logo
ಕನ್ನಡ ಸುದ್ದಿ  /  ಜೀವನಶೈಲಿ  /  ಪಬ್ಲಿಕ್ ಟಾಯ್ಲೆಟ್‌ ಬಳಸುವ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ; ಮತ್ತೊಮ್ಮೆ ಹೀಗೆ ಕ್ಲೀನ್ ಮಾಡಿ ಯೂಸ್ ಮಾಡಿ

ಪಬ್ಲಿಕ್ ಟಾಯ್ಲೆಟ್‌ ಬಳಸುವ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ; ಮತ್ತೊಮ್ಮೆ ಹೀಗೆ ಕ್ಲೀನ್ ಮಾಡಿ ಯೂಸ್ ಮಾಡಿ

Suma Gaonkar HT Kannada

Sep 28, 2024 04:16 PM IST

google News

ಸಾರ್ವಜನಿಕ ಶೌಚಾಲಯ ಬಳಕೆ ಮುನ್ನ ಈ ವಿಚಾರ ತಿಳಿದುಕೊಳ್ಳಿ

    • ಸಾರ್ವಜನಿಕ ಶೌಚಾಲಯ: ಪಬ್ಲಿಕ್ ಟಾಯ್ಲೆಟ್‌ ಬಳಕೆ ಮಾಡುವ ಮುನ್ನ ನೀವು ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ನೀವು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೆಲವೊಮ್ಮೆ ಉರಿಮೂತ್ರ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ನೀವೇನು ಮಾಡಬಹುದು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. 
ಸಾರ್ವಜನಿಕ ಶೌಚಾಲಯ ಬಳಕೆ ಮುನ್ನ ಈ ವಿಚಾರ ತಿಳಿದುಕೊಳ್ಳಿ
ಸಾರ್ವಜನಿಕ ಶೌಚಾಲಯ ಬಳಕೆ ಮುನ್ನ ಈ ವಿಚಾರ ತಿಳಿದುಕೊಳ್ಳಿ

ಸಾರ್ವಜನಿಕ ಶೌಚಾಲಯ ಬಳಕೆ ಮಾಡುವ ಮುನ್ನ ನೀವು ಕೆಲವು ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಳ್ಳಬೇಕು. ಇಲ್ಲವಾದರೆ ಸೊಂಕು ಅಂಟುವ ಸಾಧ್ಯತೆ ಹೆಚ್ಚಿರುತ್ತದೆ. ಅನಿವಾರ್ಯವಾಗಿ ದೂರದ ಪ್ರಯಾಣ ಮಾಡಬೇಕಾಗಿ ಬಂದಾಗ ಪಬ್ಲಿಕ್ ಟಾಯ್ಲೆಟ್ ಬಳಸಬೇಕಾಗುತ್ತದೆ. ಹೀಗಿರುವಾಗ ಮೊದಲು ಕೆಲವು ಸಂಗತಿಗಳನ್ನು ತಿಳಿದಿಟ್ಟುಕೊಂಡರೆ ಉತ್ತಮ. ಬಳಕೆಗೆ ಮೊದಲು ಸಾರ್ವಜನಿಕ ಶೌಚಾಲಯವನ್ನು ನೀವು ಸ್ವಚ್ಛಮಾಡಿಕೊಳ್ಳಬೇಕು. ಸಾಕಷ್ಟು ನೀರಿನ ಪೂರೈಕೆ ಇದೆಯೇ? ಇಲ್ಲವೇ? ಎಂಬುದನ್ನು ಮೊದಲು ಪರಿಶೀಲನೆ ಮಾಡಿಕೊಳ್ಳಬೇಕು. ಬಿಸಾಡಬಹುದಾದ ಕೈಗವಸುಗಳನ್ನು ನೀವು ಇಟ್ಟುಕೊಂಡರೆ ಇದು ನಿಮ್ಮ ಸಹಾಯಕ್ಕೆ ಬರುತ್ತದೆ.

