ತೂಕ ಇಳಿಕೆಗೂ ಸೈ, ರಕ್ತದೊತ್ತಡ ನಿಯಂತ್ರಣೆಗೂ ಸಹಕಾರಿ: ಬೀಟ್ರೂಟ್‍ನ ಆರೋಗ್ಯ ಪ್ರಯೋಜನ ತಿಳಿದ್ರೆ ಪ್ರತಿದಿನ ತಿನ್ನುವಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ತೂಕ ಇಳಿಕೆಗೂ ಸೈ, ರಕ್ತದೊತ್ತಡ ನಿಯಂತ್ರಣೆಗೂ ಸಹಕಾರಿ: ಬೀಟ್ರೂಟ್‍ನ ಆರೋಗ್ಯ ಪ್ರಯೋಜನ ತಿಳಿದ್ರೆ ಪ್ರತಿದಿನ ತಿನ್ನುವಿರಿ

ತೂಕ ಇಳಿಕೆಗೂ ಸೈ, ರಕ್ತದೊತ್ತಡ ನಿಯಂತ್ರಣೆಗೂ ಸಹಕಾರಿ: ಬೀಟ್ರೂಟ್‍ನ ಆರೋಗ್ಯ ಪ್ರಯೋಜನ ತಿಳಿದ್ರೆ ಪ್ರತಿದಿನ ತಿನ್ನುವಿರಿ

ಬೀಟ್ರೂಟ್ ಅಂದ್ರೆ ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ, ಬೀಟ್ರೂಟ್‍ನ ಪ್ರಯೋಜನಗಳ ಬಗ್ಗೆ ತಿಳಿದ್ರೆ ಖಂಡಿತಾ ಪ್ರತಿದಿನ ತಿನ್ನುವಿರಿ. ರಕ್ತದೊತ್ತಡ ನಿಯಂತ್ರಿಸುವುದು, ತೂಕ ಇಳಿಕೆ ಸೇರಿದಂತೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಈ ಬೀಟ್ರೂಟ್. ಇನ್ನಷ್ಟು ಮಾಹಿತಿ ಇಲ್ಲಿದೆ.

ತೂಕ ಇಳಿಕೆ ಸೇರಿದಂತೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಬೀಟ್ರೂಟ್.
ತೂಕ ಇಳಿಕೆ ಸೇರಿದಂತೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಬೀಟ್ರೂಟ್. (Shutterstock)

ವಿಶಿಷ್ಟ ಸುವಾಸನೆ, ಕೆಂಪು ಬಣ್ಣ ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಬೀಟ್ರೂಟ್ ಶತಮಾನಗಳಿಂದ ವಿವಿಧ ಪಾಕಪದ್ಧತಿಗಳಲ್ಲಿ ಪ್ರಧಾನವಾಗಿದೆ. ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿರುವ ಬೀಟ್ರೂಟ್ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಬೀಟ್‌ರೂಟ್‌ನಲ್ಲಿ ಹೆಚ್ಚಿನ ನೈಟ್ರೇಟ್ ಅಂಶವಿದ್ದು, ಇದನ್ನು ದೇಹವು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುತ್ತದೆ. ಈ ಸಂಯುಕ್ತವು ರಕ್ತದ ಹರಿವನ್ನು ಸುಧಾರಿಸುವಲ್ಲಿ, ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಮತ್ತು ವ್ಯಾಯಾಮದ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಫೈಬರ್‌ನಲ್ಲಿ ಸಮೃದ್ಧವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಅಲ್ಲದೆ ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ನಿಭಾಯಿಸುವಲ್ಲಿಯೂ ಸಹಕಾರಿಯಾಗಿದೆ.

ಬೀಟ್ರೂಟ್ ಫೋಲೇಟ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಆಹಾರದಲ್ಲಿ ಇದನ್ನು ಪಲ್ಯವಾಗಿ, ಸಾಂಬಾರ್ ಮಾಡುವ ಮೂಲಕ, ಉಪ್ಪಿನಕಾಯಿ, ರಸ ಅಥವಾ ಸ್ಮೂಥಿಯಾಗಿ ಸವಿಯಬಹುದು. ಬೀಟ್ರೂಟ್ ಅನ್ನು ಸಣ್ಣಗೆ ಕತ್ತರಿಸಿ ಸಲಾಡ್ ರೀತಿ ಸೇವಿಸಬಹುದು. ಬೀಟ್ರೂಟ್ ಚಪಾತಿ, ದೋಸೆ ಮಾಡಿ ಸವಿಯಬಹುದು. ಪೌಷ್ಟಿಕಾಂಶಗಳಿಂದ ಸಮದ್ಧವಾಗಿರುವ ಈ ತರಕಾರಿಯ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನ ದೊರೆಯುತ್ತದೆ ಎಂಬುದು ಇಲ್ಲಿದೆ:

