ಆಟಿಕೆ ಮತ್ತು ಪುಸ್ತಕದ ಹೊರತಾಗಿಯೂ ನಿಮ್ಮ ಮಕ್ಕಳನ್ನು ಆ್ಯಕ್ಟಿವ್ ಆಗಿಡಲು ಇಲ್ಲಿದೆ ಉಪಾಯ; ನಿಮ್ಮ ಮಕ್ಕಳು ಖಂಡಿತ ಚುರುಕಾಗ್ತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  ಆಟಿಕೆ ಮತ್ತು ಪುಸ್ತಕದ ಹೊರತಾಗಿಯೂ ನಿಮ್ಮ ಮಕ್ಕಳನ್ನು ಆ್ಯಕ್ಟಿವ್ ಆಗಿಡಲು ಇಲ್ಲಿದೆ ಉಪಾಯ; ನಿಮ್ಮ ಮಕ್ಕಳು ಖಂಡಿತ ಚುರುಕಾಗ್ತಾರೆ

ಆಟಿಕೆ ಮತ್ತು ಪುಸ್ತಕದ ಹೊರತಾಗಿಯೂ ನಿಮ್ಮ ಮಕ್ಕಳನ್ನು ಆ್ಯಕ್ಟಿವ್ ಆಗಿಡಲು ಇಲ್ಲಿದೆ ಉಪಾಯ; ನಿಮ್ಮ ಮಕ್ಕಳು ಖಂಡಿತ ಚುರುಕಾಗ್ತಾರೆ

ನಿಮ್ಮ ಮಕ್ಕಳ ಮೊಬೈಲ್‌ ನೋಡುವ ಅವಧಿಯನ್ನು ಕಡಿಮೆ ಮಾಡಿಸಬೇಕು ಎಂದು ನೀವು ಅಂದುಕೊಂಡಿದ್ದರೆ, ಈ ಚಟುವಟಿಕೆಗಳನ್ನು ಮಾಡಿಸಿ. ನಿಮ್ಮ ಮಕ್ಕಳು ತುಂಬಾ ಇಷ್ಟಪಟ್ಟು ಆಡುತ್ತಾರೆ. ಆಟಿಕೆಗಳ ಅವಶ್ಯಕತೆಯೂ ಇಲ್ಲ. ಒಮ್ಮೆ ಟ್ರೈ ಮಾಡಿ.

ಆಟಿಕೆ ಮತ್ತು ಪುಸ್ತಕದ ಹೊರತಾಗಿಯೂ ನಿಮ್ಮ ಮಕ್ಕಳನ್ನುಆ್ಯಕ್ಟಿವ್ ಆಗಿಡಿ
ಆಟಿಕೆ ಮತ್ತು ಪುಸ್ತಕದ ಹೊರತಾಗಿಯೂ ನಿಮ್ಮ ಮಕ್ಕಳನ್ನುಆ್ಯಕ್ಟಿವ್ ಆಗಿಡಿ

ಮಕ್ಕಳು ತುಂಬಾ ಸಮಯ ಮೊಬೈಲ್ ನೋಡಿದರೆ ಅದು ಅವರ ಕಣ್ಣಿಗೆ ಪೆಟ್ಟು ನೀಡುತ್ತದೆ. ಈ ವಿಷಯ ತಿಳಿದಿರುವ ತಾಯಂದಿರು ತಮ್ಮ ಮಕ್ಕಳನ್ನು ಹೇಗೆ ಮೊಬೈಲ್‌ ಬಳಕೆಯಿಂದ ಬೇರೆ ಕಡೆ ಸೆಳೆಯಬೇಕು ಎಂದು ಆಲೋಚನೆ ಮಾಡುತ್ತಾರೆ. ಅಂತಹ ತಾಯಂದಿರಿಗೆ ತುಂಬಾ ಸಹಾಯ ಆಗುವ ಟಿಪ್ಸ್ ಇಲ್ಲಿದೆ. ಯಾವುದೇ ಆಟಿಕೆಯನ್ನು ಬಳಕೆ ಮಾಡದೆ ಕೇವಲ ಸ್ಟೀಲ್ ಲೋಟಗಳನ್ನು ಬಳಸಿ ಈ ಆ್ಯಕ್ಟಿವಿಟಿ ಮಾಡಿಸಬಹುದು.

