Durga Baby Girl Names (A to J): ಹೆಣ್ಣು ಮಗುವಿಗೆ ನಾಮಕರಣ ಮಾಡಲು ದುರ್ಗಾಮಾತೆಯ 30 ಹೆಸರುಗಳಿವು; ಆದ್ಯಾ, ಅನಿಕಾ, ಧೃತಿ, ಐಶಾನಿ, ಇಶಿ
ಕನ್ನಡ ಸುದ್ದಿ  /  ಜೀವನಶೈಲಿ  /  Durga Baby Girl Names (A To J): ಹೆಣ್ಣು ಮಗುವಿಗೆ ನಾಮಕರಣ ಮಾಡಲು ದುರ್ಗಾಮಾತೆಯ 30 ಹೆಸರುಗಳಿವು; ಆದ್ಯಾ, ಅನಿಕಾ, ಧೃತಿ, ಐಶಾನಿ, ಇಶಿ

Durga Baby Girl Names (A to J): ಹೆಣ್ಣು ಮಗುವಿಗೆ ನಾಮಕರಣ ಮಾಡಲು ದುರ್ಗಾಮಾತೆಯ 30 ಹೆಸರುಗಳಿವು; ಆದ್ಯಾ, ಅನಿಕಾ, ಧೃತಿ, ಐಶಾನಿ, ಇಶಿ

Durga baby girl names: ಹೆಣ್ಣು ಮಗುವಿಗೆ ಹೆಸರಿಡಲು ದುರ್ಗಾ ಮಾತೆಯ ನೂರಾರು ಹೆಸರುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಮನೆಯ ಪುಟ್ಟ ರಾಜಕುಮಾರಿಗೆ ನಾಮಕರಣ ಮಾಡಲು ಸ್ಪೂರ್ತಿಯಾಗುವಂತಹ A ಅಕ್ಷರದಿಂದ J ಅಕ್ಷರದವರೆಗೆ ವಿವಿಧ ಹೆಸರುಗಳು ಇಲ್ಲಿವೆ.

Durga baby girl names: ಹೆಣ್ಣು ಮಗುವಿಗೆ ನಾಮಕರಣ ಮಾಡಬಹುದಾದ ದುರ್ಗಾಮಾತೆಯ ಹೆಸರುಗಳು
Durga baby girl names: ಹೆಣ್ಣು ಮಗುವಿಗೆ ನಾಮಕರಣ ಮಾಡಬಹುದಾದ ದುರ್ಗಾಮಾತೆಯ ಹೆಸರುಗಳು (picsea-unsplash)

Durga baby girl names: ಎಲ್ಲೆಡೆ ದಸರಾ ಸಂಭ್ರಮ. ಶಕ್ತಿದೇವತೆ ದುರ್ಗಾ ಮಾತೆಯ ಆರಾಧನೆಯ ಸಮಯ. ದುರ್ಗಾ ದೇವಿಯನ್ನು ಪೂಜಿಸಿದರೆ ಸಕಲ ಕಷ್ಟಗಳಿಗೆ ಪರಿಹಾರ ದೊರಕುತ್ತದೆ. ಶಕ್ತಿ ಸ್ವರೂಪಿಣಿ ದುರ್ಗಾ ಮಾತೆಗೆ ಹಲವು ಹೆಸರುಗಳಿವೆ. ಹೆಣ್ಣು ಮಗುವಿಗೆ ನಾಮಕರಣ ಮಾಡಲು ಸೂಕ್ತ ಹೆಸರಿಡಲು ಬಯಸುವವರಿಗೆ ದುರ್ಗಾ ಮಾತೆಯ ವಿವಿಧ ಹೆಸರುಗಳು ಸ್ಪೂರ್ತಿ ನೀಡಬಲ್ಲದು. ಕೆಲವೊಂದು ಹೆಸರುಗಳು ಹಳೆಯ ಹೆಸರಿನಂತೆ ಕಂಡರೂ, ಸಾಕಷ್ಟು ಮಾಡರ್ನ್‌ ಹೆಸರುಗಳೂ ಇವೆ. ದುರ್ಗಾ ಮಾತೆಯ ಹೆಸರು ಹೆಣ್ಣು ಮಗುವಿಗೆ ಇಟ್ಟರೆ ದೇವಿಯ ಆಶೀರ್ವಾದ ಆ ಮಗುವಿಗೆ ದೊರಕಲಿದೆ ಎಂದುಕೊಳ್ಳೋಣ.

