logo
ಕನ್ನಡ ಸುದ್ದಿ  /  ಜೀವನಶೈಲಿ  /  Tamarind Rice Bath: ಟೈಂ ಇಲ್ವಾ? ಕಡಿಮೆ ಸಾಮಗ್ರಿಗಳಿಂದ ದಿಢೀರ್‌ ಹುಣಿಸೆ ರೈಸ್‌ಬಾತ್‌ ತಯಾರಿಸಿ..ಇದ್ರ ರುಚಿಗೆ ಫಿದಾ ಆಗೋದು ಗ್ಯಾರಂಟಿ

Tamarind Rice Bath: ಟೈಂ ಇಲ್ವಾ? ಕಡಿಮೆ ಸಾಮಗ್ರಿಗಳಿಂದ ದಿಢೀರ್‌ ಹುಣಿಸೆ ರೈಸ್‌ಬಾತ್‌ ತಯಾರಿಸಿ..ಇದ್ರ ರುಚಿಗೆ ಫಿದಾ ಆಗೋದು ಗ್ಯಾರಂಟಿ

HT Kannada Desk HT Kannada

Nov 21, 2022 08:05 PM IST

google News

ಹುಣಿಸೆ ರೈಸ್‌ ಬಾತ್‌ ರೆಸಿಪಿ

    • ಇದು ಖಂಡಿತ ಹುಳಿಯನ್ನ ಅಲ್ಲ. ಹುಣಿಸೆರಸ ಹಾಗೂ ಪ್ರತಿದಿನ ನಾವು ಬಳಸುವ ಈರುಳ್ಳಿ, ಟೊಮ್ಯಾಟೋ ಹಾಗೂ ಇನ್ನಿತರ ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದಾದ ಟೇಸ್ಟಿ ರೆಸಿಪಿ. ಕೆಲವೊಂದು ಹೋಟೆಲ್‌ಗಳಲ್ಲಿ ಕೂಡಾ ಇದನ್ನು ತಯಾರಿಸುತ್ತಾರೆ. ಹುಣಿಸೆ ರೈಸ್‌ ಬಾತನ್ನು ಚಟ್ನಿ ಜೊತೆ ಸವಿಯುತ್ತಿದ್ದರೆ, ಇನ್ನೂ ಒಂದೆರಡು ತುತ್ತು ಹೆಚ್ಚಿಗೆ ತಿನ್ನಬೇಕೆನಿಸುತ್ತದೆ.
ಹುಣಿಸೆ ರೈಸ್‌ ಬಾತ್‌ ರೆಸಿಪಿ
ಹುಣಿಸೆ ರೈಸ್‌ ಬಾತ್‌ ರೆಸಿಪಿ (PC: Chaitra's AbhiRuchi)

ಮನೆಗೆ ಯಾರಾದ್ರೂ ಗೆಸ್ಟ್‌ ಬರುವವರಿದ್ದರೆ ಅಥವಾ ಪ್ರತಿದಿನ ಒಂದೇ ರೀತಿಯ ಅಡುಗೆ ಮಾಡೋದು ಅಂದ್ರೆ ಸ್ವಲ್ಪವಾದ್ರೂ ಬದಲಾವಣೆ ಮಾಡಬೇಕು ಅಂತ ಯೋಚಿಸುತ್ತೇವೆ. ಅತಿ ಕಡಿಮೆ ಸಮಯದಲ್ಲಿ, ಕಡಿಮೆ ಸಾಮಗ್ರಿಗಳನ್ನು ಬಳಸಿ, ರುಚಿಯಾದ ಅಡುಗೆ ತಯಾರಿಸುವುದು ನಿಜಕ್ಕೂ ಟಾಸ್ಕ್‌. ಹಾಗೆ ಅತಿ ಕಡಿಮೆ ಸಮಯದಲ್ಲಿ ರುಚಿಯಾದ ಹಾಗೂ ಹೆಚ್ಚು ಪದಾರ್ಥಗಳನ್ನು ಬಳಸದೆ ತಯಾರಿಸುವ ರೆಸಿಪಿಗಳಲ್ಲಿ ಹುಣಿಸೆಹಣ್ಣಿನ ರೈಸ್‌ ಬಾತ್‌ ಕೂಡಾ ಒಂದು.

ಇದು ಖಂಡಿತ ಹುಳಿಯನ್ನ ಅಲ್ಲ. ಹುಣಿಸೆರಸ ಹಾಗೂ ಪ್ರತಿದಿನ ನಾವು ಬಳಸುವ ಈರುಳ್ಳಿ, ಟೊಮ್ಯಾಟೋ ಹಾಗೂ ಇನ್ನಿತರ ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದಾದ ಟೇಸ್ಟಿ ರೆಸಿಪಿ. ಕೆಲವೊಂದು ಹೋಟೆಲ್‌ಗಳಲ್ಲಿ ಕೂಡಾ ಇದನ್ನು ತಯಾರಿಸುತ್ತಾರೆ. ಹುಣಿಸೆ ರೈಸ್‌ ಬಾತನ್ನು ಚಟ್ನಿ ಜೊತೆ ಸವಿಯುತ್ತಿದ್ದರೆ, ಇನ್ನೂ ಒಂದೆರಡು ತುತ್ತು ಹೆಚ್ಚಿಗೆ ತಿನ್ನಬೇಕೆನಿಸುತ್ತದೆ. ಹಾಗಿದ್ರೆ ಹುಣಿಸೆಹಣ್ಣಿನ ರೈಸ್‌ ಬಾತ್‌ ತಯಾರಿಸಲು ಏನೆಲ್ಲಾ ಸಾಮಗ್ರಿಗಳು ಬೇಕು..? ಹಾಗೇ ತಯಾರಿಸುವ ವಿಧಾನ ಹೇಗೆ ನೋಡೋಣ.

