logo
ಕನ್ನಡ ಸುದ್ದಿ  /  ಜೀವನಶೈಲಿ  /  Baby Bathing: ತಿಂಗಳ ಪುಟ್ಟ ಮಗುವನ್ನು ಸ್ನಾನ ಮಾಡಿಸಲು ಭಯವೇ? ಈ ಐಡಿಯಾ ಬಳಸಿದ್ರೆ ಬೇಬಿ ಬಾತ್‌ ತುಂಬಾ ಸುಲಭ

Baby bathing: ತಿಂಗಳ ಪುಟ್ಟ ಮಗುವನ್ನು ಸ್ನಾನ ಮಾಡಿಸಲು ಭಯವೇ? ಈ ಐಡಿಯಾ ಬಳಸಿದ್ರೆ ಬೇಬಿ ಬಾತ್‌ ತುಂಬಾ ಸುಲಭ

Praveen Chandra B HT Kannada

Sep 28, 2024 01:37 PM IST

google News

ಬೇಬಿ ಬಾತ್‌ ಟಿಪ್ಸ್‌

  • Baby bathing: ಪುಟ್ಟ ಮಗುವನ್ನು ಸ್ನಾನ ಮಾಡಲು ತುಂಬಾ ಜನರು ಭಯಪಡುತ್ತಾರೆ. ಮನೆಯಲ್ಲಿ ಹಿರಿಯರಿದ್ದರೆ ಕಾಲಲ್ಲಿ ಮಲಗಿಸಿಕೊಂಡು ಜಳಕ ಮಾಡಿಸುತ್ತಾರೆ. ಆದರೆ, ಸಾಕಷ್ಟು ಜನರಿಗೆ ಇದು ಸವಾಲಿನ ಕೆಲಸವಾಗಬಹುದು. ಆದರೆ, ಮಕ್ಕಳನ್ನು ಸ್ನಾನ ಮಾಡಲು ಸುಲಭವಾಗಿಸುವ ಹಲವು ಗ್ಯಾಜೆಟ್‌ಗಳಿವೆ.

ಬೇಬಿ ಬಾತ್‌ ಟಿಪ್ಸ್‌
ಬೇಬಿ ಬಾತ್‌ ಟಿಪ್ಸ್‌ (freepik)

Baby bathing: ಕೆಲವು ತಿಂಗಳ ಮಗುವಿನ ಸ್ನಾನ ಮಾಡಿಸುವುದು ಕೆಲವರಿಗೆ ಕಷ್ಟದ ಕೆಲಸ. ಪುಟ್ಟ ಮಗುವನ್ನು ಹೇಗೆ ಸ್ನಾನ ಮಾಡಿಸೋದು ಎಂದು ಭಯಪಡಿಸುತ್ತಾರೆ. ಮನೆಯಲ್ಲಿ ಹಿರಿಯ ಮಹಿಳೆಯರಿದ್ದಾರೆ, ಪುಟ್ಟ ಮಕ್ಕಳನ್ನು ಕಾಲುಗಳ ಮೇಲೆ ಮಲಗಿಸಿಕೊಂಡು ಸೊಗಸಾಗಿ ಸ್ನಾನ ಮಾಡಿಸುತ್ತಾರೆ. ಅಜ್ಜಿ, ಅಮ್ಮಂದಿರು ಮನೆಯಲ್ಲಿ ಇಲ್ಲದೆ ಇದ್ದರೆ ಮೊದಲ ಮಗು ಜನಿಸಿದ ಬಳಿಕ ಸಾಕಷ್ಟು ತಾಯಂದಿರು ಪುಟ್ಟ ಮಕ್ಕಳನ್ನು ಸ್ನಾನ ಮಾಡಲು ಹಿಂಜರಿಯುತ್ತಾರೆ. ಮಗುವಿನ ತಲೆ ಹೇಗೆ ಇಡಬೇಕು, ಬಾಯಿ, ಮೂಗಿಗೆ ನೀರು ಹೋಗದಂತೆ ಹೇಗೆ ಸ್ನಾನ ಮಾಡಿಸೋದು ಎಂದು ಆತಂಕಗೊಳ್ಳುತ್ತಾರೆ. ಮಗುವಿನ ಸ್ನಾನ ಮಾಡಿಸುವುದು ಅಂದುಕೊಂಡಷ್ಟು ಕಷ್ಟದ ಕೆಲಸವಲ್ಲ. ಅದೊಂದು ಸುಂದರ ಅನುಭವ. ಈ ಸಮಯದಲ್ಲಿ ಮುದ್ದು ಕಂದಮ್ಮ ನಿಮ್ಮತ್ತ ನೋಡುತ್ತ ನಗುತ್ತಾ, ಕೈಕಾಲು ಅಲ್ಲಾಡಿಸುತ್ತಾ ಇದ್ದಾರೆ ಮನಸ್ಸು ಖುಷಿಗೊಳ್ಳುತ್ತದೆ. ಈಗಿನ ಆಧುನಿಕ ಕಾಲದಲ್ಲಿ ಮಗುವನ್ನು ಸ್ನಾನ ಮಾಡಿಸಲು ನೆರವಾಗಿಸುವ ಗ್ಯಾಜೆಟ್‌ಗಳಿವೆ. ಹೀಗಾಗಿ, ಮಗುವನ್ನು ಸ್ನಾನ ಮಾಡಿಸಲು ಭಯಪಡಬೇಕಿಲ್ಲ.

