Durga Baby Girl Names (K to R): ಮಹತಿ, ನಿಯತಿ, ಮರುಧ್ವತಿ, ರಿಮಾ... ಹೆಣ್ಣು ಮಗುವಿಗೆ ಇಡಬಹುದಾದ ದುರ್ಗಾ ಮಾತೆಯ 35 ಹೆಸರುಗಳಿವು-durga baby girl names list mahati niyati marudvitha rima beautiful 35 baby names ma durgadevi inspiration pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Durga Baby Girl Names (K To R): ಮಹತಿ, ನಿಯತಿ, ಮರುಧ್ವತಿ, ರಿಮಾ... ಹೆಣ್ಣು ಮಗುವಿಗೆ ಇಡಬಹುದಾದ ದುರ್ಗಾ ಮಾತೆಯ 35 ಹೆಸರುಗಳಿವು

Durga Baby Girl Names (K to R): ಮಹತಿ, ನಿಯತಿ, ಮರುಧ್ವತಿ, ರಿಮಾ... ಹೆಣ್ಣು ಮಗುವಿಗೆ ಇಡಬಹುದಾದ ದುರ್ಗಾ ಮಾತೆಯ 35 ಹೆಸರುಗಳಿವು

Durga Baby Girl Names (K to R): ದುರ್ಗಾದೇವಿ, ದುರ್ಗಾಮಾತೆ, ಆದಿಶಕ್ತಿಯ ವಿವಿಧ ಹೆಸರುಗಳು ನಿಮ್ಮ ಹೆಣ್ಣು ಮಗುವಿಗೆ ಸೂಕ್ತ ಹೆಸರಾಗಬಹುದು. ಮಗುವಿನ ನಾಮಕರಣ ಸಂದರ್ಭದಲ್ಲಿ ಮಹತಿ, ನಿಯತಿ, ಮರುಧ್ವತಿ, ರಿಮಾ ಸೇರಿದಂತೆ ಪರಿಶೀಲಿಸಬಹುದಾದ ವಿವಿಧ ಹೆಸರುಗಳು ಇಲ್ಲಿವೆ.

Durga Baby Girl Names (K to R): ಹೆಣ್ಣು ಮಗುವಿಗೆ ಇಡಬಹುದಾದ ದುರ್ಗಾ ಮಾತೆಯ ಹೆಸರುಗಳ ಪಟ್ಟಿ
Durga Baby Girl Names (K to R): ಹೆಣ್ಣು ಮಗುವಿಗೆ ಇಡಬಹುದಾದ ದುರ್ಗಾ ಮಾತೆಯ ಹೆಸರುಗಳ ಪಟ್ಟಿ (Photo Credit: Durga- peakpx | Baby Girl- Vikram Chouhan Unsplash)

Durga Baby Girl Names: ಹೆಣ್ಣು ಮಗುವಿಗೆ ಸಾಕಷ್ಟು ಜನರು ದುರ್ಗಾ ಮಾತೆಯ ವಿವಿಧ ಹೆಸರುಗಳಿಂದ ಸ್ಪೂರ್ತಿ ಪಡೆದು ಚಂದದ ಹೆಸರು ಇಡುತ್ತಾರೆ. ದುರ್ಗಾ ಮಾತೆಯ ಹೆಸರುಗಳು ಈಗಿನ ಟ್ರೆಂಡ್‌ಗೆ ಸೂಕ್ತವಾಗಿಲ್ಲ ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ, ದುರ್ಗೆಯ ಕೆಲವು ಹೆಸರುಗಳು ಇಂದು ಮಾತ್ರವಲ್ಲದೆ ಎಂದೆಂದಿಗೂ ಟ್ರೆಂಡಿಂಗ್‌ನಲ್ಲಿ ಇರುವಂತೆ ಇವೆ. ಈಗಾಗಲೇ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ದುರ್ಗಾ ಮಾತೆಯ ಹೆಸರುಗಳನ್ನು ಎ ಅಕ್ಷರದಿಂದ ಜೆ ಅಕ್ಷರದವರೆಗೆ ನೀಡಲಾಗಿತ್ತು. ಈ ಲೇಖನದಲ್ಲಿ ಜೆ ಬಳಿಕದ ಹಲವು ಹೆಸರುಗಳನ್ನು ನೀಡಲಾಗಿದೆ. ನಿಮ್ಮ ಮನೆಯ ರಾಜಕುಮಾರಿಗೆ ಇವುಗಳಲ್ಲಿ ಯಾವುದಾದರೂ ಹೆಸರು ಸೂಕ್ತವಾಗಬಹುದೇ ಎಂದು ಪರಿಶೀಲಿಸಿ. ಮಕ್ಕಳಿಗೆ ಹೆಸರು ಇಡುವುದು ಮಗು ಹೆತ್ತ ಬಳಿಕ ತುಂಬಾ ಟೆನ್ಷನ್‌ ಮಾಡಿಕೊಳ್ಳುವ ಸಂಗತಿಗಳಲ್ಲಿ ಒಂದಾಗಿದೆ. ಸಾಕಷ್ಟು ಜನರು ಯಾವ ಹೆಸರಿಡಬಹುದು ಎಂದು ಸಾಕಷ್ಟು ಚಿಂತಿಸುತ್ತಾರೆ. ಎಲ್ಲರೂ ಒಂದೊಂದು ಹೆಸರು ಸಜೆಸ್ಟ್‌ ಮಾಡುತ್ತಾರೆ. ಇರೋದ್ರಲ್ಲಿ ಚೆನ್ನಾಗಿದೆ ಅನಿಸಿದ ಹೆಸರನ್ನು ಮಗುವಿಗೆ ಇಡುತ್ತಾರೆ. ನಿಮ್ಮ ಮಗುವಿಗೆ ಹೆಸರಿಡಲು ಸ್ಪೂರ್ತಿಯಾಗಬಲ್ಲ ಕೆಲವು ಹೆಸರುಗಳು ಇಲ್ಲಿವೆ.

  1. ಕಾಲಕ: ದೇವಿಯ ಈ ಹೆಸರನ್ನೂ ಮಗುವಿಗೆ ಇಡಬಹುದು.
  2. ಕಾಮಾಕ್ಷಿ: ಈ ಹೆಸರು ಸಂಸ್ಕೃತ ಪದಗಳಾದ 'ಕಾಮ,' ಅಂದರೆ 'ಪ್ರೀತಿ,' ಅಥವಾ 'ಬಯಕೆ,' ಮತ್ತು 'ಅಕ್ಷಿ' ಎಂದರೆ 'ಕಣ್ಣು'ನಿಂದ ಉತ್ಪತ್ತಿಯಾಗಿದೆ. ದುರ್ಗಾ ದೇವಿ ಫಲವತ್ತತೆಯ ದೇವತೆ ಎಂದು ಕರೆಯಲ್ಪಡುತ್ತಾಳೆ.
  3. ಕಾಮಕ್ಯ: ಭಾರತದ ಪೂರ್ವದಲ್ಲಿರುವ ರಾಜ್ಯವಾದ ಅಸ್ಸಾಂನಲ್ಲಿ ದುರ್ಗಾ ದೇವಿಯನ್ನು ಕಾಮಕ್ಯ ಎಂದು ಕರೆಯಲಾಗುತ್ತದೆ. ಇಷ್ಟಗಳನ್ನು ಪೂರೈಸುವವಳು ಎಂದರ್ಥ.
  4. ಕರಾಲಿಕಾ: ದುರ್ಗೆಯ ಕ್ರೂರತೆಯನ್ನು ಪ್ರತಿಬಿಂಬಿಸುವ ಹೆಸರನ್ನು ನೀವು ಹುಡುಕುತ್ತಿದ್ದೀರಾ? ಕರಾಲಿಕಾ ಡಿಫರೆಂಟ್‌ ಆಗಿದೆ ಅಲ್ವ.
