logo
ಕನ್ನಡ ಸುದ್ದಿ  /  ಜೀವನಶೈಲಿ  /  ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ಮೌನ ವಹಿಸುವುದು ಮಹಾ ಅಪಾಯ; ಶೈಕ್ಷಣಿಕ ಪರಿಸರದಲ್ಲಿ ಮಾನಸಿಕ ಆರೋಗ್ಯವು ಮುಖ್ಯ -ಶ್ರೇಯಸ್ ಕುಮಾರ್ ಬರಹ

ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ಮೌನ ವಹಿಸುವುದು ಮಹಾ ಅಪಾಯ; ಶೈಕ್ಷಣಿಕ ಪರಿಸರದಲ್ಲಿ ಮಾನಸಿಕ ಆರೋಗ್ಯವು ಮುಖ್ಯ -ಶ್ರೇಯಸ್ ಕುಮಾರ್ ಬರಹ

Raghavendra M Y HT Kannada

Oct 31, 2024 05:37 PM IST

google News

ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಎಷ್ಟು ಮುಖ್ಯ, ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ಮೌನ ವಹಿಸುವುದು ಒಳ್ಳೆಯದಲ್ಲ ಯಾಕೆ ಎಂಬುದನ್ನು ಎಸ್‌ಡಿಎಂಸಿ ಸೊಸೈಟಿಯ ನಿರ್ದೇಶಕರಾದ ಶ್ರೇಯಸ್ ಕುಮಾರ್ ಅವರು ವಿವರಿಸಿದ್ದಾರೆ.

    • ವಿದ್ಯಾರ್ಥಿಗಳ ಆಂತರಿಕ ಸಮಸ್ಯೆಗಳನ್ನು ಗುರುತಿಸಿ ಸರಿಪಡಿಸುವ ಕೆಲಸವನ್ನು ಮಾಡಿದಾಗ ಮಾತ್ರ ಅವರು ತಮ್ಮ ಶೈಕ್ಷಣಿಕ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಓದಿನ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ಎಸ್‌ಡಿಎಂಇ ಸೊಸೈಟಿಯ ನಿರ್ದೇಶಕ ಶ್ರೇಯಸ್ ಕುಮಾರ್ ಅವರು ವಿವರಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಎಷ್ಟು ಮುಖ್ಯ, ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ಮೌನ ವಹಿಸುವುದು ಒಳ್ಳೆಯದಲ್ಲ ಯಾಕೆ ಎಂಬುದನ್ನು ಎಸ್‌ಡಿಎಂಸಿ ಸೊಸೈಟಿಯ ನಿರ್ದೇಶಕರಾದ ಶ್ರೇಯಸ್ ಕುಮಾರ್ ಅವರು ವಿವರಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಎಷ್ಟು ಮುಖ್ಯ, ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ಮೌನ ವಹಿಸುವುದು ಒಳ್ಳೆಯದಲ್ಲ ಯಾಕೆ ಎಂಬುದನ್ನು ಎಸ್‌ಡಿಎಂಸಿ ಸೊಸೈಟಿಯ ನಿರ್ದೇಶಕರಾದ ಶ್ರೇಯಸ್ ಕುಮಾರ್ ಅವರು ವಿವರಿಸಿದ್ದಾರೆ.

