logo
ಕನ್ನಡ ಸುದ್ದಿ  /  ಜೀವನಶೈಲಿ  /  ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ: ಭವಿಷ್ಯದ ಯಶಸ್ಸಿಗಾಗಿ ಚಿಕ್ಕಂದಿನಿಂದಲೇ ಮಕ್ಕಳಿಗೆ ಕಲಿಸಿ ಮನೆಗೆಲಸ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ: ಭವಿಷ್ಯದ ಯಶಸ್ಸಿಗಾಗಿ ಚಿಕ್ಕಂದಿನಿಂದಲೇ ಮಕ್ಕಳಿಗೆ ಕಲಿಸಿ ಮನೆಗೆಲಸ

Priyanka Gowda HT Kannada

Oct 10, 2024 05:59 PM IST

google News

ಮಕ್ಕಳಿಗೆ ಮನೆಗೆಲಸವನ್ನು ಮಾಡಿಸುವುದರ ಪ್ರಯೋಜನಗಳು ಏನೇನು, ಎಂಬುದು ಇಲ್ಲಿದೆ.

    • ಮನೆಕೆಲಸಗಳನ್ನು ಮಾಡಿಸುವುದರ ಮೂಲಕ ಮಕ್ಕಳಿಗೆ ಜವಾಬ್ದಾರಿಗಳನ್ನು ಕಲಿಸುವುದು ಪ್ರಮುಖ ಜೀವನ ಕೌಶಲ್ಯಗಳನ್ನು ಕಲಿಸಲು ಬಹಳ ಉಪಯುಕ್ತವಾಗಿದೆ. ಇದರಿಂದ ಭವಿಷ್ಯದಲ್ಲಿ ಮಕ್ಕಳ ಯಶಸ್ಸು ಮತ್ತು ಸ್ವಾತಂತ್ರ್ಯಕ್ಕಾಗಿ ಅಡಿಪಾಯವನ್ನು ಹಾಕಲು ಸುಲಭವಾಗುತ್ತದೆ.
ಮಕ್ಕಳಿಗೆ ಮನೆಗೆಲಸವನ್ನು ಮಾಡಿಸುವುದರ ಪ್ರಯೋಜನಗಳು ಏನೇನು, ಎಂಬುದು ಇಲ್ಲಿದೆ.
ಮಕ್ಕಳಿಗೆ ಮನೆಗೆಲಸವನ್ನು ಮಾಡಿಸುವುದರ ಪ್ರಯೋಜನಗಳು ಏನೇನು, ಎಂಬುದು ಇಲ್ಲಿದೆ. (freepik)

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆ ಮಾತಿದೆ. ಮಕ್ಕಳು ಚಿಕ್ಕವರಿಂದಾಗಲೇ ಅವರಿಗೆ ಮನೆಗೆಲಸ ಕಲಿಸಬೇಕು. ಮಕ್ಕಳು ಬೆಳೆದಂತೆ, ಮನೆಗೆ ಕೊಡುಗೆ ನೀಡುವ ಅವರ ಸಾಮರ್ಥ್ಯವು ವಿಕಸನಗೊಳ್ಳುತ್ತದೆ. ಹೀಗಾಗಿ ವಯಸ್ಸಿಗೆ ಅನುಗುಣವಾಗಿ ಮಕ್ಕಳಿಗೆ ಮನೆ ಕೆಲಸಗಳನ್ನು ಪರಿಚಯಿಸುವುದು ಬಹಳ ಮುಖ್ಯ. ಇದು ನಿಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡುವುದಲ್ಲದೆ, ಮಕ್ಕಳ ಸಾಮರ್ಥ್ಯಕ್ಕೂ ಪೂರಕವಾಗಿರುತ್ತದೆ. ಮನೆಕೆಲಸಗಳನ್ನು ಮಾಡಿಸುವುದರ ಮೂಲಕ ಮಕ್ಕಳಿಗೆ ಜವಾಬ್ದಾರಿಗಳನ್ನು ಕಲಿಸುವುದು ಪ್ರಮುಖ ಜೀವನ ಕೌಶಲ್ಯಗಳನ್ನು ಕಲಿಸಲು ಬಹಳ ಉಪಯುಕ್ತವಾಗಿದೆ. ಇದರಿಂದ ಭವಿಷ್ಯದಲ್ಲಿ ಮಕ್ಕಳ ಯಶಸ್ಸು ಮತ್ತು ಸ್ವಾತಂತ್ರ್ಯಕ್ಕಾಗಿ ಅಡಿಪಾಯವನ್ನು ಹಾಕಲು ಸುಲಭವಾಗುತ್ತದೆ. ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಬಟ್ಟೆ ಒಗೆಯುವುದು, ಸಸ್ಯಗಳಿಗೆ ನೀರುಣಿಸುವುದು ಮತ್ತು ಊಟದ ಮೇಜು ಶುಚಿಗೊಳಿಸುವುದು ಸೇರಿದಂತೆ ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡಿಸಬೇಕು. ಹೀಗೆ ಮಕ್ಕಳು ಬೆಳೆದಂತೆ ತಮಗೆ ಬೇಕಾದ ಅಡುಗೆಗಳನ್ನು ತಾವೇ ತಯಾರಿಸಲು ಮುಂದಾಗುತ್ತಾರೆ. ಮನೆಯನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಇತರೆ ಕೆಲಸಗಳಲ್ಲಿ ಕೈ ಜೋಡಿಸುತ್ತಾರೆ. ಮಕ್ಕಳಿಗೆ ಮನೆಗೆಲಸವನ್ನು ಮಾಡಿಸುವುದರ ಪ್ರಯೋಜನಗಳು ಏನೇನು, ಎಂಬುದು ಇಲ್ಲಿದೆ.