ಬಾತ್ ಮ್ಯಾಟ್

ಮಕ್ಕಳು ಕುಳಿತುಕೊಳ್ಳಲು ಪ್ರಾರಂಭಿಸಿದ ನಂತರ ಅವರನ್ನು ಮಲಗಿಸಲು ಮತ್ತು ಸ್ನಾನ ಮಾಡಲು ಕಷ್ಟವಾಗುತ್ತದೆ. ಆರು ತಿಂಗಳ ತುಂಬಿದ ಬಳಿಕ ಸಾಮಾನ್ಯವಾಗಿ ಮಗು ಕುಳಿತುಕೊಳ್ಳುತ್ತದೆ. ಈ ಸಮಯದಲ್ಲಿ ಮಕ್ಕಳನ್ನು ಸ್ನಾನ ಮಾಡಿಸಲು ಇರುವ ಬಾತ್‌ ಮ್ಯಾಟ್‌ಗಳು ಉಪಯುಕ್ತವಾಗುತ್ತವೆ. ಮಗುವನ್ನು ಪುಟ್ಟ ಸ್ಟೂಲ್‌ ಮೇಲೆ ಕೂರಿಸಿದರೆ ಮಗು ಕೆಳಗೆ ಬೀಳುವ ಅಪಾಯ ಇರುತ್ತದೆ. ಒಂದು ಕೈಯಲ್ಲಿ ಹಿಡಿದುಕೊಂಡು ಎಷ್ಟು ಹೊತ್ತು ಸ್ನಾನ ಮಾಡಿಸೋದು. ಅದರ ಬದಲು ಈ ಬಾತ್‌ ಮ್ಯಾಟ್‌ ಬಳಸಬಹುದು.