ಶೈಕ್ಷಣಿಕ ಜಗತ್ತಿನ ಇವತ್ತಿನ ಸ್ಪರ್ಧೆಯಲ್ಲಿ ಮಾನಸಿಕ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮವನ್ನು ಪದಗಳಲ್ಲಿ ಕಟ್ಟಿಕೊಡುವುದು ಕಷ್ಟ. ಒಂದು ಹೋಲಿಕೆಗೆ ಹೇಳುವುದಾದರೆ , ಕಣ್ಣೆದುರೇ ಇದ್ದರು ಕಾಣಿಸಿಕೊಳ್ಳದ ಆನೆಯಂತಾಗಿದೆ. ಮಾನಸಿಕ ಆರೋಗ್ಯದ ವಿಚಾರದಲ್ಲಿ ಇತ್ತೀಚಿಗೆ ಹೆಚ್ಚಿನ ಅರಿವು ಮೂಡುತ್ತಿರುವುದು ಹೌದಾದರೂ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡುವುದು ಕಳಂಕ- ದೋಷ ಎಂಬಂತೆ ಪರಿಗಣನೆಯಾಗುತ್ತಿದೆ. ಈ ಕಾರಣದಿಂದಲೇ ವಿದ್ಯಾರ್ಥಿಗಳು ಬಲವಂತವಾಗಿ ಮೌನವಾಗಿಬಿಡುತ್ತಾರೆ. ಆದರ್ಶಯುತ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆ ಜೊತೆಗೆ ಸರ್ವತೋಮುಖ ಬೆಳವಣಿಗೆಗೆ ಅವಕಾಶವಿರುತ್ತದೆ. ಇದನ್ನು ಸಾಧಿಸುವುದಕ್ಕೆ ಇರುವಂಥ ಮುಖ್ಯ ತಡೆ ಶೈಕ್ಷಣಿಕ ವೈಫಲ್ಯವಲ್ಲ ಬದಲಾಗಿ ಮಾನಸಿಕ ಆರೋಗ್ಯದ ತೊಂದರೆಗಳನ್ನು ಹೇಳಿಕೊಳ್ಳುವುದಕ್ಕೆ, ಅದಕ್ಕೆ ಚಿಕಿತ್ಸೆ ಪಡೆಯುವುದರ ಸುತ್ತ ಇರುವ ಹಿಂಜರಿಕೆ.

ಶೈಕ್ಷಣಿಕ ವ್ಯವಸ್ಥೆಯೂ ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುವ ಒತ್ತಡಗಳಿಂದ ತುಂಬಿಹೋಗಿದೆ. ಆದ್ದರಿಂದ ಮಾನಸಿಕ ಆರೋಗ್ಯದ ಬಗೆಗೆ ಹೆಚ್ಚಿನ ಗಮನಹರಿಸಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಬಗೆಹರಿಸುವುದು ನಿರ್ಣಾಯಕ ಅಂಶ . ಈ ಲೇಖನದ ಗುರಿಯೇ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವುದು, ಭಯವನ್ನು ಹೋಗಲಾಡಿಸುವುದು ಹಾಗೂ ಮಾನಸಿಕ ಆರೋಗ್ಯ ಎಂಬುದನ್ನು ಶೈಕ್ಷಣಿಕ ಉತ್ಕೃಷ್ಟತೆಯ ಅದೇ ಉನ್ನತ ಸ್ಥಾನದಲ್ಲಿ ಇರಿಸುವುದಾಗಿದೆ.

ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ಮೌನ ವಹಿಸುವುದು ಒಳ್ಳೆಯದಲ್ಲ

ತುಂಬಾ ಮುಖ್ಯವಾಗಿ ಮಾನಸಿಕ ಆರೋಗ್ಯದ ವಿಚಾರವು ಭಯ, ತಪ್ಪು ಮಾಹಿತಿ ಹಾಗೂ ಸಾಮಾಜಿಕ ಸ್ಥಿತಿ- ಗತಿಯಿಂದ ಕಳಂಕದ ಸ್ವರೂಪ ಪಡೆದುಕೊಂಡಿದೆ. ಈ ರೀತಿಯ ಕಳಂಕದ ಕಾರಣಕ್ಕೆ ವಿದ್ಯಾರ್ಥಿಗಳು ತಮ್ಮ ಆಂತರಿಕ ಸಮಸ್ಯೆಯನ್ನು ಹೇಳಿಕೊಳ್ಳುವುದಕ್ಕೆ- ಒಪ್ಪಿಕೊಳ್ಳುವುದಕ್ಕೆ ಹಿಂಜರಿಯುವಂತಾಗಿದೆ . ಎಲ್ಲಿ ಪದೇ ಪದೇ ಶೈಕ್ಷಣಿಕ ಯಶಸ್ಸನ್ನೇ ಮಾನದಂಡವಾಗಿ ಇಟ್ಟುಕೊಂಡು, ಒಬ್ಬ ವ್ಯಕ್ತಿಯ ಮೌಲ್ಯಮಾಪನ ಮಾಡುವ ಪರಿಸರ ಇರುತ್ತದೋ ಅಂಥ ಕಡೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂಬುದನ್ನು ಹೇಳಿಕೊಳ್ಳುವುದೇ ವೈಫಲ್ಯ ಎಂದು ಬಿಂಬಿತವಾಗುತ್ತದೆ.