  5. ಕಾತ್ಯಾಯಿನಿ: ಕಾತ್ಯಾಯಿನಿಯು ದುರ್ಗಾ ದೇವಿಯ ಮುಖ್ಯ ರೂಪಗಳಲ್ಲಿ ಒಂದಾಗಿದೆ. ಆಕೆಯನ್ನು ಮಹಿಷಾಸುರ ಎಂಬ ರಾಕ್ಷಸನ ಸಂಹಾರಕ ಎಂದು ಕರೆಯಲಾಗುತ್ತದೆ. ನವರಾತ್ರಿ ಆಚರಣೆಗಳಲ್ಲಿ ದುರ್ಗಾ ದೇವಿಯನ್ನು ಪೂಜಿಸುವ ರೂಪಗಳಲ್ಲಿ ಒಂದಾಗಿದೆ.
  6. ಕಲ್ಯಾಣಿ: ಕಲ್ಯಾಣ, ಶುಭಕರ ಎಂಬ ಅರ್ಥ ಹೊಂದಿದೆ. ಮಂಗಳಕರ ಹೆಸರಾಗಿದೆ.
  7. ಕನ್ಯಕಾ: ಈ ಹೆಸರು ಚಂದ ಇದೆ ಅಲ್ವ. ನಿಮ್ಮ ಮನೆಯ ರಾಜಕುಮಾರಿಗೆ ಇದೇ ಹೆಸರು ಇಡುವಿರಾ.
  8. ಕೌಶಿಕಿ: ದುರ್ಗಾ ಸ್ತ್ರೀ 'ಶಕ್ತಿ' ಎನ್ನಲಾಗುತ್ತದೆ. ನಿಮ್ಮ ಮಗಳಿಗೆ ಈ ಹೆಸರು ಇಡಬಹುದೇ? ಆಲೋಚಿಸಿ.
  9. ಕಿರಾತಿ: ಶಿವನನ್ನು ಕಿರಾತೇಶ್ವರ ಎಂದೂ ಕರೆಯುತ್ತಾರೆ. ದುರ್ಗಾದೇವಿಯನ್ನು ಅನೇಕ ಆಧ್ಯಾತ್ಮಿಕ ಗ್ರಂಥಗಳಲ್ಲಿ ಕಿರಾತಿ ಎಂದು ಉಲ್ಲೇಖಿಸಲಾಗಿದೆ. ನಿಮ್ಮ ಮನೆಯ ಪುಟಾಣಿಗೆ ಕಿರಾತಿ ಎಂದು ಹೆಸರಿಡುವಿರಾ?
  10. ಲೀಲಾವತಿ: ನಿಮ್ಮ ಪುಟ್ಟ ಹುಡುಗಿಗೆ ನೀವು ಹಳೆಯ-ಶೈಲಿಯ ಹೆಸರನ್ನು ಹುಡುಕುತ್ತಿದ್ದರೆ ಲೀಲಾವತಿ ಎಂದು ಹೆಸರಿಡಬಹುದು.
  11. ಲೋಕೇಶ್ವರಿ: ದುರ್ಗೆ ಇಡೀ ಬ್ರಹ್ಮಾಂಡದ ಸರ್ವೋಚ್ಚ ಶಕ್ತಿ ಆಗಿರುವುದರಿಂದ ಲೋಕೇಶ್ವರಿ ಎಂದು ಕರೆಯಲಾಗುತ್ತದೆ.
  12. ಮಹಾಗೌರಿ: ಗೌರಿ ಎಂಬ ಹೆಸರಿನ ಇನ್ನೊಂದು ರೂಪ.
  13. ಮಹಾಮಾಯೆ: ಹಿಂದೂ ಧರ್ಮದ ಪ್ರಕಾರ ನಮ್ಮ ಅಸ್ತಿತ್ವ ಒಂದು ಭ್ರಮೆ. ಮಹಾಮಾಯೆಯು ಈ ಭ್ರಮೆಯನ್ನು ಸೂಚಿಸುತ್ತದೆ. ಇದು ಗೌತಮ ಬುದ್ಧನ ತಾಯಿಯ ಹೆಸರೂ ಆಗಿತ್ತು. ಬಂಗಾಳದಲ್ಲಿ, ದುರ್ಗಾ ದೇವಿಯನ್ನು ವರ್ಣಿಸಲು ಮಹಾಮಾಯೆ ಎಂದು ಕರೆಯಲಾಗುತ್ತದೆ.
