೆ 6ರ ತನಕ ಬನ್ನೇರುಘಟ್ಟ ನ್ಯಾಷನಲ್ ‍ಪಾರ್ಕ್‌, ಬುಲ್ ಟೆಂಪಲ್, ವಿಶ್ವೇಶ್ವರಯ್ಯ ಮ್ಯುಸಿಯಂ, ವಿಧಾನಸೌಧ, ಹೈಕೋರ್ಟ್ (ಹೊರಗಿನಿಂದ ನೋಡುವುದು), ಇಸ್ಕಾನ್ ಟೆಂಪಲ್‌. ಸಂಜೆ ಬೆಂಗಳೂರಿನಿಂದ ಹೊರಟು ಮಾರ್ಗ ಮಧ್ಯದಲ್ಲಿ ಊಟ ಮಾಡುವುದು.

5ನೇ ದಿನ: ಬೆಳಗಾವಿ ತಲುಪುವುದು.

ಈ ಟೂರ್ ಪ್ಯಾಕೇಜ್‌ನಲ್ಲಿ ಬೆಂಗಳೂರು, ಮೈಸೂರು, ಬೇಲೂರಿನ ಸುಮಾರು 15 ‌ಪ್ರವಾಸಿ ತಾಣಗಳನ್ನು ನೋಡಿ ಬರಬಹುದಾಗಿದೆ.

ಪ್ಯಾಕೇಜ್ ದರ, ಸಂಪರ್ಕ ವಿವರ

ಬೆಳಗಾವಿ ಟೂರ್ ಪ್ಯಾಕೇಜ್ 5 ದಿನಗಳಾಗಿದ್ದು ಬಸ್‌, ಊಟ, ವಸತಿ ಎಲ್ಲವೂ ಈ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ. ಒಬ್ಬರಿಗೆ ರೂ 10550, ಇಬ್ಬರಿಗೆ ರೂ 7800 ಹಾಗೂ ಮೂವರಿಗೆ ರೂ 7250ರೂ ದರವಿರುತ್ತದೆ.

ಈ ಟೂರ್ ಪ್ಯಾಕೇಜ್ ಕುರಿತ ಹೆಚ್ಚಿನ ಮಾಹಿತಿಗಾಗಿ 080-43344334/ 8970650070 ಈ ಸಂಖ್ಯೆಯನ್ನು ಸಂಪರ್ಕಿಸಿ.

Whats_app_banner