ಕೆಲವೊಮ್ಮೆ ತನ್ನ ಮೇಲೆ ತಾನೇ ಹೇರಿಕೊಂಡ ಭಯಗಳು ದೊಡ್ಡದಾಗಿ ಕಾಣುತ್ತವೆ. “ನನ್ನ ಸ್ನೇಹಿತರು ಏನಂದಕೊಳ್ಳಬಹುದು? ಈ ಕೋರ್ಸ್‌ಗೆ ನಾನು ಅರ್ಹನಲ್ಲ ಅಂತೇನಾದರೂ ನನ್ನ ಶಿಕ್ಷಕರು ಅಂದುಕೊಂಡು ಬಿಡ್ತಾರಾ?” ಈ ರೀತಿಯ ಆಲೋಚನೆಗಳು ಸಾಮಾನ್ಯ. ಆದರೆ ವಿದ್ಯಾರ್ಥಿಗಳು ಇದರ ಕುರಿತು ಶಿಕ್ಷಕರೊಂದಿಗೆ, ಪಾಲಕ ಪೋಷಕರೊಂದಿಗೆ ಚರ್ಚಿಸಲು, ತಮಗಾಗುತ್ತಿರುವ ಮಾನಸಿಕ ಒತ್ತಡವನ್ನು ಹಂಚಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಸಮಾಜದಲ್ಲಿದೆ. ಸಲೀಸಾಗಿ ಬಗೆಹರಿಸಬಹುದಾದ ವಿಚಾರಗಳು ಆಲೋಚನೆಗಳು ಬೆಳೆದು ಹೆಮ್ಮರವಾಗಿ ಬಿಕ್ಕಟ್ಟಿನ ಸ್ವರೂಪಕ್ಕೆ ಒಯ್ದು ಬಿಡುತ್ತವೆ.

ಇದಕ್ಕಿಂತ ಹೆಚ್ಚಾಗಿ ಹಲವು ಶಿಕ್ಷಣ ಸಂಸ್ಥೆಗಳು “ಕಠಿಣ ಪರಿಸ್ಥಿತಿಯಿಂದ ಆ ವ್ಯಕ್ತಿಯೇ ಹೊರಬರಲಿ” ಎಂದು ನಿರೀಕ್ಷಿಸುತ್ತವೆ. ಬಹಳ ಸಂದರ್ಭದಲ್ಲಿ ಏನೆಂದರೆ, ಆ ಥರದ ಸಮಸ್ಯೆಯೇ ಇಲ್ಲ, “ನೀನು ಎಲ್ಲ ರೀತಿ ಆರಾಮವಾಗಿದ್ದೀ” ಅನ್ನುವ ಮಾತು ಹೇಳುವ ಮೂಲಕ ವಿದ್ಯಾರ್ಥಿಗಳ ಅಗತ್ಯವನ್ನೇ ಅಲ್ಲಗಳೆದು ಬಿಡಲಾಗುತ್ತದೆ. ವಿಪರ್ಯಾಸದ ವಿಷಯ ಏನೆಂದರೆ, ಈ ಸ್ಥಳಗಳು ಇರುವುದೇ ಬೆಳವಣಿಗಾಗಿ. ಆದರೆ ಇಂಥಲ್ಲಿ ತಾರತಮ್ಯ ಕಾಣಬಹುದಾಗಿರುತ್ತದೆ, ಆದ್ದರಿಂದ ವಿದ್ಯಾರ್ಥಿಗಳು ಮೌನವಾಗಿಯೇ ಬಳಲುವಂತಾಗುತ್ತದೆ.