ಮಕ್ಕಳಿಗೆ ಕೆಲಸಗಳನ್ನು ಕಲಿಸುವ ಪ್ರಯೋಜನಗಳು

ಸ್ವಾತಂತ್ರ್ಯವನ್ನು ನಿರ್ಮಿಸುತ್ತದೆ: ಮಕ್ಕಳು ಸ್ವಂತವಾಗಿ ಕೆಲಸ ಮಾಡುವ ಮೂಲಕ ಸ್ವಾತಂತ್ರ್ಯವನ್ನು ಕಲಿಯುತ್ತಾರೆ. ಇದು ಅವರ ವೈಯಕ್ತಿಕ ಬೆಳವಣಿಗೆಯ ಪ್ರಮುಖ ಭಾಗವಾಗಿದೆ.

ಸ್ವಾಭಿಮಾನವನ್ನು ಸುಧಾರಿಸುತ್ತದೆ: ಮಕ್ಕಳು ಮನೆ ಕೆಲಸಗಳನ್ನು ಪೂರ್ಣಗೊಳಿಸಿದಾಗ ಅವರ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವು ಹೆಚ್ಚಾಗುತ್ತದೆ. ಅದು ಅವರಿಗೆ ಸಾಧನೆಯ ಭಾವವನ್ನು ನೀಡುತ್ತದೆ.

ಟೀಮ್ ವರ್ಕ್: ಕೌಟುಂಬಿಕ ಕೆಲಸಗಳು ಟೀಮ್‌ವರ್ಕ್ (ತಂಡದ ಕೆಲಸ) ಮತ್ತು ಸಹಯೋಗವನ್ನು ಕಲಿಸಲು ಉತ್ತಮ ಮಾರ್ಗವಾಗಿದೆ.

ಸಮಯ ನಿರ್ವಹಣೆಯನ್ನು ಉತ್ತೇಜಿಸುತ್ತದೆ: ಮಕ್ಕಳಿಗೆ ಚಿಕ್ಕ ವಯಸ್ಸಿನಂದಲೇ ಕೆಲಸ ಮಾಡಿಸುವುದರಿಂದ ಆದ್ಯತೆಗಳನ್ನು ಹೊಂದಿಸುವುದು ಮತ್ತು ಅವರ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ ಎಂಬುದನ್ನು ಕಲಿಸುತ್ತದೆ.

