ಕನ್ನಡ ಸುದ್ದಿ  /  ಮನರಂಜನೆ  /  ಕಿಚ್ಚ ಸುದೀಪ್‌ ಫಿಟ್ನೆಸ್‌ ರಹಸ್ಯ: ವಿಲನ್‌ಗೆ ದಪ್ಪಗಾದೆ, ಪೈಲ್ವಾನ್‌ ಹೊಸ ಪಾಠ ಕಲಿಸಿತು, ಫಿಟ್ನೆಸ್‌ ಅನ್ನೋದು ನಮ್ಮ ಮೊದಲ ವ್ಯಕ್ತಿತ್ವ

ಕಿಚ್ಚ ಸುದೀಪ್‌ ಫಿಟ್ನೆಸ್‌ ರಹಸ್ಯ: ವಿಲನ್‌ಗೆ ದಪ್ಪಗಾದೆ, ಪೈಲ್ವಾನ್‌ ಹೊಸ ಪಾಠ ಕಲಿಸಿತು, ಫಿಟ್ನೆಸ್‌ ಅನ್ನೋದು ನಮ್ಮ ಮೊದಲ ವ್ಯಕ್ತಿತ್ವ

Kiccha sudeep Fitness and Diet Plan: ಕನ್ನಡದ ಸ್ಟಾರ್‌ ನಟ ಕಿಚ್ಚ ಸುದೀಪ್‌ ಫಿಟ್ನೆಸ್‌ ಬಗ್ಗೆ ಎಲ್ಲರಲ್ಲೂ ಕುತೂಹಲ ಇದ್ದೇ ಇರುತ್ತದೆ. ದಿನದಲ್ಲಿ ಎರಡು ಹೊತ್ತು ಮಾತ್ರ ಆಹಾರ ಸೇವನೆ, ನಿಯಮಿತ ವರ್ಕೌಟ್‌ ಮಾಡುವ ಸುದೀಪ್‌ ಪ್ರಕಾರ ಫಿಟ್ನೆಸ್‌ ಎನ್ನುವುದು ನಮ್ಮ ಮೊದಲ ವ್ಯಕ್ತಿತ್ವ. ಅದು ಎಲ್ಲರಿಗೂ ಕಾನ್ಫಿಡೆನ್ಸ್‌ ನೀಡುವ ಅಂಶ.

ಕಿಚ್ಚ ಸುದೀಪ್‌ ಫಿಟ್ನೆಸ್‌ ರಹಸ್ಯ
ಕಿಚ್ಚ ಸುದೀಪ್‌ ಫಿಟ್ನೆಸ್‌ ರಹಸ್ಯ

Kiccha sudeep Fitness and Diet Plan: ಕನ್ನಡದ ಪ್ರತಿಭಾನ್ವಿತ ಸ್ಟಾರ್‌ ನಟ ಕಿಚ್ಚ ಸುದೀಪ್‌ ಅವರ ಫಿಟ್ನೆಸ್‌ ಕುರಿತು ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. 6.1 ಅಡಿ ಎತ್ತರದ ಕಿಚ್ಚ ಸುದೀಪ್‌ ಅವರ ಡಯೆಟ್‌ ಪ್ಲ್ಯಾನ್‌ ಹೇಗಿರುತ್ತದೆ? ಅವರ ಫಿಟ್ನೆಸ್‌ ರಹಸ್ಯ ಏನು? ಎಷ್ಟು ವರ್ಕೌಟ್‌ ಮಾಡ್ತಾರೆ, ಎಷ್ಟೊತ್ತಿಗೆ ಏನೆಲ್ಲ ತಿಂತಾರೆ ಎಂದೆಲ್ಲ ಕುತೂಹಲ ಇದ್ದೇ ಇರುತ್ತದೆ. ಈ ಕುರಿತು ಸುದೀಪ್‌ ವಿವಿಧ ಸಂದರ್ಭಗಳಲ್ಲಿ ನೀಡಿರುವ ಸಂದರ್ಶನ ಆಧರಿಸಿ ಕಿಚ್ಚನ ಫಿಟ್ನೆಸ್‌ ಬಗ್ಗೆ ಒಂದಿಷ್ಟು ವಿವರ ಪಡೆಯೋಣ.