ಬೀಟ್ರೂಟ್‍ನ ಆರೋಗ್ಯ ಪ್ರಯೋಜನಗಳು

ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ: ಬೀಟ್ರೂಟ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಬೀಟ್ರೂಟ್‍ನಲ್ಲಿ ಹೆಚ್ಚಿನ ನೈಟ್ರೇಟ್ ಅಂಶವಿರುವುದರಿಂದ ಇದನ್ನು ಸೇವಿಸಿದಾಗ, ನೈಟ್ರೇಟ್‌ಗಳನ್ನು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸಲಾಗುತ್ತದೆ. ಇದು ರಕ್ತನಾಳಗಳನ್ನು ವಿಶ್ರಾಂತಿ ಮತ್ತು ಹಿಗ್ಗಿಸಲು ಸಹಾಯ ಮಾಡುತ್ತದೆ. ಅಲ್ಲದೆ, ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಬೀಟ್ರೂಟ್‍ನ ನಿಯಮಿತ ಸೇವನೆಯು ರಕ್ತದೊತ್ತಡದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು. ಹೃದಯರಕ್ತನಾಳದ ಆರೋಗ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬಯಸುವವರಿಗೆ ಬೀಟ್ರೂಟ್ ಅಮೂಲ್ಯವಾದ ಆಹಾರ ಸೇರ್ಪಡೆಯಾಗಿದೆ. ಇದರ ನೈಸರ್ಗಿಕ ಗುಣಗಳು ಹೃದಯದ ಆರೋಗ್ಯವನ್ನು ಬೆಂಬಲಿಸುವುದಲ್ಲದೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ತೂಕ ಇಳಿಕೆಗೆ ಸಹಕಾರಿ: ಬೀಟ್ರೂಟ್‍ನಲ್ಲಿರುವ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅಂಶದಿಂದಾಗಿ ತೂಕ ಇಳಿಕೆಗೆ ಇದು ಉತ್ತಮ. ಇದರಲ್ಲಿರುವ ನಾರಿನಾಂಶವು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಅತಿಯಾಗಿ ತಿನ್ನುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ಸಕ್ಕರೆಯ ಕಡುಬಯಕೆಗಳನ್ನು ಪೂರೈಸುತ್ತದೆ. ಇದರಲ್ಲಿ ನೀರಿನಂಶವಿರುವುದರಿಂದ ದೇಹವನ್ನು ಹೈಡ್ರೇಟ್ ಮಾಡುವಲ್ಲಿಯೂ ಸಹಕಾರಿ. ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೀಟ್ರೂಟ್ ತೂಕ ನಿರ್ವಹಿಸಲು ಸಹಕಾರಿ.

ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿ: ಇದರಲ್ಲಿರುವ ನೈಟ್ರೇಟ್ ಅಂಶವು ಶಕ್ತಿಯನ್ನು ಹೆಚ್ಚಿಸಲು ಹಾಗೂ ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕ್ರೀಡಾಪಟುಗಳು ಬೀಟ್ರೂಟ್ ಅನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಪ್ರಯೋಜನವನ್ನು ಪಡೆಯಬಹುದು. ಬೀಟ್ರೂಟ್ ರಸದ ಸೇವನೆಯು ಹೃದಯ ರಕ್ತನಾಳದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಹಾಗೂ ರಕ್ತದ ಹರಿವು ಮತ್ತು ಸ್ನಾಯುಗಳಿಗೆ ಆಮ್ಲಜನಕದ ವಿತರಣೆಯನ್ನು ಸುಧಾರಿಸುತ್ತದೆ. ಬೀಟ್ರೂಟ್ನಲ್ಲಿರುವ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಬೀಟ್ರೂಟ್ ಅನ್ನು ಆಹಾರದಲ್ಲಿ ಸೇರಿಸುವುದರಿಂದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಜೀರ್ಣಕಾರಿ ಆರೋಗ್ಯಕ್ಕೆ ಪ್ರಯೋಜನಕಾರಿ: ಬೀಟ್ರೂಟ್‍ನಲ್ಲಿ ನಾರಿನಾಂಶವಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ದೇಹದಿಂದ ಟಾಕ್ಸಿನ್ ಅನ್ನು ತೆಗೆದುಹಾಕಲೂ ಸಹಕಾರಿಯಾಗಿರುವ ಬೀಟ್ರೂಟ್ ಜೀರ್ಣಕಾರಿ ಹಾಗೂ ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬೀಟ್ರೂಟ್ ರಸವನ್ನು ಸೇವಿಸುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ: ಬೀಟ್ರೂಟ್‍ನಲ್ಲಿರುವ ಹೆಚ್ಚಿನ ನೈಟ್ರೇಟ್ ಅಂಶದಿಂದಾಗಿ ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಈ ಸುಧಾರಿತ ರಕ್ತಪರಿಚಲನೆಯು ಅರಿವಿನ ಕಾರ್ಯವನ್ನು ಹೆಚ್ಚಿಸುತ್ತದೆ. ಬೀಟ್‌ರೂಟ್ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೀಟ್ರೂಟ್ ಅನ್ನು ಸೇವಿಸುವುದರಿಂದ ಮೆದುಳಿನ ಆರೋಗ್ಯವನ್ನು ಉತ್ತೇಜಿಸಲು ಪರಿಣಾಮಕಾರಿಯಾಗಿದೆ.

Whats_app_banner