logo
ಕನ್ನಡ ಸುದ್ದಿ  /  ಜೀವನಶೈಲಿ  /  ಈ ಸೀಸನ್‌ನಲ್ಲಿ ಮದುವೆ ಆಗ್ತಾ ಇದೀರಾ, ಚಳಿಗಾಲದಲ್ಲಿ ಹನಿಮೂನ್‌ಗೆ ಹೇಳಿ ಮಾಡಿಸಿದ ಜಗತ್ತಿನ ಟಾಪ್ 10 ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ

ಈ ಸೀಸನ್‌ನಲ್ಲಿ ಮದುವೆ ಆಗ್ತಾ ಇದೀರಾ, ಚಳಿಗಾಲದಲ್ಲಿ ಹನಿಮೂನ್‌ಗೆ ಹೇಳಿ ಮಾಡಿಸಿದ ಜಗತ್ತಿನ ಟಾಪ್ 10 ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ

Reshma HT Kannada

Dec 02, 2024 02:27 PM IST

google News

ಚಳಿಗಾಲಕ್ಕೆ ಬೆಸ್ಟ್ ಎನ್ನಿಸುವ ವಿಶ್ವದ ಟಾಪ್ 10 ಹನಿಮೂನ್‌ ತಾಣಗಳು

    • ಮದುವೆ ಸೀಸನ್ ಶುರುವಾಗಿದೆ. ಈ ವರ್ಷ ಭಾರತದಲ್ಲಿ ಬರೋಬ್ಬರಿ 40 ಲಕ್ಷದಷ್ಟು ಮಂದಿ ಮದುವೆಯಾಗುತ್ತಿದ್ದಾರಂತೆ. ಮದುವೆಯಾದ ಮೇಲೆ ಹನಿಮೂನ್‌ಗೆ ಹೋಗೋದು ಸಹಜ. ನೀವು ಈ ವರ್ಷ ಮದುವೆಯಾಗುತ್ತಿದ್ದು ಹನಿಮೂನ್‌ ಪ್ಲಾನ್ ಪ್ಲಾನ್ ಇದ್ರೆ ಗಮನಿಸಿ. ಪ್ರಪಂಚದ 10 ಬೆಸ್ಟ್‌ ಹನಿಮೂನ್‌ ತಾಣಗಳ ಬಗ್ಗೆ ನಾವಿಲ್ಲಿ ಹೇಳಿದ್ದೇವೆ.
ಚಳಿಗಾಲಕ್ಕೆ ಬೆಸ್ಟ್ ಎನ್ನಿಸುವ ವಿಶ್ವದ ಟಾಪ್ 10 ಹನಿಮೂನ್‌ ತಾಣಗಳು
ಚಳಿಗಾಲಕ್ಕೆ ಬೆಸ್ಟ್ ಎನ್ನಿಸುವ ವಿಶ್ವದ ಟಾಪ್ 10 ಹನಿಮೂನ್‌ ತಾಣಗಳು (PC: Canva)

ಭಾರತದಲ್ಲಿ ಈಗ ಮದುವೆ ಕಾಲ. ಮದುವೆಯಾದ ನಂತರ ದಂಪತಿಗಳು ಹನಿಮೂನ್‌ಗೆ ಹೋಗುವ ಮೂಲಕ ತಮ್ಮ ಖಾಸಗಿ ಕ್ಷಣಗಳನ್ನು ಸುಂದರ ತಾಣಗಳಲ್ಲಿ ಕಳೆಯಲು ಬಯಸುತ್ತಾರೆ. ಅದರಲ್ಲೂ ಇದೀಗ ಚಳಿಗಾಲ. ಈ ಸಮಯದಲ್ಲಿ ರೊಮ್ಯಾಂಟಿಕ್ ಫೀಲ್ ಕೊಂಚ ಹೆಚ್ಚೇ ಇರುತ್ತದೆ. ಹಾಗಾಗಿ ಚಳಿಗಾಲದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣಗಳಲ್ಲಿ ನೀವು ನಿಮ್ಮ ಹನಿಮೂನ್ ಕ್ಷಣಗಳನ್ನು ಎಂಜಾಯ್ ಮಾಡಬಹುದು.