ಸೋಂಕುನಿವಾರಕ ಸ್ಪ್ರೇ
ಕೋವಿಡ್ ಬಂದಾಗ ಯಾವ ರೀತಿ ಸ್ಯಾನಿಟೈಸರ್ ಬಳಕೆ ಮಾಡುತ್ತಿದ್ದೆವೊ ಅದೇ ರೀತಿ ಈಗಲೂ ಇಟ್ಟುಕೊಳ್ಳಬೇಕು. ನಿಮಗೆ ತುಂಬಾ ಸಮಸ್ಯೆ ಆಗಿದೆ, ಎಲ್ಲೂ ಅಗತ್ಯಕ್ಕೆ ಸಾಕಷ್ಟು ನೀರು ದೊರಕಲೇ ಇಲ್ಲ ಎಂದಾದರೆ ಇದನ್ನು ಯೂಸ್ ಮಾಡಬಹುದು. ಅಥವಾ ಇನ್ಯಾವುದೇ ಸ್ಪ್ರೇ ಇದ್ದರೆ ಅದನ್ನು ಟಾಯ್ಲೆಟ್ ಸೀಟ್‌ ಒಳಗಡೆ ಸ್ಪ್ರೇ ಮಾಡಬಹುದು.

ಪೇಪರ್ ಟವೆಲ್ ಅಥವಾ ಟಾಯ್ಲೆಟ್ ಪೇಪರ್
ಇವುಗಳನ್ನು ಇಟ್ಟುಕೊಳ್ಳುವುದು ಉತ್ತಮ. ಅನಿವಾರ್ಯವಾದಲ್ಲಿ ನೀವೇ ಸೀಟನ್ನು ಒರೆಸಿಕೊಂಡು ಕೂರಬಹುದು. ನಿಮ್ಮ ಕೈಗೆ ಹಾಗೂ ಕಾಲಿಗೆ ನೇರವಾಗಿ ಟಾಯ್ಲೆಟ್ ಸೀಟ್‌ ತಾಗದಂತೆ ಇವು ತಡೆಯುತ್ತದೆ.

ಕೈಚೀಲ ಹೊರಗಿಡಿ:
ಕೆಲವರು ಕಳ್ಳತನ ಆಗುತ್ತದೆ ಎಂಬ ಭಯದಿಂದ ಕೈಚೀಲ, ಮೊಬೈಲ್ ಮತ್ತು ಪರ್ಸ್‌ ಇನ್ನು ಅನೇಕ ಸಾಮಗ್ರಿಗಳನ್ನು ಟಾಯ್ಲೆಟ್‌ ಒಳಗಡೆ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಹೆಚ್ಚಿನ ಬ್ಯಾಕ್ಟೀರಿಯಾಗಳು ಅಂಟಿಕೊಳ್ಳುತ್ತವೆ. ಆದ್ದರಿಂದ ನೀವು ಸಾಧ್ಯವಾದಷ್ಟು ಈ ರೀತಿ ಟಾಯ್ಲೆಟ್ ಒಳಗಡೆ ನಿಮ್ಮ ಕೈಚೀಲವನ್ನು ತೆಗೆದುಕೊಂಡು ಹೋಗಬೇಡಿ. ಜೊತೆಗೆ ಯಾರಾದರೂ ಇದ್ದರೆ ಅವರಿಗೆ ಹಿಡಿದುಕೊಳ್ಳಲು ತಿಳಿಸಿ.

ಸ್ಯಾನಿಟರಿ ನ್ಯಾಪ್‌ಕಿನ್
ನೀವು ಸ್ಯಾನಿಟರಿ ನ್ಯಾಪ್‌ಕಿನ್ ಬಳಕೆ ಮಾಡುತ್ತಿದ್ದರೆ, ಇನ್ನೊಬ್ಬರಿಗೆ ಇದರಿಂದ ತೊಂದರೆ ಉಂಟಾಗದ ಹಾಗೆ ಕಾಪಾಡಿಕೊಳ್ಳಿ. ಒಂದು ಪೇಪರ್ ಅಥವಾ ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಸ್ಯಾನಿಟರಿ ನ್ಯಾಪ್‌ಕಿನ್ ಕವರ್ ಆಗುವಂತೆ ಪ್ಯಾಕ್ ಮಾಡಿ. ಹೀಗೆ ಮಾಡುವುದರಿಂದ ಸ್ವಚ್ಛತೆ ಕಾಯ್ದುಕೊಂಡಂತಾಗುತ್ತದೆ.

ಇನ್ನು ಹಲವರು ಈ ರೀತಿ ಮುಂಜಾಗ್ರತೆ ವಹಿಸಿ ಸ್ವಚ್ಛತೆ ಬಗ್ಗೆ ಗಮನಕೊಟ್ಟರೂ ಸಹ ಯೂರಿನ್ ಇನ್ಫೆಕ್ಷನ್ ಆಗುತ್ತದೆ. ಆ ಕಾರಣದಿಂದ ನೀವು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ದೂರದ ಪ್ರಯಾಣವಿದ್ದಾಗ ಎಳನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ.


ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