ಫಿಟ್ನೆಸ್‌ ಅಂದ್ರೆ ವ್ಯಕ್ತಿಯ ಮೊದಲ ಪರ್ಸನಾಲಿಟಿ

ಇಂದ್ರಜಿತ್‌ ಲಂಕೇಶ್‌ ನಿರ್ಮಿಸಿ ನಿರ್ದೇಶಿಸಿರುವ ಗೌರಿ ಸಿನಿಮಾದ ಪ್ರಚಾರ ನಡೆಯುತ್ತಿದೆ. ಈ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಸಮರ್ಜಿತ್‌ ಲಂಕೇಶ್‌ ನಾಯಕ ನಟನಾಗಿ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರಕ್ಕೆ ಪೂರಕವಾಗಿ ಕಲಾ ಮಾಧ್ಯಮ ಯೂಟ್ಯೂಬ್‌ನಲ್ಲಿ ಸಮರ್ಜಿತ್‌ ಲಂಕೇಶ್‌ ಅವರು ಕಿಚ್ಚ ಸುದೀಪ್‌ನ ಸಂದರ್ಶನ ನಡೆಸಿದ್ದು, ಅದರಲ್ಲಿ ಫಿಟ್ನೆಸ್‌ ಕುರಿತು ಒಂದಿಷ್ಟು ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಇವತ್ತಿನ ಆಕ್ಟರ್‌ಗಳಿಗೆ ಫಿಟ್ನೆಸ್‌ ಎಷ್ಟು ಮುಖ್ಯ? ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್‌ ಹೀಗೆ ಉತ್ತರಿಸಿದ್ದಾರೆ. "ಇವತ್ತಿನ ಆಕ್ಟರ್ಸ್‌ಗೆ ಅಂತಲ್ಲ, ನಮಗೂ ಫಿಟ್ನೆಸ್‌ ಮುಖ್ಯನೇ. ನೀವೆಲ್ಲ ಯಂಗ್‌ಸ್ಟಾರ್ಸ್‌ ಫಿಟ್‌ ಆಗಿದ್ರೆ ಸಾಕಾ, ನಮಗೂ ಫಿಟ್ನೆಸ್‌ ಬೇಕು. ನಿಮಗಿಂತ ಫಿಟ್‌ ಆಗಿ ಕಾಣಿಸಬೇಕು ನಾವು. ನಿಮಗಿಂತ ಚೆನ್ನಾಗಿ ಕಾಣಿಸಬೇಕು ನಾವು. ನಿಮ್ಮ ಫಿಲ್ಮ್‌ ಸೆಟ್‌ಗೆ ಬಂದ್ರೆ ನಿಮಗಿಂತ ನಮ್ಮನ್ನು ಎಲ್ಲರೂ ನೋಡಬೇಕು ಎಂದು ಬಯಸುತ್ತೇವೆ. ನಾವೂ ಫಿಟ್‌ ಆಗಿ ಕಾಣಿಸಬೇಕು. ಚೆನ್ನಾಗಿ ಕಾಣಿಸಬೇಕು" ಎಂದು ಅವರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ಫಿಟ್ನೆಸ್‌ ಈಸ್‌ ಪರ್ಸನಾಲಿಟಿ. ನಾನು ಚೆನ್ನಾಗಿ ಕಾಣಿಸಬೇಕು, ನನ್ನ ಲುಕ್‌ ಫಿಟ್‌ ಆಗಿರಬೇಕು. ನನಗೆ ಯಾರ ಮುಂದೆಯಾದರೂ ಅದು 21 ವರ್ಷ ವಯಸ್ಸಿನವರ, 30 ವರ್ಷ ವಯಸ್ಸಿನವರ ಮುಂದೆಲ್ಲ ಕಾನ್ಫಿಡೆಂಟ್‌ ಆಗಿ ನಿಲ್ಲಬೇಕೆಂದಾದರೆ ನಾನು ಫಿಸಿಕಲಿ ಫಿಟ್‌ ಆಗಿರಬೇಕು, ಚೆನ್ನಾಗಿ ಕಾಣಿಸಬೇಕು ಎಂದು ಇರುತ್ತದೆ. ನಮ್ಮ ಕಾಸ್ಟ್ಯುಮರ್ಸ್‌ ಡ್ರೆಸ್‌ ತಂದುಕೊಡುತ್ತಾರೆ. ಅಂತಹ ಡ್ರೆಸ್‌ಗೆ ನಾವು ಹೊಂದಿಕೆಯಾಗಬೇಕು. ನಾವು ಫಿಟ್‌ ಆಗಿಲ್ಲದಿದ್ದರೆ ಆ ಬಟ್ಟೆ ಹಾಕಲು ಹಿಂಜರಿಕೆಯಾಗುತ್ತದೆ. ಶರ್ಟ್‌ ಬಿಚ್ಚಿ ಸಿಕ್ಸ್‌ ಪ್ಯಾಕ್‌ ತೋರಿಸೋದೆ ಫಿಟ್ನೆಸ್‌ ಅಲ್ಲ. ಯಾವುದೇ ಉಡುಗೆಗೂ, ಯಾವುದೇ ಕಾಸ್ಟ್ಯೂಮ್‌ಗೂ ನೀವು ಪರ್ಫೆಕ್ಟ್‌ ಆಗಿ ಕಾಣಿಸಬೇಕು, ಫಿಟ್‌ ಆಗಿರಬೇಕು. ಅದು ಫಸ್ಟ್‌ ಪರ್ಸನಾಲಿಟಿ, ಅದು ಎಲ್ಲಾ ನಟರಿಗೂ ಕಾನ್ಫಿಡೆನ್ಸ್‌ ನೀಡುವ ಅಂಶ" ಎಂದು ಅವರು ಹೇಳಿದ್ದಾರೆ. ಒಂದು ಬನಿಯನ್‌ನಲ್ಲಿ ನಿಲ್ಲಿಸಿದರೂ ನೀವು ದೈಹಿಕವಾಗಿ ಚೆನ್ನಾಗಿ ಕಾಣುವಂತೆ ಇರಬೇಕು ಎಂದು ಕಲಾಮಾಧ್ಯಮ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕಿಚ್ಚ ಸುದೀಪ್‌ ಹೇಳಿದ್ದಾರೆ.