ಪ್ರಪಂಚದಾದ್ಯಂತ ಹಲವು ಜಾಗಗಳು ಚಳಿಗಾಲದಲ್ಲಿ ಹನಿಮೂನ್‌ಗೆ ಹೇಳಿ ಮಾಡಿಸಿದಂತಿದೆ. 2024–25ರ ಚಳಿಗಾಲದಲ್ಲಿ ನೀವು ಹನಿಮೂನ್ ಪ್ಲಾನ್ ಮಾಡುತ್ತಿದ್ದರೆ ಈ 10 ದೇಶಗಳನ್ನ ಖಂಡಿತ ಮಿಸ್ ಮಾಡದಿರಿ.

ಸ್ವಿಟ್ಜರ್ಲೆಂಡ್

ಚಳಿಗಾಲದಲ್ಲಿ ಹನಿಮೂನ್ ಮಾಡಲು ಸ್ವಿಟ್ಜರ್ಲೆಂಡ್‌ಗಿಂತ ಉತ್ತಮ ತಾಣ ಇನ್ನೊಂದಿಲ್ಲ. ಇಲ್ಲಿ ಹಿಮದಿಂದ ಆವೃತವಾದ ಪರ್ವತಗಳು, ಆಕರ್ಷಕ ಹಳ್ಳಿ ಪರಿಸರ, ಐಷಾರಾಮಿ ರೆಸಾರ್ಟ್‌ಗಳು ನಿಮ್ಮ ಹನಿಮೂನ್ ಕ್ಷಣಗಳನ್ನ ಅತ್ಯಂತ ಮಧುರವಾಗಿಸುವುದು ಸುಳ್ಳಲ್ಲ.

ಮಾಲ್ಡಿವ್ಸ್‌

ಭಾರತದಿಂದ ಸಮೀಪದಲ್ಲೇ ಇರುವ ಮಾಲ್ಡಿವ್ಸ್‌ಗೆ ಭಾರತದ ಸೆಲೆಬ್ರಿಟಿ ಜೋಡಿಗಳ ಆಗಾಗ ಹೋಗಿ ಫೋಟೊ ಅಪ್‌ಲೋಡ್ ಮಾಡುವುದನ್ನು ನೀವು ನೋಡಿರಬಹುದು. ಈ ಸುಂದರ ತಾಣವನ್ನು ಹಲವರು ತಮ್ಮ ಹನಿಮೂನ್‌ಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಚಳಿಗಾಲದಲ್ಲಿ ಹನಿಮೂನ್‌ಗೆ ಮಾಲ್ಡಿವ್ಸ್ ಕೂಡ ಬೆಸ್ಟ್ ಜಾಗ.

ಪ್ಯಾರಿಸ್‌

ಪ್ರಯಣ ಪಕ್ಷಿಗಳಿಗೆ ಪ್ಯಾರಿಸ್‌ಗಿಂತ ಉತ್ತಮ ತಾಣ ಇನ್ನೊಂದಿಲ್ಲ ಎನ್ನಬಹುದು. ಪ್ಯಾರಿಸ್‌ನಲ್ಲಿ ಐಫೆಲ್ ಟವರ್ ಸೇರಿದಂತೆ ಹಲವು ರೊಮ್ಯಾಂಟಿಕ್ ಫೀಲ್ ಕೊಡುವ ತಾಣಗಳಿವೆ. ಇದು ನಿಮ್ಮನ್ನು ಬೇರೆಯದೇ ಲೋಕಕ್ಕೆ ಕರೆದ್ಯೊಯ್ಯುವ ತಾಣ.

ಕ್ಯೋಟೊ ಜಪಾನ್‌

ಸಾಂಪ್ರದಾಯಿಕ ಸಂಸ್ಕೃತಿಯು ನೈಸರ್ಗಿಕ ಸೌಂದರ್ಯವನ್ನು ಸವಿಯಲು ಜಪಾನ್‌ ಕ್ಯೋಟೊ ಅತ್ಯುತ್ತಮ ತಾಣ. ಐತಿಹಾಸಿಕ ದೇವಾಲಯಗಳು, ಚಹಾ ತೋಟ, ಬಿದಿರು ವನ ಇವೆಲ್ಲವನ್ನು ಕಣ್ತುಂಬಿಕೊಂಡು ಆನಂದದಿಂದ ನಿಮ್ಮ ಕ್ಷಣಗಳನ್ನು ಕಳೆಯಬಹುದು.

