ಕನ್ನಡ ಸುದ್ದಿ  /  Lifestyle  /  Whole Tandoori Chicken Recipe Without Oven

Whole Chicken Tandoori Recipe: ಒಮ್ಮೆಯಾದ್ರೂ ಫುಲ್‌ ತಂದೂರಿ ಚಿಕನ್‌ ತಿನ್ಬೇಕು ಅಂತ ಆಸೆ ಇರೋರಿಗೆ ಈ ರೆಸಿಪಿ...ಅದೂ ಕೂಡಾ ಒವನ್‌ ಇಲ್ಲದೆ

ಬಹಳಷ್ಟು ಮಾಂಸಾಹಾರಿಗಳು, ಜೀವನದಲ್ಲಿ ಒಮ್ಮೆಯಾದರೂ ಫುಲ್‌ ತಂದೂರಿ ಚಿಕನ್‌ ತಿನ್ನಬೇಕು ಎಂಬ ಆಸೆ ವ್ಯಕ್ತಪಡಿಸುತ್ತಾರೆ. ಅದನ್ನು ಮನೆಯಲ್ಲಿ ಮಾಡೋಕೆ ಕಷ್ಟ ಎಂದು ತಪ್ಪು ತಿಳಿದಿರುತ್ತಾರೆ. ಆದರೆ ನೀವು ಸುಲಭವಾಗಿ ಮನೆಯಲ್ಲೇ ಫುಲ್‌ ತಂದೂರಿ ಚಿಕನ್‌ ತಯಾರಿಸಬಹುದು. ಒಂದು ವೇಳೆ ನಿಮ್ಮ ಬಳಿ ಒವನ್‌ ಇಲ್ಲದಿದ್ರೂ ಕೂಡಾ ತಯಾರಿಸಬಹುದು.

ಫುಲ್‌ ತಂದೂರಿ ಚಿಕನ್‌ ರೆಸಿಪಿ
ಫುಲ್‌ ತಂದೂರಿ ಚಿಕನ್‌ ರೆಸಿಪಿ (PC: Unbox Karnataka Facebook)

ಮಾಂಸಾಹಾರಿಗಳಿಗೆ ಭಾನುವಾರ ಎಂದರೆ ಬಾಡೂಟ, ಬಾಡೂಟ ಎಂದರೆ ಭಾನುವಾರ. ನಮಗಿಷ್ಟವಾದ ಚಿಕನ್‌ ಅಥವಾ ಮಟನ್‌ ತಿನ್ನಲು ಭಾನುವಾರವೇ ಆಗಬೇಕಿಲ್ಲ, ಆದರೆ ಮನೆಮಂದಿಗೆಲ್ಲಾ ಆ ದಿನ ರಜೆ ಇರುತ್ತದೆ. ಒಟ್ಟಿಗೆ ಕುಳಿತು ಎಲ್ಲರೂ ಚಿಕನ್‌ ತಿನ್ನುತ್ತಿದ್ದರೆ ಅದರ ಖುಷಿಯೇ ಬೇರೆ.

ಹಾಗೇ ಬಹಳಷ್ಟು ಮಾಂಸಾಹಾರಿಗಳು, ಜೀವನದಲ್ಲಿ ಒಮ್ಮೆಯಾದರೂ ಫುಲ್‌ ತಂದೂರಿ ಚಿಕನ್‌ ತಿನ್ನಬೇಕು ಎಂಬ ಆಸೆ ವ್ಯಕ್ತಪಡಿಸುತ್ತಾರೆ. ಅದನ್ನು ಮನೆಯಲ್ಲಿ ಮಾಡೋಕೆ ಕಷ್ಟ ಎಂದು ತಪ್ಪು ತಿಳಿದಿರುತ್ತಾರೆ. ಆದರೆ ನೀವು ಸುಲಭವಾಗಿ ಮನೆಯಲ್ಲೇ ಫುಲ್‌ ತಂದೂರಿ ಚಿಕನ್‌ ತಯಾರಿಸಬಹುದು. ಒಂದು ವೇಳೆ ನಿಮ್ಮ ಬಳಿ ಒವನ್‌ ಇಲ್ಲದಿದ್ರೂ ಕೂಡಾ ತಯಾರಿಸಬಹುದು. ಇದನ್ನ ತಯಾರಿಸಲು ಹೆಚ್ಚು ಸಾಮಗ್ರಿಗಳು ಕೂಡಾ ಬೇಕಿಲ್ಲ. ಈ ರೆಸಿಪಿಯನ್ನು ನೀವು ಪಾರ್ಟಿಗಳಲ್ಲಿ ಕೂಡಾ ತಯಾರಿಸಬಹುದು.

