ಧಾರವಾಡದಿಂದ 6 ದಿನಗಳ ಬಸ್‌ ಟೂರ್ ಪ್ಯಾಕೇಜ್‌; ಮೈಸೂರು, ಮಡಿಕೇರಿ, ಮುರುಡೇಶ್ವರದ ಜೊತೆ ಯಾವೆಲ್ಲಾ ಸ್ಥಳಗಳನ್ನ ಸುತ್ತಾಡಬಹುದು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಧಾರವಾಡದಿಂದ 6 ದಿನಗಳ ಬಸ್‌ ಟೂರ್ ಪ್ಯಾಕೇಜ್‌; ಮೈಸೂರು, ಮಡಿಕೇರಿ, ಮುರುಡೇಶ್ವರದ ಜೊತೆ ಯಾವೆಲ್ಲಾ ಸ್ಥಳಗಳನ್ನ ಸುತ್ತಾಡಬಹುದು ನೋಡಿ

ಧಾರವಾಡದಿಂದ 6 ದಿನಗಳ ಬಸ್‌ ಟೂರ್ ಪ್ಯಾಕೇಜ್‌; ಮೈಸೂರು, ಮಡಿಕೇರಿ, ಮುರುಡೇಶ್ವರದ ಜೊತೆ ಯಾವೆಲ್ಲಾ ಸ್ಥಳಗಳನ್ನ ಸುತ್ತಾಡಬಹುದು ನೋಡಿ

‌ನೀವು ಧಾರವಾಡದಲ್ಲಿದ್ದು ಐದಾರು ದಿನ ಆರಾಮವಾಗಿ ಮೈಸೂರು, ಮಡಿಕೇರಿ ಸುತ್ತಾಡಿ ಬರಬೇಕು ಅಂತಿದ್ರೆ ಕೆಎಸ್‌ಟಿಡಿಸಿ ಮಿಮಗಾಗಿ ವಿಶೇಷ ಟೂರ್ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. ಇದರಲ್ಲಿ ನೀವು ಮುರುಡೇಶ್ವರ ಕೂಡ ನೋಡಬಹುದು. ಈ ಪ್ಯಾಕೇಜ್‌ನ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಧಾರಾವಾಡದಿಂದ 6 ದಿನಗಳ ಬಸ್‌ ಟೂರ್ ಪ್ಯಾಕೇಜ್‌
ಧಾರಾವಾಡದಿಂದ 6 ದಿನಗಳ ಬಸ್‌ ಟೂರ್ ಪ್ಯಾಕೇಜ್‌

ನೀವು ಧಾರವಾಡದಲ್ಲಿದ್ದು, ನಿಮಗೆ ಮೈಸೂರು, ಮಡಿಕೇರಿ ಸುತ್ತಾಡಬೇಕು ಎನ್ನುವ ಕನಸಿದ್ಯಾ? ಆದ್ರೆ ಹೇಗೆ ಹೋಗೋದು, ಜೊತೆ ಹೋಗೋಕೆ ಯಾರೂ ಇಲ್ಲ ಅಂತೆಲ್ಲಾ ಯೋಚನೆ ಮಾಡ್ತಾ ಇದೀರಾ. ಚಿಂತೆ ಬೇಡ, ನಿಮಗಾಗಿ ಕೆಎಸ್‌ಟಿಡಿಸಿ ಸ್ಪೆಷಲ್ ಬಸ್ ಟೂರ್ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. ನಿಮ್ಮ ಬಳಿ ಒಂದಿಷ್ಟು ಹಣ ಹಾಗೂ ಸಮಯ ಇದ್ದರೆ ನೀವು ಆರಾಮಾಗಿ ಮೈಸೂರು, ಮಡಿಕೇರಿ ಜೊತೆ ಮುರುಡೇಶ್ವರಕ್ಕೂ ಹೋಗಿ ಬರಬಹುದು.

ಮೈಸೂರಿನ ಅರಮನೆ ಅಂದ ಕಣ್ತುಂಬಿಕೊಡು, ಮಡಿಕೇರಿಯ ತಂಪನೆಯ ವಾತಾವರಣದಲ್ಲಿ ಸುತ್ತಾಡುತ್ತಾ ಮುರುಡೇಶ್ವರ, ಮರವಂತೆ, ಕಾಪು ಬೀಚ್‌ನಲ್ಲಿ ಕಾಲ ಕಳೆಯಲು ಇದು ಬೆಸ್ಟ್ ಟೂರ್ ಪ್ಯಾಕೇಜ್‌. ಇದು ಎಷ್ಟು ದಿನದ ಪ್ಯಾಕೇಜ್‌, ಯಾವ ಮಾರ್ಗದಲ್ಲಿ ಹೋಗುವುದು, ಯಾವೆಲ್ಲಾ ಜಾಗಗಳನ್ನ ನೋಡಬಹುದು, ದರ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.

