ಇತ್ತೀಚೆಗೆ ಮದುವೆ ಆಗಿದ್ದು ಮಧುಚಂದ್ರಕ್ಕೆ ಎಲ್ಲಿ ಹೋಗೋದು ಅಂತ ಯೋಚಿಸ್ತಾ ಇದ್ದೀರಾ; ಭಾರತದ ಟಾಪ್ 5 ಹನಿಮೂನ್‌ ತಾಣಗಳು ಇವೇ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಇತ್ತೀಚೆಗೆ ಮದುವೆ ಆಗಿದ್ದು ಮಧುಚಂದ್ರಕ್ಕೆ ಎಲ್ಲಿ ಹೋಗೋದು ಅಂತ ಯೋಚಿಸ್ತಾ ಇದ್ದೀರಾ; ಭಾರತದ ಟಾಪ್ 5 ಹನಿಮೂನ್‌ ತಾಣಗಳು ಇವೇ ನೋಡಿ

ಇತ್ತೀಚೆಗೆ ಮದುವೆ ಆಗಿದ್ದು ಮಧುಚಂದ್ರಕ್ಕೆ ಎಲ್ಲಿ ಹೋಗೋದು ಅಂತ ಯೋಚಿಸ್ತಾ ಇದ್ದೀರಾ; ಭಾರತದ ಟಾಪ್ 5 ಹನಿಮೂನ್‌ ತಾಣಗಳು ಇವೇ ನೋಡಿ

ಇದೀಗ ಮದುವೆ ಸೀಸನ್ ಶುರುವಾಗಿದ್ದು, ಹನಿಮೂನ್‌ಗೆ ಎಲ್ಲಿ ಹೋಗೋದು ಅಂತ ನವಜೋಡಿಗಳು ಪ್ಲಾನ್ ಮಾಡ್ತಾ ಇರ್ತಾರೆ. ಹನಿಮೂನ್‌ಗೆ ನೀವು ಮಾಲ್ಡಿವ್ಸ್‌, ಬಾಲಿ, ಪ್ಯಾರಿಸ್ ಅಂತ ವಿದೇಶಗಳಿಗೆ ಹೋಗಬೇಕು ಅಂತೇನಿಲ್ಲ. ಭಾರತದಲ್ಲೇ ಹಲವು ಸುಂದರ ತಾಣಗಳಿವೆ. ನಾವಿಲ್ಲಿ ಭಾರತದ ಟಾಪ್ 5 ಹನಿಮೂನ್‌ ಡೆಸ್ಟಿನೇಷನ್‌ಗಳ ಬಗ್ಗೆ ತಿಳಿಸಿದ್ದೇವೆ.

ಭಾರತದ ಟಾಪ್ 5 ಹನಿಮೂನ್ ತಾಣಗಳು (ಸಾಂಕೇತಿಕ ಚಿತ್ರ)
ಭಾರತದ ಟಾಪ್ 5 ಹನಿಮೂನ್ ತಾಣಗಳು (ಸಾಂಕೇತಿಕ ಚಿತ್ರ) (PC: Canva)

ಮದುವೆ ಸೀಸನ್‌ ಆರಂಭವಾಗಿದ್ದು ಈ ವರ್ಷ ಭಾರತದಲ್ಲಿ ಸಾಕಷ್ಟು ಮದುವೆಗಳು ನಡೆಯುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಮದುವೆಯಾದ ನವದಂಪತಿಗಳು ಹನಿಮೂನ್‌ಗೆ ಹೋಗೋದು ಸಹಜ. ಅಲ್ಲದೇ ಇವರು ಯಾವ ಜಾಗಕ್ಕೆ ಹನಿಮೂನ್‌ಗೆ ಹೋಗಬಹುದು ಅಂತ ಪ್ಲಾನ್ ಮಾಡ್ತಾ ಇರ್ತಾರೆ. ಕೆಲವರು ಹನಿಮೂನ್‌ಗೆ ಅಂತ ವಿದೇಶಗಳನ್ನ ಆಯ್ಕೆ ಮಾಡಿಕೊಂಡರೆ ಕೆಲವರಿಗೆ ನಮ್ಮ ಭಾರತದಲ್ಲೇ ಇರುವ ತಾಣಗಳಿಗೆ ಹೋಗುವ ಬಯಕೆ.