  14. ಮಹಾಶ್ವೇತಾ: ಮಹಾಶ್ವೇತಾ ದೇವಿ ಎಂದೂ ಹೆಸರಿಡಬಹುದು.
  15. ಮಹತಿ: ಹೆಸರು ಚಂದ ಇದೆ ಅಲ್ವೇ? ಮಹತಿ ಎಂದರೆ 'ಹಿಗ್ಗು,' 'ಹಿಗ್ಗಿಸು,' 'ಗೌರವ,' ಅಥವಾ 'ಶ್ರೇಷ್ಠ" ಅರ್ಥಗಳನ್ನು ಹೊಂದಿದೆ. ದುರ್ಗಾ ದೇವಿಯ ಹೆಸರುಗಳಲ್ಲಿ ಇದು ಕೂಡ ಒಂದು. ನಿಮ್ಮ ಪುಟ್ಟ ಮಗುವಿಗೆ ಮುದ್ದಾದ ಮತ್ತು ಸೊಗಸಾದ ಹೆಸರನ್ನು ಹುಡುಕುತ್ತಿದ್ದರೆ ಮಹತಿ ಎಂದು ಇಡಬಹುದು.
  16. ಮಹೇಶ್ವರಿ: ಹಿಂದೂ ಪುರಾಣಗಳ ಪ್ರಕಾರ, ದುರ್ಗಾ ದೇವಿಯು ಶಿವನ ದೇಹದ ಅರ್ಧ ಭಾಗವನ್ನು ಹೊಂದಿದ್ದಾಳೆ ಎಂದು ಹೇಳಲಾಗುತ್ತದೆ. ಹೀಗಾಗಿ, ಆಕೆಯನ್ನು ಮಹೇಶ್ವರಿ ಎಂದೂ ಕರೆಯಲಾಗುತ್ತದೆ, ಇದರರ್ಥ 'ಮಹೇಶನ (ಶಿವ) ಶಕ್ತಿಯನ್ನು ಹೊಂದಿರುವವಳು.
  17. ಮಹೋದರಿ: ನಿಮ್ಮ ಹೆಣ್ಣು ಮಗುವಿಗೆ ವಿಶಿಷ್ಟವಾದ ದುರ್ಗಾ ದೇವಿಯ ಹೆಸರನ್ನು ನೀವು ಹುಡುಕುತ್ತಿದ್ದರೆ ಮಹೋದರಿ ಎಂದು ನಾಮಕರಣ ಮಾಡಬಹುದು.
  18. ಮೀನಾಕ್ಷಿ: ಮೀನಾಕ್ಷಿ ಎಂದರೆ 'ಸುಂದರವಾದ ಮೀನಿನಂತ ಕಣ್ಣುಗಳನ್ನು ಹೊಂದಿರುವವಳು.'
  19. ಮಾಲಿನಿ: ಈ ಹೆಸರಿನ ಅರ್ಥ 'ಮಾಲೆಯನ್ನು ಧರಿಸಿದವನು.' ಕೊರಳಲ್ಲಿ ಮಾಲೆಯನ್ನು ಧರಿಸಿರುವುದರಿಂದ ದುರ್ಗಾದೇವಿಯನ್ನು ಮಾಲಿನಿ ಎಂದೂ ಕರೆಯುತ್ತಾರೆ. ದುರ್ಗಾ ದೇವಿಯು ಎಷ್ಟು ದೈವಿಕ ಮತ್ತು ಸುಂದರವಾಗಿದ್ದಳು ಎಂದು ಕವಿಗಳು ವಿವರಿಸಿದಾಗ ಈ ಹೆಸರು ಸೃಷ್ಟಿಯಾಯಿತು.
