Honeymoon Trip: ಹನಿಮೂನ್‌ಗೆ ಫಾರಿನ್‌ ಟ್ರಿಪ್‌ ಪ್ಲಾನ್‌ ಇದ್ರೆ, ನಿಮಗಾಗಿ ಇಲ್ಲಿದೆ 8 ಪ್ರಸಿದ್ಧ ರೊಮ್ಯಾಂಟಿಕ್‌ ತಾಣಗಳು
ಕನ್ನಡ ಸುದ್ದಿ  /  ಜೀವನಶೈಲಿ  /  Honeymoon Trip: ಹನಿಮೂನ್‌ಗೆ ಫಾರಿನ್‌ ಟ್ರಿಪ್‌ ಪ್ಲಾನ್‌ ಇದ್ರೆ, ನಿಮಗಾಗಿ ಇಲ್ಲಿದೆ 8 ಪ್ರಸಿದ್ಧ ರೊಮ್ಯಾಂಟಿಕ್‌ ತಾಣಗಳು

Honeymoon Trip: ಹನಿಮೂನ್‌ಗೆ ಫಾರಿನ್‌ ಟ್ರಿಪ್‌ ಪ್ಲಾನ್‌ ಇದ್ರೆ, ನಿಮಗಾಗಿ ಇಲ್ಲಿದೆ 8 ಪ್ರಸಿದ್ಧ ರೊಮ್ಯಾಂಟಿಕ್‌ ತಾಣಗಳು

ಹನಿಮೂನ್‌ ಆಗಿರಲಿ ಪ್ರವಾಸ ಆಗಿರಲಿ ಜೋಡಿಗಳು ಜೊತೆಯಾಗಿ ಹೋಗಲು ಮೊದಲು ಆಯ್ಕೆ ಮಾಡುವುದು ವಿದೇಶದ ಪ್ರವಾಸಿ ತಾಣಗಳನ್ನು. ಈಗಂತೂ ಮದುವೆ ಸೀಸನ್‌, ನೀವು ನಿಮ್ಮ ಹನಿಮೂನ್‌ಗೆ ಹೋಗಲು ಬೆಸ್ಟ್‌ ಎನ್ನಿಸುವ 8 ವಿದೇಶಿ ಪ್ರವಾಸಿ ತಾಣಗಳು ಇಲ್ಲಿವೆ.

ಹನಿಮೂನ್‌ ಟ್ರಿಪ್‌
ಹನಿಮೂನ್‌ ಟ್ರಿಪ್‌

ಭಾರತದಲ್ಲಿ ಮದುವೆ ಸೀಸನ್‌ ಆರಂಭವಾಗಿದೆ. ಮದುವೆಯಾದ ನವ ಜೋಡಿಗಳು ಹನಿಮೂನ್‌ಗೆ ಹೋಗಲು ವಿದೇಶದಲ್ಲಿನ ರೊಮ್ಯಾಂಟಿಕ್‌ ತಾಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ. ವಿದೇಶದಲ್ಲಿ ಹಲವು ಹನಿಮೂನ್‌ ಸ್ಪಾಟ್‌ಗಳಿವೆ. ಅವುಗಳಲ್ಲಿ ಈ 2023ರಲ್ಲಿ ನೀವು ಭೇಟಿ ನೀಡಬಹುದಾದ ಬೆಸ್ಟ್‌ 8 ಜಾಗಗಳ ಪರಿಚಯ ಹೀಗಿದೆ.

ಸ್ವಿಟ್ಜರ್ಲೆಂಡ್‌

ಸ್ವಿಟ್ಜರ್ಲೆಂಡ್‌ ಅನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುತ್ತಾರೆ. ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಜೋಡಿಗಳು ತಮ್ಮ ಹನಿಮೂನ್‌ ಟ್ರಿಪ್‌ಗಾಗಿ ಸ್ವಿಟ್ಜರ್ಲೆಂಡ್‌ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಲು ಅದೃಷ್ಟ ಮಾಡಿರಬೇಕು. ಚಳಿಗಾಲದಲ್ಲಿ ಇಲ್ಲಿ ಹಿಮಗಳು ಬೀಳುವ ಸುಂದರ ದೃಶ್ಯವನ್ನು ನೋಡಿಯೇ ಸವಿಯಬೇಕು.

