Pineapple Gravy Recipe: ಉಪ್ಪು, ಹುಳಿ, ಖಾರ, ಸಿಹಿ.. ಎಲ್ಲಾ ರುಚಿ ಇರೋ ಪೈನಾಪಲ್ ಗೊಜ್ಜು..ಈ ಟೇಸ್ಟಿ ರೆಸಿಪಿಯನ್ನು ನೀವೂ ಮಾಡಿ
ಅನಾನಸ್ ಬಳಸಿ ಕೇಸರಿಬಾತ್ ಮಾತ್ರವಲ್ಲದೆ, ಊಟಕ್ಕೆ ಗೊಜ್ಜನ್ನು ಕೂಡಾ ತಯಾರಿಸಬಹುದು. ಅತಿ ಕಡಿಮೆ ಸಾಮಗ್ರಿಗಳಿಂದ ಬಹಳ ಸುಲಭವಾಗಿ ಈ ಪೈನಾಪಲ್ ಗೊಜ್ಜನ್ನು ತಯಾರಿಸಬಹುದು. ಇದು ಅನ್ನ, ಚಪಾತಿ, ದೋಸೆಯೊಂದಿಗೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಹುಳಿ, ಉಪ್ಪು, ಖಾರ, ಸಿಹಿ ಎಲ್ಲಾ ರುಚಿ ಈ ಗೊಜ್ಜಿನಲ್ಲಿ ಇದೆ.
ಸಾಮಾನ್ಯವಾಗಿ ಪೈನಾಪಲನ್ನು ಹಾಗೇ ತಿನ್ನುತ್ತೇವೆ. ಇಲ್ಲವಾದರೆ ಅದನ್ನು ಕೇಸರಿಬಾತ್ ಮಾಡಲು ಕೂಡಾ ಬಳಸುತ್ತೇವೆ. ಪೈನಾಪಲ್ ಪ್ಯೂರಿಯನ್ನು ಕೇಸರಿ ಬಾತ್ ಸೇರಿಸಿ, ತುಪ್ಪದಿಂದ ಮಾಡಿದ ಕೇಸರಿಬಾತನ್ನು ಬಾಯಲ್ಲಿ ಇಡುತ್ತಿದ್ದಂತೆ ಕರಗಿಹೋಗುತ್ತದೆ. ಇದರ ಯಾರಾದರೂ ಮಾರುಹೋಗುತ್ತಾರೆ.
ಆದರೆ ಅನಾನಸ್ ಬಳಸಿ ಕೇಸರಿಬಾತ್ ಮಾತ್ರವಲ್ಲದೆ, ಊಟಕ್ಕೆ ಗೊಜ್ಜನ್ನು ಕೂಡಾ ತಯಾರಿಸಬಹುದು. ಅತಿ ಕಡಿಮೆ ಸಾಮಗ್ರಿಗಳಿಂದ ಬಹಳ ಸುಲಭವಾಗಿ ಈ ಪೈನಾಪಲ್ ಗೊಜ್ಜನ್ನು ತಯಾರಿಸಬಹುದು. ಇದು ಅನ್ನ, ಚಪಾತಿ, ದೋಸೆಯೊಂದಿಗೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಹುಳಿ, ಉಪ್ಪು, ಖಾರ, ಸಿಹಿ ಎಲ್ಲಾ ರುಚಿ ಈ ಗೊಜ್ಜಿನಲ್ಲಿ ಇದೆ. ಪೈನಾಪಲ್ ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.
