logo
ಕನ್ನಡ ಸುದ್ದಿ  /  ಜೀವನಶೈಲಿ  /  ಹುರಿದ ಕಡಲೆಯನ್ನು ತಿನ್ನುವಾಗ ಸಿಪ್ಪೆ ಎಸೆಯುತ್ತೀರಾ: ಇದರ ಪ್ರಯೋಜನ ತಿಳಿದ್ರೆ ಇನ್ಮುಂದೆ ನೀವು ಖಂಡಿತ ಎಸೆಯಲ್ಲ

ಹುರಿದ ಕಡಲೆಯನ್ನು ತಿನ್ನುವಾಗ ಸಿಪ್ಪೆ ಎಸೆಯುತ್ತೀರಾ: ಇದರ ಪ್ರಯೋಜನ ತಿಳಿದ್ರೆ ಇನ್ಮುಂದೆ ನೀವು ಖಂಡಿತ ಎಸೆಯಲ್ಲ

Priyanka Gowda HT Kannada

Nov 13, 2024 06:20 PM IST

google News

ಹುರಿದ ಕಡಲೆಯನ್ನು ತಿನ್ನುವಾಗ ಸಿಪ್ಪೆ ಎಸೆಯುತ್ತೀರಾ: ಇದರ ಪ್ರಯೋಜನ ತಿಳಿದ್ರೆ ಇನ್ಮುಂದೆ ನೀವು ಖಂಡಿತ ಎಸೆಯಲ್ಲ

  • ಸಂಜೆ ಟೀ ಜತೆ ಕುರುಕಲು ತಿಂಡಿ ತಿನ್ನುವ ಬದಲು ಪೌಷ್ಟಿಕಾಂಶಯುಕ್ತ ಈ ಹುರಿದ ಕಡಲೆಯನ್ನು ಸೇವಿಸುವುದು ಆರೋಗ್ಯಕ್ಕೂ ಉತ್ತಮ. ಕೆಲವರು ಇದನ್ನು ತಿನ್ನುವಾಗ ಅದರ ಮೇಲಿನ ಸಿಪ್ಪೆಯನ್ನು ತೆಗೆದು ತಿನ್ನುತ್ತಾರೆ. ಆದರೆ, ಈ ರೀತಿ ಮಾಡುವ ಬದಲು ಸಿಪ್ಪೆ ಸಹಿತ ಕಡಲೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

ಹುರಿದ ಕಡಲೆಯನ್ನು ತಿನ್ನುವಾಗ ಸಿಪ್ಪೆ ಎಸೆಯುತ್ತೀರಾ: ಇದರ ಪ್ರಯೋಜನ ತಿಳಿದ್ರೆ ಇನ್ಮುಂದೆ ನೀವು ಖಂಡಿತ ಎಸೆಯಲ್ಲ
ಹುರಿದ ಕಡಲೆಯನ್ನು ತಿನ್ನುವಾಗ ಸಿಪ್ಪೆ ಎಸೆಯುತ್ತೀರಾ: ಇದರ ಪ್ರಯೋಜನ ತಿಳಿದ್ರೆ ಇನ್ಮುಂದೆ ನೀವು ಖಂಡಿತ ಎಸೆಯಲ್ಲ (PC: Freepik)