  20. ಮನಸ್ವಿನಿ: ಮನಸ್ವಿನಿ ಎಂದರೆ 'ಎಲ್ಲರ ಮನಸ್ಸಿನಲ್ಲಿ ನೆಲೆಸಿರುವವಳು,' ದುರ್ಗಾದೇವಿಯ ಅನೇಕ ಹೆಸರುಗಳಲ್ಲಿ ಇದು ಕೂಡ ಒಂದಾಗಿದೆ, ಏಕೆಂದರೆ ಅವಳು ಯಾವಾಗಲೂ ತನ್ನ ಭಕ್ತರ ಮನಸ್ಸಿನಲ್ಲಿ ನೆಲೆಸಿದ್ದಾಳೆ. ನಿಮ್ಮ ಪುಟಾಣಿಗೆ ಈ ದೈವಿಕ ಮತ್ತು ಸುಂದರವಾದ ಹೆಸರನ್ನು ಇಡಬಹುದು.
  21. ಮರುಧ್ವತಿ: ಈ ಹೆಸರು ದುರ್ಗೆ, ಆದಿ ಶಕ್ತಿ ಎಂಬ ಅರ್ಥ ಹೊಂದಿದೆ. ಈ ಹೆಸರು ಚಂದ ಇದೆ.
  22. ಮೃದಾ: ಇದು ಕೂಡ ಚಂದದ ಹೆಸರು. ಮೃದಾ ಎಂದರೆ ಎಂದರೆ 'ಮಣ್ಣು' ಮತ್ತು 'ಮೃದು.' ಮೃದಾ ಸಂಸ್ಕೃತ ಮೂಲದ ಹೆಸರು.
  23. ನಂದಿನಿ: ಜನಪ್ರಿಯ ಹೆಸರು. ಇದು ದುರ್ಗಾ ದೇವಿಯ ಅವತಾರಗಳಲ್ಲಿ ಒಂದು ಹೆಸರು. ಮಹಾಕಾವ್ಯಗಳ ಪ್ರಕಾರ ದುರ್ಗಾ ದೇವಿಯು ನಂದಿನಿಯ ರೂಪದಲ್ಲಿ ಯಶೋದೆಗೆ ಜನಿಸಿದಳು ಮತ್ತು ರಾಜ ಕಂಸನಿಂದ ಕೊಲ್ಲಲ್ಪಟ್ಟಳು.
  24. ನವದುರ್ಗಾ: ದೇವಿಯ ಹೆಸರು ಇಡಲು ಬಯಸುವವರು ನವದುರ್ಗೆ ಎಂದೂ ಮಗಳಿಗೆ ಹೆಸರು ಇಡಬಹುದು.
  25. ನಿತ್ಯ: ದೇವಿಯ ಈ ಹೆಸರನ್ನು ಸಾಕಷ್ಟು ಜನರು ಹೆಣ್ಣು ಮಗುವಿಗೆ ಇಡುತತಾರೆ.
  26. ನಿಯತಿ: ನಿಯತಿ ಎಂದರೆ 'ಅದೃಷ್ಟ,' 'ಭಾಗ್ಯ,' ಅಥವಾ 'ಸರ್ವೋಚ್ಚ ಶಕ್ತಿ.' ಇದು ದುರ್ಗಾ ದೇವಿಯ ಮತ್ತೊಂದು ಹೆಸರಾಗಿದೆ. ದೇವಿಯನ್ನು ಬ್ರಹ್ಮಾಂಡದ ಸರ್ವೋಚ್ಚ ಶಕ್ತಿ ಎಂದು ನಂಬಲಾಗಿದೆ. ನಿಮ್ಮ ಮಗಳಿಗೆ ಈ ಮುದ್ದಾದ ಶಕ್ತಿಯುತವಾದ ಹೆಸರನ್ನು ಇಡಬಹುದು.
  27. ಪಟವ್ಯ: ಇದು ಹಿಂದೂ ಮೂಲದ ಹೆಸರು, ಇದರ ಅರ್ಥ 'ದುರ್ಗಾ ದೇವಿಯಂತಿರುವವರು. ಹೆಸರು ಡಿಫರೆಂಟ್‌ ಆಗಿದೆ. ಯೋಚಿಸಿ.
  28. ಪ್ರಗಲ್ಭ: ಪ್ರಗಲ್ಭ ಎಂಬುದು ಒಂದು ವಿಶಿಷ್ಟವಾದ ಸಂಸ್ಕೃತ ಹೆಸರು. ಇದರರ್ಥ 'ಶಕ್ತಿಯ ದೇವತೆ-ದುರ್ಗಾ.'