ಪೈನಾಪಲ್ ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು
ಪೈನಾಪಲ್ - ಮೀಡಿಯಂ ಗಾತ್ರದ್ದು 1
ಉದ್ದಿನ ಬೇಳೆ - 2 ಟೇಬಲ್ ಸ್ಪೂನ್
ಧನಿಯಾ ಕಾಳು - 1 ಟೇಬಲ್ ಸ್ಪೂನ್
ಜೀರ್ಗೆ - 1 ಟೇಬಲ್ ಸ್ಪೂನ್
ಮೆಂತ್ಯಕಾಳು - 10
ಬಿಳಿ ಎಳ್ಳು - 4 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ - 10
ಒಣಮೆಣಸಿನಕಾಯಿ - 4
ಕರಿಬೇವು - 1 ಎಸಳು
ಒಣಕೊಬ್ಬರಿ - 1/2
ಅರಿಶಿನ - 1/2 ಸ್ಪೂನ್
ಸಾಸಿವೆ- ಒಗ್ಗರಣೆಗೆ
ಹಿಂಗು - ಒಗ್ಗರಣೆಗೆ
ಬೆಲ್ಲ - ಒಂದು ತುಂಡು
ಎಣ್ಣೆ - 1/2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ಪೈನಾಪಲ್ ಗೊಜ್ಜು ತಯಾರಿಸುವ ವಿಧಾನ
ಪೈನಾಪಲ್ ಸಿಪ್ಪೆ ತೆಗೆದು ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ
ಬಾಣಲೆಯನ್ನು ಬಿಸಿ ಮಾಡಿಕೊಂಡು ಉದ್ದಿನಬೇಳೆ, ಜೀರ್ಗೆ, ಮೆಂತ್ಯ ಕಾಳು, ಧನಿಯಾ ಸೇರಿಸಿ ಕಡಿಮೆ ಉರಿಯಲ್ಲಿ ರೋಸ್ಟ್ ಮಾಡಿ
ಇದರೊಂದಿಗೆ ಬಿಳಿ ಎಳ್ಳು, ಬ್ಯಾಡಗಿ ಮೆಣಸಿನಕಾಯಿ, ಒಂದು ಸ್ಪೂನ್ ಎಣ್ಣೆ, ಕರಿಬೇವು, ಕೊಬ್ಬರಿ ತುಂಡುಗಳನ್ನು ಸೇರಿಸಿ ಹುರಿದುಕೊಳ್ಳಿ
ಮಿಶ್ರಣ ಗರಿ ಗರಿಯಾಗುವರೆಗೂ ಹುರಿದುಕೊಂಡು ಸ್ಟೋವ್ ಆಫ್ ಮಾಡಿ, ತಣ್ಣಗಾದ ನಂತರ 7-8 ಪೈನಾಪಲ್ ತುಂಡುಗಳನ್ನು ಸೇರಿಸಿ ಗ್ರೈಂಡ್ ಮಾಡಿಕೊಳ್ಳಿ
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಕರಿಬೇವು, ಹಿಂಗು, ಉಳಿದ ಪೈನಾಪಲ್ ತುಂಡುಗಳು, ಅರಿಶಿನ ಸೇರಿಸಿ 2 ನಿಮಿಷ ಹುರಿಯಿರಿ
ಇದಕ್ಕೆ ಸ್ವಲ್ಪ ನೀರು, ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ ಪೈನಾಪಲ್ ಮೆತ್ತಗಾಗುವರೆಗೂ ಕುಕ್ ಮಾಡಿ
ನಂತರ ಗ್ರೈಂಡ್ ಮಾಡಿಕೊಂಡ ಮಿಶ್ರಣ ಸೇರಿಸಿ, ಬೇಕಿದ್ದರೆ ಸ್ವಲ್ಪ ಬೆಲ್ಲ, ನೀರು , ಉಪ್ಪು ಅಡ್ಜೆಸ್ಟ್ ಮಾಡಿ 5-10 ನಿಮಿಷ ಕುಕ್ ಮಾಡಿ
ಬಾಣಲೆಯಲ್ಲಿ ಎಣ್ಣೆ ಬಿಟ್ಟಾಗ ಸ್ಟೋವ್ ಆಫ್ ಮಾಡಿದರೆ ರುಚಿಯಾದ ಪೈನಾಪಲ್ ಗೊಜ್ಜು ರೆಡಿ
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ವಿಭಾಗ