ಒಮ್ಮೆ ಈ ಚಟ್ನಿಪುಡಿ ಮಾಡಿಟ್ಟುಕೊಳ್ಳಿ ಪ್ರತಿದಿನ ಯೂಸ್ ಆಗುತ್ತೆ, ಅನ್ನ, ದೋಸೆ ಮತ್ತು ಚಪಾತಿ ಜೊತೆ ಕೂಡ ತಿನ್ನಬಹುದು
Sep 18, 2024 11:09 AM IST
ಅನ್ನ, ದೋಸೆ ಮತ್ತು ಚಪಾತಿ ಜೊತೆ ತಿನ್ನಬಹುದಾದ ಚಟ್ನಿಪುಡಿ
- ಚಟ್ನಿಪುಡಿ: ಪಿಜಿ ಅಥವಾ ಹಾಸ್ಟೇಲ್‌ನಲ್ಲಿ ಉಳಿದುಕೊಂಡು ನೀವು ಕಲಿಯುತ್ತಿದ್ದರೆ, ಅಲ್ಲಿ ದಿನವೂ ಒಂದೇ ರೀತಿಯ ಊಟ ತಿಂದು ನಿಮಗೆ ತುಂಬಾ ಬೋರ್ ಆಗಬಹುದು. ಇಂತಹ ಸಂದರ್ಭದಲ್ಲಿ ನೀವು ಮನೆಯಿಂದ ಈ ರೀತಿ ಚಟ್ನಿಪುಡಿ ಮಾಡಿಸಿಕೊಂಡು ಹೋಗಿ. ಅಲ್ಲಿಯ ಆಹಾರ ಸೇರದೇ ಇದ್ರೂ ನೀವು ಇದನ್ನು ಹಾಕಿಕೊಂಡು ತಿಂಡಿ ತಿನ್ನಬಹುದು.
ಸಿಂಪಲ್ ಹಾಗೂ ಟೇಸ್ಟಿ ಆಗಿರೋ ಚಟ್ನಿ ಪುಡಿಯನ್ನು ನಿಮ್ಮ ಅಮ್ಮನ ಕೈರುಚಿಯಲ್ಲಿ ಸವಿಯುವ ಆಸೆ ನಿಮಗಿರಬಹುದು. ಅಥವಾ ಹೊಸದಾಗಿ ಮದುವೆಯಾಗಿ ನೀವು ಹೊಸ ರುಚಿ ಟ್ರೈ ಮಾಡುತ್ತಿರಬಹುದು. ಪಿಜಿ ಅಥವಾ ಹಾಸ್ಟೇಲ್‌ನಲ್ಲಿ ಉಳಿದುಕೊಂಡು ನೀವು ಕಲಿಯುತ್ತಿದ್ದರೆ, ಅಲ್ಲಿ ದಿನವೂ ಒಂದೇ ರೀತಿಯ ಊಟ ತಿಂದು ನಿಮಗೆ ತುಂಬಾ ಬೋರ್ ಆಗಬಹುದು. ಇಂತಹ ಸಂದರ್ಭದಲ್ಲಿ ನೀವು ಮನೆಯಿಂದ ಈ ರೀತಿ ಚಟ್ನಿಪುಡಿ ಮಾಡಿಸಿಕೊಂಡು ಹೋಗಿ. ಅಲ್ಲಿಯ ಆಹಾರ ಸೇರದೇ ಇದ್ರೂ ನೀವು ಇದನ್ನು ಹಾಕಿಕೊಂಡು ತಿಂಡಿ ತಿನ್ನಬಹುದು.
ಇದನ್ನು ಅನ್ನದ ಜೊತೆ ಹೇಗೆ ತಿನ್ನುವುದು ಎಂದು ನೀವು ಆಲೋಚಿಸುತ್ತಾ ಇದ್ದರೆ ತುಪ್ಪದ ಜೊತೆ ಈ ಪುಡಿಯನ್ನು ಹಾಕಿಕೊಂಡು ಕಲಸಿ ತಿನ್ನಬಹುದು. ಅಥವಾ ಇದಕ್ಕೆ ಇನ್ನೊಂದಷ್ಟು ರುಚಿ ಸೇರಿಸಲು ಬಯಸಿದರೆ ಶೇಂಗಾವನ್ನು ಹುರಿದು ಹಾಕಿಕೊಳ್ಳಬಹುದು. ಹಾಗಾದರೆ ಈ ಚಟ್ನಿಪುಡಿ ಮಾಡಲು ಏನೆಲ್ಲ ಸಾಮಗ್ರಿಗಳು ಬೇಕು ಎನ್ನುವುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ಇದನ್ನು ಮಾಡಲು ಕೆಲವೇ ಕೆಲವು ಸಾಮಗ್ರಿಗಳು ಸಾಕು ಆ ಪದಾರ್ಥಗಳು ಯಾವುವೆಂದು ನಾವಿಲ್ಲಿ ನೀಡುತ್ತೇವೆ ಗಮನಿಸಿ.