"ಮೊದಲು ನಮಗೆ ಜಿಮ್‌ ಎನ್ನುವ ಪರಿಕಲ್ಪನೆ ಇರಲಿಲ್ಲ. ಶೆಟಲ್‌ ಆಡುತ್ತ, ಕಾರ್ಡಿಯೋ ಆಟಗಳಲ್ಲಿ ಫಿಟ್ನೆಸ್‌ ಬರುತ್ತಿತ್ತು. ವಿಲನ್‌ ಸಿನಿಮಾಕ್ಕೆ ನಾನು ತುಸು ದಪ್ಪಗಾಗಬೇಕಿತ್ತು. ಆಗ ಕೊಟ್ಟದ್ದನ್ನೆಲ್ಲ ತಿಂದಿದ್ದೇನೆ. ಬಳಿಕ ಪೈಲ್ವಾನ್‌ ಸಿನಿಮಾ ಮಾಡಬೇಕಾಗಿ ಬಂತು. ಹಲವು ತಿಂಗಳ ಕಾಲ ನಾನು ಟ್ರೈನರ್‌ನನ್ನು ಕರೆಸಿ ಫಿಟ್ನೆಸ್‌ ಮಾಡಿಕೊಂಡೆ. ನನಗೆ ನಿಜಕ್ಕೂ ಫಿಟ್ನೆಸ್‌ನ ಅನುಭವ ಆದದ್ದು ಆಗಲೇ" ಎಂದು ಅವರು ಹೇಳಿದ್ದಾರೆ.