ಹೆಣ್ಣುಮಗುವಿಗೆ ದುರ್ಗಾ ದೇವಿಯ ಹೆಸರುಗಳು (Durga baby girl names)

  1. ಆದ್ಯಾ: ಹಿಂದೂ ಪುರಾಣಗಳ ಪ್ರಕಾರ ದುರ್ಗಾ ದೇವಿಯನ್ನು ಬ್ರಹ್ಮಾಂಡದಿಂದ ಹೊರಹೊಮ್ಮಿದ ಶಕ್ತಿ ಎಂದು ಕರೆಯುತ್ತಾರೆ. ಇದೇ ಕಾರಣಕ್ಕೆ ಈಕೆಗೆ ಆದ್ಯ ಎಂದು ಕರೆಯುತ್ತಾರೆ. ಅಂದರೆ, ಮೊದಲ ಮಾನವ.
  2. ಐಶಾನಿ: ದುರ್ಗಾ ದೇವಿ ಶಕ್ತಿಯ ಪ್ರತೀಕ. ಶಕ್ತಿ ದೇವತೆಯ ಇನ್ನೊಂದು ಹೆಸರು ಐಶಾನಿ.
  3. ಅನಂತಾ: ದುರ್ಗಾ ಮಾತೆಯ ಶಕ್ತಿಯು ಅಪಾರವಾಗಿದೆ, ಆದ್ದರಿಂದ ಅವಳನ್ನು ಅನಂತಾ ಎಂದೂ ಕರೆಯುತ್ತಾರೆ. ಈ ಹೆಸರು ಗಂಡು ಮಗುವಿಗೂ ಸೂಕ್ತವಾಗಬಲ್ಲದು.
  4. ಅನಿಕಾ: ದುರ್ಗಾ ಎಂದರೆ ಭಯ ಇಲ್ಲದವಳು. ನಿಮ್ಮ ಮಗಳಿಗೂ ಭಯ ಇರಬಾರದು. ಆಕೆಗೆ ದುರ್ಗೆಯ ಇನ್ನೊಂದು ಹೆಸರು ಅನಿಕಾ ಇಡಬಾರದೇಕೆ?
  5. ಅನ್ನಪೂರ್ಣ: ಸಾಕಷ್ಟು ಜನರು ಅನ್ನಪೂರ್ಣ ಎಂಬ ಹೆಸರು ಹೊಂದಿದ್ದಾರೆ. ಇದು ದುರ್ಗಾ ದೇವಿಯ ಮತ್ತೊಂದು ರೂಪವಾಗಿದೆ. ಆಹಾರ ಅಥವಾ ಪೋಷಣೆಯ ದೇವಿ ಈಕೆ. ಭಗವಾನ್ ಶಿವನಿಗೆ ಪ್ರಕೃತಿಯ ಮಹತ್ವವನ್ನು ತೋರಿಸಲು ದುರ್ಗಾ ದೇವಿಯು ಅನ್ನಪೂರ್ಣೆ ರೂಪ ತಾಳಿದಳು.
  6. ಅನ್ವಿತಾ: ಹೆಣ್ಣು ಮಗುವಿಗೆ ದುರ್ಗೆಯ ಹೆಸರು ಇಡಬೇಕು, ಆ ಹೆಸರು ಆಧುನಿಕವಾಗಿರಬೇಕು ಎಂದು ಬಯಸಿದರೆ ಅನ್ವಿತಾ ಸೂಕ್ತವಾಗಬಲ್ಲದು. "ಪ್ರಬುದ್ಧ" "ಅದ್ಭುತ" ಶಕ್ತಿಶಕ್ತಿಶಾಲಿ" ಅರ್ಥಗಳನ್ನು ಈ ಹೆಸರು ಹೊಂದಿದೆ.
  7. ಅಪರಾಜಿತಾ: ಇದು ಸಂಸ್ಕೃತದಿಂದ ಉತ್ಪತ್ತಿಯಾದ ಹೆಸರು. ಅಪರಾಜಿತ ಎಂದರೆ ನಾಶವಾಗದ ಎಂದರ್ಥ. ಈ ಹೆಸರು ದುರ್ಗಾ ದೇವಿಯು ಎಷ್ಟು ಶಕ್ತಿಶಾಲಿ ಎಂದು ಸೂಚಿಸುತ್ತದೆ.