ಕೆಲಸದ ನೀತಿಯನ್ನು ಪ್ರೋತ್ಸಾಹಿಸುತ್ತದೆ: ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡುವುದರಿಂದ ಮಕ್ಕಳು ಕೆಲಸದ ನೀತಿಯನ್ನು ಅಭಿವೃದ್ಧಿಪಡಿಸಲು ಮತ್ತು ಪರಿಶ್ರಮದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಜವಾಬ್ದಾರಿಯನ್ನು ನಿರ್ಮಿಸಲು ವಯಸ್ಸಿಗೆ ಸೂಕ್ತವಾದ ಕೆಲಸಗಳು

ಮಗುವಿನ ವಯಸ್ಸು ಮತ್ತು ಸಾಮರ್ಥ್ಯಗಳ ಆಧಾರದ ಮೇಲೆ ಕೆಲಸಗಳನ್ನು ನಿಯೋಜಿಸುವುದು ಅತ್ಯಗತ್ಯ. ವಿವಿಧ ವಯೋಮಾನದವರಿಗೆ ಸೂಕ್ತವಾದ ಕಾರ್ಯಗಳ ವಿವರ ಇಲ್ಲಿದೆ:

ವಯಸ್ಸು 3 ರಿಂದ 5: ಆಟಿಕೆಗಳನ್ನು ಎತ್ತಿಕೊಳ್ಳುವುದು, ಸಾಕುಪ್ರಾಣಿಗಳಿಗೆ ಆಹಾರ ನೀಡುವುದು, ಆಟಿಕೆ ಸಾಮಾನುಗಳಲ್ಲಿರುವ ಧೂಳು ತೆಗೆಯುವುದು.

ವಯಸ್ಸು 6 ರಿಂದ 8: ಟೇಬಲ್ ಅನ್ನು ಸರಿಮಾಡಿಸುವುದು, ಒಗೆದ ಬಟ್ಟೆಯನ್ನು ತರಲು ಹೇಳುವುದು, ಸಸ್ಯಗಳಿಗೆ ನೀರುಹಾಕುವುದು.

ವಯಸ್ಸು 9 ರಿಂದ 12: ಕಸ ಗುಡಿಸುವುದು, ಪಾತ್ರೆಗಳನ್ನು ತೊಳೆಯುವುದು ಇತ್ಯಾದಿ.

ವಯಸ್ಸು 13ಕ್ಕಿಂತ ಹೆಚ್ಚಿದ್ದರೆ: ಸರಳವಾದ ಭಕ್ಷ್ಯವನ್ನು ತಯಾರಿಸುವುದು, ಬಟ್ಟೆ ಒಗೆಯುವುದು, ಉದ್ಯಾನವನ ನೋಡಿಕೊಳ್ಳುವುದು ಇತ್ಯಾದಿ.

ಸಮತೋಲಿತ ದಿನಚರಿ ರಚಿಸಿ

ಕರ್ತವ್ಯಗಳನ್ನು ನಿಯೋಜಿಸುವುದು ಒಳ್ಳೆಯದೆ. ಆದರೆ, ಪೋಷಕರು ತಮ್ಮ ಮಕ್ಕಳ ಬಿಡುವಿನ ಸಮಯ ಮತ್ತು ಜವಾಬ್ದಾರಿಗಳನ್ನು ಸಮತೋಲಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಯುವಕರಲ್ಲಿ ಸೃಜನಶೀಲತೆಯನ್ನು ಬೆಳೆಸುವುದು ಮತ್ತು ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಅಷ್ಟೇ ಮುಖ್ಯ. ಮನರಂಜನೆ, ಚಟುವಟಿಕೆಗಳು ಮತ್ತು ಸಂಭಾಷಣೆಗಳಿಗೆ ಸಮಯವನ್ನು ನೀಡುವುದರ ಜೊತೆಗೆ, ಪೋಷಕರು ಮಕ್ಕಳ ಜೊತೆ ಎಲ್ಲಾ ವಿಚಾರಗಳಲ್ಲೂ ಜತೆಯಾಗಿರಬೇಕು.

ಮಕ್ಕಳನ್ನು ಕೆಲಸ ಮಾಡಿಸುವುದರಿಂದ ಅವರಿಗೆ ಜವಾಬ್ದಾರಿ ಕಲಿಸಲು ಸುಲಭವಾಗುತ್ತದೆ. ಇದು ಮಕ್ಕಳಿಗೆ ಜೀವನ ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ, ವಯಸ್ಸಿಗೆ ಸೂಕ್ತವಾದ ದಿನಚರಿಗಳನ್ನು ಮಾಡಲು, ಕರ್ತವ್ಯಗಳನ್ನು ನಿಯೋಜಿಸಲು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಸುಲಭವಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