ಕಪ್ಪೆ ಜಿಗಿತ: ಮೊದಲಿಗೆ ನೀವು ಐದು ಲೋಟಗಳನ್ನು ತೆಗೆದುಕೊಳ್ಳಿ ನಂತರ ಅವುಗಳನ್ನು ಸಾಲಾಗಿ ಜೋಡಿಸಿ. ಯಾವ ಲೋಟಕ್ಕೂ ನಿಮ್ಮ ಕೈ ಅಥವಾ ಕಾಲು ತಾಗಿಸದೇ ಜಂಪ್ ಮಾಡಿಕೊಂಡು ಹೋಗಲು ಮಕ್ಕಳಿಗೆ ಸೂಚಿಸಿ. ಜಂಪ್‌ ಮಾಡುತ್ತಾ ಯಾವ ಲೋಟವನ್ನೂ ಬೀಳಿಸದೆ ಹೋದರೆ ಅವರಿಗೊಂದು ಚಾಕಲೇಟ್ ನೀಡಿ.

ಲೈಟ್‌ ಫೋಕಸ್ ಜಂಪ್: ಒಂದು ಉದ್ದನೆಯ ಲೈನ್ ಹಾಕಿ. ಒಂದು ಲೈಟ್‌ ತೆಗೆದುಕೊಂಡು ಅದರಿಂದ ಬೆಳಕನ್ನು ಬಿಡಿ. ಗೆರೆಯ ಎಡ ಹಾಗೂ ಬಲಬದಿಯಲ್ಲಿ ಬೆಳಕು ಬಿಡಿ. ಆ ಲೈಟ್ ಯಾವ ಕಡೆ ಬೀಳುತ್ತದೆಯೋ ಅಲ್ಲಿ ನಿಮ್ಮ ಮಕ್ಕಳ ಹತ್ತಿರ ನಿಲ್ಲಲು ಹೇಳಿ.

ಸ್ನೇಕ್ ವಾಕ್: ಹಾವು ಹೇಗೆ ಸಂಚರಿಸುತ್ತದೆಯೋ ಅದೇ ರೀತಿ ನೀವು ನಿಮ್ಮ ಮಗುವಿನ ಬಳಿ ನಡೆದುಕೊಂಡು ಬರಲು ಹೇಳಿ. ಲೋಟಗಳನ್ನು ಇಟ್ಟು ಒಮ್ಮೆ ಬಲ, ಒಮ್ಮೆ ಎಡ ಭಾಗದಿಂದ ಲೋಟಗಳನ್ನು ದಾಟಿಕೊಂಡು ಸಾಗಲು ಹೇಳಿ.

ಬಾಲ್ ಟ್ರಾನ್ಸ್‌ಪರ್‌: ಒಂದು ಪ್ಲೇಟ್‌ ಇಟ್ಟು ಲೋಟದ ಮೇಲಿನ ಭಾಗದಲ್ಲಿ ಚೆಂಡು ಇಡಿ. ನಂತರ ಒಂದೊಂದೇ ಚೆಂಡನ್ನು ತೆಗೆದು ಪಕ್ಕದಲ್ಲಿ ಇಟ್ಟಿರುವ ಪ್ಲೇಟ್‌ನಲ್ಲಿ ಇಡಲು ಹೇಳಿ. ಈ ರೀತಿ ಮಾಡುವುದರಿಂದ ನಿಮ್ಮ ಮಕ್ಕಳು ಚುರುಕಾಗುತ್ತಾರೆ. ಎಲ್ಲ ಆಟಗಳನ್ನು ಮಕ್ಕಳಿಂದಲೇ ಆಡಿಸಿ.