ಫುಲ್‌ ತಂದೂರಿ ಚಿಕನ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಫುಲ್‌ ಸ್ಕಿನ್‌ಲೆಸ್‌ ಚಿಕನ್‌ - 1 ಕೆಜಿ

ಕ್ರಷ್‌ ಮಾಡಿದ ಕರಿಮೆಣಸು - 1 ಟೀ ಸ್ಪೂನ್‌

ಆಲಿವ್‌ ಆಯಿಲ್‌ 1/4 ಕಪ್‌

ಸ್ಮೋಕಿ ಪಾಪ್ರಿಕಾ - 2 ಟೀ ಸ್ಪೂನ್‌

ಬೆಳ್ಳುಳ್ಳಿ ಪುಡಿ - 2 ಟೀ ಸ್ಪೂನ್‌

ಅಚ್ಚಖಾರದ ಪುಡಿ - 1/4 ಟೀ ಸ್ಪೂನ್‌

ಮಿಕ್ಸ್‌ ಹರ್ಬ್‌ - 1 ಟೀ ಸ್ಪೂನ್‌

ಲೆಮನ್ಸ್‌ ಜೆಸ್ಟ್‌ - 1/2 ಟೀ ಸ್ಪೂನ್

ಚಪಾತಿ ಹಿಟ್ಟು - ಚಿಕನ್‌ ದಮ್‌ ಮಾಡಲು

ಟೊಮ್ಯಾಟೋ - 1

ಬೆಳ್ಳುಳ್ಳಿ ಎಸಳು - 10

ಹಸಿಮೆಣಸಿನಕಾಯಿ - 2

ಶುಂಠಿ - ಒಂದು ಇಂಚು

ಉಪ್ಪು- ರುಚಿಗೆ ತಕ್ಕಷ್ಟು

ಫುಲ್‌ ತಂದೂರಿ ಚಿಕನ್‌ ತಯಾರಿಸುವ ವಿಧಾನ

ಒಂದು ಪಾತ್ರೆಗೆ ಚಿಕನ್‌ ಮುಳುಗುವಷ್ಟು ನೀರು, ಸ್ವಲ್ಪ ಉಪ್ಪು ಸೇರಿಸಿ ಮಿಕ್ಸ್‌ ಮಾಡಿ.

ಇದರೊಳಗೆ ಹೋಲ್‌ ಚಿಕನ್‌ ಹಾಕಿ ಮುಚ್ಚಳ ಮುಚ್ಚಿ ಸುಮಾರು 3 ಗಂಟೆಗಳ ಕಾಲ ಬಿಟ್ಟು ನಂತರ ನೀರಿನಿಂದ ಹೊರ ತೆಗೆಯಿರಿ.

ಮತ್ತೊಂದು ಬೌಲ್‌ಗೆ ಸ್ಮೋಕಿ ಪಾಪ್ರಿಕಾ, ಗಾರ್ಲಿಕ್‌ ಪೌಡರ್‌, ಚಿಲ್ಲಿ ಪೌಡರ್‌, ಮಿಕ್ಸ್‌ ಹರ್ಬ್ಸ್‌, ಸ್ವಲ್ಪ ಉಪ್ಪು ಸೇರಿಸಿ ಮಿಕ್ಸ್‌ ಮಾಡಿ.

ಚಾಕುವಿನ ಸಹಾಯದಿಂದ ಚಿಕನ್‌ ಸುತ್ತಲೂ ಡೀಪ್‌ ಕಟ್‌ ಮಾಡಿ ( ಮಸಾಲೆ ಹೊಂದಿಕೊಳ್ಳುವಂತೆ ಚಾಕುವಿನಿಂದ ಸೀಳು ಮಾಡಿ, ಆದರೆ ಕತ್ತರಿಸಬೇಡಿ)

ಒಂದು ದೊಡ್ಡ ಪ್ಲೇಟ್‌ನಲ್ಲಿ ಚಿಕನ್‌ ಇಟ್ಟು, ಚಿಕನ್‌ ಸುತ್ತ, ಕೆಳಭಾಗ, ಒಳಗೆ ಎಲ್ಲಾ ಕಡೆ ಸ್ವಲ್ಪ ಉಪ್ಪು ಸವರಿ, ನಂತರ ಕ್ರಷ್‌ ಮಾಡಿದ ಪೆಪ್ಪರ್‌ ಸವರಿ.

ಆಲಿವ್‌ ಆಯಿಲ್‌ ಹಚ್ಚಿ, ಸುತ್ತಲೂ ಸ್ಪ್ರೆಡ್‌ ಮಾಡಿ ನಂತರ ಮಿಕ್ಸ್‌ ಮಾಡಿದ ಮಸಾಲೆ ಪುಡಿಯನ್ನು ಹಚ್ಚಿ.

ಇದರ ಮೇಲೆ ಲೆಮನ್‌ ಜೆಸ್ಟ್‌ ಹಚ್ಚಿ 1 ಗಂಟೆ ಮ್ಯಾರಿನೇಟ್‌ ಆಗಲು ಬಿಟ್ಟು ನಂತರ ಚಿಕನ್‌ ಕಾಲುಗಳನ್ನು ಒಂದು ಗಟ್ಟಿಯಾದ ದಾರದಿಂದ ಕಟ್ಟಿ.