ಬೇಕಾಗುವ ಸಾಮಗ್ರಿಗಳು

ಅಕ್ಕಿ - 2 ಗ್ಲಾಸ್‌

ಹುಣಿಸೆಹಣ್ಣು - ನಿಂಬೆಗಾತ್ರದ್ದು

ಕಡ್ಲೆಕಾಯಿಬೀಜ - 2 ಟೇಬಲ್‌ ಸ್ಪೂನ್‌

ಈರುಳ್ಳಿ - 2

ಟೊಮ್ಯಾಟೋ - 1

ಕರಿಬೇವು - 1 ಎಸಳು

ಬ್ಯಾಡಗಿ ಮೆಣಸಿನಕಾಯಿ - 4

ಹಸಿಮೆಣಸಿನಕಾಯಿ - 6

ಕೊತ್ತಂಬರಿ ಸೊಪ್ಪು - 1/2 ಕಟ್ಟು

ಅರಿಶಿನ - 1/2 ಟೀ ಸ್ಪೂನ್

ಎಣ್ಣೆ - ‌1/2 ಕಪ್

ಸಾಸಿವೆ - ಒಗ್ಗರಣೆಗೆ ಸಾಕಾಗುವಷ್ಟು

ಜೀರ್ಗೆ - ಒಗ್ಗರಣೆಗೆ ಸಾಕಾಗುವಷ್ಟು

ಸಕ್ಕರೆ - 1 ಟೀ ಸ್ಪೂನ್‌

ಉಪ್ಪು - ರುಚಿಗೆ ತಕ್ಕಷ್ಟು

ಹುಣಿಸೆಹಣ್ಣಿನ ರೈಸ್‌ ಬಾತ್‌ ತಯಾರಿಸುವ ವಿಧಾನ

ಅಕ್ಕಿಯನ್ನು 2-3 ಬಾರಿ ತೊಳೆದು ಅರ್ಧ ಗಂಟೆ ನೆನೆಯಲು ಬಿಡಿ.

ಒಮ್ಮೆ ಹುಣಿಸೆ ಹಣ್ಣನ್ನು ತೊಳೆದು ಸ್ವಲ್ಪ ನೀರು ಸೇರಿಸಿ ಸ್ಟೋವ್‌ ಮೇಲಿಟ್ಟು ಕುದಿಸಿ ಕೆಳಗಿಳಿಸಿ.

ಒಂದು ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಕಡ್ಲೆಕಾಯಿ ಬೀಜ ಹುರಿದು ಒಂದು ಪ್ಲೇಟ್‌ಗೆ ತೆಗೆದಿಡಿ.

ಅದೇ ಎಣ್ಣೆಗೆ ಸಾಸಿವೆ, ಜೀರ್ಗೆ, ಒಣಮೆಣಸಿನಕಾಯಿ ಸೇರಿಸಿ ಹುರಿಯಿರಿ.

ನಂತರ ಹಸಿಮೆಣಸಿನಕಾಯಿ, ಕತ್ತರಿಸಿದ ಈರುಳ್ಳಿ, ಕರಿಬೇವು, ಅರಿಶಿನ ಸೇರಿಸಿ ಹುರಿಯಿರಿ.

ಕತ್ತರಿಸಿದ ಟೊಮ್ಯಾಟೋ ಸೇರಿಸಿ ಸ್ವಲ್ಪ ಹುರಿದು, ಮೊದಲೇ ಕುದಿಸಿಕೊಂಡ ಹುಣಿಸೆರಸ ಸೇರಿಸಿ ಎಲ್ಲವನ್ನೂ ಮಿಕ್ಸ್‌ ಮಾಡಿ ಹುಣಿಸೆರಸ ಕುದಿಯುವರೆಗೂ ಬಿಡಿ.

ನಂತರ ಉಪ್ಪು, ಸಕ್ಕರೆ, ನೆನೆಸಿಟ್ಟ ಅಕ್ಕಿ ಸೇರಿಸಿ 2 ನಿಮಿಷ ಹುರಿದು ನೀರು ಸೇರಿಸಿ (ಹುಣಿಸೆರಸ ಕೂಡಾ ಸೇರಿಸಿರುವುದರಿಂದ ಅನ್ನ ಉದುರಾಗುವಷ್ಟು ನೀರು ಸೇರಿಸಿದರೆ ಸಾಕು)

ಮತ್ತೊಮ್ಮೆ ಎಲ್ಲವನ್ನೂ ಮಿಕ್ಸ್‌ ಮಾಡಿ ಕುಕ್ಕರ್‌ ಮುಚ್ಚಳ ಮುಚ್ಚಿ 2 ಸೀಟಿ ಕೂಗಿಸಿಕೊಳ್ಳಿ.

ಸರ್ವಿಂಗ್‌ ಪ್ಲೇಟ್‌ಗೆ ವರ್ಗಾಯಿಸಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಮೊದಲು ಫ್ರೈ ಮಾಡಿಕೊಂಡ ಕಡ್ಲೆಕಾಯಿ ಬೀಜ ಸೇರಿಸಿ ಸರ್ವ್‌ ಮಾಡಿ.

ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