ಇಟಲಿ

ಪ್ರಕೃತಿ ಸೌಂದರ್ಯ ಹಾಗೂ ಸೊಬಗಿನ ಕಾರಣಕ್ಕೆ ಇಟಲಿ ಹೆಸರುವಾಸಿಯಾಗಿದೆ. ಇದು ಜನಪ್ರಿಯ ವಿದೇಶಿ ಪ್ರವಾಸಿ ತಾಣಗಳಲ್ಲಿ ಅಗ್ರಸ್ಥಾನದಲ್ಲಿದೆ. ಪ್ರೀತಿಯನ್ನು ಬಿಂಬಿಸುವ ಒಂದಿಷ್ಟು ಅದ್ಭುತ ಐತಿಹಾಸಿಕ ಸ್ಮಾರಕಗಳು ಇಲ್ಲಿವೆ. ಇಟಲಿಯಲ್ಲಿ ವೆನಿಸ್‌, ಬೊಲೊಗ್ನಾ, ರೋಮ್‌, ಮಿಲನ್‌ ಮತ್ತು ನೇಪಲ್ಸ್‌ಗೆ ಭೇಟಿ ನೀಡಬಹುದು. ನೀವು ಫ್ಯಾಷನ್‌ ಪ್ರೇಮಿಗಳಾಗಿದ್ದರೆ ಇಟಲಿ ನಿಮಗೆ ಇನ್ನಷ್ಟು ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: Honeymoon Spots: ಈ 5 ಸ್ಥಳಗಳು ಹನಿಮೂನ್‌ಗೆ ಹೇಳಿ ಮಾಡಿಸಿದಂತಿವೆ; ಈಗಷ್ಟೇ ಮದುವೆ ಮುಗಿದಿದ್ರೆ ಖುಷಿಯಾಗಿ ಹೋಗಿ ಬನ್ನಿ

ಐರ್ಲೆಂಡ್‌

ಸಂಗಾತಿಯೊಂದಿಗೆ ಏಕಾಂತದಲ್ಲಿ ಕೈ ಹಿಡಿದು ನಡೆಯಬೇಕು ಅಂತಿದ್ದರೆ, ಐರ್ಲೆಂಡ್‌ ನಿಮಗೆ ಹೇಳಿ ಮಾಡಿಸಿದ್ದು. ನಿಮ್ಮ ಸಂಗಾತಿಯೊಂದಿಗೆ ಸುಂದರ ಗಳಿಗೆಗಳನ್ನು ನೀವು ಇಲ್ಲಿ ಸೃಷ್ಟಿಸಬಹುದು. ಇದು ವಿದೇಶಗಳಲ್ಲಿ ಬಜೆಟ್‌ ಫ್ರೆಂಡ್ಲಿ ತಾಣ ಕೂಡ ಹೌದು. ಐರ್ಲೆಂಡ್‌ನಲ್ಲಿ ಗಾಲ್ವೇ, ಡಬ್ಲಿನ್‌, ವಾಟರ್‌ಫೋರ್ಡ್‌, ಕಾರ್ಕ್‌, ವಾಟರ್‌ಪೋರ್ಟ್‌, ಕಿಲ್ಕಿನ್ನಿ ನಗರಗಳಿಗೆ ಭೇಟಿ ನೀಡಬಹುದು.