ಕಿಚ್ಚ ಸುದೀಪ್‌ ಡಯೆಟ್‌ ಪ್ಲ್ಯಾನ್‌ ಹೇಗಿರುತ್ತದೆ?

ಕೆಲವು ವರ್ಷಗಳ ಹಿಂದೆ ಬಾಲಿವುಡ್‌ ಹಂಗಾಮಕ್ಕೆ ನೀಡಿದ ಸಂದರ್ಶನದಲ್ಲಿ ಕಿಚ್ಚ ಸುದೀಪ್‌ ತನ್ನ ಡಯೆಟ್‌ ಪ್ಲ್ಯಾನ್‌ ಹಂಚಿಕೊಂಡಿದ್ದರು. "ಡಯೆಟ್‌ ಎನ್ನುವುದು ಏನು ತಿನ್ನುತ್ತೇವೆ, ಏನು ತಿನ್ನ ಬಾರದು ಎಂದಲ್ಲ. ಅದು ನಮ್ಮ ದೇಹದ ಅಗತ್ಯ, ನಮ್ಮ ದೇಹದ ಜೀರ್ಣ ಸಾಮರ್ಥ್ಯ ಮುಂತಾದವುಗಳನ್ನು ಅವಲಂಬಿಸಿದೆ" ಎಂದಿದ್ದರು.

"ಕಿಚ್ಚ ಸುದೀಪ್‌ ದಿನಕ್ಕೆ ಮೂರು ಹೊತ್ತು ಊಟ ಮಾಡುವುದಿಲ್ಲ. ಅವರು ದಿನದಲ್ಲಿ ಎರಡು ಹೊತ್ತಿನ ಮೀಲ್‌ ರೂಲ್ಸ್‌ ಹೊಂದಿದ್ದಾರೆ. ಇವರು ಬೆಳಗ್ಗೆ 1 1ಗಂಟೆಗೆ ಹಾರ್ಟಿ ಲಂಚ್‌ ಮತ್ತು ಸಂಜೆ 6.30 ಗಂಟೆಗೆ ಲೈಟ್‌ ಡಿನ್ನರ್‌ ಮಾಡುತ್ತಾರೆ. ಸಂಜೆ ತಿಂದದ್ದು ಪೂರ್ತಿ ಜೀರ್ಣವಾಗಲೆಂದು ಬ್ರೇಕ್‌ಫಾಸ್ಟ್‌ ಸ್ಕಿಪ್‌ ಮಾಡುತ್ತಾರೆ. 11 ಗಂಟೆ ಪೌಷ್ಠಿಕಾಂಶಯುಕ್ತ ಸಮತೋಲಿತ ಆಹಾರ ಸೇವಿಸ್ತಾರೆ. ವಿವಿಧ ಬಗೆಯ ತರಕಾರಿಗಳು, ಕಾರ್ಬೋಹೈಡ್ರೆಟ್‌ಗಳನ್ನು ಒಳಗೊಂಡ ಲಂಚ್‌ ಅದಾಗಿರುತ್ತದೆ. ಮಿಡ್‌ ಮಾರ್ನಿಂಗ್‌ ಲಂಚ್‌ನಿಂದ ಇವರಿಗೆ ದಿನವಿಡಿ ಒಂದೇ ರೀತಿಯ ಸ್ಥಿರ ಎನರ್ಜಿ ಇರುತ್ತದೆ. ಸಂಜೆ 6.30 ಗಂಟೆ ಲೈಟ್‌ ಡಿನ್ನರ್‌ ಮಾಡುತ್ತಾರೆ. ಅಂದರೆ, ಹೆವಿ ಡಿನ್ನರ್‌ ಮಾಡೋದಿಲ್ಲ. ಸಲಾಡ್‌ಗಳು, ತರಕಾರಿಗಳು, ಲೀನ್‌ ಪ್ರೊಟೀನ್‌ ಒಳಗೊಂಡ ಡಿನ್ನರ್‌ ಅದಾಗಿರುತ್ತದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಅವರು ಈ ಹಿಂದೆ ಮಾಹಿತಿ ನೀಡಿದ್ದರು.