ಮುರುಡೇಶ್ವರ ಮೈಸೂರು ಮಡಿಕೇರಿ ಟೂರ್ ಪ್ಯಾಕೇಜ್ ವಿವರ

ಇದು ಧಾರವಾಡದಿಂದ ಇರುವ ಟೂರ್ ಪ್ಯಾಕೇಜ್ ಆಗಿದ್ದು, 6 ದಿನಗಳ ಕಾಲದ ಪ್ರವಾಸ ಯೋಜನೆಯಾಗಿದೆ. ಈ 6 ದಿನಗಳಲ್ಲಿ ಮೈಸೂರು, ಮಡಿಕೇರಿ ಹಾಗೂ ಮರುಡೇಶ್ವರ ಸುತ್ತಮುತ್ತಲಿನ ಹಲವು ಜಾಗಗಳನ್ನು ನೋಡಿ ಬರಬಹುದು. ಪ್ರತಿ ಗುರುವಾರ ಈ ಟೂರ್ ಪ್ಯಾಕೇಜ್ ಇರುತ್ತದೆ. ಧಾರವಾಡ ಪ್ರವಾಸೋದ್ಯಮ ಇಲಾಖೆ ಮುಖ್ಯ ಕಚೇರಿಯಿಂದ ಬಸ್ ಹೊರಡುತ್ತದೆ. ರಾತ್ರಿ 9 ಗಂಟೆಗೆ ಧಾರವಾಡದಿಂದ ಹೊರಬೇಕಾಗುತ್ತದೆ.

6 ದಿನಗಳ ಪ್ರವಾಸ ವಿವರ ಹೀಗಿದೆ

* ಮೊದಲ ದಿನ ಧಾರಾವಾಡದಿಂದ ಹೊರಡುವುದು

* ಎರಡನೇ ದಿನ ಇಡಗುಂಜಿ, ಮುರುಡೇಶ್ವರ, ಆನೆಗುಡ್ಡೆ, ಉಡುಪಿ, ಮಲ್ಪೆ ಬೀಚ್‌, ಕಟೀಲು ನೋಡಿಕೊಂಡು ಮಂಗಳೂರಿನಲ್ಲಿ ರಾತ್ರಿ ಉಳಿಯುವುದು

* ಮೂರನೇ ದಿನ ಮಂಗಳೂರಿನ ಮಂಗಳಾದೇವಿ ದೇವಾಲಯ, ಕದ್ರಿ ಮಂಜನಾಥ ದೇವಾಲಯ, ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಭೇಟಿ ನೀಡಿ. ನಂತರ ಬ್ರೇಕ್‌ಫಾಸ್ಟ್ ಮುಗಿಸಿ ಮಧ್ಯಾಹ್ನ ಊಟದ ಹೊತ್ತಿಗೆ ಮಡಿಕೇರಿ ತಲುಪುವುದು. ಅಲ್ಲಿ ಅಬ್ಬೆ ಫಾಲ್ಸ್‌, ತಲಕಾವೇರಿ, ಭಾಗಮಂಡಲ ನೋಡಿ ರಾತ್ರಿ ಅಲ್ಲಿಯೇ ಉಳಿಯುವುದು.

* ನಾಲ್ಕನೇ ದಿನ ಗೋಲ್ಡನ್ ಟೆಂಪಲ್ ನೋಡಿಕೊಂಡು ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟ, ಪ್ರಾಣಿಸಂಗ್ರಹಾಲಯ, ಅರಮನೆ, ಸೇಂಟ್ ಫಿಲೋಮಿನಾ ಚರ್ಚ್‌, ಕೆಆರ್‌ಎಸ್ ನೋಡಿಕೊಂಡಿ ರಾತ್ರಿ ಮೈಸೂರಿನಲ್ಲೇ ತಂಗುವುದು.

* 5ನೇ ದಿನ ಶ್ರೀರಂಗಪಟ್ಟಣ ದೇವಾಲಯ, ಟಿಪ್ಪುವಿನ ಬೇಸಿಗೆ ಅರಮನೆ, ಶ್ರವಣ ಬೆಳಗೊಳ ಬೇಲೂರು ಹಳೆಬೀಡು ನೋಡಿಕೊಂಡು ರಾತ್ರಿ ಊಟ ಮಾಡಿ ಅಲ್ಲಿಂದ ಹೊರಡು ಮರುದಿನ ಅಂದರೆ 6ನೇ ದಿನ ಧಾರವಾಡ ತಲುಪುವುದು.

ಟೂರ್ ಪ್ಯಾಕೇಜ್ ದರ ವಿವರ ಇಂತಿದೆ

6 ದಿನಗಳ ಕರಾವಳಿ ಕರ್ನಾಟಕ, ಮೈಸೂರು ಕರ್ನಾಟಕ ಟ್ರಿಪ್‌ಗೆ ಒಬ್ಬರಿಗೆ 12,950 ರೂ, ಇಬ್ಬರಿಗೆ 9600 ತಲಾ ಹಾಗೂ ಮೂವರಿಗೆ 9030 ತಲಾ ನಿಗದಿ ಪಡಿಸಲಾಗಿದೆ. ಇದರಲ್ಲಿ ಬಸ್‌, ಊಟ, ವಸತಿ ಎಲ್ಲವೂ ಬರುತ್ತದೆ. ಈ ಟೂರ್ ಪ್ಯಾಕೇಜ್ ಬಗ್ಗೆ ಹೆಚ್ಚಿನ ಮಾಹಿತಿಗೆ 080-43344334/ 8970650070 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

 

Whats_app_banner