ಆಸ್ಟಿನ್‌

ಆಸ್ಟಿನ್‌ ದಂಪತಿಗಳಿಗೆ ಹೇಳಿ ಮಾಡಿಸಿದ ಮಧುಚಂದ್ರದ ತಾಣ. ಇಲ್ಲಿ ಅದ್ಭುತ ತಾಣಗಳ ಜೊತೆಗೆ ಸಾಹಸಿಕ್ರೀಡೆಗಳನ್ನು ಒಳಗೊಂಡಿದೆ. ಇದಲ್ಲದೆ ಆಸ್ಟಿನ್‌ ಬೀದಿಗಳಲ್ಲಿ ಕೆಲವು ಲೈವ್‌ ಪ್ರದರ್ಶನಗಳನ್ನೂ ಆನಂದಿಸಬಹುದು.

ನ್ಯೂಜಿಲೆಂಡ್‌

ಮೋಡಿ ಮಾಡುವ ಕಡಲತೀರಗಳು, ಎತ್ತರದ ಬಂಡೆಗಳು, ಹೀಗೆ ರುದ್ರ ರಮಣೀಯ ಪ್ರಕೃತಿ ಸೌಂದರ್ಯದ ಕಾರಣದಿಂದ ದಂಪತಿಗಳಿಗೆ ನ್ಯೂಜಿಲೆಂಡ್‌ ಹೇಳಿ ಮಾಡಿಸಿದ ತಾಣ. ಇಲ್ಲಿ ನೀವು ಭಿನ್ನ ವಿಭಿನ್ನ ಆಹಾರ ಖಾದ್ಯಗಳ ಸವಿಯನ್ನೂ ಸವಿಯಬಹುದು.

ಫ್ರಾನ್ಸ್‌

ಫ್ರಾನ್ಸ್‌ ಪ್ರೀತಿ ಹಾಗೂ ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣ. ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಟಫೆಲ್‌ ಟವರ್‌ ಇದೆ. ಇದು ದಂಪತಿಗಳಿಗೆ ಅತ್ಯಂತ ರೊಮ್ಯಾಂಟಿಕ್‌ ತಾಣಗಳಲ್ಲಿ ಒಂದಾಗಿದೆ.

ಮಾಲ್ಡಿವ್ಸ್‌

ಭಾರತೀಯರು ಹನಿಮೂನ್‌ಗಾಗಿ ಹೆಚ್ಚು ಆದ್ಯತೆ ನೀಡುವ ಜಾಗ ಮಾಲ್ಡಿವ್ಸ್‌. ಇದು ಭಾರತೀಯರಿಗೆ ವೀಸಾ ಮುಕ್ತ ದೇಶವಾಗಿದೆ. ಇದು ಬಜೆಟ್‌ ಫ್ರೆಂಡ್ಲಿ ಹಾಗೂ ಹೆಚ್ಚು ಜನರು ಆದ್ಯತೆಯ ಮೇಲೆ ಭೇಟಿ ನೀಡುವ ರೊಮ್ಯಾಂಟಿಕ್‌ ಜಾಗಗಳಲ್ಲಿ ಮಾಲ್ಡಿವ್ಸ್‌ ಕೂಡ ಒಂದು. ಶಾಂತ ವಾತಾವರಣ, ರೆಸಾರ್ಟ್‌ಗಳು, ಸ್ಪಟಿಕ ಸ್ಪಷ್ಟ ನೀಲಿ ಬಣ್ಣದ ನೀರು ಒಟ್ಟಾರೆ ಇಲ್ಲಿನ ದೃಶ್ಯವೇ ಅದ್ಭುತ.

ಗ್ರೀಸ್‌

ಗ್ರೀಸ್‌ ದೇಶವು ಅತ್ಯಂತ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ ದೇಶವಾಗಿದೆ. ಇದು ದಂಪತಿಗಳಿಗೆ ವಿದೇಶಿ ಪ್ರವಾಸಕ್ಕೆ ಹೇಳಿ ಮಾಡಿಸಿದ್ದು.

Whats_app_banner