logo
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ಟಾರ್ ನಟ ಮಮ್ಮುಟಿಗೆ ಈಗ 27, ಅಲ್ಲಲ್ಲ 72 ವರ್ಷ: ಇವರ ಫಿಟ್‌ನೆಸ್ ಸೀಕ್ರೆಟ್‌ ಇಲ್ಲಿದೆ, ನೀವೂ ಫಾಲೊ ಮಾಡಬಹುದು ನೋಡಿ

ಸ್ಟಾರ್ ನಟ ಮಮ್ಮುಟಿಗೆ ಈಗ 27, ಅಲ್ಲಲ್ಲ 72 ವರ್ಷ: ಇವರ ಫಿಟ್‌ನೆಸ್ ಸೀಕ್ರೆಟ್‌ ಇಲ್ಲಿದೆ, ನೀವೂ ಫಾಲೊ ಮಾಡಬಹುದು ನೋಡಿ

Reshma HT Kannada

Oct 31, 2024 03:05 PM IST

google News

ಮಮ್ಮುಟ್ಟಿ ಫಿಟ್‌ನೆಸ್ ಸೀಕ್ರೆಟ್‌

    • ಭಾರತ ಚಿತ್ರರಂಗದ ಖ್ಯಾತ ನಟ ಮಮುಟ್ಟಿಗೆ ಈಗ 72 ವರ್ಷ. ಈಗಲೂ 27ರ ಹರೆಯದವರಂತೆ ಕಾಣುವ ಈ ನಟನ ಫಿಟ್‌ನೆಸ್‌ ಸೀಕ್ರೆಟ್ ಏನಿರಬಹುದು ಎಂದು ಹಲವರು ತಲೆ ಕೆಡಿಸಿಕೊಳ್ಳುತ್ತಾರೆ. ನಟ ದುಲ್ಕರ್ ಸಲ್ಮಾನ್ ತಂದೆ ಮಮುಟ್ಟಿಯ ಫಿಟ್‌ನೆಸ್ ರಹಸ್ಯ ಇಲ್ಲಿದೆ ನೋಡಿ. ಇದನ್ನ ನೀವೂ ಫಾಲೋ ಮಾಡಬಹುದು ನೋಡಿ.
ಮಮ್ಮುಟ್ಟಿ ಫಿಟ್‌ನೆಸ್ ಸೀಕ್ರೆಟ್‌
ಮಮ್ಮುಟ್ಟಿ ಫಿಟ್‌ನೆಸ್ ಸೀಕ್ರೆಟ್‌ (mammootty/Instagram)

ಮಲಯಾಳಂ ಚಿತ್ರರಂಗದ ಖ್ಯಾತ ನಟರಲ್ಲಿ ಮಮುಟ್ಟಿ ಕೂಡ ಒಬ್ಬರು. ಮಾಲಿವುಡ್ ಮಾತ್ರವಲ್ಲದೇ ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಸಿನಿಮಾಗಳಲ್ಲೂ ನಟಿಸಿ ಹೆಸರು ಗಳಿಸಿದ್ದಾರೆ ಈ ನಟ. ತಮ್ಮದೇ ಆದ ಅಭಿಮಾನ ಬಳಗ ಹೊಂದಿರುವ ಈ ನಟನ ಮಗ ದುಲ್ಕರ್ ಸಲ್ಮಾನ್ ಕೂಡ ಖ್ಯಾತ ನಟ. ಇಂದು ದುಲ್ಕರ್ ಸಲ್ಮಾನ್ ನಟನೆಯ ಲಕ್ಕಿ ಭಾಸ್ಕರ್ ಸಿನಿಮಾ ಬಿಡುಗಡೆಯಾಗಿದ್ದು ಈ ಹೊತ್ತಿನಲ್ಲಿ ಈ ನಟನ ತಂದೆಯ ಫಿಟ್‌ನೆಸ್‌ ಸೀಕ್ರೆಟ್ ಏನಿರಬಹುದು ಎಂದು ಜನ ಯೋಚಿಸುತ್ತಿದ್ದಾರೆ.

420ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮಮುಟ್ಟಿಗೆ ಈಗ 72 ವರ್ಷ. ಇವರಿಗೆ 72 ವರ್ಷ ಎಂದರೆ ಖಂಡಿತ ಯಾರೂ ನಂಬುವುದಿಲ್ಲ. ಯಾಕೆಂದರೆ ಅವರು ಅಷ್ಟು ಫಿಟ್ ಅಂಡ್ ಫೈನ್ ಆಗಿದ್ದಾರೆ. ಇವರ ಫಿಟ್ನೆಸ್‌ ಸೀಕ್ರೆಟ್ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. 72ರಲ್ಲೂ 27ರ ವಯಸ್ಸಿನವರಂತೆ ಕಾಣುವ ಮಮ್ಮುಟ್ಟಿ ಇಷ್ಟು ಫಿಟ್ ಆಗಿರೋಕೆ ಕಾರಣ ಏನು ನೋಡಿ.

ಮಮುಟ್ಟಿ ಫಿಟ್‌ನೆಸ್‌ ಸೀಕ್ರೆಟ್‌

ಮಮ್ಮುಟ್ಟಿ ತಪ್ಪದೇ ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ಆಹಾರದ ವಿಚಾರಕ್ಕೆ ಬಂದ್ರೆ ಇವರು ಎಲ್ಲವನ್ನೂ ತಿನ್ನುತ್ತಾರೆ. ಆದರೆ ತಿನ್ನುವ ಪ್ರಮಾಣ ಮಾತ್ರ ಕಡಿಮೆ. ಒಬ್ಬ ನಟನಾದವನಿಗೆ ದೇಹ ಬಹಳ ಮುಖ್ಯ. ಬಾಡಿ ಮೆಂಟೇನ್ ಮಾಡೋದು ಖಂಡಿತ ಕಷ್ಟದ ಕೆಲಸವಲ್ಲ. ನಾನು ನನಗೆ ಇಷ್ಟ ಇರುವುದನ್ನೆಲ್ಲಾ ತಿನ್ನುತ್ತೇನೆ. ಆದರೆ ನನಗೆ ಎಷ್ಟು ಇಷ್ಟ ಅಷ್ಟನಲ್ಲ. ನನ್ನ ದೇಹಕ್ಕೆ ಎಷ್ಟು ಬೇಕು ಅಷ್ಟನ್ನು ಮಾತ್ರ ತಿನ್ನುತ್ತೇನೆ.

ಇವರು ರಾಗಿ, ಓಟ್ಸ್‌ನಂತಹ ಕಾರ್ಬೋಹೈಡ್ರೇಟ್‌ ಅಂಶ ಇಲ್ಲದ ಆಹಾರಗಳನ್ನು ಹೆಚ್ಚು ಸೇವಿಸುತ್ತಾರೆ. ಪ್ರೊಟೀನ್‌ಗಾಗಿ ಹಾಲು, ಮೊಟ್ಟೆ ಸೇವಿಸುತ್ತಾರೆ. ಇವರು ತಮ್ಮ ಆಹಾರಕ್ರಮದ ವಿಚಾರದಲ್ಲಿ ತುಂಬಾನೇ ಕಟ್ಟುನಿಟ್ಟು.

ಮಮ್ಮುಟಿಯವರ ಇನ್ನೊಂದು ಸೀಕ್ರೆಟ್ ಎಂದರೆ ಇವರು ಕಾರ್ಯಕ್ರಮಗಳಿಗೆ ಹೋದಾಗ ಹೊರಗಡೆ ತಿನ್ನುವುದಿಲ್ಲ. ಇವರು ಯಾವ ವಿಚಾರವನ್ನು ಬೇಕಾದರೂ ರಾಜಿ ಮಾಡಿಕೊಳ್ಳುತ್ತಾರೆ ಆದರೆ ಆರೋಗ್ಯ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ. ಇವರು ಪ್ರತಿದಿನ ತಮ್ಮ ಮನೆಯಲ್ಲೇ ಇರುವ ಜಿಮ್‌ನಲ್ಲಿ 20 ರಿಂದ 30 ನಿಮಿಷಗಳ ಕಾಲ ವರ್ಕೌಟ್ ಮಾಡುತ್ತಾರೆ.

ಇವರು ಪ್ರತಿದಿನ ಒಂದು ಬೌಲ್ ಅನ್ನ ಅಥವಾ ಒಂದು ಚಪಾತಿ ತಿನ್ನುತ್ತಾರೆ. ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳುತ್ತಾರೆ. ಜಂಕ್‌ಫುಡ್‌ಗಳ ಹತ್ತಿರವೂ ಸುಳಿಯುವುದಿಲ್ಲ ಮಮ್ಮುಟ್ಟಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