  8. ಅಪರ್ಣಾ: ದುರ್ಗಾ ಮಾತೆಯ ಶಕ್ತಿ ಮತ್ತು ದೃಡ ನಿರ್ಧಾರ ವಿವರಿಸುವ ಅನೇಕ ಕಥೆಗಳಿವೆ. ಅಂತಹ ಒಂದು ಕಥೆಯು ಪಾರ್ವತಿ ದೇವಿಯು ಶಿವನನ್ನು ಮೆಚ್ಚಿಸಲು ಹೇಗೆ ಅತ್ಯಂತ ದೃಢವಾದ ಧ್ಯಾನವನ್ನು ಕೈಗೊಂಡಳು ಎಂಬುದಾಗಿದೆ. ಈಕೆ ಅವಿರತ ಉಪವಾಸ ಕೈಗೊಂಡಳು. ಒಂದು ಎಲೆಯನ್ನೂ ತಿನ್ನಲ್ಲಿಲ್ಲ. ಹೀಗಾಗಿ ಅಪರ್ಣಾ ಎಂಬ ಹೆಸರು ಬಂತು. ಅಪರ್ಣಾ ಎಂದರೆ ಎಲೆಯನ್ನೂ ತಿನ್ನಲು ನಿರಾಕರಿಸುವ ಹುಡುಗಿ.
  9. ಬರುನಿ: ಹಿಂದೂ ಪುರಾಣಗಳ ಪ್ರಕಾರ, ದುಷ್ಟ ವ್ಯಕ್ತಿಯಾದ ಮಹಿಸಾಸುರನನ್ನು ಸೋಲಿಸಲು ದುರ್ಗೆ ಅವತಾರ ತಾಳಿದಳು. ಬರುನಿ ಎಂಬುದು ದುರ್ಗಾ ದೇವಿಯ ಹೆಸರಿನ ಸುಂದರವಾದ ರೂಪಾಂತರವಾಗಿದೆ. ಹೆಣ್ಣು ಮಗುವಿಗೆ ಈ ಹೆಸರು ತುಸು ಡಿಫರೆಂಟ್‌ ಅನಿಸಬಹುದು. ಕನ್ನಡಿಗರಿಗೆ ಈ ಹೆಸರು ಇಷ್ಟವಾಗುವುದು ಕಷ್ಟ.
  10. ಭಗವತಿ: ಅಮೃತಧಾರೆ ಸೀರಿಯಲ್‌ನ ಮಲ್ಲಿಯ ನಿಜವಾದ ಹೆಸರು ಭಗವತಿ(ರಾಧಾ ಭಾಗವತಿ). ನಿಮ್ಮ ಮಗುವಿಗೂ ದುರ್ಗಾದೇವಿಯ ಇನ್ನೊಂದು ಹೆಸರು ಭಗವತಿ ಇಡಬಾರದೇಕೆ?
  11. ಭೈರವಿ: ಈ ಹೆಸರಿನ ಅರ್ಥ ಭಯ ಹುಟ್ಟಿಸುವವಳು, ವಿಸ್ಮಯ ಎಂದಾಗಿದೆ. ಭೈರವಿ ದುರ್ಗಾ ದೇವಿಗೆ ಮತ್ತೊಂದು ಹೆಸರು. ಜಗತ್ತಿನಲ್ಲಿ ನಡೆಯುವ ಕೆಟ್ಟ ಕೆಲಸಗಳನ್ನು ಈಕೆ ನಿಯಂತ್ರಿಸುತ್ತಾಳೆ.
  12. ಭಾರ್ಗವಿ: ಇದು ಸಂಸ್ಕೃತ ಮೂಲದ ಹೆಸರು. ಸುಂದರ ಅಥವಾ ಆಕರ್ಷಕ ಎಂಬ ಅರ್ಥವನ್ನು ಈ ಹೆಸರು ಹೊಂದಿದೆ. ದೇವಿಯು ಸುಂದರ ಮತ್ತು ಆಹ್ಲಾದಕರ ವ್ಯಕ್ತಿತ್ವ ಹೊಂದಿದ್ದಾಳೆ ಎಂದು ಸ್ತುತಿಸಲಾಗುತ್ತದೆ.
  13. ಭವಾನಿ: ಹಿಂದೂ ಪುರಾಣಗಳ ಪ್ರಕಾರ, ದುರ್ಗಾ ದೇವಿಯು ಇಡೀ ಬ್ರಹ್ಮಾಂಡದ ತಾಯಿ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಈಕೆಗೆ ಭವಾನಿ ಎಂಬ ಹೆಸರು ಬಂದಿದೆ.