ಜಂಪ್‌: ಇದು ಸಹ ಕಪ್ಪೆ ಜಿಗಿತದ ರೀತಿಯಲ್ಲೇ ಇರುತ್ತದೆ. ಆದರೆ ಇದಕ್ಕೆ ಕೈ ಬಳಕೆ ಮಾಡುವ ಅಗತ್ಯವಿಲ್ಲ. ಕೇವಲ ಕಾಲುಗಳನ್ನು ಬಳಿಸಿ ಲೋಟಗಳನ್ನು ದಾಟುತ್ತಾ ಜಂಪ್ ಮಾಡಿಕೊಂಡು ಬಂದರೆ ಸಾಕು.

ಮೇಲಿನ ವಿವರಣೆ ನಿಮಗೆ ಅರ್ಥವಾಗಿಲ್ಲ ಇನ್ನಷ್ಟು ಸ್ಪಷ್ಟನೆ ಬೇಕು ಎಂದಾದರೆ ನೀವು ನಾವಿಲ್ಲಿ ನೀಡಿರುವ ವಿಡಿಯೋ ಗಮನಿಸಿಕೊಳ್ಳಬಹುದು. ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.

ಮೂವತ್ತೈದು ಸಾವಿರಕ್ಕೂ ಅಧಿಕ ಜನ ಈ ವಿಡಿಯೋ ಲೈಕ್ ಮಾಡಿದ್ದಾರೆ. ಎಷ್ಟೋ ಜನ ತಮ್ಮ ಮಕ್ಕಳಿಗೆ ಈ ಚಟುವಟಿಕೆಯನ್ನು ಮಾಡಿಸಲು ಪ್ರಯತ್ನಪಟ್ಟಿದ್ದಾರೆ. ಇನ್ನೊಂದಷ್ಟು ಜನ ಕಾಮೆಂಟ್ ಕೂಡ ಮಾಡಿದ್ದಾರೆ. ಮಿದುಳಿನ ಚಟುವಟಿಕೆ, ಕ್ರಿಯಾತ್ಮಕತೆ ಈ ಚಟುವಟಿಕೆಯಿಂದ ಹೆಚ್ಚಾಗುತ್ತದೆ. ಮಕ್ಕಳ ಚಟುವಟಿಕೆಗಳು ಮೆದುಳಿನ ಬೆಳವಣಿಗೆ ಸಹಕಾರಿಯಾಗಿದೆ. ಮನೆಯಲ್ಲಿ ನೀವು ಮಕ್ಕಳಿಗೆ ಈ ರೀತಿ ಆಟಗಳನ್ನು ಕಲಿಸಬೇಕು ಎಂದಿದ್ದಾರೆ.

ಹೀಗಿತ್ತು ಕಾಮೆಂಟ್ಸ್‌

ಜರಿಮುಂತಾಹ ಅವರು ಕಾಮೆಂಟ್ ಮೂಲಕ ಸ್ಟೀಲ್ ಲೋಟಗಳ ಬಳಕೆ ಮಾಡಬೇಡಿ. ಇವುಗಳ ಅಂಚು ತುಂಬಾ ಹರಿತವಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಇವು ಹಾನಿಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ.

ಕವಿತಾ ಅವರು ಕಾಮೆಂಟ್‌ ಮಾಡಿದ್ದಾರೆ. ಅವರ ಪ್ರಕಾರ ಲೋಟವನ್ನು ನೇರವಾಗಿ ಇಡುವುದಕ್ಕಿಂತ ತಲೆಕೆಳಗಾಗಿಸಿ ಇಟ್ಟರೆ ಮಕ್ಕಳಿಗೆ ಏಟಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಈ ರೀತಿ ಲೋಟಗಳನ್ನು ಇಡಬೇಡಿ ಎಂದಿದ್ದಾರೆ.

Whats_app_banner