ರೇಕ್‌ಜಾವಿಕ್, ಐಸ್ಲೆಂಡ್‌

ಸಾಹಸವನ್ನು ಇಷ್ಟಪಡುವ ದಂಪತಿಗಳಿಗೆ ಐಸ್ಲೆಂಡ್‌ನ ರೇಕ್‌ಜಾವಿಕ್ ಉತ್ತಮ ಸ್ಥಳವಾಗಿದೆ. ಇಲ್ಲಿನ ಹಿಮ ಗುಹೆಗಳು ಮತ್ತು ಜ್ವಾಲಾಮುಖಿ ಭೂದೃಶ್ಯಗಳನ್ನು ಅನ್ವೇಷಿಸುವುದರಿಂದ ಹಿಡಿದು ಬ್ಲೂ ಲಗೂನ್‌ನ ಭೂಶಾಖದ ನೀರಿನಲ್ಲಿ ವಿಶ್ರಾಂತಿ ಪಡೆಯುವವರೆಗೆ ಐಸ್ಲೆಂಡ್‌ ಬೆಸ್ಟ್ ತಾಣ. ನಾರ್ದರ್ನ್ ಲೈಟ್ಸ್ ಅನುಭವವೂ ಕೂಡ ನಿಮ್ಮ ಹನಿಮೂನ್‌ ಅನ್ನು ಅವಿಸ್ಮರಣೀಯವನ್ನಾಗಿಸುವುದು ಸುಳ್ಳಲ್ಲ.

ಸ್ಯಾಂಟೊರಿನಿ, ಗ್ರೀಸ್

ಬೆರಗುಗೊಳಿಸುವ ಸೂರ್ಯಸ್ತಾದ ದೃಶ್ಯ, ಸುಂದರ ಬಿಳಿ ಕಟ್ಟಡಗಳಿಂದ ಅದ್ಭುತ ತಾಣ ಎನ್ನಿಸಿಕೊಂಡಿರುವ ಗ್ರೀಸ್‌ನ ಸ್ಯಾಂಟೊರಿನಿ ನಿಮ್ಮ ಡ್ರೀಮ್ ಹನಿಮೂನ್ ಡಿಸ್ಟಿನೇಷನ್ ಆಗುವುದರಲ್ಲಿ ಅನುಮಾನವಿಲ್ಲ.

ಬ್ಯಾನ್ಫ್, ಕೆನಡಾ

ಶೀತ ವಾತಾವರಣ ಹಾಗೂ ಸಾಹಸಮಯ ಪಯಣವನ್ನು ಎಂಜಾಯ್ ಮಾಡಲು ಬಯಸುವವ ದಂಪತಿಗಳಿಗೆ ಹೇಳಿ ಮಾಡಿಸಿದ ತಾಣ ಕೆನಡಾದ ಬ್ಯಾನ್ಫ್. ಹಿಮದಿಂದ ಆವೃತವಾದ ಪರ್ವತ ಶಿಖರಗಳು, ಹೆಪ್ಪುಗಟ್ಟಿದ ಸರೋವರ, ಪರ್ವತದ ತಪ್ಪಲಲ್ಲಿ ಕಾಲ ಕಳೆಯಲು ಬಯಸುವ ದಂಪತಿಗಳಿಗೆ ಈ ತಾಣ ಹೇಳಿ ಮಾಡಿಸಿದ್ದು. ಸ್ಕೀಯಿಂಗ್, ಐಸ್ ಸ್ಕೇಟಿಂಗ್ ಕೂಡ ಇಲ್ಲಿ ಸಖತ್ ಆಗಿರುತ್ತೆ.

