ಅಡುಗೆಮನೆಯಲ್ಲಿ ಇರಿಸಲಾದ ಅಣಬೆ ಕಪ್ಪು ಬಣ್ಣಕ್ಕೆ ತಿರುಗಿವೆ ಎಂದು ಬೇಸರಿಸದಿರಿ: ದೀರ್ಘಕಾಲದವರೆಗೆ ತಾಜಾವಾಗಿಡಲು ಇಲ್ಲಿದೆ ಸಲಹೆ
Dec 18, 2024 02:33 PM IST
ದೀರ್ಘಕಾಲದವರೆಗೆ ಅಣಬೆಗಳನ್ನು ತಾಜಾವಾಗಿಡಲು ಇಲ್ಲಿದೆ ಸಲಹೆ
ಅಣಬೆಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಸಾಧ್ಯವಿಲ್ಲ ಎಂಬುದು ಸಾಮಾನ್ಯವಾಗಿ ಗೃಹಿಣಿಯರ ದೂರಾಗಿದೆ. ಅಡುಗೆಮನೆಯಲ್ಲಿ ಇರಿಸಲಾದ ಅಣಬೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ ಮತ್ತು ಕೆಲವೇ ದಿನಗಳಲ್ಲಿ ಹಾಳಾಗುತ್ತವೆ ಎಂದು ಬೇಸರಪಟ್ಟುಕೊಳ್ಳುತ್ತಾರೆ. ನೀವು ಕೂಡ ಅಣಬೆಗಳ ಬಗ್ಗೆ ಇದೇ ದೂರನ್ನು ಹೊಂದಿದ್ದರೆ, ಈ ಸಲಹೆಗಳು ನಿಮಗೆ ಸಹಾಯಕವಾಗಬಲ್ಲದು.
ಅಣಬೆ ಖಾದ್ಯಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅಣಬೆ ಗ್ರೇವಿಯಿಂದ ಬಿರಿಯಾನಿವರೆಗೆ ವಿವಿಧ ತರಹದ ಪಾಕವಿಧಾನಗಳಿವೆ. ಅಣಬೆ ಇಷ್ಟಪಡುವವರು ತಮಗಿಷ್ಟವಾದ ಭಕ್ಷ್ಯಗಳನ್ನು ತಯಾರಿಸಿ ಸೇವಿಸುತ್ತಾರೆ. ಅಣಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊಕೆಮಿಕಲ್ಸ್ ಇದನ್ನು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿಯನ್ನಾಗಿ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅಲ್ಲದೆ, ಋತುಮಾನದ ಸೋಂಕುಗಳಿಂದ ರಕ್ಷಿಸಲು ಕೂಡ ಇದು ಸಹಕಾರಿ. ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವಾಗಿರುವ ಅಣಬೆ ಖಾದ್ಯ ಅಷ್ಟೇ ರುಚಿಕರವಾಗಿರುತ್ತದೆ. ಆದರೂ ಗೃಹಿಣಿಯರಿಗೆ ಅಣಬೆಗಳ ಬಗ್ಗೆ ದೂರಿದೆ. ಅದು ಏನೆಂದರೆ ಅಣಬೆಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಸಾಧ್ಯವಿಲ್ಲ. ಅಡುಗೆ ಮನೆಯಲ್ಲಿ ಇರಿಸಲಾದ ಅಣಬೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕೆಲವೇ ದಿನಗಳಲ್ಲಿ ಇವು ಹಾಳಾಗುತ್ತವೆ. ನೀವು ಕೂಡ ಅಣಬೆಗಳ ಬಗ್ಗೆ ಇದೇ ದೂರನ್ನು ಹೊಂದಿದ್ದರೆ, ಈ ಸಲಹೆಗಳು ನಿಮಗೆ ಸಹಾಯವಾಗಬಲ್ಲದು.
ದೀರ್ಘಕಾಲ ಅಣಬೆಗಳನ್ನು ತಾಜಾವಾಗಿರಿಸಲು ಇಲ್ಲಿದೆ ಸಲಹೆ
ಕಾಗದದ ಚೀಲ: ಅಣಬೆಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಡುವ ಬದಲು, ತೊಳೆಯದೆ ಕಾಗದದ ಚೀಲಗಳಲ್ಲಿ ಸಂಗ್ರಹಿಸಿ. ಇದನ್ನು ಮಾಡುವಾಗ, ಕಾಗದದ ಚೀಲದ ಬಾಯಿಯನ್ನು ಸ್ವಲ್ಪ ತೆರೆದಿಡಿ. ಏಕೆಂದರೆ ಕಾಗದದ ಚೀಲವು ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಅಣಬೆಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ.
ಸರಿಯಾದ ತಾಪಮಾನವನ್ನು ನೋಡಿಕೊಳ್ಳಿ: ಅಣಬೆಗಳನ್ನು ಸಂಗ್ರಹಿಸುವಾಗ, ಅವುಗಳನ್ನು ಯಾವಾಗಲೂ ತಂಪಾದ ಸ್ಥಳದಲ್ಲಿ ಸಂಗ್ರಹಿಸಬೇಕು. ಈ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತಿ ಮುಖ್ಯ. ಇದಕ್ಕಾಗಿ, ಅಣಬೆಗಳನ್ನು ಫ್ರಿಜ್‍ನ ಕೆಳಭಾಗದಲ್ಲಿ 0-5 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನದಲ್ಲಿ ಸಂಗ್ರಹಿಸಿ. ಅಣಬೆಗಳನ್ನು ಸಂಗ್ರಹಿಸುವಾಗ, ಅವುಗಳನ್ನು ಎಂದಿಗೂ ತೊಳೆದು ಸಂಗ್ರಹಿಸಬಾರದು. ಏಕೆಂದರೆ ಅಣಬೆಯಲ್ಲಿರುವ ತೇವಾಂಶವು ಅದನ್ನು ಬೇಗನೆ ಹಾಳುಮಾಡುತ್ತದೆ.
ಫ್ರೀಜರ್‌ನಲ್ಲಿ ಸಂಗ್ರಹಿಸಿ: ನೀವು ಅಣಬೆಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ, ಅವುಗಳನ್ನು ಘನೀಕರಿಸುವುದು ಉತ್ತಮ ಆಯ್ಕೆಯಾಗಿದೆ. ಈ ಸಲಹೆಯನ್ನು ಅನುಸರಿಸಲು, ಮೊದಲಿಗೆ ಅಣಬೆಗಳನ್ನು ಲಘು ಹಬೆಯಲ್ಲಿ ಬೇಯಿಸಿ, ಎಣ್ಣೆಯಲ್ಲಿ ಹುರಿಯಿರಿ. ಇದರ ನಂತರ, ಅಣಬೆಗಳನ್ನು ತಣ್ಣಗಾಗಿಸಿ, ಅವುಗಳನ್ನು ಗಾಳಿಯಾಡದ ಚೀಲದಲ್ಲಿ ತುಂಬಿಸಿ ಫ್ರೀಜರ್ನಲ್ಲಿ ಸಂಗ್ರಹಿಸಿ. ಈ ಪರಿಹಾರವನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಅಣಬೆಗಳನ್ನು ರುಚಿಯನ್ನು ಹಾಳುಮಾಡದೆ 3 ರಿಂದ 6 ತಿಂಗಳವರೆಗೆ ಸಂಗ್ರಹಿಸಬಹುದು.
ವಿಭಾಗ