  14. ಭಾವಪ್ರೀತ: ಹೆಣ್ಣು ಮಗುವಿಗೆ ಡಿಫರೆಂಟ್‌ ಹೆಸರಿಡಬೇಕೆಂದು ಬಯಸುವವರಿಗೆ ಭಾವಪ್ರೀತ ಎಂದು ಹೆಸರಿಡಬಹುದು. ಭವದ ಪ್ರೀತಿಯ ದೇವಿ ಎಂದರ್ಥವಿದೆ.
  15. ಭಾವಿನಿ: ಭವಿನಿ ಎಂಬ ಹೆಸರಿನ ಅರ್ಥ 'ಸುಂದರ' ಎಂದಾಗಿದೆ. . ದುರ್ಗಾ ದೇವಿಯು ಸುಂದರವಾದ ಮುಖವನ್ನು ಹೊಂದಿದ್ದಾಳೆ. ನಿಮ್ಮ ಮನೆಯ ರಾಜಕುಮಾರಿಗೆ ಭಾವಿನಿ ಎಂದು ಹೆಸರಿಡಬಹುದು ಅಲ್ವೇ.
  16. ಭವಿತ: ದೇವಿಯ ಹೆಸರುಗಳಲ್ಲಿ ಒಂದಾಗಿದೆ. ನಿಮ್ಮ ಭವಿಷ್ಯವಾಗಿರುವ ಹೆಣ್ಣು ಮಗುವಿಗೆ ಭವಿಷ್ಯ ಅರ್ಥವಿರುವ ಭವಿತ ಹೆಸರು ಇಡಬಹುದು.
  17. ಭವ್ಯ: ಆಕರ್ಷಕ, ಭವ್ಯವಾಗಿರುವವಳು ಎಂದರ್ಥ. ಇದು ಕೂಡ ದುರ್ಗಾದೇವಿಯ ಇನ್ನೊಂದು ಹೆಸರು.
  18. ಭುವನೇಶ್ವರಿ: ದುರ್ಗಾದೇವಿಯನ್ನು ಎಲ್ಲಾ ಲೋಕಗಳ ಅಧಿಪತಿ ಎಂದು ಕರೆಯಲಾಗುತ್ತದೆ. ದುರ್ಗಾ ದೇವಿಯನ್ನು ಸರ್ವೋಚ್ಚ ಶಕ್ತಿ ಎಂದು ಕರೆಯಲಾಗುತ್ತದೆ, ಅಲ್ಲಿಂದ ಎಲ್ಲಾ ಬ್ರಹ್ಮಾಂಡವನ್ನು ರಚಿಸಲಾಗಿದೆ. ಆದ್ದರಿಂದ ಆಕೆಯನ್ನು ಭುವನೇಶ್ವರಿ ಎಂದು ಕರೆಯಲಾಗುತ್ತದೆ, ಇದರರ್ಥ 'ಎಲ್ಲಾ ಲೋಕಗಳ ಅಧಿಪತಿ'.
  19. ಕೂಷ್ಮಾಂಡ: ಕೂಷ್ಮಾಂಡ ಎಂಬುದು ದುರ್ಗಾ ದೇವಿಯ ಇನ್ನೊಂದು ಹೆಸರು. ಈಕೆಯನ್ನು ಮಹಾಶಕ್ತಿಯಾಗಿ ಪೂಜಿಸಲಾಗುತ್ತದೆ. ಕೂಷ್ಮಾಂಡ ಹೆಸರು ಡಿಫರೆಂಟ್‌ ಆಗಿದೆಯಲ್ವ.
  20. ದಾಕ್ಷಾಯಣಿ: ಓಲ್ಡ್‌ ಈಸ್‌ ಗೋಲ್ಡ್‌ ನನ್ನ ಮಗಳಿಗೆ ಹಳೆಯ ಹೆಸರೇ ಓಕೆ ಎಂದಾದರೆ ದಾಕ್ಷಾಯಣಿ ಎಂದಿಡಿ. ದಕ್ಷನ ಮಗಳು ಎಂದರ್ಥ.
  21. ಧೃತಿ: ಈ ಹೆಸರಿನ ಹೆಣ್ಣು ಮಕ್ಕಳೇ ಈಗ ಹೆಚ್ಚಾಗಿದ್ದಾರೆ. ಧೃತಿ ಎಂದರೆ ಸಂತೋಷ, ಧೈರ್ಯ ಎಂದರ್ಥ. ದುರ್ಗೆಯು ತನ್ನ ಭಕ್ತರಿಗೆ ಸಂತೋಷ ಮತ್ತು ಧೈರ್ಯ ನೀಡುವವಳು.