  29. ಪ್ರಕೃತಿ: ಭಗವದ್ಗೀತೆಯ ಪ್ರಕಾರ ಪ್ರಕೃತಿಯು ಪ್ರಕೃತಿಯಲ್ಲಿರುವ ದುರ್ಗಾ ದೇವಿಯ ಇನ್ನೊಂದು ರೂಪವಾಗಿದೆ. ಪುರುಷ (ಶಿವ) ಮತ್ತು ಪ್ರಕೃತಿ (ಪಾರ್ವತಿ) ಯ ಸಂಯೋಗದಿಂದ ಇಡೀ ವಿಶ್ವವು ರೂಪುಗೊಂಡಿದೆ ಎಂದು ನಂಬಲಾಗಿದೆ.
  30. ಪರಮೇಶ್ವರಿ: ದುರ್ಗಾದೇವಿಯ ಪತ್ನಿಯು ಶಿವನಾಗಿರುವುದರಿಂದ, ಆಕೆಯನ್ನು ಪರಮೇಶ್ವರಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ, ಇದರರ್ಥ 'ಶಿವನಿಗೆ ಪ್ರಿಯವಾದವಳು'.
  31. ಪಾರ್ವತಿ: ಪಾರ್ವತಿ ಎಂದರೆ 'ಪರ್ವತಗಳ ಮಗಳು', ಪರ್ವತ ರಾಜನ ಮಗಳಾದ ಪಾರ್ವತಿಯಾಗಿ ಜನ್ಮ ಪಡೆದು ಶಿವನನ್ನು ಮದುವೆಯಾದ ಕಾರಣ ದುರ್ಗಾದೇವಿಯನ್ನು ಈ ಹೆಸರಿನಿಂದ ಕರೆಯಲಾಗುತ್ತದೆ.
  32. ಪ್ರಭಾ: ದುರ್ಗಾ ದೇವಿಯು ಬ್ರಹ್ಮಾಂಡದಾದ್ಯಂತ ಬೆಳಕು ಮತ್ತು ಸಂತೋಷವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ, ಅವಳನ್ನು ಪ್ರಭಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ, ಇದರರ್ಥ 'ಬೆಳಕು,' 'ಹೊಳಪು'.
  33. ಪುಣ್ಯಕೀರ್ತಿ: ದುರ್ಗಾ ದೇವಿಯು ಮಾನವಕುಲವನ್ನು ಅನೇಕ ವಿಪತ್ತುಗಳು ಮತ್ತು ರಾಕ್ಷಸರಿಂದ ರಕ್ಷಿಸಿದ್ದಾಳೆ ಎಂದು ತಿಳಿದುಬಂದಿದೆ. ಆದುದರಿಂದಲೇ ಆಕೆಯನ್ನು ಪುಣ್ಯಕೀರ್ತಿ ಎಂದೂ ಕರೆಯುತ್ತಾರೆ.
  34. ರೇವತಿ: ಇದು ಚಾಲ್ತಿಯಲ್ಲಿರುವ ಹೆಸರು.
  35. ರಿಮಾ: ಶಕ್ತಿಯ ದೇವತೆಯ ಇನ್ನೊಂದು ಹೆಸರು. ಇದು ಸಂಸ್ಕೃತ ಮಾತ್ರವಲ್ಲದೆ ಪರ್ಷಿಯನ್‌, ಅರೇಬಿಕಾ ಭಾಷೆಗಳಲ್ಲಿಯೂ ಚಾಲ್ತಿಯಲ್ಲಿರುವ ಹೆಸರು.

ಇದನ್ನೂ ಓದಿ: Durga Baby Girl Names (A to J): ಹೆಣ್ಣು ಮಗುವಿಗೆ ನಾಮಕರಣ ಮಾಡಲು ದುರ್ಗಾಮಾತೆಯ 30 ಹೆಸರುಗಳಿವು; ಆದ್ಯಾ, ಅನಿಕಾ, ಧೃತಿ, ಐಶಾನಿ, ಇಶಿ

mysore-dasara_Entry_Point