ಭಾರತದಲ್ಲೂ ವಿದೇಶಗಳಿಗೆ ಕಡಿಮೆ ಇಲ್ಲದ ಹಲವು ತಾಣಗಳಿವೆ. ಇಲ್ಲಿ ನೀವು ನಿಮ್ಮ ಮಧುಚಂದ್ರವನ್ನ ಎಂಜಾಯ್ ಮಾಡಬಹುದು. ಮಾತ್ರವಲ್ಲ ವಿದೇಶಗಳಿಗೆ ಹೋಲಿಸಿದರೆ ನೀವು ಈ ಜಾಗಗಳಿಗೆ ಕಡಿಮೆ ಖರ್ಚಿಯಲ್ಲಿ ಹೋಗಿ ಬರಬಹುದು. ನಮ್ಮ ದೇಶದಲ್ಲಿ ಹಲವು ಹನಿಮೂನ್‌ ಸ್ಪಾಟ್‌ಗಳಿದ್ದರೂ ಅದರಲ್ಲಿ 5 ಟಾಪ್‌ ತಾಣಗಳಿವೆ. ಆ ತಾಣಗಳ ಬಗ್ಗೆ ನಾವಿಲ್ಲಿ ಹೇಳುತ್ತೇವೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಅಂಡಮಾನ್ ನಿಕೋಬಾರ್ ದ್ವೀಪಗಳು ನವವಿವಾಹಿತ ದಂಪತಿಗಳಿಗೆ ಮಧುಚಂದ್ರಕ್ಕೆ ಅದ್ಭುತವಾಗಿದೆ. ಇದು ಹೊಸ ಪ್ರಪಂಚ ಮತ್ತು ಸ್ವರ್ಗದಂತೆ ಭಾಸವಾಗುತ್ತದೆ. ಈ ಜಾಗವು ವಿಶಾಲವಾದ ಕಡಲತೀರಗಳು ಮತ್ತು ಸ್ಪಷ್ಟ ನೀರಿನಿಂದ ಆಕರ್ಷಕವಾಗಿದೆ. ಹಡಗುಗಳಲ್ಲಿ ಉಳಿಯುವುದು ಮತ್ತು ಜಲಕ್ರೀಡೆ ಚಟುವಟಿಕೆಗಳನ್ನು ನವವಿವಾಹಿತರು ಬಹಳಷ್ಟು ಆನಂದಿಸಬಹುದು. ಕಡಲತೀರಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಹವಾಮಾನವು ಆಕರ್ಷಕವಾಗಿದೆ. ಹೊಸ ಜೋಡಿಗಳ ಹನಿಮೂನ್‌ಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಉತ್ತಮ ಆಯ್ಕೆಯಾಗಿದೆ. ಈ ಪ್ರದೇಶವು ಹೈದರಾಬಾದ್‌ನಿಂದ ಸುಮಾರು 1,800 ಕಿಮೀ ದೂರದಲ್ಲಿದೆ. ಇಲ್ಲಿಗೆ ನೀವು ಫ್ಲೈಟ್‌ನಲ್ಲಿ ಹೋಗುವುದು ಉತ್ತಮ ಆಯ್ಕೆ.

ಶಿಮ್ಲಾ

ಶಿಮ್ಲಾವು ಆಹ್ಲಾದಕರವಾದ ತಂಪಾದ ವಾತಾವರಣವನ್ನು ಹೊಂದಿದೆ. ಹನಿಮೂನ್‌ಗೆ ಇದು ಹೇಳಿ ಮಾಡಿಸಿದ ತಾಣ. ಹಿಮಾಚಲ ಪ್ರದೇಶದಲ್ಲಿ ನೆಲೆಗೊಂಡಿರುವ ಈ ನಗರವು ದಂಪತಿಗಳಿಗೆ ರೊಮ್ಯಾಂಟಿಕ್ ಫೀಲ್ ನೀಡುತ್ತದೆ. ಹಿಮಾಚಲ ಪರ್ವತಗಳ ಸೌಂದರ್ಯ ಮತ್ತು ಪ್ರಾಚೀನ ಶಿಲ್ಪಗಳ ಅದ್ಭುತವನ್ನೂ ಇಲ್ಲಿ ನೋಡಬಹುದು. ಶಿಮ್ಲಾದ ಹಸಿರು ಮನಸೆಳೆಯುತ್ತದೆ. ನವವಿವಾಹಿತರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಶಿಮ್ಲಾ ಹೈದರಾಬಾದ್‌ನಿಂದ ಸುಮಾರು 2517 ಕಿಲೋಮೀಟರ್ ದೂರದಲ್ಲಿದೆ. ಚಳಿಗಾಲದಲ್ಲಿ ಶಿಮ್ಲಾವನ್ನು ನೋಡುವುದೇ ಅಂದ.