ಹುರಿದ ಕಡಲೆ ಸಂಜೆ ಚಹಾದೊಂದಿಗೆ ತಿನ್ನಲು ಬಹಳ ಮಜಾವಾಗಿರುತ್ತದೆ. ಈಗಂತೂ ಚಳಿಗಾಲ ಬೇರೆ ಶುರುವಾಗಿದೆ. ಚುಮು ಚುಮು ಚಳಿಯಲ್ಲಿ ಏನಾದರೂ ತಿನ್ನಬೇಕು ಎಂದೆನಿಸಿದಾಗ ಕಡಲೆಯನ್ನು ಹುರಿದು ತಿನ್ನಬಹುದು. ಭಾರತದ ಮಧ್ಯಮ ಹಾಗೂ ಬಡವರ್ಗದ ಜನತೆಗೆ ಇದು ಜನಪ್ರಿಯ ತಿಂಡಿ ಎಂದರೆ ತಪ್ಪಿಲ್ಲ. ಸಂಜೆ ಟೀ ಜತೆ ಕುರುಕಲು ತಿಂಡಿ ತಿನ್ನುವ ಬದಲು ಪೌಷ್ಟಿಕಾಂಶಯುಕ್ತ ಈ ಹುರಿದ ಕಡಲೆಯನ್ನು ಸೇವಿಸುವುದು ಆರೋಗ್ಯಕ್ಕೂ ಉತ್ತಮ. ಕೆಲವರು ಇದನ್ನು ತಿನ್ನುವಾಗ ಅದರ ಮೇಲಿನ ಸಿಪ್ಪೆಯನ್ನು ತೆಗೆದು ತಿನ್ನುತ್ತಾರೆ. ಆದರೆ, ಈ ರೀತಿ ಮಾಡುವ ಬದಲು ಸಿಪ್ಪೆ ಸಹಿತ ಕಡಲೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಜೀರ್ಣಕಾರಿ ಆರೋಗ್ಯ, ಚಯಾಪಚಯ ಕ್ರಿಯೆ ಸೇರಿದಂತೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಇದು ಕೊಡುಗೆ ನೀಡುತ್ತದೆ. ಸಿಪ್ಪೆ ಸಹಿತ ಹುರಿದ ಕಡಲೆಯನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ಇಲ್ಲಿದೆ.

ಸಿಪ್ಪೆ ಸಹಿತ ಹುರಿದ ಕಡಲೆಯನ್ನು ಸೇವಿಸುವುದರ ಪ್ರಯೋಜನಗಳು

ಜೀರ್ಣಕ್ರಿಯೆ ಮತ್ತು ಚಯಾಪಚಯ ದರವನ್ನು ಹೆಚ್ಚಿಸುತ್ತದೆ: ಹುರಿದ ಕಡಲೆಗಳನ್ನು ಸಿಪ್ಪೆ ಸಹಿತ ಸೇವಿಸುವುದರಿಂದ ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಫೈಬರ್‌ನಿಂದ ಸಮೃದ್ಧವಾಗಿರುವ ಇದರ ಸಿಪ್ಪೆಯು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಕರುಳಿನ ಚಲನೆಯನ್ನು ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಚಯಾಪಚಯ ದರವನ್ನು ಹೆಚ್ಚಿಸುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಹಾಗೆಯೇ ದೇಹದಲ್ಲಿ ಉತ್ತಮ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಕೊಡುಗೆ ನೀಡುತ್ತದೆ.

ರಕ್ತಪರಿಚಲನೆ ಉತ್ತೇಜಿಸಲು ಸಹಕಾರಿ: ಉತ್ತಮ ರಕ್ತಪರಿಚಲನೆಯನ್ನು ಉತ್ತೇಜಿಸುವ ಮತ್ತು ದೇಹವನ್ನು ನಿರ್ವಿಷಗೊಳಿಸುವ ಮೂಲಕ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ನಾರಿನಾಂಶದಿಂದ ಸಮೃದ್ಧವಾಗಿರುವ ಇದು ಟಾಕ್ಸಿನ್ ಹೊರಹಾಕಲು, ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆಯನ್ನು ನಿವಾರಿಸಲು ಸಹಕಾರಿ: ಹುರಿದ ಕಡಲೆಯನ್ನು ಸಿಪ್ಪೆ ಸಹಿತ ತಿನ್ನುವ ಇನ್ನೊಂದು ಪ್ರಯೋಜನವೆಂದರೆ ಜೀರ್ಣಕ್ರಿಯೆಯ ಮೇಲೆ ಅದರ ಸಕಾರಾತ್ಮಕ ಪರಿಣಾಮ. ವಿಶೇಷವಾಗಿ ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಕಡಲೆಯ ಸಿಪ್ಪೆಯಲ್ಲಿರುವ ಫೈಬರ್ ಅಂಶವು ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಇದು ಸುಲಭವಾಗಿ ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಮಲಬದ್ಧತೆಯ ಅಸ್ವಸ್ಥತೆಯನ್ನು ತಡೆಯುತ್ತದೆ. ಇದು ಮಲಬದ್ಧತೆ ಮತ್ತು ಮೂಲವ್ಯಾಧಿಯಂತಹ ಪರಿಸ್ಥಿತಿಗಳಿಗೆ ನೈಸರ್ಗಿಕ ಪರಿಹಾರವಾಗಿದೆ.

