logo
ಕನ್ನಡ ಸುದ್ದಿ  /  ಜೀವನಶೈಲಿ  /  ಕಿವಿಯ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ: ನಿಮ್ಮ ಕಿವಿಯ ಆಕಾರ ಹೇಗಿದೆ ಪರೀಕ್ಷಿಸಿ, ಗುಣ, ಸ್ವಭಾವ ತಿಳಿಯಿರಿ

ಕಿವಿಯ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ: ನಿಮ್ಮ ಕಿವಿಯ ಆಕಾರ ಹೇಗಿದೆ ಪರೀಕ್ಷಿಸಿ, ಗುಣ, ಸ್ವಭಾವ ತಿಳಿಯಿರಿ

HT Kannada Desk HT Kannada

Nov 28, 2024 03:29 PM IST

google News

ಕಿವಿಯ ಆಕಾರದಿಂದಲೂ ನಿಮ್ಮಲ್ಲಡಗಿರುವ ವ್ಯಕ್ತಿತ್ವ ತಿಳಿದುಕೊಳ್ಳಬಹುದು: ಇವುಗಳಲ್ಲಿ ನಿಮ್ಮದು ಯಾವ ಆಕಾರದ ಕಿವಿ ಎಂದು ಪರೀಕ್ಷಿಸಿಕೊಳ್ಳಿ

    • ನಿಮ್ಮ ಕಿವಿಯ ಆಕಾರವು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಕಿವಿಯ ಆಕಾರವು ನಿಮ್ಮಲ್ಲಿರುವ ಆತ್ಕವಿಶ್ವಾಸ, ಸೃಜನಶೀಲತೆ, ಸಹಾನೂಭೂತಿ, ದಯೆ, ಮುಂತಾದ ಗುಣಗಳನ್ನು ಹೇಳುತ್ತದೆ. ಇಲ್ಲಿ ಕಿವಿಗಳ ಆಕಾರದ ಮೇಲೆ ಅವರ ಗುಣಸ್ವಭಾವಗಳನ್ನು ಹೇಳಲಾಗಿದೆ. ಇದರ ಮೂಲಕ ನಿಮ್ಮಲ್ಲಡಗಿರುವ ವ್ಯಕ್ತಿತ್ವ ಪರೀಕ್ಷಿಸಿಕೊಳ್ಳಿ.
ಕಿವಿಯ ಆಕಾರದಿಂದಲೂ ನಿಮ್ಮಲ್ಲಡಗಿರುವ ವ್ಯಕ್ತಿತ್ವ ತಿಳಿದುಕೊಳ್ಳಬಹುದು: ಇವುಗಳಲ್ಲಿ ನಿಮ್ಮದು ಯಾವ ಆಕಾರದ ಕಿವಿ ಎಂದು ಪರೀಕ್ಷಿಸಿಕೊಳ್ಳಿ
ಕಿವಿಯ ಆಕಾರದಿಂದಲೂ ನಿಮ್ಮಲ್ಲಡಗಿರುವ ವ್ಯಕ್ತಿತ್ವ ತಿಳಿದುಕೊಳ್ಳಬಹುದು: ಇವುಗಳಲ್ಲಿ ನಿಮ್ಮದು ಯಾವ ಆಕಾರದ ಕಿವಿ ಎಂದು ಪರೀಕ್ಷಿಸಿಕೊಳ್ಳಿ (PC: HT File Photo)