ಮುಕ್ತ ಸಂಭಾಷಣೆಯ ಶಕ್ತಿ

ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ ಮಾಡುವುದು ಕಳಂಕ ಎಂಬ ಭಾವನೆಯಿಂದ ಹೊರಬರುವುದಕ್ಕೆ ಇರುವ ಪರಿಣಾಮಕಾರಿಯಾದ ಪರಿಹಾರವು ಬಹಳ ಸರಳವಾದದ್ದು ಹಾಗೂ ಅಷ್ಟೇ ಗಹನವಾದದ್ದು. ಅದು ಮುಕ್ತ ಚರ್ಚೆ. ತುಂಬಾ ವಿಸ್ತೃತವಾದ ವ್ಯಾಖ್ಯಾನಗಳ ಮೂಲಕ ಹೇಳಬೇಕು ಅಂತೇನಿಲ್ಲ. ಮಾನಸಿಕ ಆರೋಗ್ಯದ ಬಗ್ಗೆ ಕೇವಲ ಪ್ರಾಮಾಣಿಕವಾದ ಮಾತುಕತೆಯೇ ಸಾಕು, ಅದು ಮಹತ್ತರವಾದ ಬದಲಾವಣೆಯನ್ನು ತರುತ್ತದೆ. ದೈನಂದಿನ ಬದುಕಿನ ಜೊತೆಗೆ ಮಾನಸಿಕ ಆರೋಗ್ಯದ ಚರ್ಚೆಯನ್ನು ಸಂಯೋಜನೆ ಮಾಡುವುದರಿಂದ- ಅಂದರೆ, ಉಪನ್ಯಾಸಗಳ ವೇಳೆ, ಸಾಮಾನ್ಯ ಮಾತುಕತೆ ಸಂದರ್ಭದಲ್ಲಿ, ಕೋರ್ಸ್ ವರ್ಕ್ ಸಂದರ್ಭಗಳಲ್ಲಿಯೂ ಮಾಡಬಹುದು. ಶೈಕ್ಷಣಿಕ ಸಂಸ್ಥೆಗಳು ತುಂಬಾ ಸಹಜವಾಗಿಯೇ ಈ ಮಾತುಕತೆಗಳನ್ನು ಮಾಡಬಹುದು. ಯಾವಾಗ ವಿದ್ಯಾರ್ಥಿಗಳು ಮುಕ್ತವಾಗಿ ತನಗೆ ಸಹಾಯದ ಅಗತ್ಯ ಇದೆ ಎಂದು ಹೇಳಿಕೊಳ್ಳುತ್ತಾರೋ ಆಗ ಇತರ ವಿದ್ಯಾರ್ಥಿಗಳು ಸಹ ತಾವೂ ಹೇಳಿಕೊಳ್ಳಬಹುದು ಎಂದು ಅದರಿಂದ ಉತ್ತೇಜಿತರಾಗುತ್ತಾರೆ, ಸ್ಫೂರ್ತಿ ಪಡೆಯುತ್ತಾರೆ. ಇದರಿಂದ ಕಾಳಜಿ ತೋರಿಸುವ ಮತ್ತು ಬೆಂಬಲ ನೀಡುವ ಸಮುದಾಯ ಬೆಳೆಯುತ್ತದೆ.

ಪೋಷಣೆ ನೀಡುವ ಶೈಕ್ಷಣಿಕ ಪರಿಸರದ ಸೃಷ್ಟಿ

ಸಕಾರಾತ್ಮಕವಾದ ಮಾನಸಿಕ ಆರೋಗ್ಯದ ಪರಿಸರವನ್ನು ಬಯಸುವುದರಿಂದ ಮಾತ್ರ ಸಾಕಾರಗೊಳ್ಳುವುದಿಲ್ಲ. ಇದರ ಕಡೆಗೆ ಕಾರ್ಯತತ್ಪರರಾಗುವ ಹಾಗೂ ಬದ್ಧತೆಯನ್ನು ಹೊಂದುವ ಅಗತ್ಯವಿದೆ.

ಶೈಕ್ಷಣಿಕ ಸಂಸ್ಥೆಗಳು ತೆಗೆದುಕೊಳ್ಳಬಹುದಾದ ಪ್ರಮುಖ ಹೆಜ್ಜೆಗಳು ಹೀಗಿವೆ:

1. ಮಾನಸಿಕ ಆರೋಗ್ಯ ಸೇವೆಗಳನ್ನು ಸಾಂಸ್ಥಿಕಗೊಳಿಸಬೇಕು: ಒಬ್ಬರು ಸಲಹೆಗಾರರು ಇರುವಂಥ ಕಚೇರಿಯ ಆಚೆಗೆ, ಕ್ಯಾಂಪಸ್ ಜೀವನಕ್ಕೇ ಸಂಯೋಜನೆ ಆಗಿರುವಂಥ- ಸುಲಭಕ್ಕೆ ಸಂಪರ್ಕಿಸಬಹುದಾದ ಮಾನಸಿಕ ಆರೋಗ್ಯ ಸಂಪನ್ಮೂಲಗಳು ಸಂಸ್ಥೆಗಳಿಗೆ ಕೈಗೆಟುಕುವಂತೆ ಇರಬೇಕು. ನಿಯಮಿತವಾದ ಕಾರ್ಯಾಗಾರಗಳು, ತಪಾಸಣೆಗಳು ವಿದ್ಯಾರ್ಥಿ ಜೀವನದುದ್ದಕ್ಕೂ ಅವರ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ಹಾಗೆ ಇವು ಇರುವುದೇ ಶೈಕ್ಷಣಿಕ ನೆರವಿಗೆ ಎಂದೆನಿಸುವುದರಿಂದ ವಿದ್ಯಾರ್ಥಿಗಳು ಸಹ ಸಹಾಯ ಕೇಳುವುದಕ್ಕೆ ಪ್ರೋತ್ಸಾಹಿಸಿದಂತೆ ಆಗುತ್ತದೆ.

2. ನುರಿತ ಬೋಧಕ ವೃಂದ: ಬೋಧಕ ವೃಂದದವರಿಗೆ ಕೂಡ ಹೇಗೆ ತರಬೇತಿ ಆಗಿರಬೇಕು ಅಂದರೆ, ಮಾನಸಿಕ ಆರೋಗ್ಯ ಸಮಸ್ಯೆಗಳ ಲಕ್ಷಣಗಳನ್ನು ಅವರು ಗುರುತಿಸುವಂತೆ ಇರಬೇಕು. ನಡವಳಿಕೆಯಲ್ಲಿ ಆಗುವಂಥ ಬದಲಾವಣೆಗಳನ್ನು ಗಮನಿಸಬೇಕು. ಉದಾಹರಣೆಗೆ ವಿದ್ಯಾರ್ಥಿಯ ಶೈಕ್ಷಣಿಕ ಕ್ಷಮತೆಯಲ್ಲಿ ಏರುಪೇರಾದಾಗ ವಿದ್ಯಾರ್ಥಿಗಳ ಜೊತೆಗೆ ಅಗತ್ಯ ಸಂಪನ್ಮೂಲಗಳೊಂದಿಗೆ ಸೂಕ್ಷ್ಮವಾಗಿ ಹೇಗೆ ಸಂಪರ್ಕ ಸಾಧಿಸಬೇಕು ಎಂಬ ಅರಿವು ಶಿಕ್ಷಕರಿಗಿರಬೇಕು.

3. ಸಹಪಾಠಿಗಳ ಬೆಂಬಲದ ವ್ಯವಸ್ಥೆಯನ್ನು ಉತ್ತೇಜಿಸಬೇಕು: ವಿದ್ಯಾರ್ಥಿಗಳಿಗೆ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಅಧ್ಯಾಪಕರ ಜೊತೆಗೆ ಚರ್ಚಿಸುವುದಕ್ಕಿಂತ ಹೆಚ್ಚಾಗಿ ಸಹಪಾಠಿಗಳು- ಗೆಳೆಯರೊಂದಿಗೆ ಮಾತನಾಡುವುದು ಹೆಚ್ಚು ಆರಾಮದಾಯಕವಾಗಿರುತ್ತದೆ. ಸಹಪಾಠಿಗಳ ಜೊತೆಗಿನ ನೆಟ್‌ವರ್ಕ್‌ಗಳನ್ನು ವೃದ್ಧಿಸುವುದರಿಂದಾಗಿ ಸಂಪರ್ಕವನ್ನು ಬೆಳೆಸುವ ಮತ್ತು ಸಹಾಯವನ್ನು ಕೇಳುವುದು ಸಹಜ ಎಂಬ ಭಾವ ಮೂಡಿಸುವ ವಾತಾವರಣವನ್ನು ಸೃಷ್ಟಿಸುತ್ತದೆ.