ಶ್ರೀನಗರ

ಶ್ರೀನಗರವು ಎತ್ತರದ ಹಿಮಾಲಯ ಪರ್ವತಗಳು, ತಂಪಾದ ಹವಾಮಾನ ಮತ್ತು ಸುಂದರವಾದ ಪ್ರಕೃತಿಯಿಂದ ಆಕರ್ಷಕವಾಗಿದೆ. ಕಾಶ್ಮೀರದ ಈ ಪ್ರದೇಶವು ನವ ದಂಪತಿಗಳ ಮಧುಚಂದ್ರಕ್ಕೆ ತುಂಬಾ ಸೂಕ್ತವಾಗಿದೆ. ದಾಲ್, ಶಿಖರ್ ಸರೋವರದ ವಿಹಾರವು ಸುಂದರವಾದ ಮತ್ತು ರೊಮ್ಯಾಂಟಿಕ್ ಅನುಭವ ನೀಡುತ್ತದೆ. ಶುದ್ಧ ನೀರಿನಲ್ಲಿ ಮರದ ದೋಣಿಗಳ ಮೇಲಿನ ಪ್ರಯಾಣವು ಒಂದು ಸವಿಯಾದ ನೆನಪಾಗಿ ಉಳಿಯುತ್ತದೆ. ಬೆಂಗಳೂರಿನಿಂದ ಶ್ರೀನಗರಕ್ಕೆ ಸುಮಾರು 2961 ಕಿಮೀ ದೂರವಿದೆ.

ಗೋವಾ

ಗೋವಾ ಪ್ರವಾಸೋದ್ಯಮಕ್ಕೆ ಬಹಳ ಜನಪ್ರಿಯವಾಗಿದೆ. ಇಲ್ಲಿನ ಕಡಲತೀರಗಳು ಆಕರ್ಷಕವಾಗಿವೆ. ಇದು ಯಾವುದೇ ವಿದೇಶಿ ತಾಣಕ್ಕಿಂತ ಭಿನ್ನವಾಗಿಲ್ಲ. ಈ ನಗರದಲ್ಲಿ ರಾತ್ರಿ ಜೀವನವು ವರ್ಣರಂಜಿತ ಪ್ರಪಂಚದಂತಿದೆ. ಪಲೋಲೆಮ್, ಅಂಜುನಾ, ಬಾಗಾ, ಕಲಾಂಗುಟ್ ಮತ್ತು ಇನ್ನೂ ಅನೇಕ ಬೀಚ್‌ಗಳು ಮಧುಚಂದ್ರಕ್ಕೆ ಅದ್ಭುತವಾಗಿದೆ. ವಾಟರ್ ಸ್ಪೋರ್ಟ್ಸ್ ಆಡುವುದನ್ನು ಆನಂದಿಸಬಹುದು. ನೀವು ವಿಹಾರಕ್ಕೆ ಹೋಗಬಹುದು. ಗೋವಾ ಹೈದರಾಬಾದ್‌ನಿಂದ ಸುಮಾರು 557 ಕಿಲೋಮೀಟರ್ ದೂರದಲ್ಲಿದೆ.

ಅಲೆಪ್ಪಿ

ಕೇರಳದ ಅಲ್ಲಪ್ಪಿ (ಆಲಪ್ಪುಳ) ನೈಸರ್ಗಿಕ ಸೌಂದರ್ಯದಿಂದ ಆಕರ್ಷಕವಾಗಿದೆ. ಅಲೆಪ್ಪಿ ಹಸಿರು ಮತ್ತು ಹಿನ್ನೀರಿನಿಂದ ತುಂಬಿ ತುಳುಕುತ್ತಿದೆ. ಪ್ರಕೃತಿಯನ್ನು ಪ್ರೀತಿಸುವ ದಂಪತಿಗಳಿಗೆ, ಅಲಪ್ಪಿ ಸ್ವರ್ಗದಂತೆ ಭಾಸವಾಗುತ್ತದೆ. ಇದರೊಂದಿಗೆ ಕೇರಳದ ಆಹಾರ ಸ್ವಾದಗಳನ್ನೂ ಸವಿಯುಬಹುದು. ಇಲ್ಲಿನ ಹವಾಮಾನವೂ ತುಂಬಾ ಆಹ್ಲಾದಕರವಾಗಿರುತ್ತದೆ. ಅಲೆಪ್ಪಿ ಹೈದರಾಬಾದ್‌ನಿಂದ ಸುಮಾರು 1,160 ಕಿಲೋಮೀಟರ್ ದೂರದಲ್ಲಿದೆ.

ಇಷ್ಟೇ ಅಲ್ಲದೇ ಭಾರತದಲ್ಲಿ ಊಟಿ, ಕೊಡೈಕೆನಾಲ್‌, ಡಾರ್ಜಿಲಿಂಗ್, ಜೈಪುರ, ಊಟಿ, ಮಸ್ಸೂರಿ ಮುಂತಾದ ಹಲವು ಹನಿಮೂನ್ ತಾಣಗಳಿವೆ. ನೀವು ಕರ್ನಾಟಕದಲ್ಲೇ ಹನಿಮೂನ್ ಪ್ಲಾನ್‌ ಮಾಡಿದ್ದರೆ ಚಿಕ್ಕಮಗಳೂರು, ಕೊಡಗು, ಮೈಸೂರು ಕೂಡ ಮಧುಚಂದ್ರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.

Whats_app_banner