ಚಟ್ನಿಪುಡಿ ಮಾಡಲು ಬೇಕಾಗಿರುವ ಪದಾರ್ಥಗಳು
ಶೇಂಗಾ
ಗುಂಟೂರು ಮೆಣಸು
ಒಣ ಮೆಣಸು
ಕರಿಬೇವಿನ ಸೊಪ್ಪು
ಒಣಕೊಬ್ಬರಿ ಇದ್ದರೆ ಬೆಸ್ಟ್
ಪುಟಾಣಿ
ಉಪ್ಪು
ಹುಣಸೆ ಹಣ್ಣು
ಬೇಕಿದ್ದರೆ ಬೆಳ್ಳುಳ್ಳಿ
ಚಟ್ನಿಪುಡಿ ಮಾಡುವ ವಿಧಾನ
ಮೊದಲಿಗೆ ಮಾಡುವ ವಿಧಾನವನ್ನು ನೋಡಿಕೊಳ್ಳೋಣ. ಹುರಿದ ಕಡಲೆ ಕಾಳು ಅಥವಾ ಶೇಂಗಾ ಒಂದು ಕಡೆ ಇಟ್ಟುಕೊಳ್ಳಿ. ಒಣಕೊಬ್ಬರಿ ಹಾಗೂ ಒಣ ಮೆಣಸು ಕರಿಬೇವಿನ ಸೊಪ್ಪು ,ಒಣಕೊಬ್ಬರಿ, ಪುಟಾಣಿ, ಉಪ್ಪು, ಹುಣಸೆ ಹಣ್ಣು ಬೇಕಿದ್ದರೆ ಬೆಳ್ಳುಳ್ಳಿ ಇವುಗಳೆಲ್ಲವನ್ನೂ ಚೆನ್ನಾಗಿ ಹುರಿದುಕೊಳ್ಳಿ. ಗಮನದಲ್ಲಿರಲಿ ಎಣ್ಣೆ ಹಾಕದೇ ನೀವು ಹುರಿದುಕೊಳ್ಳಬೇಕು. ನಂತರ ಅದನ್ನು ಸ್ವಲ್ಪ ಸಮಯ ತಣ್ಣಗಾಗಲು ಬಿಡಬೇಕು. ಆ ನಂತರದಲ್ಲಿ ಅದೆಲ್ಲವನ್ನೂ ತೆಗೆದುಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬುವಾಗ ನೀರು ಹಾಕಬಾರದು.
ಇದು ಹುಡಿ ಹುಡಿಯಾಗಿ ಇರಬೇಕು. ಇದಕ್ಕೆ ನಂತರ ಉಪ್ಪು ಸೇರಿಸಿಕೊಳ್ಳಿ. ಇನ್ನು ಸ್ವಲ್ಪ ಸಿಹಿಯನ್ನು ಇಷ್ಟಪಡುವವರು ನೀವಾಗಿದ್ದರೆ ಒಂದು ಚೂರು ಸಕ್ಕರೆಯನ್ನೂ ಸಹ ಸೇರಿಸಿಕೊಳ್ಳಬಹುದು. ಇದೆಲ್ಲವನ್ನೂ ಸೇರಿಸಿ ರುಬ್ಬಿದ ಈ ಚಟ್ನಿಪುಡಿ ನಿಮ್ಮ ಮೂರೂ ಹೊತ್ತಿನ ಊಟಕ್ಕೆ ಉಪಯೋಗವಾಗುತ್ತದೆ. ದೋಸೆ, ಚಪಾತಿ ಜೊತೆ ಎಣ್ಣೆಗೆ ಮಿಕ್ಸ್ ಮಾಡಿಕೊಂಡು ನೀವು ಇದನ್ನು ತಿನ್ನಬಹುದು. ಇಲ್ಲವಾದರೆ ಅನ್ನ ಮಾಡಿಕೊಂಡಿದ್ದರೆ ಬಿಸಿ ಅನ್ನದ ಮೇಲೆ ತುಪ್ಪ ಹಾಕಿಕೊಳ್ಳಿ. ನಂತರ ಅದರ ಮೇಲೆ ಈ ಚಟ್ನಿಪುಡಿ ಉದುರಿಸಿಕೊಂಡು ಚೆನ್ನಾಗಿ ಕಲಸಿಕೊಂಡು ಊಟ ಮಾಡಿ.