ಒಂದು ಚಿಕ್ಕ ಕುಕ್ಕರ್‌ ಅಥವಾ ಪಾತ್ರೆಗೆ ಸ್ವಲ್ಪ ನೀರು, ಒಂದೆರಡು ಕಪ್ಪು ಏಲಕ್ಕಿ,ಸಾಧಾರಣ ಏಲಕ್ಕಿ, ಲವಂಗ, ಚೆಕ್ಕೆ ಹಾಕಿ.

ನೀರಿನೊಳಗೆ ಕುಕ್ಕರ್‌ ಸ್ಟ್ಯಾಂಡ್‌ ಇಟ್ಟು, ನಂತರ ಒಂದು ಪ್ಲೇಟ್‌ ಇಡಿ, ಪ್ಲೇಟ್‌ಗೆ ಕತ್ತರಿಸಿದ ಟೊಮ್ಯಾಟೋ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಚೂರುಗಳನ್ನು ಹರಡಿ, ಅದರ ಮೇಲೆ ಚಿಕನ್‌ ಇಡಿ.

ಪಾತ್ರೆ/ಕುಕ್ಕರ್‌ ಅಂಚಿನ ಸುತ್ತಲೂ ಗೋಧಿಹಿಟ್ಟನ್ನು ಅಂಟಿಸಿ (ದಮ್‌ ಮಾಡಲು), ನಂತರ ಮುಚ್ಚಳ ಮುಚ್ಚಿ, ಸುಮಾರು 40 ನಿಮಿಷಗಳ ಕಾಲ ಚಿಕನ್‌, ಸ್ಟೀಮ್‌ ಮಾಡಿ.

40 ನಿಮಿಷ ಕುಕ್‌ ಆದ ನಂತರ ಸ್ಟೋವ್‌ ಆಫ್‌ ಮಾಡಿ, ಪಾತ್ರೆ ತಣ್ಣಗಾದ ನಂತರ ಚಿಕನ್‌ ಹೊರತೆಗೆಯಿರಿ.

ಸ್ಟೋವ್‌ ಮೇಲೆ ಒಂದು ಗ್ರಿಲ್‌ ಸ್ಟಾಂಡ್‌ ಇಡಿ, ಅದರಲ್ಲಿ ಬೇಯಿಸಿದ ಚಿಕನ್‌ ಇಟ್ಟು ಸುತ್ತಲೂ ರೋಸ್ಟ್‌ ಮಾಡಿದರೆ ರುಚಿಯಾದ ಫುಲ್‌ ಚಿಕನ್‌ ತಿನ್ನಲು ರೆಡಿ.

ಸರ್ವಿಂಗ್‌ ಪ್ಲೇಟ್‌ಗೆ ಚಿಕನ್‌ ಇಟ್ಟು ಗ್ರೀನ್‌ ಸಾಸ್‌ ಅಥವಾ ಮಿಂಟ್‌ ಸಾಸ್‌, ಈರುಳ್ಳಿ, ನಿಂಬೆ ಚೂರುಗೊಂದಿಗೆ ಸರ್ವ್‌ ಮಾಡಿ.

ಗಮನಿಸಿ: ಚಿಕನ್‌ ಜೆಸ್ಟ್‌ ಎಂದರೆ ತುರಿದ ನಿಂಬೆಕಾಯಿ. ಇದನ್ನು ಹೊರಗಿನಿಂದ ತರಲು ಸಾಧ್ಯ ಆಗದಿದ್ದರೆ, ನಿಂಬೆ ಹಣ್ಣನ್ನು ಸುತ್ತಲೂ ತುರಿದರೆ ಜೆಸ್ಟ್‌ ಸಿಗುತ್ತದೆ.

ಓವನ್‌/ಒಟಿಜಿ ಇದ್ದರೆ ಚಿಕನ್‌ ಸ್ಟೀಮ್‌ ಮಾಡುವ ಅಗತ್ಯ ಇಲ್ಲ, ಚಿಕನ್‌ ಮ್ಯಾರಿನೇಟ್‌ ಮಾಡಿದ ನಂತರ ನೇರವಾಗಿ ಚಿಕನ್‌ ರೋಸ್ಟ್‌ ಮಾಡಬಹುದು.

ಸೂಪರ್‌ ಮಾರ್ಕೆಟ್‌ಗೆ ಹೋದರೆ ಗಾರ್ಲಿಕ್‌ ಪೌಡರ್‌, ಮಿಕ್ಸ್‌ಡ್‌ ಹರ್ಬ್ಸ್‌ ಹಾಗೂ ಸ್ಮೋಕಿ ಪಾಪ್ರಿಕಾ ದೊರೆಯುತ್ತದೆ, ಇದು ಚಿಕನ್‌ಗೆ ಒಳ್ಳೆ ಸುವಾಸನೆ ನೀಡುತ್ತದೆ.

ವಿಭಾಗ