4. ಶೈಕ್ಷಣಿಕ ಯಶಸ್ಸಿನ ಮರುವ್ಯಾಖ್ಯಾನ: ಯಶಸ್ಸು ಅಂದರೆ ಏನು ಎಂಬ ಶೈಕ್ಷಣಿಕ ದೃಷ್ಟಿಕೋನವನ್ನು ಬದಲಾಯಿಸಬೇಕು. ಓದು- ಬರಹ ಇತ್ಯಾದಿ ಅತಿಯಾದ ಕೆಲಸದ ಹೊರೆಗಳು ವಿದ್ಯಾರ್ಥಿಗಳ ಯೋಗಕ್ಷೇಮದ ಜೊತೆಗೆ ರಾಜೀ ಮಾಡಿಕೊಳ್ಳುವಂತೆ ಮಾಡಬಹುದು. ಅದನ್ನು ಸೋಂಬೇರಿತನದ ಸಂಕೇತ ಎಂಬುದಕ್ಕಿಂತ ಹೆಚ್ಚಾಗಿ ಸ್ವಯಂ-ಆರೈಕೆಯನ್ನು ಆದ್ಯತೆಯಾಗಿ ಪರಿಗಣಿಸುವುದನ್ನು ಉತ್ತೇಜಿಸುವುದು ನಿರ್ಣಾಯಕವಾಗಿದೆ.

5. ವೈಫಲ್ಯದ ಮರುವ್ಯಾಖ್ಯಾನ: ವೈಫಲ್ಯದ ಸುತ್ತ ನಡೆಯುವ ಮಾತುಕತೆಗಳು ನಕಾರಾತ್ಮಕವಾಗಿ ಇರುವುದಕ್ಕಿಂತ ರಚನಾತ್ಮಕವಾಗಿ ಬದಲಾಯಿಸುವುದು ಅತ್ಯಗತ್ಯ. ವೈಫಲ್ಯವನ್ನು ಮೌಲ್ಯಯುತವಾದ ಕಲಿಕೆಗೆ ಅವಕಾಶ ಎಂದು ಗುರುತಿಸಬೇಕೇ ವಿನಾ ಬುದ್ಧಿವಂತಿಕೆ ಅಥವಾ ಮೌಲ್ಯದ ಪ್ರತಿಬಿಂಬ ಅಂತ ನೋಡಬಾರದು.

ಕಡ್ಡಾಯ ಮೌಲ್ಯ- ತತ್ವವಾಗಿ ಮಾನಸಿಕ ಆರೋಗ್ಯ

ನಾವು ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಮಾನಸಿಕ ಆರೋಗ್ಯವು ಶೈಕ್ಷಣಿಕ ಅನುಭವದ ಯಾವುದೇ ರಾಜೀ ಆಗದ ಪ್ರಮುಖ ಅಂಶವಾಗಬೇಕು. ಶಿಕ್ಷಣ ಸಂಸ್ಥೆಗಳು ಸಾಂಪ್ರದಾಯಿಕ ವಿಷಯಗಳಂತೆಯೇ ಭಾವನಾತ್ಮಕ ಬುದ್ಧಿವಂತಿಕೆ, ಗಟ್ಟಿತನ ಮತ್ತು ಸ್ವಯಂ-ಅರಿವು ಕಲಿಸಲು ಆದ್ಯತೆ ನೀಡಬೇಕು. ಇವು ಕೇವಲ ಮೃದು ಕೌಶಲಗಳಲ್ಲ. ದೀರ್ಘಾವಧಿಯ ಯಶಸ್ಸು ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮಕ್ಕೆ ಕೊಡುಗೆ ನೀಡುವಂಥ ಅಗತ್ಯ ಜೀವನ ಕೌಶಲಗಳಾಗಿವೆ. ಮಾನಸಿಕ ಆರೋಗ್ಯದ ಸುತ್ತ ಇರುವಂಥ ಈ ಕಳಂಕವನ್ನು ತೊಡೆಯುವ ಮೂಲಕ, ಪ್ರತಿ ವ್ಯಕ್ತಿಯ ಬೆಳವಣಿಗೆಗೆ ಪೂರಕವಾದಂಥ ಶೈಕ್ಷಣಿಕ ವಾತಾವರಣವನ್ನು ನಾವು ಸೃಷ್ಟಿಸಬಹುದು. (ಬರಹ: ಶ್ರೇಯಸ್ ಕುಮಾರ್, ನಿರ್ದೇಶಕರು, ಎಸ್‌ಡಿಎಂಇ ಸೊಸೈಟಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