ಬೇಬಿ ಶವರ್ ಕ್ಯಾಪ್

ಮಕ್ಕಳ ಕಣ್ಣು ಸೇರಿದಂತೆ ದೇಹದ ಕೆಲವು ಭಾಗಗಳಿಗೆ ಸಾಬೂನು ಹಚ್ಚಲು ಭಯಪಡುವವರು ನೀವಾಗಿರಬಹುದು. ತಲೆಗೆ ಸೋಪ್‌ ಹಚ್ಚಲು ಭಯವಾಗಬಹುದು. ತಲೆಗೆ ನೀರು ಸುರಿದರೆ ಮಕ್ಕಳ ಬಾಯಿಗೆ ನೀರು ಹೋಗುತ್ತದೆ, ಮೂಗಿಗೆ ನೀರು ಹೋಗುತ್ತದೆ ಎಂಬ ಆತಂಕ ನಿಮಗೆ ಇರಬಹುದು. ಇಂತಹ ಸಮಯದಲ್ಲಿ ಬೇಬಿ ಶವರ್‌ ಕ್ಯಾಪ್‌ಗಳು ನೆರವಾಗುತ್ತವೆ. ಮಗುವಿನ ತಲೆಗೆ ಈ ಬೇಬಿ ಶವರ್‌ ಕ್ಯಾಪ್‌ ತೊಡಿಸಿ ನೀರು ಸುರಿಯಿರಿ. ಮಗುವಿನ ಮುಖದ ಮೇಲೆ ನೀರು ಬೀಳುವುದಿಲ್ಲ. ಕಣ್ಣಿಗೆ ಸೋಪು ಕೂಡ ಬರುವುದಿಲ್ಲ.

ಬೇಬಿ ಬಾತರ್‌

ಆನ್‌ಲೈನ್ ಶಾಪಿಂಗ್‌ ತಾಣಗಳಲ್ಲಿ ಬೇಬಿ ಬಾತರ್‌ ಎಂದು ಉಡುಕಿ. ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸಾಮಾನ್ಯವಾಗಿ ಕಾಲುಗಳ ಮೇಲೆ ಮಲಗಿಸಿ ಸ್ನಾನ ಮಾಡಿಸುವುದು ಸಾಮಾನ್ಯ. ಆದರೆ, ಕೆಲವರಿಗೆ ಇದು ಕಷ್ಟವೆನಿಸಬಹುದು. ಇಂಥವರು, ಬೇಬಿ ಬಾತರ್‌ ಖರರೀದಿಸಬಹುದು. ಇದರ ದರ ಐನೂರು ರೂಪಾಯಿಗಿಂತ ಕಡಿಮೆ ಇರುತ್ತದೆ.

ಬಾತ್ ಸ್ಪಾಂಜ್

ಒಂದು ತಿಂಗಳೊಳಗಿನ ಮಗುವನ್ನು ಸ್ಥಾನ ಮಾಡಿಸುವುದು ಕಷ್ಟ. ಅದಕ್ಕಾಗಿ ಸ್ಪಾಂಜ್‌ ಬಾತ್‌ ಮಾಡುತ್ತಾರೆ. ಆನ್‌ಲೈನ್‌ ಶಾಪಿಂಗ್‌ ತಾಣಗಳಲ್ಲಿ ಮಗುವಿನ ಸ್ನಾನ ಮಾಡಿಸುವ ಬಾತ್‌ ಸ್ಪಾಂಜುಗಳು ದೊರಕುತ್ತವೆ. ಇವು ಮೃದುವಾಗಿ ಮಕ್ಕಳಿಗೆ ಆರಾಮ ಎನಿಸುತ್ತವೆ.

ಸ್ನಾನದ ಆಟಿಕೆಗಳು

ಮಕ್ಕಳು ಸ್ನಾನ ಮಾಡುವ ಸಮಯದಲ್ಲಿ ತೊಂದರೆ ನೀಡುತ್ತಿದ್ದರೆ ಅವರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಸ್ನಾನದ ಆಟಿಕೆಗಳು ದೊರಕುತ್ತವೆ. ನೀರಿನಲ್ಲಿ ಈ ಆಟಿಕೆಗಳನ್ನು ಹಾಕಿದರೆ ಅವು ನೀರಿನಲ್ಲಿ ತೇಲುತ್ತ ಇರುತ್ತವೆ. ಮಕ್ಕಳ ಗಮನ ಅದರ ಮೇಲೆ ಇರುತ್ತದೆ. ನೀವು ನಿಶ್ಚಿಂತೆಯಿಂದ ಮಗುವಿಗೆ ಸ್ನಾನ ಮಾಡಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