ದೇಹದ ಭಾಗಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವ ಗುಣಲಕ್ಷಣಗಳನ್ನು ಹೇಳುವ ಪರ್ಸನಾಲಿಟಿ ಟೆಸ್ಟ್‌ಗಳು ಇಂಟರ್ನೆಟ್‌ನಲ್ಲಿ ಸಾಕಷ್ಟು ದೊರಕುತ್ತವೆ. ಅಂತಹುದೇ ಒಂದು ವ್ಯಕ್ತಿತ್ವ ಪರೀಕ್ಷೆಯಲ್ಲಿ ನಿಮ್ಮ ಕಿವಿಗಳ ಆಕಾರವನ್ನು ಆಧರಿಸಿ ನಿಮ್ಮ ಗುಣಸ್ವಭಾವವನ್ನು ಹೇಳಲಾಗುತ್ತಿದೆ. ಕಿವಿಯ ಆಕಾರಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯದ್ದಾಗಿರುತ್ತದೆ. ಕೆಲವರದು ಚೂಪು ಕಿವಿಯಾದರೆ, ಕೆಲವರದು ಸಣ್ಣಕಿವಿ, ಇನ್ನೂ ಕೆಲವರದು ದೊಡ್ಡ ಕಿವಿ, ಮತ್ತೆ ಕೆಲವರದು ಮೊಂಡು ಕಿವಿ. ಹೀಗೆ ಬೇರೆ ಬೇರೆ ಆಕಾರದಲ್ಲಿರುವ ಕಿವಿಗಳನ್ನು ಆಧರಿಸಿ ಅವರಲ್ಲಿ ಸುಪ್ತವಾಗಿ ಅಡಗಿರುವ ಗುಣಲಕ್ಷಣಗಳನ್ನುಹೇಳಲಾಗುತ್ತದೆ. 

ಚಿಕ್ಕ ಕಿವಿ: ನಿಮ್ಮದು ಚಿಕ್ಕ ಕಿವಿಯಾಗಿದ್ದರೆ ನೀವು ಸಂಕೋಚ ಸ್ವಭಾವದವರಾಗಿರುವುದರ ಜೊತೆಗೆ ಅಂತರ್ಮುಖಿಯಾಗಿರುತ್ತೀರಿ. ನೀವು ಒಂಟಿಯಾಗಿ ಅಥವಾ ನಿಮ್ಮ ಕುಟುಂಬ ಮತ್ತು ಹತ್ತಿರದ ಸ್ನೇಹಿತರ ಜೊತೆ ಮಾತ್ರ ಸಮಯವನ್ನು ಕಳೆಯಲು ಬಯಸುತ್ತೀರಿ. ನೀವು ಎಲ್ಲಾ ವಿಷಯಗಳ ಬಗ್ಗೆ ಮಾತನಾಡುವ ವ್ಯಕ್ತಿಗಳಾಗಿರುವುದಿಲ್ಲ. ಕೇವಲ ಅವಶ್ಯಕತೆಯಿದ್ದಾಗ ಅಥವಾ ನಿಮ್ಮಸರದಿ ಬಂದಾಗ ಮಾತ್ರ ನಿಮ್ಮ ಅಭಿಪ್ರಾಯ ಹೇಳುತ್ತೀರಿ. ಚಿಕ್ಕ ಕಿವಿ ಹೊಂದಿದವರು ಸೃಜನಶೀಲರು, ಎಲ್ಲವನ್ನು ಆಳವಾಗಿ ಗಮನಿಸುವವರು, ಬೇರೆಯವರ ಅಭಿಪ್ರಾಯಕ್ಕಾಗಿ ಕಾಯದವರಾಗಿರುತ್ತಾರೆ. ನೀವು ಏಕಾಂಗಿತನವನ್ನು ಬಯಸುವವರಾಗಿದ್ದರೂ ಸಮಾಜಿಕವಾಗಿ ಸಮತೋಲನವನ್ನು ಸಾಧಿಸುವವರಾಗಿರುತ್ತೀರಿ.

ದೊಡ್ಡ ಕಿವಿ: ನೀವು ದೊಡ್ಡ ಕಿವಿಗಳನ್ನು ಹೊಂದಿದ್ದರೆ, ನೀವು ಜೀವನದಲ್ಲಿ ಬರುವ ಸಂದರ್ಭಗಳನ್ನು ಶಾಂತವಾಗಿ ಮತ್ತು ಸ್ಥಿರವಾಗಿ ಎದುರಿಸುತ್ತೀರಿ ಎಂದರ್ಥ. ನಿಮ್ಮಲ್ಲಿ ಆತ್ಮವಿಶ್ವಾಸ ಮತ್ತು ದೃಢತೆಯಿರುವುದು ಕಾಣಬಹುದು. ನಿಮ್ಮಲ್ಲಿ ಸುಲಭವಾಗಿ ನಿರಾಶೆಗೊಳ್ಳುವ ಹಾಗೂ ಸೋಲುವ ಗುಣವಿರುವುದಿಲ್ಲ. ನೀವು ಸ್ವಾವಲಂಬಿಗಳು ಮತ್ತು ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಲು ಸಮರ್ಥರಾಗಿದ್ದೀರಿ. ನಿಮ್ಮದು ನೀರಿನಂತೆ ಹರಿಯುವ ಮನೋಭಾವ. ಭವಿಷ್ಯದ ಬಗ್ಗೆ ಕಡಿಮೆ ಚಿಂತಿಸುತ್ತೀರಿ.