  22. ಗಾಯತ್ರಿ: ಗಾಯತ್ರಿ ಎಂದೂ ದುರ್ಗಾ ದೇವಿಯನ್ನು ಕರೆಯಲಾಗುತ್ತದೆ. ವೇದಗಳ ತಾಯಿ ಎಂದರ್ಥ.
  23. ಗೌರಿ: ಗೌರಿಯು ದುರ್ಗಾ ದೇವಿಯ ಇನ್ನೊಂದು ಹೆಸರು.
  24. ಗೌತಮಿ: ಗೌತಮಿ ಎಂಬ ಹೆಸರಿನ ಅರ್ಥ 'ಪ್ರಬುದ್ಧ' ಅಥವಾ 'ಅಂಧಕಾರವನ್ನು ಹೋಗಲಾಡಿಸುವವಳು'. ನಿಮ್ಮ ಜೀವನದಲ್ಲಿ ಕತ್ತಲೆಯನ್ನು ಹೋಗಲಾಡಿಸುವ ನಗು ನಿಮ್ಮ ಮಗಳಾಗಿದ್ದರೆ, ಗೌತಮಿ ಎಂದು ಹೆಸರಿಸಿ.
  25. ಗಿರಿಜಾ: ಸ್ವಲ್ಪ ಹಳೆ ಹೆಸರಿನಂತೆ ಭಾಸವಾಗಬಹುದು. ಪರ್ವತ ರಾಜ ಹಿಮವನನ ಮಗಳಾಗಿರುವ ಕಾರಣ ದುರ್ಗಾದೇವಿಯನ್ನು ಗಿರಿಜಾ ಎಂದೂ ಕರೆಯುತ್ತಾರೆ. ಗಂಡು ಮಗುವಾದರೆ ಗಿರೀಶ ಎಂದು ಹೆಸರಿಡಬಹುದು.
  26. ಇಶಾ: ಇಶಾ ಎಂದರೆ 'ದುರ್ಗೆ - ಸ್ತ್ರೀ ಶಕ್ತಿ ಅಥವಾ ರಕ್ಷಿಸುವವಳು.' ಇದು ಹೀಬ್ರೂ ಸಂಸ್ಕೃತಿಯಲ್ಲಿ ವಿಭಿನ್ನ ಅರ್ಥವನ್ನು ಹೊಂದಿದ್ದರೂ ಸಹ ಕಂಡುಬರುವ ಹೆಸರು.
  27. ಇಶಿ: ಒಂದು ಮುದ್ದಾದ ಪುಟ್ಟ ಹೆಸರು.
  28. ಇಶಿಕಾ: ಇಶಿ ಬೇಡ ಎಂದಾದರೆ ಇಶಿಕಾ ಎಂದು ನಿಮ್ಮ ಮಗುವಿಗೆ ಹೆಸರಿಡಬಹುದು.
  29. ಜಯಂತಿ: ದುರ್ಗಾ ದೇವಿಯ ಇನ್ನೊಂದು ಹೆಸರಿದು. ಇದು ಹಳೆ ಶೈಲಿ ಹೆಸರು. ಜಯಂತಿ ಹೆಸರಿನ ಅರ್ಥ 'ಗೆಲುವು,' 'ವಿಜಯ,' 'ಆಚರಣೆ.'
  30. ಜ್ಯೋತ್ಸ್ನಾ: ಈ ಸಂಸ್ಕೃತ ಪದದ ಅರ್ಥ 'ಚಂದ್ರನ ಬೆಳಕು.' ಇದು ದುರ್ಗಾ ದೇವಿಯ ಹೆಸರೂ ಹೌದು. ನೀವು ಆಧುನಿಕ ದುರ್ಗಾ ದೇವಿಯ ಹೆಸರನ್ನು ಹುಡುಕುತ್ತಿದ್ದರೆ ಜ್ಯೋತ್ಸ್ನಾ ಸೂಕ್ತವಾಗಬಲ್ಲದು.

ಇದನ್ನೂ ಓದಿ: Baby Girl Names: ಹೆಣ್ಣು ಮಗುವಿಗೆ ಚಂದದ ಹೆಸರು ಹುಡುಕ್ತಾ ಇದ್ದೀರಾ? ಶಿಫಾಲಿಕಾ ಇವಾಂಶಿಕ… ಕೃಷ್ಣಂ ಪ್ರಣಯ ಸಖಿ ದ್ವಾಪರ ಹಾಡು ಗಮನಿಸಿ

Whats_app_banner