ಮಧುಮೇಹ ನಿರ್ವಹಣೆಯನ್ನು ಬೆಂಬಲಿಸಲು ಸಹಕಾರಿ: ಮಧುಮೇಹ ಹೊಂದಿರುವವರು ಸಿಪ್ಪೆ ಸಹಿತ ಹುರಿದ ಕಡಲೆಯನ್ನು ಸೇವಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಫೈಬರ್-ಭರಿತ ಸಿಪ್ಪೆಯು ಚಯಾಪಚಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಸುಧಾರಿಸುತ್ತದೆ. ಇದು ಮಧುಮೇಹವನ್ನು ನಿರ್ವಹಿಸಲು ಅತ್ಯುತ್ತಮ ಆಯ್ಕೆಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಜತೆಗೆ, ಮಲಬದ್ಧತೆಯಂತಹ ಮಧುಮೇಹಕ್ಕೆ ಸಂಬಂಧಿಸಿದ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ದೀರ್ಘಕಾಲೀನ ಆರೋಗ್ಯವನ್ನು ಬೆಂಬಲಿಸುತ್ತದೆ.

ಪೋಷಕಾಂಶಗಳಿಂದ ಸಮೃದ್ಧ: ಹುರಿದ ಕಡಲೆಗಳ ಸಿಪ್ಪೆಯು ಕೇವಲ ಫೈಬರ್‌ನ ಮೂಲವಲ್ಲ. ಉತ್ಕರ್ಷಣ ನಿರೋಧಕಗಳು, ವಿಟಮಿನ್‌ಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಈ ಪೋಷಕಾಂಶಗಳು ಚರ್ಮದ ಆರೋಗ್ಯವನ್ನು ಸುಧಾರಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದ ನೈಸರ್ಗಿಕ ನಿರ್ವಿಶೀಕರಣ ಪ್ರಕ್ರಿಯೆಗಳನ್ನು ಬೆಂಬಲಿಸಲು ಸಹಕಾರಿಯಾಗಿದೆ.

ತೂಕ ನಿರ್ವಹಣೆಗೆ ಸಹಕಾರಿ: ತೂಕ ನಿರ್ವಹಣೆಗೆ ಸಿಪ್ಪೆ ಸಹಿತ ಹುರಿದ ಕಡಲೆ ಸೇವಿಸುವುದು ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ನಾರಿನಂಶವು ಬಹಳ ಕಾಲ ಹೊಟ್ಟೆ ತುಂಬಿದಂತಾಗಿರುತ್ತದೆ. ಅತಿಯಾಗಿ ತಿನ್ನುವುದು ಮತ್ತು ಅನಾರೋಗ್ಯಕರ ಆಹಾರಗಳನ್ನು ತಿನ್ನುವುದನ್ನು ಇದು ತಡೆಯುತ್ತದೆ. ಅಲ್ಲದೆ ಇದರಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುವುದು ಮಾತ್ರವಲ್ಲದೆ ಹೊಟ್ಟೆ ಉಬ್ಬರವನ್ನು ತಡೆಯುತ್ತದೆ.

ಒಟ್ಟಿನಲ್ಲಿ ಹುರಿದ ಕಡಲೆಯು ಪೌಷ್ಟಿಕಾಂಶಯುಕ್ತ ಆಹಾರವಾಗಿದ್ದರೂ ಅದನ್ನು ಸಿಪ್ಪೆ ಸಹಿತ ತಿನ್ನುವುದರಿಂದ ಇನ್ನೂ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮತ್ತು ಮಧುಮೇಹವನ್ನು ನಿರ್ವಹಿಸುವುದರಿಂದ ತೂಕ ಇಳಿಕೆಯನ್ನು ಬೆಂಬಲಿಸುವವರೆಗೆ, ಇದು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ದೈನಂದಿನ ಆಹಾರದಲ್ಲಿ ಹುರಿದ ಕಡಲೆಯನ್ನು ಸೇರಿಸುವುದರಿಂದ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಪರಿಣಾಮಕಾರಿ ಮಾರ್ಗವಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