ಚೂಪು ಕಿವಿ: ಚೂಪಾದ ಕಿವಿಗಳನ್ನು ಹೊಂದಿರುವ ವ್ಯಕ್ತಿಗಳು ಅರ್ಥಗರ್ಭಿತ ಮತ್ತು ಕಲ್ಪನಾಲೋಕದಲ್ಲಿರುವವರಾಗಿರುತ್ತಾರೆ. ನೀವು ಜಗತ್ತನ್ನು ನಿಮ್ಮದೇ ಆದ ವಿಶಿಷ್ಟ ದೃಷ್ಟಿಯಲ್ಲಿ ನೋಡುತ್ತೀರಿ. ನೀವು ಉತ್ತಮ ಭಾವನೆಗಳನ್ನು ಹೊಂದಿರುವವರಾಗಿದ್ದೀರಿ. ಜೊತೆಗೆ ಬುದ್ಧಿವಂತಿಕೆಯು ನಿಮಗಿದೆ. ನಿಮ್ಮಲ್ಲಿ ಬೌದ್ಧಿಕ ಸಾಮರ್ಥ್ಯ, ಮಹತ್ವಾಕಾಂಕ್ಷೆಯಿದೆ. ಇಷ್ಟೇ ಅಲ್ಲದೇ ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹೆದರುವುದಿಲ್ಲ.

ಕಿವಿಯೋಲೆಗಳು ಅಂಟಿಕೊಂಡಿರುವಂತ ಕಿವಿ: ಈ ರೀತಿ ಕಿವಿ ಹೊಂದಿರುವವರು ಭಾವನಾತ್ಮಕವಾಗಿ ಶಕ್ತಿಯುತವಾಗಿರುವ ವ್ಯಕ್ತಿಗಳಾಗಿರುತ್ತಾರೆ. ನೀವು ಸಹಾನುಭೂತಿ ಮತ್ತು ತಿಳುವಳಿಕೆಯ ವ್ಯಕ್ತಿತ್ವವನ್ನು ಹೊಂದಿರುತ್ತೀರಿ. ನೀವು ಭಾವನೆಗಳಿಗೆ ಸಿಲುಕುವ ಬದಲು ತರ್ಕ ಮತ್ತು ಕಾರಣಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನಿಮ್ಮಲ್ಲಿರುವ ಚೇತರಿಸಿಕೊಳ್ಳುವ ಮನೋಭಾವ ನಿಮಗಾದ ಹಿನ್ನಡೆಗಳಿಂದ ಪುನಃ ಮರಳುವಂತೆ ಮಾಡುತ್ತದೆ. ನೀವು ಜೀವನದಲ್ಲಿ ಸದಾ ಮುಂದುವರಿಯುವವರಾಗಿರುತ್ತೀರಿ.

ನೋಡಿದ್ರಲ್ಲ ಯಾವ ರೀತಿಯ ಕಿವಿಯಿದ್ದರೆ ವ್ಯಕ್ತಿತ್ವ ಹೇಗಿರುತ್ತದೆ ಎಂದು. ಹಾಗಾದ್ರೆ ಇನ್ನೇಕೆ ತಡ. ಕನ್ನಡಿಯ ಮುಂದೆ ನಿಂತು ನಿಮ್ಮ ಕಿವಿ ಯಾವ ಆಕರದಲ್ಲಿದೆ ಎಂದು ಸೂಕ್ಷ್ಮವಾಗಿ ನೋಡಿಕೊಳ್ಳಿ. ಆಮೇಲೆ ನೀವೇ ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ಕಂಡುಕೊಳ್ಳಬಹುದು.

(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ದೊರೆತ ಮಾಹಿತಿಯನ್ನು ಆಧರಿಸಿದ ಬರಹ. ಈ ಅಂಶಗಳನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪುಷ್ಟೀಕರಿಸುವುದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