ವಿಯೆನ್ನಾ, ಆಸ್ಟ್ರಿಯಾ

ವಿಯೆನ್ನಾ ಇತಿಹಾಸ, ಮೋಡಿ ಮತ್ತು ಪ್ರಣಯದ ಪೂರ್ಣ ನಗರವಾಗಿದೆ. Schönbrunn ಮತ್ತು Hofburg ನಂತಹ ಅದ್ಭುತ ಅರಮನೆಗಳಿಗೆ ಭೇಟಿ ನೀಡಿ, ವಿಯೆನ್ನಾ ಸ್ಟೇಟ್ ಒಪೇರಾದಲ್ಲಿ ಶಾಸ್ತ್ರೀಯ ಸಂಗೀತ ಕಚೇರಿಯನ್ನು ಆನಂದಿಸಿ ಮತ್ತು ನಗರದ ಐತಿಹಾಸಿಕ ಕೆಫೆಗಳಲ್ಲಿ ಬಿಸಿ ಚಾಕೊಲೇಟ್ ಅನ್ನು ಸೇವಿಸಿ. ವಿಯೆನ್ನಾದ ಸಾಮ್ರಾಜ್ಯಶಾಹಿ ವಾತಾವರಣವು ಸ್ನೇಹಶೀಲ ಚಳಿಗಾಲದ ವೈಬ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ಮಧುಚಂದ್ರಕ್ಕೆ ಮಾಂತ್ರಿಕ ತಾಣವಾಗಿದೆ.

ಬಾಲಿ, ಇಂಡೋನೇಷ್ಯಾ

ಇದು ಕೂಡ ಮಾಲ್ಡಿವ್ಸ್‌ನಂತೆ ಭಾರತದಿಂದ ಹೆಚ್ಚು ಜನ ಭೇಟಿ ನೀಡುವ ತಾಣ. ಹನಿಮೂನ್‌ಗೆ ಬಾಲಿ ಹೋಗಬೇಕು ಎಂದು ಹಲವು ಜೋಡಿಗಳು ಕನಸು ಕಂಡಿರುತ್ತಾರೆ. ಚಳಿಗಾಲದಲ್ಲಿ ನೀವು ಹನಿಮೂನ್ ಮಾಡಿಕೊಳ್ಳುವ ಪ್ಲಾನ್ ಇದ್ದರೆ ಬಾಲಿಗೆ ಭೇಟಿ ನೀಡಬಹುದು. ಇಲ್ಲಿನ ಸುಂದರ ದ್ವೀಪಗಳು, ಕಡಲತೀರಗಳು, ದೇವಾಲಯಗಳು ಖಂಡಿತ ನಿಮಗೆ ಇಷ್ಟವಾಗುತ್ತದೆ. ಮಾತ್ರವಲ್ಲ ಇಲ್ಲಿ ನೀವು ನಿಮ್ಮ ಮಧುರ ಕ್ಷಣಗಳನ್ನು ಕಳೆಯುವುದರಲ್ಲಿ ಸಂದೇಹವಿಲ್ಲ.

ಕ್ಯಾಬೊ ಸ್ಯಾನ್ ಲ್ಯೂಕಾಸ್ ಮೆಕ್ಸಿಕೋ

ಇಲ್ಲಿನ ಬೆಚ್ಚಗಿನ ವಾತಾವರಣ ಸುಂದರವಾದ ಕಡಲತೀರಗಳು ಮತ್ತು ಐಷಾರಾಮಿ ರೆಸಾರ್ಟ್‌ಗಳೊಂದಿಗೆ, ಕ್ಯಾಬೊ ಸ್ಯಾನ್ ಲ್ಯೂಕಾಸ್ ದಂಪತಿಗಳಿಗೆ ಮಧುಚಂದ್ರದ ಕ್ಷಣಗಳನ್ನು ಕಳೆಯಲು ಅದ್ಭುತ ಎನ್ನಿಸುತ್ತದೆ. ಬೆರಗುಗೊಳಿಸುವ ಕರಾವಳಿ ಮತ್ತು ರೋಮಾಂಚಕ ರಾತ್ರಿಜೀವನವು ಅದ್ಭತ ಫೀಲ್ ಕೊಡುವುದರಲ್ಲಿ ಅನುಮಾನವಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